HOME » NEWS » Tech » FLIPKART SMARTPACK WILL LET YOU SUBSCRIBE YOUR PHONE AND UPGRADE IT EVERY YEAR HG

Flipkart: ಫ್ಲಿಪ್​ಕಾರ್ಟ್ ಸ್ಮಾರ್ಟ್​ಪ್ಯಾಕ್​​ ಕೊಡುಗೆ; ಶೇ.100ರಷ್ಟು ಹಣ ಹಿಂಪಡೆಯುವ ಅವಕಾಶ!

Flipkart SmartPack: ಜನವರಿ 17ರಿಂದ ಸ್ಮಾರ್ಟ್​ಪ್ಯಾಕ್​ ಕೊಡುಗೆ ಆರಂಭವಾಗಲಿದೆ. ಗ್ರಾಹಕರು ಫ್ಲಿಪ್​​ಕಾರ್ಟ್​ ಆ್ಯಪ್​ ಬಳಸಿ ಸ್ಮಾರ್ಟ್​ಫೋನ್​ ಖರೀದಿಸಿದರೆ ಶೇ.100ರಷ್ಟು ಹಣ ಹಿಂತಿರುಗಿ ಪಡೆಯಲಿದ್ದಾರೆ.

news18-kannada
Updated:January 13, 2021, 2:40 PM IST
Flipkart: ಫ್ಲಿಪ್​ಕಾರ್ಟ್ ಸ್ಮಾರ್ಟ್​ಪ್ಯಾಕ್​​ ಕೊಡುಗೆ; ಶೇ.100ರಷ್ಟು ಹಣ ಹಿಂಪಡೆಯುವ ಅವಕಾಶ!
Flipkart SmartPack
  • Share this:
ವಾಲ್​ಮಾರ್ಟ್​ ಒಡೆತನದ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ‘ಸ್ಮಾರ್ಟ್​​ಪ್ಯಾಕ್’​​ ಹೆಸರಿನ ಕೊಡುಗೆಯೊಂದನ್ನು ಪರರಿಚಯಿಸಿದೆ. ಹೊಸ ಸ್ಮಾಟ್​ಫೋನ್​ ಖರೀದಿದಾರರಿಗೆ ಈ ಸ್ಮಾರ್ಟ್​ಪ್ಯಾಕ್​ ಮೂಲಕ ಹಣವನ್ನು ಹಿಂದಿರಿಗಿಸುವ ಯೋಜನೆ ಇದಾಗಿದೆ. ಆದರೆ ಸ್ಮಾರ್ಟ್​ಪ್ಯಾಕ್​ ಚಂದಾದಾರಿಕೆ ಪಡೆದಿವರಿಗೆ ಮಾತ್ರ ಈ ಆಫರ್​ ಸಿಗಲಿದೆ. 12ರಿಂದ 18 ತಿಂಗಳ ಅವಧಿಯಲ್ಲಿ ಸ್ಮಾರ್ಟ್​ಫೋನ್​ ಖರೀದಿ ಮೇಲೆ ಹಣವನ್ನು ಹಿಂತಿರುಗಿಸಲಿದೆ.

ಜನವರಿ 17ರಿಂದ ಸ್ಮಾರ್ಟ್​ಪ್ಯಾಕ್​ ಕೊಡುಗೆ ಆರಂಭವಾಗಲಿದೆ. ಗ್ರಾಹಕರು ಫ್ಲಿಪ್​​ಕಾರ್ಟ್​ ಆ್ಯಪ್​ ಬಳಸಿ ಸ್ಮಾರ್ಟ್​ಫೋನ್​ ಖರೀದಿಸಿದರೆ ಶೇ.100ರಷ್ಟು ಹಣ ಹಿಂತಿರುಗಿ ಪಡೆಯಲಿದ್ದಾರೆ.

ಆದರೆ ಬಳಕೆದಾರರು ಸ್ಮಾರ್ಟ್​ಫೋನ್​ಗೆ ಮುಂಗಡವಾಗಿ ಹಣವನ್ನು ಪಾವತಿಸಬೇಕು. ತದನಂತರ ಪ್ರತಿ ತಿಂಗಳು ಸ್ಮಾರ್ಟ್​ಪ್ಯಾಕ್​ಗೆ ನಿಗದಿತ ಶುಲ್ಕವನ್ನು 100 ಪ್ರತಿಶತದಷ್ಟು ಹಿಂತಿರುಗಿ ಪಡೆಯಲು ಅರ್ಹರಾಗಿರುತ್ತಾರೆ.

ಸ್ಮಾರ್ಟ್​ಪ್ಯಾಕ್​ ಸ್ಮಾರ್ಟ್​ಫೋನ್​ಗೆ ಮಾತ್ರವಲ್ಲದೆ, ಸ್ಟ್ರೀಮಿಂಗ್​​ ಸೇವೆಯನ್ನು ನೀಡುವ ಸೋನಿಲೈವ್​, ಝೀ5 ಪ್ರಿಮಿಯಂ, ವೂಟ್​ ಸೆಲೆಕ್ಟ್, ಝೊಮಾಟೊ ಪ್ರೊ ಈ ಕೊಡುಗೆಯನ್ನು ನೀಡುತ್ತಿದೆ. ಜೊತೆಗೆ ಕೆಲವು ತಿಂಗಳು ಉಚಿತವಾಗಿ ಸೇವೆ ಒದಗಿಸಲಿದೆ.

ಈ ಸ್ಮಾರ್ಟ್​ಪ್ಯಾಕ್​​ ಚಂದಾದಾರಿಕೆ ಗ್ರಾಹಕರಿಗೆ ಆರ್ಥಿಕವಾಗಿ ಸ್ಮಾರ್ಟ್​ಫೋನ್​ ಅಪ್​ಗ್ರೇಡ್​ ಆಗಲು ಸಹಾಯಕವಾಗಿರುತ್ತದೆ.  ಮಾತ್ರವಲ್ಲದೆ, ಶಿಕ್ಷಣ, ಆರೋಗ್ಯ ಅಥವಾ ಮನೋರಂಜನೆಯಂತಹ ಪ್ರಮುಖ ಸೇವೆಯನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ.

ಇನ್ನು ಗ್ರಾಹಕರಿಗೆ ಫ್ಲಿಪ್​ಕಾರ್ಟ್​​ನಲ್ಲಿರುವ ಚಿನ್ನ, ಬೆಳ್ಳಿ ಮತ್ತು ಕಂಚಿನ ಪ್ಯಾಕ್​ಗಳನ್ನು ಆಯ್ಕೆ ಮಾಡಬಹುದಾದ ಆಯ್ಕೆಯಿದೆ. ಅದರ ಮೂಲಕ ಗ್ರಾಹಕರು ಶೇಕಡಾವಾರು ಹಣವನ್ನು ಹಿಂತಿರುಗಿ ಪಡೆಯಲಿದ್ದಾರೆ.  ಸ್ಮಾರ್ಟ್​ಫೋನ್​ಗಾಗಿ ಮತ್ತು ಸ್ಮಾರ್ಟ್​​ಪ್ಯಾಕ್​ಗಾಗಿ ಅಪೇಕ್ಷಿತ ಸಮಯವನ್ನು ಆಯ್ಕೆ ಮಾಡಬೇಕು. ಈ ಸಮಯದಲ್ಲಿ ನಿಗದಿತ ಮಾಸಿಕ ಶುಲ್ಕವನ್ನು ಪಾವತಿಸಬೇಕು.ಅಂದಹಾಗೆಯೇ 399 ರೂ.ಗಳಿಂದ ಸ್ಮಾರ್ಟ್​ಪ್ಯಾಕ್​ ಆರಂಭವಾಗಲಿದೆ. ಆದರೆ ಸ್ಮಾರ್ಟ್​ಪ್ಯಾಕ್​ ಮುಗಿದ ನಂತರ ಗ್ರಾಹಕರು ಖರೀದಿಸಿದ ಸ್ಮಾರ್ಟ್​ಫೋನನ್ನು ಫ್ಲಿಪ್​​ಕಾರ್ಟ್​ಗೆ ಹಿಂತಿರುಗಿಸಬಹುದಾಗಿದೆ ಮತ್ತು ಹಣವನ್ನು ಮರಳಿ ಪಡೆಯಬಹುದಾಗಿದೆ.
First published: January 13, 2021, 2:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading