Flipkart sale: ರಿಯಲ್​ಮಿ ಸ್ಮಾರ್ಟ್​ಫೋನ್​ ಖರೀದಿಸುವವರಿಗೆ ಒಂದೊಳ್ಳೆ ಅವಕಾಶ... 8 ಸಾವಿರದಷ್ಟು ರಿಯಾಯಿತಿ!

Realme 7 pro

Realme 7 pro

Realme smartphones: ರಿಯಲ್‌ಮಿ ಫ್ಲಿಪ್​ಕಾರ್ಟ್ ಸೇಲ್​ನಲ್ಲಿ​ ತಿಳಿಸಿದಂತೆ ರಿಯಲ್​ಮಿ 7 ಪ್ರೊ ಸ್ಮಾರ್ಟ್​ಫೋನ್​ 4 ಸಾವಿರ ರೂ. ರಿಯಾಯಿತಿ ಬೆಲೆಗೆ ಲಭ್ಯವಿದೆ ಎಂದು ಘೋಷಿಸಿದೆ. ಆದರೆ ಗ್ರಾಹಕರಿಗಾಗಿ  22,999 ರೂ.ವಿನ ಸ್ಮಾರ್ಟ್​ಫೋನ್​ 17,999 ರೂ.ಗೆ ಖರೀದಿಗೆ ಸಿಗುತ್ತಿದೆ.

  • Share this:

Flipkart sale: ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗಾಗಿ ಸ್ಮಾರ್ಟ್‌ಫೋನ್‌ಗಳ ಕಾರ್ನಿವಲ್ ಸೇಲ್​ ಆಯೋಜಿಸಿದ್ದು, ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಈ ಸೇಲ್​ ಸೆಪ್ಟೆಂಬರ್ 8 ರವರೆಗೆ ಮುಂದುವರಿಯಲಿದೆ. ಅಂದಹಾಗೆಯೇ ಫ್ಲಿಪ್‌ಕಾರ್ಟ್‌ ಕಾರ್ನಿವಲ್​ ಸೇಲ್​ ನಲ್ಲಿ ವಿವಿಧ ಸ್ಮಾರ್ಟ್​ಫೊನ್​ಗಳ ಮೇಲೆ ಆಕರ್ಷಕ ಕೊಡುಗೆಯನ್ನು ನೀಡುತ್ತಿದೆ ಮತ್ತು ರಿಯಾಯಿತಿ ಒದಗಿಸುತ್ತಿದೆ. ಅದರಂತೆಯೇ ರಿಯಲ್​ಮಿ ಸ್ಮಾರ್ಟ್​ಫೋನ್​ಗಳ ಮೇಲೆ 8 ಸಾವಿರದಷ್ಟು ಡಿಸ್ಕೌಂಟ್​ ನೀಡಿದೆ.


ರಿಯಲ್​ಮಿ ಕೂಡ ಫ್ಲಿಪ್​ಕಾರ್ಟ್​ (Flipkart)  ಮತ್ತು ತನ್ನ ವೆಬ್​ಸೈಟ್​ನಲ್ಲಿ ಕೆಲವು ಸ್ಮಾರ್ಟ್​ಫೋನ್​ಗಳ ಮೇಲೆ ಆಕರ್ಷಕ ಕೊಡುಗೆ ನೀಡುವುದಾಗಿ ತಿಳಿಸಿದೆ. ರಿಯಲ್​ಮಿ  X3 ಸೂಪರ್‌ಜೂಮ್ ಮತ್ತು Realme X7 ಸೀರಿಸ್​ ಸ್ಮಾರ್ಟ್‌ಫೋನ್‌ಗಳು ಸೇರಿದ್ದು, Realme X7, Realme X7 Pro ಮತ್ತು Realme X7 Max ಸ್ಮಾರ್ಟ್‌ಫೋನ್‌ಗಳು ಒಳಗೊಂಡಿದೆ. ಜೊತೆಗೆ, ರಿಯಲ್ ನಾರ್ಜೊ 30 ಪ್ರೊ ಸ್ಮಾರ್ಟ್‌ಫೋನ್‌ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.


ರಿಯಲ್‌ಮಿ ಫ್ಲಿಪ್​ಕಾರ್ಟ್ ಸೇಲ್​ನಲ್ಲಿ​ ತಿಳಿಸಿದಂತೆ Realme 7 pro ಸ್ಮಾರ್ಟ್​ಫೋನ್​ 4 ಸಾವಿರ ರೂ. ರಿಯಾಯಿತಿ ಬೆಲೆಗೆ ಲಭ್ಯವಿದೆ ಎಂದು ಘೋಷಿಸಿದೆ. ಆದರೆ ಗ್ರಾಹಕರಿಗಾಗಿ  22,999 ರೂ.ವಿನ ಸ್ಮಾರ್ಟ್​ಫೋನ್​ 17,999 ರೂ.ಗೆ ಖರೀದಿಗೆ ಸಿಗುತ್ತಿದೆ. ರಿಯಲ್‌ಮಿ 7 ಪ್ರೊ ಅನ್ನು ಮಾಸಿಕ 3,000 EMI ನಲ್ಲಿ ಖರೀದಿಸುವ ಅವಕಾಶ ನೀಡಿದೆ.


ಅಬ್ಬಬ್ಬಾ..ಈ ನಾಯಿಮರಿಗೆ ಬೇರೆ ನಾಯಿಗಳನ್ನು ಕಂಡರೆ ಅದೆಷ್ಟು ಪ್ರೀತಿ!


ಅಂತೆಯೇ, ರಿಯಲ್‌ಮಿ ರಿಯಲ್‌ಮಿ ನಾರ್ಜೊ 30 ಪ್ರೊ 5ಜಿ ಮೇಲೆ 1 ಸಾವಿರ ರೂ ರಿಯಾಯಿತಿ ನೀಡುತ್ತಿದ್ದು, ಈ ಸಾಧನದ ಬೆಲೆಯನ್ನು 15,999 ರೂ.ಗೆ ತಗ್ಗಿಸಿದೆ. ಅಂದಹಾಗೆಯೇ ರಿಯಲ್​ಮಿ ನಾರ್ಜೊ 30 ಪ್ರೊ ಖರೀದಿದಾರರಿಗೆ ಗೂಗಲ್ ಹೋಮ್ ಮಿನಿ 1,499 ಬೆಲೆಯಲ್ಲಿ ಸಿಗಲಿದ್ದು, ಗೂಗಲ್ ನೆಸ್ಟ್ ಹಬ್ ₹ 5,999 ದರದಲ್ಲಿ ಸಿಗಲಿದೆ.  ಜೊತೆಗೆ 555ರೂ.ವಿನ ಮಾಸಿಕ ಇಎಂಐ ಆಯ್ಕೆಯಲ್ಲೂ ಖರೀದಿಸಬಹುದಾಗಿದೆ.


ರಿಯಲ್‌ಮಿ ಎಕ್ಸ್ 3 ಸೂಪರ್‌ಜೂಮ್ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ  8,000 ರೂ. ವರೆಗೆ ರಿಯಾಯಿತಿ ನೀಡುತ್ತಿದೆ, ಫ್ಲಿಪ್‌ಕಾರ್ಟ್‌ನಲ್ಲಿ 32,999 ರೂ. ದರದಲ್ಲಿ ಸ್ಮಾರ್ಟ್​ಫೋನ್​ ಲಭ್ಯವಿದೆ. ಆಸಕ್ತ ಖರೀದಿದಾರರು ಇದನ್ನು ಮಾಸಿಕ 1,128 ರೂ ಬೆಲೆಯಲ್ಲಿ ಇಎಂಐ ಬಳಸಿ ಖರೀದಿಸಬಹುದಾಗಿದೆ.


Instagram is down: ಇಂದು ಕೈ ಕೊಟ್ಟ ಇನ್​​​ಸ್ಟಾಗ್ರಾಮ್​​​; ಪರದಾಡಿದ ಬಳಕೆದಾರರು.. ಕಾರಣವೇನು?


Realme X7 Pro 5G ಮತ್ತು Realme X7 Max 5G ಎರಡರ ಖರೀದಿಯ ಮೇಲೆ 3,000 ರೂ ರಿಯಾಯಿತಿ ನೀಡುತ್ತಿದೆ. ಇವೆರಡೂ ಸ್ಮಾರ್ಟ್‌ಫೋನ್‌ಗಳ ಖರೀದಿ ಮೇಲೆ ಗೂಗಲ್ ಹೋಮ್ ಮಿನಿ 1,499 ರೂ.ವಿಗೆ ಮತ್ತು ಗೂಗಲ್ ನೆಸ್ಟ್ ಹಬ್ 5,999 ರೂ.ವಿನಲ್ಲಿ ಪಡೆಯಬಹುದಾಗಿದೆ.


ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ, ರಿಯಲ್ಮಿ ಎಕ್ಸ್ 7 ಮ್ಯಾಕ್ಸ್ ಮತ್ತು ರಿಯಲ್‌ಮೆ ಎಕ್ಸ್ 7 ಪ್ರೊ 5ಜಿ ಸ್ಮಾರ್ಟ್​ಫೋನ್​​ಗಳು ಮಾಸಿಕ 4,500 ರೂ. ಇಎಂಐ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಅಂತೆಯೇ, ರಿಯಲ್​ಮಿ ಎಕ್ಸ್ 7 ಬೆಲೆಯ ಮೇಲೆ 2,000 ರೂ ರಿಯಾಯಿತಿ ನೀಡಲಾಗಿದೆ. ಹಾಗಾಗಿ Realme X7 ಭಾರತದಲ್ಲಿ ₹ 19,999 ಬೆಲೆಯಲ್ಲಿ ಸಿಗಲಿದೆ..

top videos
    First published: