ಫ್ಲಿಪ್​ಕಾರ್ಟ್ ಬಾಕ್ಸ್​ನಲ್ಲಿ ಇನ್ಮುಂದೆ ಸಿಗಲ್ಲ ಬಬಲ್ ಕವರ್!; ಪರಿಸರ ಉಳಿಸಲು ಸಂಸ್ಥೆಯಿಂದ ಹೊಸ ಕ್ರಮ

Flipkart: ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಸೆಕ್ಯೂರಿಟಿ ಬ್ಯಾಗ್​ಗಳಿಗೆ ಬದಲಾಗಿ ಕಾಗದದಿಂದ ತಯಾರಿಸಲಾದ ಸೆಕ್ಯೂರಿಟಿ ಎನ್ವಲಪ್‍ಗಳ ಬಳಕೆ ಮಾಡಲಾಗುತ್ತಿದೆ. ರ್ಯಾಪಿಂಗ್ ಕವರ್​ ಬದಲಾಗಿ ಪುನರ್‍ಬಳಕೆ ಮಾಡಿದ ಕಾಗದದಿಂದ ತಯಾರಿಸಲಾಗಿರುವ ಕುಶನಿಂಗ್ ಉತ್ಪನ್ನಗಳನ್ನು ಬಳಸಲಾಗುತ್ತಿದೆ.

news18-kannada
Updated:May 18, 2020, 6:15 PM IST
ಫ್ಲಿಪ್​ಕಾರ್ಟ್ ಬಾಕ್ಸ್​ನಲ್ಲಿ ಇನ್ಮುಂದೆ ಸಿಗಲ್ಲ ಬಬಲ್ ಕವರ್!; ಪರಿಸರ ಉಳಿಸಲು ಸಂಸ್ಥೆಯಿಂದ ಹೊಸ ಕ್ರಮ
ಫ್ಲಿಪ್​ಕಾರ್ಟ್​
  • Share this:
ದೇಶದ ಇ-ಕಾಮರ್ಸ್ ದಿಗ್ಗಜ ಫ್ಲಿಪ್‍ಕಾರ್ಟ್​​ ಪರಿಸರ ಸಂರಕ್ಷಣೆಗೆ ಈಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವ ಸಂಸ್ಥೆ   ಉತ್ಪನ್ನಗಳ ಪ್ಯಾಕೇಜಿಂಗ್​ನಲ್ಲಿ ಪ್ಲಾಸ್ಟಿಕ್ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಮೇ 1, 2020 ರಿಂದ ಸಂಪೂರ್ಣವಾಗಿ ಕಾಗದದ ಪೊಟ್ಟಣಗಳಲ್ಲಿ ಪ್ಯಾಕ್ ಮಾಡುವ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸಿದೆ.  ಪರಿಸರಸ್ನೇಹಿ ಪೇಪರ್ ಶ್ರೆಡ್ಸ್ ಬಳಕೆ,  ಪಾಲಿ ಪೌಚ್‍ಗಳ ಬದಲಿಗೆ ಪುನರ್​ಬಳಕೆ ಮಾಡಬಹುದಾದ ಪೇಪರ್ ಬ್ಯಾಗ್‍ಗಳ ಬಳಕೆ, ಬಬಲ್ ರ್ಯಾಪಗರ್​ಳು ಮತ್ತು ಏರ್ ಬ್ಯಾಗ್‍ಗಳ ಬದಲಾಗಿ ಕಾರ್ಟನ್ ವೇಸ್ಟ್ ಶ್ರೆಡೆಡ್ ಉತ್ಪನ್ನಗಳಂತಹ ಹಲವಾರು ಬಗೆಯ ಪರಿಸರಸ್ನೇಹಿ ಉತ್ಪನ್ನಗಳನ್ನು ಬಳಕೆ ಮಾಡಲು ಸಂಸ್ಥೆ ನಿರ್ಧರಿಸಿದೆ.

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಸೆಕ್ಯೂರಿಟಿ ಬ್ಯಾಗ್​ಗಳಿಗೆ ಬದಲಾಗಿ ಕಾಗದದಿಂದ ತಯಾರಿಸಲಾದ ಸೆಕ್ಯೂರಿಟಿ ಎನ್ವಲಪ್‍ಗಳ ಬಳಕೆ ಮಾಡಲಾಗುತ್ತಿದೆ. ರ್ಯಾಪಿಂಗ್ ಕವರ್​ ಬದಲಾಗಿ ಪುನರ್‍ಬಳಕೆ ಮಾಡಿದ ಕಾಗದದಿಂದ ತಯಾರಿಸಲಾಗಿರುವ ಕುಶನಿಂಗ್ ಉತ್ಪನ್ನಗಳನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: ಕೊರೋನಾವೈರಸ್ ಹರಡುತ್ತಿರುವ ಈ ಸಮಯದಲ್ಲಿ ಫ್ಲಿಪ್​ಕಾರ್ಟ್​ ಶಾಪಿಂಗ್ ಆಫರ್ ಅವಕಾಶವಾದವಲ್ಲ ಎಂದ ಕಂಪನಿ

ಫ್ಲಿಪ್‍ಕಾರ್ಟ್ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮತ್ತು ಇತರೆ ಪರಿಸರ ಸ್ನೇಹಿ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿದ್ದುಕೊಂಡು ಸುಸ್ಥಿರ ಪರಿಸರ ನಿರ್ಮಾಣದತ್ತ ಹೆಜ್ಜೆ ಇರಿಸಿದೆ. ಈ ಮೂಲಕ ತನ್ನ ಲಕ್ಷಾಂತರ ಮಾರಾಟಗಾರ ಪಾಲುದಾರರೂ ಸಹ ಸುಸ್ಥಿರ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಿದೆ. ಪ್ಲಾಸ್ಟಿಕ್ ಪ್ಯಾಕೇಜಿಂಗ್ ಉತ್ಪನ್ನಗಳಿಗಿಂತ ಕಾಗದದಿಂದ ತಯಾರಿಸಲಾದ ಉತ್ಪನ್ನಗಳಿಗೆ ಕಡಿಮೆ ವೆಚ್ಚವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತಿದೆ.

ಫ್ಲಿಪ್‍ಕಾರ್ಟ್ ಹೆಚ್ಚಿಚ್ಚು ಎಲೆಕ್ಟ್ರಿಕ್ ವಾಹನಗಳ ಬಳಕೆ, ಸಂಪನ್ಮೂಲ ಕಾರ್ಯದಕ್ಷತೆ ಮತ್ತು ನವೀಕರಿಸಬಹುದಾದ ಉತ್ಪನ್ನಗಳ ಬಳಕೆ ಸೇರಿದಂತೆ ಇನ್ನೂ ಹಲವಾರು ಉಪಕ್ರಮಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ಪರಿಸರ ಮಾಲಿನ್ಯವನ್ನು ತಗ್ಗಿಸುವ ಕೆಲಸ ಮಾಡುತ್ತಿದೆ.

 
First published: May 18, 2020, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading