Flipkart Independence Day offers: ಸ್ಮಾರ್ಟ್​ಟಿವಿಗಳ ಮೇಲೆ ಶೇ.75 ರಷ್ಟು ರಿಯಾಯಿತಿ

ಫ್ಲಿಪ್​ಕಾರ್ಟ್​ ಹಮ್ಮಿಕೊಂಡಿರುವ ಈ ವಿಶೇಷ ಸೇಲ್​ನಲ್ಲಿ ಸ್ಮಾರ್ಟ್​ಟಿವಿಗಳ ಜೊತೆಗೆ 45 ಸಾವಿರಕ್ಕೂ ಅಧಿಕ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಜೊತೆಗೆ 500ಕ್ಕೂ ಅಧಿಕ ಬ್ರ್ಯಾಂಡೆಡ್​ ಕಂಪೆನಿಗಳ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುತ್ತಿದೆ.

news18
Updated:August 14, 2019, 9:40 PM IST
Flipkart Independence Day offers: ಸ್ಮಾರ್ಟ್​ಟಿವಿಗಳ ಮೇಲೆ ಶೇ.75 ರಷ್ಟು ರಿಯಾಯಿತಿ
ಫ್ಲಿಪ್​ಕಾರ್ಟ್
  • News18
  • Last Updated: August 14, 2019, 9:40 PM IST
  • Share this:
ಫ್ಲಿಪ್​​ಕಾರ್ಟ್​ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶೇಷ ಮಾರಾಟವವನ್ನು ಆರಂಭಿಸಿದೆ. ಈ ಸೇಲ್​ ಸ್ಮಾರ್ಟ್​ ಟಿವಿಗಳ ಮೇಲೆ ಭರ್ಜರಿ ಆಫರ್​ ಅನ್ನು ನೀಡಿದೆ. ಗ್ರಾಹಕರಿಗಾಗಿ ಟಿವಿಗಳ ಮೇಲೆ ಶೇ.75 ರಷ್ಟು ರಿಯಾಯಿತಿ ಬೆಲೆಗೆ ಮಾರಾಟ ನಡೆಸುತ್ತಿದೆ.

ಫ್ಲಿಪ್​ಕಾರ್ಟ್​ ಹಮ್ಮಿಕೊಂಡಿರುವ ಈ ವಿಶೇಷ ಸೇಲ್​ನಲ್ಲಿ ಸ್ಮಾರ್ಟ್​ಟಿವಿಗಳ ಜೊತೆಗೆ 45 ಸಾವಿರಕ್ಕೂ ಅಧಿಕ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಜೊತೆಗೆ 500ಕ್ಕೂ ಅಧಿಕ ಬ್ರ್ಯಾಂಡೆಡ್​ ಕಂಪೆನಿಗಳ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುತ್ತಿದೆ.

ಗ್ರಾಹಕರಿಗಾಗಿ ನೋ ಕಾಸ್ಟ್​ EMI ಆಯ್ಕೆ, ಎಕ್ಸ್​ಚೇಂಜ್​ ಆಫರ್​, ಕ್ಯಾಶ್​ಬ್ಯಾಕ್​ ಅಫರ್​ ನೀಡುತ್ತಿದೆ. ಅಂತೆಯೇ ಆ್ಯಕ್ಸಿಸ್​ ಬ್ಯಾಂಕಿನ ಕ್ರೆಡಿಟ್​ ಕಾರ್ಡ್​ ಮೂಲಕ ವಸ್ತುಗಳನ್ನು ಖರೀದಿಸಿದರೆ ಶೇ.5ರಷ್ಟು ರಿಯಾಯಿತಿ ನೀಡುತ್ತಿದೆ.

ಇನ್ನು ಸ್ಮಾರ್ಟ್​ಟಿವಿಗಳ ಮೇಲೆ ವಿಶೇಷ ರಿಯಾಯಿತಿಯನ್ನು ನೀಡಿದೆ. ಸ್ಯಾಮ್​ಸಂಗ್​ ಕಂಪೆನಿ 43 ಇಂಚಿನ ಅಲ್ಟ್ರಾ HD (4ಕK) LED ಸ್ಮಾರ್ಟ್​ಟಿವಿ ಮೇಲೆ ಶೇ.41ರಷ್ಟು ರಿಯಾಯಿತಿ ನೀಡುತ್ತಿದೆ. MI LED ಸ್ಮಾರ್ಟ್​ಟಿವಿ ಮೇಲೆ ಶೇ.13ರಷ್ಟು ರಿಯಾಯಿತಿ ನೀಡಿದೆ. VU ಅಲ್ಟ್ರಾ 80 ಸೆ.ಮಿ (32 ಇಂಚಿನ) HD ರೆಡಿ LED ಸ್ಮಾರ್ಟ್​ಟಿವಿಯ ಮೆಲೆ ದರ ಕಡಿತ ಮಾರಾಟ ಮಾಡುತ್ತಿದೆ. ಥಾಮ್ಸನ್​ 108 ಸೆಂ.ಮಿ(14 ಇಂಚಿನ) ಅಲ್ಟ್ರಾ HD(4K) LEDSmart ​ ಆಂಡ್ರಾಯ್ಡ್​ ಟಿವಿ ಜೊತೆಗೆ ನೆಟ್​ಫ್ಲಿಕ್ಸ್​ ಜೋಡಿಸಿಕೊಂಡರೆ ಶೇ.27 ರಷ್ಟು ರಿಯಾಯಿತಿ ನೀಡುತ್ತಿದೆ. LG 108 ಸೆಂ.ಮಿ (43 ಇಂಚಿನ) ಅಲ್ಟ್ರಾ ಹೆಚ್​ಡಿ (4ಕK) ಎಲ್​ಇಡಿ ಸ್ಮಾರ್ಟ್​ಟಿವಿ ಮೇಲೆ ಶೇ.27 ರಷ್ಟು ರಿಯಾಯಿತಿ ಒದಗಿಸಿದೆ. ಸ್ಯಾಮ್​ಸಂಗ್​ N U6100 (43 ಇಂಚಿನ) ಸ್ಮಾರ್ಟ್​ಟಿವಿ ಶೇ.40ರಷ್ಟು ರಿಯಾಯಿತಿ ಬೆಲೆಗೆ ದೊರಕುತ್ತಿದೆ. ಸೋನಿ R​20F​ (32 ಇಂಚಿನ) HD ಟಿವಿ ಮೇಲೆ ಶೇ.9 ರಷ್ಟು ರಿಯಾಯಿತಿ ನೀಡುತ್ತಿದೆ.
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ