ಫ್ಲಿಪ್​ಕಾರ್ಟ್​ನಿಂದ ‘ಫ್ರೀ ವಿಡಿಯೋ ಸ್ಟ್ರೀಮಿಂಗ್‘​ ಸೇವೆ​; ಏನೆಲ್ಲಾ ವೀಕ್ಷಿಸಬಹುದು ಗೊತ್ತಾ?

ನೆಟ್​ಫ್ಲಿಕ್ಸ್​, ಅಮೆಜಾನ್​, ಹಾಟ್​ಸ್ಟಾರ್​ನಂತೆ ಫ್ಲಿಪ್​ಕಾರ್ಟ್​ ‘ಫ್ರೀ ವಿಡಿಯೋ ಸ್ಟ್ರೀಮಿಂಗ್‘​ ಸೇವೆ ಕಾರ್ಯನಿರ್ವಹಿಸಲಿದೆ.

news18
Updated:August 5, 2019, 10:34 PM IST
ಫ್ಲಿಪ್​ಕಾರ್ಟ್​ನಿಂದ ‘ಫ್ರೀ ವಿಡಿಯೋ ಸ್ಟ್ರೀಮಿಂಗ್‘​ ಸೇವೆ​; ಏನೆಲ್ಲಾ ವೀಕ್ಷಿಸಬಹುದು ಗೊತ್ತಾ?
ಫ್ಲಿಪ್​ಕಾರ್ಟ್
  • News18
  • Last Updated: August 5, 2019, 10:34 PM IST
  • Share this:
ಜನಪ್ರಿಯ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ ಕಾರ್ಟ್ ​ಹೊಸ ‘ಫ್ರೀ ವಿಡಿಯೋ ಸ್ಟ್ರೀಮಿಂಗ್​‘ ಸೇವೆಯನ್ನು ಪ್ರಾರಂಭಿಸಲು ಮುಂದಾಗಿದೆ. ಈಗಾಗಲೇ ಅಮೆಜಾನ್​ ಸಂಸ್ಥೆ ಪ್ರಾರಂಭಿಸಿದ ಪ್ರೈಮ್​ ವಿಡಿಯೋ ಸೇವೆಗೆ ಪ್ರಬಲ ಪೈಪೋಟಿ ನೀಡಲು ಫ್ಲಿಪ್​ಕಾರ್ಟ್​ ಸಜ್ಜಾಗಿದ್ದು, ಹೊಸ ಸೇವೆಯನ್ನು ಒದಗಿಸಲು ಮುಂದೆಬಂದಿದೆ.

ಜಗತ್ತಿನಾದ್ಯಂತ 200 ಮಿಲಿಯನ್​ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಫ್ಲಿಪ್​ಕಾರ್ಟ್​ ಈ ನೂತನ ಸೇವೆಯನ್ನು ಜಾರಿಗೊಳಿಸುತ್ತಿದೆ. ಅದಕ್ಕಾಗಿ ‘ಫ್ರೀ ವಿಡಿಯೋ ಸ್ಟ್ರೀಮಿಂಗ್‘​ ಸೇವೆಯನ್ನು ಪ್ರಾರಂಭಿಸಿ, ಮನರಂಜನೆಯ ಕುರಿತ ವಿಡಿಯೋಗಳನ್ನು ನೀಡಲು ಮುಂದಾಗಿದೆ.

ಇದನ್ನೂ ಓದಿ: ನಾಗರ ಪಂಚಮಿಯಂದು ದಿಟ ನಾಗರಕ್ಕೆ ಹಾಲೆರೆದು ಪೂಜೆ – ಭಕ್ತಿಯಲ್ಲಿ ಮಿಂದೆದ್ದ ಹುಲೇಕಲ್ ಕುಟುಂಬ

ಈ ಕುರಿತಾಗಿ ಫ್ಲಿಪ್​​ಕಾರ್ಟ್​ ಗ್ರೂಪಿನ ಮುಖ್ಯನಿರ್ವಾಹಕ ಕಲ್ಯಾಣ್​ ಕೃಷ್ಣಮೂರ್ತಿ ಮಾತನಾಡಿ ‘ ಹೊಸ ಗ್ರಾಹಕರಿಗಾಗಿ ಒಳ್ಳೆಯ ವಿಡಿಯೋ ಕಂಟೆಂಟ್​ಗಳನ್ನು ನೀಡುತ್ತೇವೆ ಎಂಬ ನಂಬಿಕೆ ನಮ್ಮಲ್ಲಿದೆ. ಜೊತೆಗೆ ಆನ್​ಲೈನ್​ ಶಾಪಿಂಗ್​ ಮಾಡಲು ಸಹಾಯಕವಾಗುತ್ತದೆ‘ ಎಂದು ತಿಳಿಸಿದ್ದಾರೆ.

ನಂತರ ಮಾತಾನಾಡಿದ ಅವರು, ಫ್ರೀ ವಿಡಿಯೋ ಸ್ಟ್ರೀಮಿಂಗ್​ ಸೇವೆಯಲ್ಲಿ ಸಿನಿಮಾಗಳನ್ನು, ಮನರಂಜನಾ ಸೀರಿಸ್​ಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ನೆಟ್​ಫ್ಲಿಕ್ಸ್​, ಅಮೆಜಾನ್​, ಹಾಟ್​ಸ್ಟಾರ್​ನಂತೆ ಫ್ಲಿಪ್​ಕಾರ್ಟ್​ ‘ಫ್ರೀ ವಿಡಿಯೋ ಸ್ಟ್ರೀಮಿಂಗ್‘​ ಸೇವೆ ಕಾರ್ಯನಿರ್ವಹಿಸಲಿದೆ. ಹೊಸ ಗ್ರಾಹಕರಿಗಾಗಿ ಮೊದಲಿಗೆ ‘ಆಡಿಯೋ ವಿಷುವಲ್​ ನ್ಯಾವಿಗೇಷನ್‘​ನೊಂದಿಗೆ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದೆ. ನಂತರ ಮರುವಿನ್ಯಾಸಗೊಳಿಸಿ  ಬೇರೆ ಭಾಷೆಗಳಿಗೂ ಅನುವು ಮಾಡಿ ಕೊಡಲಿದೆ.

First published:August 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...