Flipkart Mobile Awards: 2021ನೇ ಸಾಲಿನ ಫ್ಲಿಪ್‌ಕಾರ್ಟ್‌ ಮೊಬೈಲ್ ಅವಾರ್ಡ್‌ ವಿಜೇತರು ಯಾರು ಗೊತ್ತಾ..?

ಈ ಹಿಂದೆ ಐಫೋನ್ 13 ಅಮೆಜಾನ್ ವತಿಯಿಂದ ವರ್ಷದ ಸ್ಮಾರ್ಟ್‌ಫೋನ್ ಎಂಬ ಪಟ್ಟದೊಂದಿಗೆ ಅತ್ಯುತ್ತಮ ವಿನ್ಯಾಸ ಪ್ರಶಸ್ತಿಯನ್ನು ಕೂಡಾ ತನ್ನದಾಗಿಸಿಕೊಂಡಿತ್ತು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಜನವರಿ 4 ರಂದು, ಫ್ಲಿಪ್‌ಕಾರ್ಟ್ (Flipkart Announced) 2021ರ ಸಾಲಿನ ಮೊಬೈಲ್ ಪ್ರಶಸ್ತಿ ವಿಜೇತರನ್ನು(Mobile Award winner) ಘೋಷಿಸಿತು. 2021ರಲ್ಲಿ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾದ ಸ್ಮಾರ್ಟ್ ಫೋನ್‌ಗಳನ್ನು ಸುಮಾರು 5 ಲಕ್ಷ ಫ್ಲಿಪ್‌ಕಾರ್ಟ್ ಗ್ರಾಹಕರು ವೋಟ್ ಹಾಕಿ ಆಯ್ಕೆ ಮಾಡಿದ್ದಾರೆ ಎಂದು ಇ ಕಾಮರ್ಸ್ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾದ ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ. ಫ್ಲಿಪ್‌ಕಾರ್ಟ್ ಮೊಬೈಲ್‌ ಪ್ರಶಸ್ತಿ ಪಟ್ಟಿಯು ಅತ್ಯುತ್ತಮ ಗುಣಮಟ್ಟದ 5G ಸ್ಮಾರ್ಟ್‌ಫೋನ್‌ಗಳು (5G smartphones)ಹಾಗೂ ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಒಟ್ಟು 11 ವಿಭಾಗಗಳನ್ನು ಹೊಂದಿದೆ. ಅಮೆಜಾನ್ ಇಂಡಿಯಾ(Amazon India ) ಇದೇ ರೀತಿಯ ಪಟ್ಟಿಯನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ಈ ವರದಿ ಸಲ್ಲಿಸಲಾಗಿದೆ.

ಒನ್ ಪ್ಲಸ್ ಮಾಯ

ಫ್ಲಿಪ್‌ಕಾರ್ಟ್ ಕಂಪನಿಯು ಒನ್ ಪ್ಲಸ್ ಮತ್ತು Xiaomi ಫೋನ್‌ಗಳನ್ನು ಅಧಿಕೃತವಾಗಿ ಮಾರಾಟ ಮಾಡದ ಕಾರಣ, ಅವುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಈ ಪಟ್ಟಿಯಲ್ಲಿ ಸೇರಿಕೆಯಾದ ಫೋನ್‌ಗಳು ಕೇವಲ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯ ಎಂಬುದನ್ನು ಬಳಕೆದಾರರು ಗಮನಿಸಬೇಕು.

ಇದನ್ನೂ ಓದಿ: 2022ರಲ್ಲಿ Lenovo ಬಿಡುಗಡೆ ಮಾಡಲಿದೆ ಅತ್ಯದ್ಭುತ ಗೇಮಿಂಗ್ Smart Phones

ಫ್ಲಿಪ್‌ಕಾರ್ಟ್ ಮೊಬೈಲ್ ಅವಾರ್ಡ್ಸ್ 2021 ವಿಜೇತರ ಲಿಸ್ಟ್ ಈ ಕೆಳಗಿನಂತಿದೆ:
2021ರ ಸಾಲಿನ ಸರಿ ಸಾಟಿಯಿಲ್ಲದ ಪ್ರಮುಖ ಫೋನ್: ಐಫೋನ್ 13 ಸರಣಿ
2021 ರ ಸಾಲಿನ ಕೂಲೆಸ್ಟ್ ಸ್ಮಾರ್ಟ್‌ಫೋನ್ ಟೆಕ್: ಐಫೋನ್ 13 ಸರಣಿ
2021 ರ ಸಾಲಿನ ಅತ್ಯುತ್ತಮ ಗೇಮಿಂಗ್ ಫೋನ್: ಏಸಸ್‌ ರೋಗ್ ಫೋನ್ 5
2021 ರ ಸಾಲಿನ ಅತ್ಯುತ್ತಮ ಕ್ಯಾಮೆರಾ ಫೋನ್: ವಿವೋ ಎಸ್70 ಪ್ರೋ
2021 ರ ಸಾಲಿನ ಅತ್ಯುತ್ತಮ ವಿನ್ಯಾಸ ಹೊಂದಿತ ಫೋನ್: ಒಪ್ಪೋ ರೆನೊ6 ಪ್ರೋ
2021 ರ ಸಾಲಿನ ಅತಿ ಶ್ರೇಷ್ಠ ಮಧ್ಯ ಶ್ರೇಣಿಯ ಫೋನ್: ರಿಯಲ್‌ಮಿ 8i
2021 ರ ಅತ್ಯುತ್ತಮ 'ಹಣಕ್ಕೆ ತಕ್ಕ ಮೌಲ್ಯ ' ಫೋನ್: ಪೋಕೋ ಎಕ್ಸ್ 3 ಪ್ರೋ
2021 ರ ಸಾಲಿನ 5G ಮಧ್ಯಮ ಶ್ರೇಣಿ ಅತ್ಯುತ್ತಮ ಫೋನ್: ರಿಯಲ್‌ಮಿ 8 ಎಸ್ 5ಜಿ
2021 ರ ಸಾಲಿನ ಎಪಿಕ್ ಸೆಲ್ಫಿ ಫೋನ್: ವಿವೋ ವಿ21
2021 ರ ಸಾಲಿನ ದೀರ್ಘಕಾಲೀನ ಬ್ಯಾಟರಿ ಪವರ್‌ಹೌಸ್: ರಿಯಲ್‌ಮಿ ಜಿಟಿ ನಿಯೋ 2
ಮನೋರಂಜನಾ ಸೂಪರ್ ಸ್ಟಾರ್ 2021 : ರಿಯಲ್‌ಮಿ ಜಿಟಿ ಮಾಸ್ಟರ್ ಎಡಿಷನ್

ವರ್ಷದ ಸ್ಮಾರ್ಟ್‌ಫೋನ್

ಈ ಹಿಂದೆ ಐಫೋನ್ 13, ಅಮೆಜಾನ್ ವತಿಯಿಂದ "ವರ್ಷದ ಸ್ಮಾರ್ಟ್‌ಫೋನ್" ಎಂಬ ಪಟ್ಟದೊಂದಿಗೆ 'ಅತ್ಯುತ್ತಮ ವಿನ್ಯಾಸ ಪ್ರಶಸ್ತಿಯನ್ನು' ಕೂಡಾ ತನ್ನದಾಗಿಸಿಕೊಂಡಿತ್ತು. iPhone 13 Pro ಅನ್ನು 'ಅತ್ಯುತ್ತಮ ಅಲ್ಟ್ರಾ-ಪ್ರೀಮಿಯಂ' ಹಾಗೂ 'ಅತ್ಯುತ್ತಮ ಕ್ಯಾಮರಾ' ಸ್ಮಾರ್ಟ್ಎಂ ಫೋನ್ ಎಂದು ಹೆಸರಿಸಲಾಗಿರುವುದರ ಜೊತೆಗೆ ಐಫೋನ್ 13 ಮಿನಿ ‘ಅತ್ಯುತ್ತಮ ಪ್ರೀಮಿಯಂ ಸ್ಮಾರ್ಟ್‌ಫೋನ್' ಎಂದು ಗುರುತಿಸಿಕೊಂಡಿತು.

ತಂತ್ರಜ್ಞಾನದ ಸವಲತ್ತು

ಅಮೆಜಾನ್‌ನಲ್ಲಿ ಆಪಲ್ ಸ್ಮಾರ್ಟ್ ಫೋನ್ 2021ರ ಸಾಲಿನ ಹೆಚ್ಚು ಜನಪ್ರಿಯ ಬ್ರ್ಯಾಂಡ್‌ ಆಗಿತ್ತು. ಒನ್ ಪ್ಲಸ್ ನಾರ್ಡ್ 2 5 ಜಿ ನಂತಹ ಇತರ ಫೋನ್‌ಗಳು ' ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್‌ಫೋನ್' ಎಂಬ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಸೇರಿಸಿಕೊಂಡರೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ32 5ಜಿ 'ಅತ್ಯುತ್ತಮ ಬ್ಯಾಟರಿ ಗುಣಮಟ್ಟದ ಸ್ಮಾರ್ಟ್‌ಫೋನ್' ಎಂಬ ಶೀರ್ಷಿಕೆಯನ್ನು ಪಡೆದುಕೊಂಡಿತು.

ಇದನ್ನು ಓದಿ: Infinix Note 11 ಮತ್ತು Note 11S ಬಿಡುಗಡೆ: ವೈಶಿಷ್ಟ್ಯಗಳು ಮತ್ತು ಬೆಲೆ ವಿವರ ಇಲ್ಲಿದೆ..

ಕಳೆದ ವರ್ಷದಿಂದ ಸ್ಮಾರ್ಟ್‌ಫೋನ್‌ ಬಳಕೆಯ ಪ್ರಾಥಮಿಕ ಕಾರಣವು ಮಹತ್ತರವಾಗಿ ಬದಲಾಗಿದೆ. ವರ್ಕ್ ಫ್ರಮ್ ಹೋಂ ನಿಂದ ಹಿಡಿದು ಮನೆಯಲ್ಲೇ ಕೂತು ಕಲಿಕೆಯನ್ನು ಮುಂದುವರಿಸುವವರೆಗೆ, ಮನರಂಜನೆಯ ಮಾಧ್ಯಮದಿಂದ ಹಿಡಿದು ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಂಡು ತುರ್ತು ಪರಿಸ್ಥಿತಿಯಲ್ಲಿ ಸಂಪನ್ಮೂಲವಾಗುವವರೆಗೆ ಸ್ಮಾರ್ಟ್‌ಫೋನ್ ದೈತ್ಯವಾಗಿ ಬೆಳೆದು ನಿಂತಿದೆ.
Published by:vanithasanjevani vanithasanjevani
First published: