Flipkart Month End Sale: ಸ್ಮಾರ್ಟ್​ಫೋನ್​​ಗಳ ಮೇಲೆ ಭರ್ಜರಿ ಡಿಸ್ಕೌಂಟ್; ಎಕ್ಸ್​​ಚೇಂಜ್​​ ಮಾಡಿಕೊಳ್ಳಲು ಇದೇ ಅವಕಾಶ

ಶಿಯೋಮಿ ಕಂಪೆನಿಯ ರೆಡ್​ಮಿ 6 ಸ್ಮಾರ್ಟ್​ಫೋನ್​ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ. 3GB RAM​ ಮತ್ತು 64GB ಸ್ಟೊರೇಜ್​ ಹೊಂದಿರುವ ಈ ಸ್ಮಾರ್ಟ್​ಫೋನ್​ ಮೇಲೆ ರೂ. 3,500 ರಷ್ಟು ದರ ಕಡಿತ ಮಾಡಿ, 6,999 ರೂಪಾಯಿಗೆ ಮಾರಾಟ ಮಾಡುತ್ತಿದೆ. ಹಾನರ್​ 8C ಸ್ಮಾರ್ಟ್​ಫೋನ್​ 7,999 ರೂಪಾಯಿಗೆ ಸಿಗಲಿದೆ.

news18
Updated:August 26, 2019, 3:21 PM IST
Flipkart Month End Sale: ಸ್ಮಾರ್ಟ್​ಫೋನ್​​ಗಳ ಮೇಲೆ ಭರ್ಜರಿ ಡಿಸ್ಕೌಂಟ್; ಎಕ್ಸ್​​ಚೇಂಜ್​​ ಮಾಡಿಕೊಳ್ಳಲು ಇದೇ ಅವಕಾಶ
ಫ್ಲಿಪ್​ಕಾರ್ಟ್
  • News18
  • Last Updated: August 26, 2019, 3:21 PM IST
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ 'ಮಂತ್​ ಎಂಡ್​ ಸೇಲ್'​ ಅನ್ನು ಆಯೋಜಿಸಿದೆ. ಈ ಸೇಲ್​ ಆಗಸ್ಟ್​ 31ರ ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದ್ದು, ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​ ಅನ್ನು ನೀಡುತ್ತಿದೆ. ನೂತನ ಸ್ಮಾರ್ಟ್​ಫೋನ್​ಗಳ ಮೇಲೆ ದರ ಕಡಿತ ಮಾರಾಟ ನಡೆಸುತ್ತಿದೆ. ಜೊತೆಗೆ ಎಕ್ಸ್​ಚೇಂಜ್ ಆಫರ್​​ ಅನ್ನು ಒದಗಿಸುತ್ತಿದೆ.

ಫ್ಲಿಪ್​​ಕಾರ್ಟ್​ ಹಮ್ಮಿಕೊಂಡಿರುವ ‘ಮಂತ್ ಎಂಡ್​ ಸೇಲ್‘​ನಲ್ಲಿ ​ವಿವೊ ಕಂಪೆನಿಯ Z​1 ಪ್ರೊ ಸ್ಮಾರ್ಟ್​ಫೋನ್ ಅನ್ನು ಕಡಿಮೆ ದರದಲ್ಲಿ ಮಾರಾಟ ​ಮಾಡುತ್ತಿದೆ. ಜೊತೆಗೆ  ರೂ. 1,000 ಡಿಸ್ಕೌಂಟ್​ ನೀಡುತ್ತಿದೆ.

ಶಿಯೋಮಿ ಕಂಪೆನಿಯ ರೆಡ್​ಮಿ 6 ಸ್ಮಾರ್ಟ್​ಫೋನ್​ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ. 3GB RAM​ ಮತ್ತು 64GB ಸ್ಟೊರೇಜ್​ ಹೊಂದಿರುವ ಈ ಸ್ಮಾರ್ಟ್​ಫೋನ್​ ಮೇಲೆ ರೂ. 3,500 ರಷ್ಟು ದರ ಕಡಿತ ಮಾಡಿ, 6,999 ರೂಪಾಯಿಗೆ ಮಾರಾಟ ಮಾಡುತ್ತಿದೆ. ಹಾನರ್​ 8C ಸ್ಮಾರ್ಟ್​ಫೋನ್​ 7,999 ರೂಪಾಯಿಗೆ ಸಿಗಲಿದೆ.

ರಿಯಲ್​ಮಿ 2 ಪ್ರೊ ಸ್ಮಾರ್ಟ್​ಫೋನ್​ ರೂ. 8,999ಕ್ಕೆ ಮಾರಾಟ ಮಾಡುತ್ತಿದೆ. ಜೊತೆಗೆ 1,000 ರೂಪಾಯಿಯಷ್ಟು ದರ ಕಡಿತ ಮಾರಾಟ ಮಾಡುತ್ತಿದೆ. ಹಳೆಯ ಸ್ಮಾರ್ಟ್​ಫೋನ್​ ಅನ್ನು ರೆಡ್​ಮಿ ನೋಟ್​ 7 ಪ್ರೊ ಸ್ಮಾರ್ಟ್​ಫೋನಿಗೆ ಎಕ್ಸ್​ಚೇಂಜ್​​ ಮಾಡಿದರೆ ಇನ್ನಷ್ಟು ಆಫರ್​ ಅನ್ನು ಪಡೆಯ ಬಹುದಾಗಿದೆ. ಸ್ಯಾಮ್​​ಸಂಗ್​ ಗ್ಯಾಲಕ್ಸಿ A50 ಸ್ಮಾರ್ಟ್​ಫೋನ್​ ಮೇಲೆ ರೂ. 2000 ರಷ್ಟು ಎಕ್ಸ್​ಚೇಂಜ್​ ಆಫರ್​ ನೀಡಿದೆ.

ಒಪ್ಪೊ A5 ಮೇಲೂ ದರ ಕಡಿತ ಮಾರಾಟ ನಡೆಸುತ್ತಿದೆ.4GB RAM​ ಹಾಗೂ 64GB ಸ್ಟೊರೇಜ್​ ಹೊಂದಿರುವ ಈ ಸ್ಮಾರ್ಟ್​ಫೋನ್​ ಅನ್ನು ರೂ. 9,990 ಗೆ ಮಾರಾಟ ಮಾಡುತ್ತಿದೆ. ರೆಡ್​ಮಿ Y2 ಸ್ಮಾರ್ಟ್​ಫೋನ್​  ರೂ. 7,499ಗೆ ಸಿಗಲಿದೆ.

ಮೋಟೊರೋಲಾ ಒನ್​ ವಿಷನ್​ ಸ್ಮಾರ್ಟ್​ಫೋನ್​ ಮೇಲೆ ರೂ. 2000 ರಷ್ಟು ದರಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್​ಫೋನ್​ 48 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ ಮತ್ತು 25 ಮೆಗಾಫಿಕ್ಸೆಲ್​ ಫ್ರಂಟ್​ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ.

ಆಸೂಸ್​ 5Z​ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡಿದೆ. 8GB RAM​ ಹಾಗೂ 256GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ ​ ಮೇಲೆ ರೂ. 13,000ರಷ್ಟು ಬೆಲೆ ಕಡಿತಗೊಳಿಸಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ ರೂ. 23,999 ಗೆ ಸಿಗಲಿದೆ.ಹಾನರ್​ 10 ಲೈಟ್​ ಸ್ಮಾರ್ಟ್​ಫೋನ್​ ಮೇಲೆ  5000 ರೂಪಾಯಿಯಷ್ಟು ದರ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ ಅನ್ನು 8,999 ಗೆ ಮಾರಾಟ ಮಾಡುತ್ತಿದೆ. ಹಾನರ್​ ಪ್ಲೇ ಸ್ಮಾರ್ಟ್​ಫೋನ್​ ರೂ. 11,999ಗೆ ದೊರೆಯುತ್ತಿದೆ.

 

First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading