• Home
 • »
 • News
 • »
 • tech
 • »
 • Samsung Galaxy F22 ಖರೀದಿಗೆ ಕ್ಯೂ ನಿಂತ ಜನರು: ಕೇವಲ 50 ರೂ.ಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್!

Samsung Galaxy F22 ಖರೀದಿಗೆ ಕ್ಯೂ ನಿಂತ ಜನರು: ಕೇವಲ 50 ರೂ.ಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್!

SAMSUNG Galaxy F22 / ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​22

SAMSUNG Galaxy F22 / ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​22

SAMSUNG Galaxy F22: ಅಂದಹಾಗೆಯೇ ಗ್ರಾಹಕರು ಹೊಸ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ ಮತ್ತು ಬಜೆಟ್ ತುಂಬಾ ಕಡಿಮೆಯಿದ್ದರೆ, ಈ ಮಾರಾಟವು ಉಪಯೋಗಕ್ಕೆ ಬರಬಹುದು. ಅದಕ್ಕೆ ಉದಾಹಣೆ ಎಂಬಂತೆ ಫ್ಲಿಪ್​ಕಾರ್ಟ್​ ಮಂತ್​ ಎಂಡ್​ ಮೊಬೈಲ್​ ಫೆಸ್ಟ್​ ಸೇಲ್ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​22 (SAMSUNG Galaxy F22) ಸ್ಮಾರ್ಟ್​ಫೋನ್​ ಅನ್ನು ಅನ್ನು ಕೇವಲ 49 ರೂಗಳಲ್ಲಿ ಖರೀದಿಸುವ ಆಯ್ಕೆಯನ್ನು ನೀಡಿದೆ.

ಮುಂದೆ ಓದಿ ...
 • Share this:

  Flipkart Month Mobiles Fest: ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಮಂತ್​ ಎಂಡ್​ ಮೊಬೈಲ್​ ಫೆಸ್ಟ್​ ಸೇಲ್ (Month End Mobiles Fest) ನಡೆಯುತ್ತಿದೆ. ಈ ಸೇಲ್ ಫೆಬ್ರವರಿ ಅಂತ್ಯದವರೆಗೆ ಇರುತ್ತದೆ. ಈ ಮಾರಾಟದ ಸಮಯದಲ್ಲಿ, ಗ್ರಾಹಕರಿಗಾಘಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಿದೆ. ಮಾರಾಟದ ಸಮಯದಲ್ಲಿ, Samsung, Apple, Xiaomi, Oppo ನಂತಹ ಅನೇಕ ಕಂಪನಿಗಳ ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದಾದ ಅವಕಾಶವನ್ನು ತೆರೆದಿಟ್ಟಿದೆ. ಅಂದಹಾಗೆಯೇ ಗ್ರಾಹಕರು ಹೊಸ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ ಮತ್ತು ಬಜೆಟ್ ತುಂಬಾ ಕಡಿಮೆಯಿದ್ದರೆ, ಈ ಮಾರಾಟವು ಉಪಯೋಗಕ್ಕೆ ಬರಬಹುದು. ಅದಕ್ಕೆ ಉದಾಹಣೆ ಎಂಬಂತೆ ಫ್ಲಿಪ್​ಕಾರ್ಟ್​ ಮಂತ್​ ಎಂಡ್​ ಮೊಬೈಲ್​ ಫೆಸ್ಟ್​ ಸೇಲ್ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​22 (SAMSUNG Galaxy F22) ಸ್ಮಾರ್ಟ್​ಫೋನ್​ ಅನ್ನು ಅನ್ನು ಕೇವಲ 49 ರೂಗಳಲ್ಲಿ ಖರೀದಿಸುವ ಆಯ್ಕೆಯನ್ನು ನೀಡಿದೆ.


  Flipkart Month End Mobiles Fest: ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​22 ಆಫರ್‌ಗಳು ಮತ್ತು ರಿಯಾಯಿತಿಗಳು


  ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​22 ಸ್ಮಾರ್ಟ್​ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 16,999 ರೂ. ಆಗಿದೆ. ಆದರೆ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಫೋನ್ ಮೇಲೆ 2 ಸಾವಿರ ರೂಪಾಯಿ ಡಿಸ್ಕೌಂಟ್ ನೀಡುತ್ತಿದೆ. ಅಂದರೆ, ಫೋನ್ 14,999 ರೂ.ಗೆ ಲಭ್ಯವಿದೆ. ಇದರೊಂದಿಗೆ ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಸಹ ಇದ್ದು, ಫೋನ್‌ನ ಬೆಲೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.


  ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​22  ಬ್ಯಾಂಕ್ ಆಫರ್


  ಫೋನ್ ಖರೀದಿಸಲು IDFC ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ. ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಅದೇನೆಂದರೆ, ಫೋನ್ ಬೆಲೆ ಸಾವಿರ ರೂಪಾಯಿಗಳಷ್ಟು ಕಡಿಮೆಯಾಗಲಿದೆ. ಗ್ರಾಹಕರಿಗಾಗಿ 13,999 ರೂ.ಗೆ ಖರೀದಿಸಲು ಸಿಗುತ್ತದೆ.


  SAMSUNG Galaxy F22 ಎಕ್ಸ್​ಚೇಂಜ್ ಆಫರ್


  ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​22 ಫೋನಿನ ಮೇಲೆ 13,950 ರೂಪಾಯಿಗಳ ವಿನಿಮಯ ಕೊಡುಗೆ ನೀಡಿದೆ. ನೀವು ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ದೊಡ್ಡ ಮೊತ್ತದ ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 13,950 ರೂ.ವಿನ ರಿಯಾಯಿತಿ ಸಿಗಲಿದೆ. ಮಾತ್ರವಲ್ಲದೆ, ಪೂರ್ಣ ಆಫರ್​ ಪಡೆಯಲಿ ಸಾಧ್ಯವಾಗುತ್ತದೆ ನಿರ್ವಹಿಸಿದರೆ, ಹಾಗಾದಾಗ ಮತ್ರ ಕೇವಲ 49 ರೂ.ಗೆ ಸ್ಮಾರ್ಟ್​ಫೋನ್​ ನಿಮ್ಮ ಕೈ ಸೇರಲಿದೆ.


  ಇದನ್ನು ಓದಿ: Google Maps ಮೂಲಕ ಹಣ ಗಳಿಸಬಹುದು! ಹೇಗೆ ಸಾಧ್ಯ?


  Samsung Galaxy F22 ವಿಶೇಷಣಗಳು


  ಫೋನ್ 90Hz ರಿಫ್ರೆಶ್ ದರದೊಂದಿಗೆ ಸೆಗ್ಮೆಂಟ್-ಲೀಡಿಂಗ್ 6.4-ಇಂಚಿನ HD+ sAMOLED ಡಿಸ್ಪ್ಲೇಯನ್ನು ನೀಡುತ್ತದೆ. ಹಿಂದಿನ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ. ಪ್ರೈಮರಿಯಲ್ಲಿ 48 ಮೆಗಾಪಿಕ್ಸೆಲ್, ಸೆಕೆಂಡರಿಯಲ್ಲಿ 8 ಮೆಗಾಪಿಕ್ಸೆಲ್ ಮತ್ತು ಇನ್ನೆರಡರಲ್ಲಿ 2-2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಫೋನ್ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.


  ಇದನ್ನು ಓದಿ: Blackberry 5G: ಕನಸಾಗಿಯೇ ಉಳಿದ ಬ್ಲ್ಯಾಕ್​ಬೆರ್ರಿ ಸ್ಮಾರ್ಟ್‌ಫೋನ್.. ಯೋಜನೆ ಕೈ ಬಿಟ್ಟ ಆನ್‌ವರ್ಡ್‌ ಮೊಬಿಲಿಟಿ


  Samsung Galaxy F22 ಬ್ಯಾಟರಿ


  ಫೋನ್‌ಗೆ ಶಕ್ತಿಯನ್ನು ನೀಡಲು, 6000 mAh ಬ್ಯಾಟರಿಯನ್ನು ಒದಗಿಸಲಾಗಿದೆ, ಇದು 15 ವ್ಯಾಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಫೋನ್‌ನ ಬದಿಯಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವೂ ಲಭ್ಯವಿದೆ. ಫೋನ್ 4G LTE ಮತ್ತು USB-ಟೈಪ್ C ನಂತಹ ಸಂಪರ್ಕ ವೈಶಿಷ್ಟ್ಯಗಳನ್ನು ಹೊಂದಿದೆ.

  Published by:Harshith AS
  First published: