FLIPKART ‘NATIONAL SHOPPING DAYS’ SALE : ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​

ಫ್ಲಿಪ್​ಕಾರ್ಟ್​ ಆಯೋಜಿಸುತ್ತಿರುವ ‘ನ್ಯಾಷನಲ್​​ ಶಾಪಿಂಗ್​ ಡೇಸ್‘​ ಸೇಲ್​ ಆಗಸ್ಟ್​ 8 ರಿಂದ 10ರ ವೆರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಹಕರು ಐಸಿಸಿಐ ಬ್ಯಾಂಕ್​ ಕಾರ್ಡ್​ ಬಳಸಿ ವಸ್ತುಗಳನ್ನು ಖರೀದಿಸಿದರೆ, ಅವರಿಗೆ ಶೇ.10ರಷ್ಟು ಡಿಸ್ಕೌಂಟ್​​ ನೀಡುತ್ತಿದೆ.

news18
Updated:August 7, 2019, 3:12 PM IST
FLIPKART ‘NATIONAL SHOPPING DAYS’ SALE : ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​
ಫ್ಲಿಪ್​ಕಾರ್ಟ್
  • News18
  • Last Updated: August 7, 2019, 3:12 PM IST
  • Share this:
ಜನಪ್ರಿಯ ಆನ್​ಲೈನ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ತನ್ನ ಗ್ರಾಹಕರಿಗಾಗಿ ಹೊಸ ಆಫರ್​ವೊಂದನ್ನು ಹೊತ್ತುತಂದಿದೆ. ಇತ್ತೀಚೆಗೆ ಅಮೆಜಾನ್​ ಹಮ್ಮಿಕೊಂಡಿರುವ ಫ್ರೀಡಂ ಸೇಲ್​ಗೆ ಪ್ರತಿಯಾಗಿ, ಫ್ಲಿಪ್​ಕಾರ್ಟ್​‘ನ್ಯಾಷನಲ್​​ ಶಾಪಿಂಗ್​ ಡೇಸ್​‘ ಸೇಲ್​ ಅನ್ನು ಆಯೋಜಿಸುತ್ತಿದೆ. ಇದರಲ್ಲಿ ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​, ಲ್ಯಾಪ್​ಟಾಪ್​​​, ಟಿವಿ, ಸ್ಟೀಕರ್​​ಗಳ ಮೇಲೆ ಭರ್ಜರಿ ಆಫರ್​ ನೀಡಿದೆ.

ಫ್ಲಿಪ್​ಕಾರ್ಟ್​ ಆಯೋಜಿಸುತ್ತಿರುವ ‘ನ್ಯಾಷನಲ್​​ ಶಾಪಿಂಗ್​ ಡೇಸ್‘​ ಸೇಲ್​ ಆಗಸ್ಟ್​ 8 ರಿಂದ 10ರ ವೆರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಹಕರು ಐಸಿಸಿಐ ಬ್ಯಾಂಕ್​ ಕಾರ್ಡ್​ ಬಳಸಿ ವಸ್ತುಗಳನ್ನು ಖರೀದಿಸಿದರೆ, ಅವರಿಗೆ ಶೇ.10ರಷ್ಟು ಡಿಸ್ಕೌಂಟ್​​ ನೀಡುತ್ತಿದೆ.

ಫ್ಲಿಪ್​ಕಾರ್ಟ್​ ಪ್ಲಸ್​ ಬಳಕೆದಾರರಿಗಾಗಿ ಆ.7 ರಂದು ರಾತ್ರಿ 8 ಗಂಟೆಯಿಂದ ಈ ಮಾರಾಟ ಲಭ್ಯವಾಗಲಿದೆ. ಜೊತೆಗೆ ಫ್ಲಿಪ್​ಕಾರ್ಟ್​ ಸೂಪರ್​ ಕಾಯಿನ್ಸ್ ಬಳಸಿ ಗ್ಯಾಜೆಟ್​ಗಳನ್ನು ಖರೀದಿಸಬಹುದಾಗಿದೆ. ಅಂತೆಯೇ, ಭಾರೀ ಡಿಸ್ಕೌಂಟ್​ ಕೂಡ ಸಿಗಲಿದೆ. ಗ್ರಾಹಕರಿಗಾಗಿ ಫ್ಲಿಪ್​ಕಾರ್ಟ್​ನಲ್ಲಿ ‘ಪ್ರೀ ಸೇಲ್​‘ ಅನ್ನು ಆಯೋಜಿಸಿದೆ.​ ಆ.4 ರಿಂದ 6 ತನಕ ಈ ಆಫರ್​ ಲಭ್ಯವಿದೆ.​​

ಇದನ್ನೂ ಓದಿ: ಮಲೆನಾಡಿನಲ್ಲಿ ಮುಂದುವರೆದ ಮಳೆ ಆರ್ಭಟ; ಕೊಡಗಿನಲ್ಲಿ ಇಂದಿನಿಂದ ಆರೆಂಜ್​ ಆಲರ್ಟ್​​

ಇನ್ನು ಟಾಪ್​ ಬ್ರಾಂಡ್​ ಮೇಲೆ ಶೇ.5ರಷ್ಟು ಡಿಸ್ಕೌಂಟ್​ ನೀಡಿದ್ದು, ಮಧ್ಯರಾತ್ರಿ 12 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಇರಲಿದೆ.  ಬಟ್ಟೆಗಳ ಮೇಲೆ ಶೇ.10 ರಷ್ಟು ಡಿಸ್ಕೌಂಟ್​ ನೀಡಿದೆ. ಸ್ಮಾರ್ಟ್​ಫೋನ್​, ಟಿವಿ, ಲ್ಯಾಪ್​ಟಾಪ್​ ಮೇಲೂ ದರ ಕಡಿತ ಮಾರಾಟ ಮಾಡುತ್ತಿದೆ.

ಸ್ಮಾರ್ಟ್​ಫೋನ್​ಗಳಾದ ರೆಡ್​ಮಿ ನೋಟ್​ 7, ರೆಡ್​ಮಿ ನೋಟ್​ 7S​, ಹಾನರ್20I​ , ರಿಯಲ್​ಮಿ 3 ಪ್ರೊ, ವಿವೋ Z​ 1 ಮೇಲೆ ಎಕ್ಸ್​ಚೇಂಜ್​ ಆಫರ್​ ನೀಡಿದೆ. ಅಂತೆಯೇ, ಶಿಯೋಮಿ ಮಿ A2, ಒಪ್ಪೋ K1, ಅಸೂಸ್​ ಮ್ಯಾಕ್ಸ್​​ ಪ್ರೊ M​1 ಸ್ಮಾರ್ಟ್​ಫೋನ್​​ಗಳ ಮೇಲೆ ದರಕಡಿತ ಮಾರಾಟ ಮಾಡುತ್ತಿದೆ. ಐಫೋನ್​ ಮೇಲೆ ನೋ ಕಾಸ್ಟ್​ EMI ಆಫರ್​ ನೀಡುತ್ತಿದೆ.
First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...