HOME » NEWS » Tech » FLIPKART MOBILES BONANZA APPLE IPHONE SE XIOAMI MI 10T ASUS ROG PHONE 3 AND MORE AVAILABLE AT SPECIAL PRICES HG

Flipkart Mobiles Bonanza: ಕಡಿಮೆ ಬೆಲೆಗೆ ಐಫೋನ್​, ಶಿಯೋಮಿ, ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​ಗಳು!

Mobiles Bonanza Sale: ಫ್ಲಿಪ್​ಕಾರ್ಟ್​ ಬೊನಾನ್ಜಾ ಸೇಲ್​ನಲ್ಲಿ ಶಿಯೋಮಿ, ಆಸೂಸ್​​, ಸ್ಯಾಮ್​ಸಂಗ್​, ಪೊಕೊ, ಆ್ಯಪಲ್​ ಕಂಪನಿಗಳ ಸ್ಮಾರ್ಟ್​ಫೋನ್​ಗಳನ್ನು​ ಮಾರಾಟ ಮಾಡುತ್ತಿದೆ.

news18
Updated:December 7, 2020, 5:09 PM IST
Flipkart Mobiles Bonanza: ಕಡಿಮೆ ಬೆಲೆಗೆ ಐಫೋನ್​, ಶಿಯೋಮಿ, ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​ಗಳು!
ಫ್ಲಿಪ್​ಕಾರ್ಟ್​ ಬೊನಾನ್ಜಾ ಸೇಲ್
  • News18
  • Last Updated: December 7, 2020, 5:09 PM IST
  • Share this:
ವಾಲ್​ಮಾರ್ಟ್​ ಒಡೆತನದ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಮೊಬೈಲ್​ ಬೊನಾನ್ಜಾ ಸೇಲ್​​ ನಡೆಸುತ್ತಿದೆ. ಈ ಸೇಲ್​ನಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನನ್ನು ಮಾರಾಟ ಮಾಡುತ್ತಿದೆ. ಡಿಸೆಂಬರ್​​ 10ರವರೆಗೆ ಸೇಲ್​ ಹಮ್ಮಿಕೊಂಡಿದ್ದು, ಮೂರು ದಿನಗಳ ಕಾಲ ಸೇಲ್​ ನಡೆಯಲಿದೆ.

ಫ್ಲಿಪ್​ಕಾರ್ಟ್​ ಬೊನಾನ್ಜಾ ಸೇಲ್​ನಲ್ಲಿ ಶಿಯೋಮಿ, ಆಸೂಸ್​​, ಸ್ಯಾಮ್​ಸಂಗ್​, ಪೊಕೊ, ಆ್ಯಪಲ್​ ಕಂಪನಿಗಳ ಸ್ಮಾರ್ಟ್​ಫೋನ್​ಗಳನ್ನು​ ಮಾರಾಟ ಮಾಡುತ್ತಿದೆ. ಎಕ್ಸ್​ಚೇಂಜ್​ ಆಫರ್ ಬೆಲೆಗೆ ಸ್ಮಾರ್ಟ್​ಫೋನ್​ ಮಾರಾಟ ಮಾಡುತ್ತಿದೆ. ಜೊತೆಗೆ ಇಎಂಐ ಆಯ್ಕೆಯನ್ನು ನೀಡಿದೆ.

ಹೆಚ್​ಡಿಎಫ್​ಸಿ ಕ್ರೆಟಿಡ್​ ಕಾರ್ಡ್ ಮತ್ತು ಡೆಬಿಟ್​ ಕಾರ್ಡ್​​ ಬಳಸಿ ಸ್ಮಾರ್ಟ್​ಫೋನ್​​ ಖರೀದಿಸುವವರಿಗೆ ಸುಮಾರು 1,750 ರೂ.ನಷ್ಟು ಡಿಸ್ಕೌಂಟ್​ ನೀಡುತ್ತಿದೆ. ಇನ್ನು ಶಿಯೋಮಿ ಮಿ 10ಟಿ, ಸ್ಯಾಮ್​ಸಂಗ್​​​​ ಗ್ಯಾಲಕ್ಸಿ ಎಫ್​41, ಅಸೂಸ್​ ರೋಗ್​ ಫೋನ್​ 3, ಮೊಟೊ ರೇಜರ್​ ಸ್ಮಾರ್ಟ್​ಫೋನನ್ನು ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡುತ್ತಿದೆ.

ಅಸೂಸ್​​ ರೋಗ್​ ಫೋನ್​ 3 ಸ್ಮಾರ್ಟ್​ಫೋನ್​ 49,999 ರೂ. ಮುಖಬೆಲೆಯನ್ನು ಹೊಂದಿದೆ. ಈ ಸ್ಮಾಟ್​ಫೋನಿನ ಮೇಲೆ 2 ಸಾವಿರ ಡಿಸ್ಕೌಂಟ್​ ನೀಡಿದ್ದು, 46,999 ರೂ.ಗೆ ಮಾರಾಟ ಮಾಡುತ್ತಿದೆ. ಇನ್ನು ಐಫೋನ್​ ಎಸ್​ಇ ಮೇಲೆ 7 ಸಾವಿರ ಡಿಸ್ಕೌಂಟ್​ ನೀಡುತ್ತಿದ್ದು, 32,999 ರೂ.ಗೆ ಮಾರಾಟ ಮಾಡುತ್ತಿದೆ.

ಮೊಬೈಲ್​ ಬೊನಾನ್ಜಾ ಸೇಲ್​ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕಸಿ ಎಫ್​41  ಸ್ಮಾರ್ಟ್​ಫೊನನ್ನು15,999 ರೂ.ಗೆ ಮಾರಾಟ ಮಾಡುತ್ತಿದೆ.
Published by: Harshith AS
First published: December 7, 2020, 5:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories