Flipkart Mobiles Bonanza Sale; ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್​

ಫ್ಲಿಪ್​ಕಾರ್ಟ್​ ಹಮ್ಮಿಕೊಂಡಿರುವ ಮೊಬೈಲ್​ ಬೊನಾನ್ಜಾ ಸೇಲ್​ನಲ್ಲಿ ಒಪ್ಪೋ A3s, ರೆಡ್​ಮಿ 6, ಮೋಟೋರೋಲಾ ಒನ್​ ವಿಷನ್​ ಸ್ಮಾರ್ಟ್​ಗಳ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ

news18-kannada
Updated:September 6, 2019, 4:53 PM IST
Flipkart Mobiles Bonanza Sale; ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್​
ಫ್ಲಿಪ್​ಕಾರ್ಟ್ ಮೊಬೈಲ್​ ಬೊನಾನ್ಜಾ ಸೇಲ್
news18-kannada
Updated: September 6, 2019, 4:53 PM IST
ಫ್ಲಿಪ್​ಕಾರ್ಟ್ ತನ್ನ ಗ್ರಾಹಕರಿಗಾಗಿ​ ಮೊಬೈಲ್​ ಬೊನಾನ್ಜಾ ಸೇಲ್​ ಅನ್ನು ಅಯೋಜಿಸಿದೆ.  ಈ ಸೇಲ್​ ಸೆ. 5 ರಿಂದ ಪ್ರಾರಂಭವಾಗಿದ್ದು ಸೆ. 9ರ ವರೆಗೆ ನಡೆಯಲಿದೆ. ಇದರಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡಿದೆ.

ಫ್ಲಿಪ್​ಕಾರ್ಟ್​ ಹಮ್ಮಿಕೊಂಡಿರುವ ಮೊಬೈಲ್​ ಬೊನಾನ್ಜಾ ಸೇಲ್​ನಲ್ಲಿ ಒಪ್ಪೋ A3s, ರೆಡ್​ಮಿ 6, ಮೋಟೋರೋಲಾ ಒನ್​ ವಿಷನ್​ ಸ್ಮಾರ್ಟ್​ಗಳ ಮೇಲೆ ದರ ಕಡಿತ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಆಸೂಸ್​ 6z, ಒಪ್ಪೋ F​​11 ಪ್ರೊ, ವಿವೋ V15 ಸ್ಮಾರ್ಟ್​​ಫೋನ್​ಗಳ ಮೇಲೆ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ.

ದರ ಕಡಿತ ಮಾರಾಟ.!

ಒಪ್ಪೋ ಕಂಪೆನಿ A3s​ ಸ್ಮಾರ್ಟ್​ಫೋನ್​ ಮೇಲೆ  ರೂ. 1,000 ದಷ್ಟು ಡಿಸ್ಕೌಂಟ್​ ನೀಡುತ್ತಿದೆ. ಈ ಸ್ಮಾರ್ಟ್​ಫೋನ್​ 2GB RAM  ಹೊಂದಿದ್ದು, 16GB ಸ್ಟೊರೇಜ್​ ಆಯ್ಕೆಯನ್ನು ಒಳಗೊಂಡಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ 6,990 ರೂ. ಗೆ ದೊರಕುತ್ತಿದೆ.  3GB RAM + 32GB ಸ್ಟೊರೇಜ್​ ಆಯ್ಕೆಯನ್ನು​ ಹೊಂದಿರುವ ಸ್ಮಾರ್ಟ್​ಫೋನ್​ ​7,990 ರೂ. ಗೆ ಮಾರಾಟ ಮಾಡುತ್ತಿದೆ. 4GB RAM +64GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ 9,990 ರೂ. ಗೆ ದೊರಕಲಿದೆ.

ರೆಡ್​ಮಿ 6 ಸ್ಮಾರ್ಟ್​ಫೋನ್​ ಮೇಲೂ ಭರ್ಜರಿ ಆಫರ್​ ನೀಡಿದೆ. 3GB RAM​ +64GB ಸ್ಟೊರೇಜ್​ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್​ಫೋನ್​ 6,999 ರೂ. ಗೆ ಮಾರಾಟ ಮಾಡುತ್ತಿದೆ. 4GB RAM​ + 64 GB ಸ್ಟೊರೇಜ್​ ಹೊಂದಿರುವ ರಿಯಲ್​ಮಿ 2 ಪ್ರೊ ಸ್ಮಾರ್ಟ್​ಫೋನ್​ ಮೇಲೆ ದರ ಕಡಿತ ಮಾರಾಟ ಮಾಡಿದೆ. ಈ  ಸ್ಮಾರ್ಟ್​ಫೋನ್​ 9,999 ರೂ. ಗೆ ಸಿಗುತ್ತಿದೆ. ಅಂತೆಯೇ, 6GB RAM​ +128GB ಸ್ಟೊರೇಜ್​ ಹೊಂದಿರುವ ಸ್ಮಾರ್ಟ್​ಫೋನ್​ 11,999 ರೂ.ಗೆ ಮಾರಾಟ ಮಾಡುತ್ತಿದೆ.

ಇದನ್ನೂ ಓದಿ: ನೋಟ್ ಬ್ಯಾನ್​ ಬಳಿಕ ಜನರ ಬಳಿ ಹಣವೇ ಇಲ್ಲ, ಇನ್ನು ವಾಹನ ಹೇಗೆ ಖರೀದಿಸುತ್ತಾರೆ? ಸಚಿವ ಠಾಕೂರ್​ಗೆ ಸಭಿಕರ ಪ್ರಶ್ನೆ

ಫ್ಲಿಪ್​ಕಾರ್ಟ್​ ಬೊನಾನ್ಹಾ ಸೇಲ್​ನಲ್ಲಿ ರಿಯಲ್​ ಮಿ 3 ಸ್ಮಾರ್ಟ್​ಪೋನ್​ ಮೇಲೂ ದರ ಕಡಿತ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್​ಫೋನ್​ 8,999 ರೂ. ಗೆ ಸಿಗುತ್ತಿದೆ. ರಿಯಲ್​ಮಿ 3 ಪ್ರೊ ಸ್ಮಾರ್ಟ್​ಫೋನ್​ 12,999 ರೂ. ಗೆ ಸಿಗುತ್ತಿದೆ. ನೋಕಿಯಾ 8.1 ಸ್ಮಾರ್ಟ್​ಫೋನ್​ 15,999 ರೂ. ಗೆ ದೊರಕುತ್ತಿದೆ. ಅಂತೆಯೇ, ಮೋಟೋರೋಲಾ ಒನ್​ ವಿಷನ್​​​ ಸ್ಮಾರ್ಟ್​ಫೋನ್​ ಮೇಲೆ 3,000 ರೂ ಡಿಸ್ಕೌಂಟ್​ ಮಾಡಿದ್ದು, 16,999 ರೂ. ಗೆ ಮಾರಾಟ ಮಾಡುತ್ತಿದೆ.
Loading...

ಗ್ರಾಹಕರಿಗಾಗಿ ಫ್ಲಿಪ್​ಕಾರ್ಟ್​ ಬೊನಾನ್ಜಾ ಸೇಲ್​ನಲ್ಲಿ ಹಳೇಯ ಸ್ಮಾರ್ಟ್​ಫೋನ್​​ಗಳನ್ನು ಮೇಲೆ ಎಕ್ಸ್​ಚೇಂಜ್ ಆಫರ್​ ಅನ್ನು ನೀಡುತ್ತಿದೆ. ಜೊತೆಗೆ ನೋ-ಕಾಸ್ಟ್​ ಇಎಮ್​ಐ ಮೂಲಕ ಸ್ಮಾರ್ಟ್​ಫೋನ್​ ಅನ್ನು ಖರೀದಿಸಬಹುದಾಗಿದೆ.
First published:September 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...