Flipkart ಮೊಬೈಲ್ ಬೊನಾಂಜಾ ಸೇಲ್​; ಕೇವಲ 99 ರೂ.ಗೆ ಈ ಸ್ಮಾರ್ಟ್ ಫೋನ್ ಖರೀದಿಸಿ

Realme Narzo 30 5G: Realme Narzo 30 5G ಸ್ಮಾರ್ಟ್​ಫೋನ್​ ​​ಬಿಡುಗಡೆ ಬೆಲೆ 17,999 ರೂ ಆಗಿದೆ, ಆದರೆ ಮಾರಾಟದ ಸಮಯದಲ್ಲಿ ಈ ಸ್ಮಾರ್ಟ್‌ಫೋನ್ 16,999 ರೂಗಳಿಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ ಸಾವಿರ ರೂಪಾಯಿ ರಿಯಾಯಿತಿ ನೀಡಿದೆ. ಆದರೆ ಈ ಫೋನ್ ಅದಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Flipkart​

Flipkart​

 • Share this:
  Flipkart Mobiles Bonanza Sale: ಫ್ಲಿಪ್‌ಕಾರ್ಟ್‌ನಲ್ಲಿ ಎರಡು ದಿನಗಳ ಮೊಬೈಲ್ ಬೊನಾಂಜಾ ಸೇಲ್​ ನಡೆಸುತ್ತಿದೆ. ಡಿಸೆಂಬರ್ 7 ರಿಂದ ಡಿಸೆಂಬರ್ 8 ರವರೆಗೆ ಈ ಮಾರಟ ನಡೆಸುತ್ತಿದ್ದು, ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿದೆ. ಬೆಲೆಯಿಂದಾಗಿ ದುಬಾರಿ ಸ್ಮಾರ್ಟ್‌ಫೋನ್‌ಗಳು ಎಂದೆಸಿಕೊಂಡ ಸಾಧನಗಳು ಸಹ ತುಂಬಾ ಅಗ್ಗವಾಗಿ ಸಿಗುತ್ತಿದೆ. ಗ್ರಾಹಕರು ಫ್ಲಿಪ್‌ಕಾರ್ಟ್ ಮೊಬೈಲ್‌ಗಳ ಬೊನಾಂಜಾ ಮಾರಾಟದಲ್ಲಿ 5G ಸ್ಮಾರ್ಟ್‌ಫೋನ್‌ನ ಖರೀದಿಸುವವರಾದರೆ ಇದೊಂದು ಮುಕ್ತ ಅವಕಾಶವನ್ನು ತೆರೆದಿಟ್ಟಿದೆ. Apple, Samsung, Xiaomi, Oppo, Realme ನಂತಹ ಕಂಪನಿಗಳ ಫೋನ್‌ಗಳು ಅತ್ಯಂತ ಅಗ್ಗವಾಗಿ ಲಭ್ಯವಿವೆ. ಅದರಲ್ಲೂ Realme Narzo 30 5G ಮೇಲೆ ಭಾರಿ ರಿಯಾಯಿತಿ ನೀಡಿದೆ. ಆಫರ್‌ಮೂಲಕ ಖರೀದಿಸುವ ಅವಕಾಶವಿದ್ದು, ಈ ಸ್ಮಾರ್ಟ್​ಫೋನನ್ನು ಕೇವಲ 99 ರೂಗಳಲ್ಲಿ ಖರೀದಿಸಬಹುದಾಗಿದೆ.

  Realme Narzo 30 5G ಕೊಡುಗೆಗಳು ಮತ್ತು ರಿಯಾಯಿತಿಗಳು

  Realme Narzo 30 5G ಸ್ಮಾರ್ಟ್​ಫೋನ್​ ​​ಬಿಡುಗಡೆ ಬೆಲೆ 17,999 ರೂ ಆಗಿದೆ, ಆದರೆ ಮಾರಾಟದ ಸಮಯದಲ್ಲಿ ಈ ಸ್ಮಾರ್ಟ್‌ಫೋನ್ 16,999 ರೂಗಳಿಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ ಸಾವಿರ ರೂಪಾಯಿ ರಿಯಾಯಿತಿ ನೀಡಿದೆ. ಆದರೆ ಈ ಫೋನ್ ಅದಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

  Realme Narzo 30 5G ನಲ್ಲಿ ಬ್ಯಾಂಕ್ ಕೊಡುಗೆಗಳು

  Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ Realme Narzo 30 5G ಫೋನಿನ ಮೇಲೆ 5% ರಿಯಾಯಿತಿಯನ್ನು ನೀಡುತ್ತಿದೆ. ನೀವು Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, ನಿಮಗೆ 850 ರೂ ರಿಯಾಯಿತಿ ಸಿಗುತ್ತದೆ. ಅಂದರೆ, ಫೋನ್ ಬೆಲೆ 16,149 ರೂ. ಅದರ ನಂತರ ವಿನಿಮಯ ಕೊಡುಗೆಯೂ ಇದೆ, ಇದು ಫೋನ್‌ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

  Realme Narzo 30 5G ನಲ್ಲಿ ವಿನಿಮಯ ಕೊಡುಗೆ

  Realme Narzo 30 5G ಸ್ಮಾರ್ಟ್​ಫೋನಿನ ಮೇಲೆ 16,050 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ ಈ ರಿಯಾಯಿತಿ ಪಡೆಯಬಹುದು. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 16,050 ರೂಪಾಯಿಗಳ ವಿನಿಮಯ ಲಭ್ಯವಿರುತ್ತದೆ. ನೀವು ಸಂಪೂರ್ಣ ವಿನಿಯದ ಮೂಲಕ ಖರೀದಿಸುವಿರಾದರೆ ಫೋನ್ ಅನ್ನು ಕೇವಲ 99 ರೂ.ಗೆ ಖರೀದಿಸಬಹುದು.

  ಇದನ್ನು ಓದಿ: Jio Prepaid Plan: ಜಿಯೋ ಪರಿಚಯಿಸಿರುವ ಈ ಅಗ್ಗದ ಪ್ಲಾನ್​​ನಲ್ಲಿ ಸಿಗಲಿದೆ ಪ್ರತಿದಿನ 1GB ಡೇಟಾ!

  ಭರ್ಜರಿ ಆಫರ್​

  ಫ್ಲಿಪ್​ಕಾರ್ಟ್​ ಜನಪ್ರಿಯ ಇ-ಕಾಮರ್ಸ್​ ಮಳಿಗೆಯಾಗಿದೆ. ಸಾಕಷ್ಟು ಜನರು ಇದರ ಮೂಲಕ ಸ್ಮಾರ್ಟ್​ಫೋನ್ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಖರೀದಿಸುತ್ತಾ ಬಂದಿದ್ದಾರೆ. ಅದಕ್ಕೆ ಅನುಗುಣವಾಗಿ ಮತ್ತು ಗ್ರಾಹಕರಿಗೆ ಕೊಡುಗೆ ನೀಡುವ ಸಲುವಾಗಿ ಫ್ಲಿಪ್​ಕಾರ್ಟ್​ ಆಫರ್​ಗಳನ್ನು ನೀಡುತ್ತಿರುತ್ತದೆ. ಅದರಂತೆ ಫ್ಲಿಪ್‌ಕಾರ್ಟ್ ಮೊಬೈಲ್‌ಗಳ ಬೊನಾಂಜಾ ಮಾರಾಟ ನಡೆಸುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್​ ಘೋಷಿಸಿದೆ.

  ಇದನ್ನು ಓದಿ: Airtag: ಆ್ಯಪಲ್ ಏರ್​ಟ್ಯಾಗ್ ಬಳಸಿ ಐಷಾರಾಮಿ ಕಾರು ಕದ್ದ ಕಳ್ಳರು!

  ಸ್ಮಾರ್ಟ್​ಫೋನ್​ ಮಳಿಗೆಯಲ್ಲಿ ಸಿಗದ ಕೆಲವು ಆಫರ್​ಗಳು ಆನ್​ಲೈನ್​ ಮಾರಾಟ ಮಳಿಗೆಯಲ್ಲಿ ಸಿಗುತ್ತದೆ. ಈ ಕಾರಣಕ್ಕೆ ಅನೇಕರು ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್​ ಮೂಲಕ ಖರೀದಿಸುತ್ತಾರೆ.

  ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ಉತ್ಪನ್ನಗಳ ಮೇಲೆ ಕೊಡುಗೆ ನೀಡುವುದರ ಜೊತೆಗೆ, ಬ್ಯಾಂಕ್ ಅಫರ್​ಗಳನ್ನು ನೀಡುತ್ತದೆ. ಆ ಮೂಲಕ ಗ್ರಾಹಕರಿಗೆ ಸ್ಮಾರ್ಟ್​ಫೋನ್​ ಅಥವಾ ಇನ್ನಿತರ ವಸ್ತುಗಳನ್ನು ಸುಲಭವಾಗಿ  ಖರೀದಿಸುವ ಅವಕಾಶ ನೀಡುತ್ತದೆ. ಜೊತೆಗೆ ಯಾವುದೇ ವಸ್ತುಗಳಾಗಲಿ ಖರೀದಿಸಿದ ನಂತರ ನೆ ಬಾಗಿಲಿಗೆ ತಂದು ನೀಡುವ ಸೇವೆಯನ್ನು ಆನ್​ಲೈನ್​ ಮಾರಾಟ ಮಳಿಗೆ ಮಾಡುತ್ತಾ ಬಂದಿದೆ. ಹಾಗಾಗಿ ಬಹುತೇಕರು ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್ ಮೂಲಕ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಾರೆ
  Published by:Harshith AS
  First published: