Flipkart Offer: ಕೇವಲ 6 ಸಾವಿರಕ್ಕೆ ಸಿಗುತ್ತಿದೆ 40 ಇಂಚಿನ ಈ ಸ್ಮಾರ್ಟ್​ಟಿವಿ!

ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ ಟಿವಿಗಳ ಮೇಲೆ ಭಾರಿ ರಿಯಾಯಿತಿ ನೀಡಿದೆ. ಬಜೆಟ್ ಕಡಿಮೆಯಿದ್ದು, ದೊಡ್ಡ ಪರದೆಯ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ಮಾರಾಟದ ಸಮಯದಲ್ಲಿ, Mi, Samsung, Realme ಮತ್ತು ಇತರ ಬ್ರ್ಯಾಂಡೆಡ್​ ಟಿವಿಗಳು ಭಾರಿ ರಿಯಾಯಿತಿ ದರದಲ್ಲಿ ಸೇಲ್​ ಮಾಡುತ್ತಿದೆ.

ಸ್ಮಾರ್ಟ್​ಟಿವಿ

ಸ್ಮಾರ್ಟ್​ಟಿವಿ

 • Share this:
  ಫ್ಲಿಪ್‌ಕಾರ್ಟ್ (Flipkart) ಆಗಾಗ ಗ್ರಾಹಕರಿಗೆ ಏನಾದರೊಂದು ಕೊಡುಗೆಯನ್ನು ನೀಡುತ್ತಿರುತ್ತದೆ. ಅದರಂತೆ ಇದೀಗ ಫ್ಲಿಪ್​ಕಾರ್ಟ್​ ಟಿವಿ ಸೇಲ್ (Tv sale)​ ನಡೆಸುತ್ತಿದೆ. ಈ ಮಾರಾಟವು ಡಿಸೆಂಬರ್ 1 ರಂದು ಪ್ರಾರಂಭವಾಗಿ ಇಂದು ಮಾರಾಟದ ಕೊನೆಯ ದಿನವಾಗಿದೆ. ಫ್ಲಿಪ್​ಕಾರ್ಟ್​ ಮಾರಾಟದ ಸಮಯದಲ್ಲಿ ಸ್ಮಾರ್ಟ್ ಟಿವಿಗಳನ್ನು ಅತ್ಯಂತ ಕಡಿಮೆ ಬೆಲೆ ಸೇಲ್​​ ಮಾಡುತ್ತಿದೆ.

  ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ ಟಿವಿಗಳ ಮೇಲೆ ಭಾರಿ ರಿಯಾಯಿತಿ ನೀಡಿದೆ. ಬಜೆಟ್ ಕಡಿಮೆಯಿದ್ದು, ದೊಡ್ಡ ಪರದೆಯ ಸ್ಮಾರ್ಟ್ ಟಿವಿಯನ್ನು (Smart Tv) ಹುಡುಕುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ಮಾರಾಟದ ಸಮಯದಲ್ಲಿ Mi, Samsung, Realme ಮತ್ತು ಇತರ ಬ್ರ್ಯಾಂಡೆಡ್​ ಟಿವಿಗಳು ಭಾರಿ ರಿಯಾಯಿತಿ ದರದಲ್ಲಿ ಸೇಲ್​ ಮಾಡುತ್ತಿದೆ.

  ಬಜೆಟ್ ಕಡಿಮೆಯಿದ್ದು, 40-ಇಂಚಿನ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ  ಅಂತವರಿಗಾಗಿ ಕೆಲವು ಆಯ್ಕೆಯ ಟಿವಿಗಳನ್ನು ಫ್ಲಿಪ್​ಕಾರ್ಟ್​ ಮಾರಾಟ ಮಾಡುತ್ತಿದೆ. ಕೊಡಾಕ್ ಕಂಪನಿಯ 40-ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದಾಗಿದೆ. ಆಫರ್‌ಗಳನ್ನು ಪಡೆಯುವ ಮೂಲಕ ನೀವು ಕೇವಲ 6 ಸಾವಿರ ರೂಪಾಯಿಗೆ ಟಿವಿ ಖರೀದಿಸಲು ಸಾಧ್ಯವಾಗುತ್ತದೆ.

  KODAK 7X Pro 40 ಇಂಚಿನ ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಕೊಡುಗೆಗಳು ಮತ್ತು ರಿಯಾಯಿತಿಗಳು

  KODAK 7X Pro 40 ಇಂಚಿನ ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಬೆಲೆ ರೂ 20,999  ರೂ ಆಗಿದೆ. ಆದರೆ ಟಿವಿ ಮಾರಾಟದ ಸಮಯದಲ್ಲಿ 11% ರಿಯಾಯಿತಿ ಸಿಗಲಿದೆ. ಅಂದರೆ, ಈ ಸ್ಮಾರ್ಟ್​ಟಿವಿ 18,499 ರೂ.ಗೆ ಲಭ್ಯವಿದೆ. ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳ ಮೂಲಕ ಟಿವಿಯನ್ನು ಇನ್ನಷ್ಟು ಅಗ್ಗವಾಗಿ ಖರೀದಿಸಬಹುದಾಗಿದೆ.

  ಇದನ್ನು ಓದಿ: Flipkart​ ಕಡೆಯಿಂದ ಭರ್ಜರಿ ಆಫರ್​! ಕೇವಲ 15 ರೂ.ಗೆ ಸಿಗುತ್ತೆ ಈ ಸ್ಮಾರ್ಟ್​ಫೋನ್​!

  ಬ್ಯಾಂಕ್ ಕೊಡುಗೆಗಳು

  ನೀವು ಸಿಟಿಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿ ಟಿವಿ ಖರೀದಿಸಿದರೆ 1500 ವರೆಗೆ ರಿಯಾಯಿತಿ ಪಡೆಯುತ್ತೀರಿ. ಆ   ಮೂಲಕ 10% ವರೆಗೆ ರಿಯಾಯಿತಿಯನ್ನು ಸಿಗಲಿದೆ. ಜೊತೆಗೆ ವಿನಿಮಯ ಕೊಡುಗೆಯೂ ಲಭ್ಯವಿದೆ.

  ಇದನ್ನು ಓದಿ: Google Play Best Apps 2021: ಈ ವರ್ಷದ ಬೆಸ್ಟ್ ಆ್ಯಪ್, ಗೇಮ್ಸ್ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ

  ಸ್ಮಾರ್ಟ್​ಟಿವಿ


  KODAK 7X Pro 40 ಇಂಚಿನ ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಮೇಲೆ ವಿನಿಮಯ ಕೊಡುಗೆ

  KODAK 7X Pro 40 ಇಂಚಿನ Full HD LED Smart Android TV ಮೇಲೆ ರೂ.11 ಸಾವಿರದ ಎಕ್ಸ್ ಚೇಂಜ್ ಆಫರ್ ಇದೆ. ನೀವು ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, ಹೆಚ್ಚಿನ ರಿಯಾಯಿತಿ ಪಡೆಯಬಹುದು. ವಿನಿಮಯ ಮಾಡುವ ಟಿವಿಯ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ನಿಮಗೆ 11 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತದೆ. ಮಾತ್ರವಲ್ಲದೆ ಸ್ಮಾರ್ಟ್ ಟಿವಿಯನ್ನು ರೂ 5,999 ಕ್ಕೆ ಖರೀದಿಸಬಹುದಾಗಿದೆ.
  Published by:Harshith AS
  First published: