ಜನಪ್ರಿಯ ಇ-ಕಾಮರ್ಸ್ ಕಂಪೆನಿಗಳಲ್ಲಿ (E-Commerse Company) ಒಂದಾದ ಫ್ಲಿಪ್ಕಾರ್ಟ್ (Flipkart) ಏನಾದರು ಸಂಭ್ರಮದ ದಿನಗಳು ಬಂದ್ರೆ ಸಾಕು ಆಫರ್ ಸೇಲ್ ಅನ್ನು ಆರಂಭಿಸುತ್ತದೆ. ಇನ್ನು ಈ ಸೇಲ್ನಲ್ಲಿ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಭಾರೀ ಅಗ್ಗದ ಬೆಲೆಯಲ್ಲಿ ಸೇಲ್ ಮಾಡುತ್ತದೆ. ಅದೇ ರೀತಿ ಫ್ಲಿಪ್ಕಾರ್ಟ್ ಕೆಲವು ದಿನಗಳ ಹಿಂದೆ ಹೋಳಿ ಹಬ್ಬದ ಪ್ರಯುಕ್ತ ಆಫರ್ ಸೇಲ್ (Offer Sale) ಅನ್ನು ಹಮ್ಮಿಕೊಂಡಿತ್ತು. ಇದೀಗ ಮತ್ತೆ ಶುರುಮಾಡಿದೆ. ಈ ಸೇಲ್ನಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಗ್ರಾಹಕರು ಬಾರಿ ಅಗ್ಗದಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಫ್ಯಾನ್, ಎಸಿ, ಬ್ಯೂಟಿ ಗ್ಯಾಜೆಟ್ಸ್ಗಳ ಮೇಲೆ ವಿಶೇಷ ರಿಯಾಯಿತಿಗಳು ಲಭ್ಯವಿದೆ.
ಫ್ಲಿಪ್ಕಾರ್ಟ್ ಇದೇ ಮಾರ್ಚ್ 11 ರಿಂದ ಮಾರ್ಚ್ 15 ರವರೆಗೆ 'ಬಿಗ್ ಸೇವಿಂಗ್ ಡೇಸ್' ಎಂಬ ವಿಶೇಷ ಮಾರಾಟವನ್ನು ನಡೆಸುತ್ತಿದೆ. ಅಂದರೆ ಈ ಸೇಲ್ ಇಂದು ಮುಕ್ತಾಯಗೊಳ್ಳುತ್ತಿದೆ. ಹಾಗಾಗಿ ಹೊಸ ಸ್ಮಾರ್ಟ್ಫೋನ್, ಇನ್ನಿತರೆ ಗ್ಯಾಜೆಟ್ಸ್ಗಳನ್ನು ಖರೀದಿ ಮಾಡುವವರಿಗೆ ಈ ಆಫರ್ ಇಂದು ಮಾತ್ರ ಲಭ್ಯವಿರುತ್ತದೆ.
ಐಫೋನ್ 14 ಮೇಲೆ ರಿಯಾಯಿತಿ'
ಫ್ಲಿಪ್ಕಾರ್ಟ್ ವಿಶೇಷವಾಗಿ ಕಳೆದ ವರ್ಷ ಬಿಡುಗಡೆಯಾಗಿದ್ದ ಐಫೋನ್ 14 ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಈ ಮೂಲಕ ಐಫೋನ್ ಖರೀದಿ ಮಾಡುವವರು ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡುವವರು ಶೇಕಡಾ 19 ರಷ್ಟು ರಿಯಾಯಿತಿಯನ್ನು ಪಡೆಯಬಹುದು.
ಇದನ್ನೂ ಓದಿ: ಸ್ಮಾರ್ಟ್ಫೋನ್ಗಳು ಬ್ಲಾಸ್ಟ್ ಆಗಲು ಕಾರಣವೇನು ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿ ಮೊಬೈಲ್ ಸೇಫ್!
ಇನ್ನು ಎಕ್ಸ್ಚೇಂಜ್ ಆಫರ್ 20 ಸಾವಿರದವರೆಗೆ ಲಭ್ಯವಿದೆ. ಆದರೆ ಇದು ನೀವು ಎಕ್ಸ್ಚೇಂಜ್ ಮಾಡುವಂತಹ ಸ್ಮಾರ್ಟ್ಫೋನ್ನ ಮಾಡೆಲ್ ಮತ್ತು ಗುಣಮಟ್ಟದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಇನ್ನು ಸದ್ಯ ಈ ಫೋನ್ ಅನ್ನು ಕೇವಲ 65,999 ರೂಪಾಯಿಗೆ ಖರೀದಿಸಬಹುದು.
ನಥಿಂಗ್ ಫೋನ್ 1 ಮೇಲೆ ಭರ್ಜರಿ ಡಿಸ್ಕೌಂಟ್
ಇನ್ನು ಹೊಸ ಸ್ಮಾರ್ಟ್ಫೋನ್ ಖರೀದಿಸುವ ಪ್ಲ್ಯಾನ್ನಲ್ಲಿದ್ದವರಿಗೆ ನಥಿಂಗ್ ಫೋನ್ 1 ಉತ್ತಮ ಆಯ್ಕೆಯಾಗಿರಲಿದೆ. ಏಕೆಂದರೆ ಫ್ಲಿಪ್ಕಾರ್ಟ್ ಈ ಬಾರಿಯ ಸೇಲ್ನಲ್ಲಿ ನಥಿಂಗ್ ಫೋನ್ 1 ಅನ್ನೂ ಭಾರೀ ಅಗ್ಗದಲ್ಲಿ ಸೇಲ್ ಮಾಡುತ್ತಿದೆ. ಇನ್ನು ನಥಿಂಗ್ ಸ್ಮಾರ್ಟ್ಫೋನ್ನ ಮೂಲ ಬೆಲೆ 35,999 ರೂಪಾಯಿ. ಆದ್ರೆ ಈಗ ಕೇವಲ 28,499 ರೂಪಾಯಿ ಬೆಲೆಯಲ್ಲಿ ಹೊಂದಬಹುದು. ಇನ್ನು ಇದರಲ್ಲಿ ಎಕ್ಸ್ಚೇಂಜ್ ಆಫರ್ ಅನ್ನು ನೀಡಲಾಗಿದ್ದು, ಹಳೇ ಫೋನನ್ನು ಕೊಟ್ಟು ನಥಿಂಗ್ ಫೋನ್ 1 ಸ್ಮಾರ್ಟ್ಫೋನ್ ಅನ್ನು 20000 ರೂಪಾಯಿ ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಮೂಲಕ ಫೋನ್ ಬೆಲೆ ಕೇವಲ 7,499 ರೂಪಾಯಿ ಆಗುತ್ತದೆ.
ಫ್ಲಿಪ್ಕಾರ್ಟ್ನಲ್ಲಿ ಇನ್ನೂ ಹಲವಾರು ಆಫರ್ಸ್ಗಳು ಲಭ್ಯ
AC ಗಳ ಮೇಲೆ ಭರ್ಜರಿ ಆಫರ್ಸ್
MarQ by Flipkart 0.8 Ton 3 Star Split Inverter AC - ಬಿಳಿ: ಈ AC ನ ಮೂಲ ಬೆಲೆ ರೂ.26,039.. ಫ್ಲಿಪ್ಕಾರ್ಟ್ನಲ್ಲಿ 17 ಪ್ರತಿಶತ ರಿಯಾಯಿತಿ ಲಭ್ಯವಿದೆ. ಇದರೊಂದಿಗೆ ನೀವು ಈ ಎಸಿಯನ್ನು ಕೇವಲ ರೂ.21,490ಕ್ಕೆ ರೂ.4,549 ರಿಯಾಯಿತಿಯೊಂದಿಗೆ ಹೊಂದಬಹುದು. ವಿವಿಧ ಬ್ಯಾಂಕ್ ಕಾರ್ಡ್‌ಗಳೊಂದಿಗೆ ನೀವು ರೂ.750 ವರೆಗಿನ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದು.
Lloyd 1 Ton 2 Star Window AC - White: ಈ AC ಯ ಮೂಲ ಬೆಲೆ ರೂ.39,990 ಮತ್ತು ಈ ಎಸಿ ಮೇಲೆ 41 ಪ್ರತಿಶತ ರಿಯಾಯಿತಿ ಲಭ್ಯವಿದೆ. ರೂ.16,400 ರ ರಿಯಾಯಿತಿಯೊಂದಿಗೆ ನೀವು ಇದನ್ನು ಕೇವಲ ರೂ.23,590 ಗೆ ಪಡೆಯಬಹುದು. ಅನೇಕ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ ಶೇಕಡಾ 10 ರಷ್ಟು ರಿಯಾಯಿತಿ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ