Flipkart: ಇನ್ಮುಂದೆ ಆನ್​ಲೈನ್​ನಲ್ಲೇ ಕರಕುಶಲ ವಸ್ತುಗಳನ್ನು ಖರೀದಿಸಬಹುದು; ಫ್ಲಿಪ್​​ಕಾರ್ಟ್​​ನಿಂದ ಹೊಸ ಆಫರ್​

ಫ್ಲಿಪ್​ಕಾರ್ಟ್​ ‘ಸಮರ್ಥ್​ ಯೋಜನೆ‘ಯಲ್ಲಿ ಕರಕುಶಲ ವಸ್ತುಗಳ ಮಾರಾಟದ ಜೊತೆಗೆ, ಜನಪ್ರೀಯಗೊಳಿಸಲು ಅನುವು ಮಾಡಿಕೊಡುತ್ತಿದೆ. ಜೊತೆಗೆ ಆನ್​ಬೋರ್ಡಿಂಗ್​, ಕೆಟಲಾಗಿಂಗ್​, ಅಕೌಂಟ್​ ಮ್ಯಾನೆಜ್​ಮೆಂಟ್​​, ಬ್ಯುಸಿನೆಸ್​ ಇನ್​ಸೈಟ್ಸ್​, ಡೆಡಿಕೇಟರ್​ ಸೆಲ್ಲರ್​ ಸಪೋರ್ಟ್​ ಸೌಲಭ್ಯವನ್ನು ಕಲ್ಪಿಸಿದೆ.

news18
Updated:August 5, 2019, 3:29 PM IST
Flipkart: ಇನ್ಮುಂದೆ ಆನ್​ಲೈನ್​ನಲ್ಲೇ ಕರಕುಶಲ ವಸ್ತುಗಳನ್ನು ಖರೀದಿಸಬಹುದು; ಫ್ಲಿಪ್​​ಕಾರ್ಟ್​​ನಿಂದ ಹೊಸ ಆಫರ್​
ಫ್ಲಿಪ್​ಕಾರ್ಟ್
news18
Updated: August 5, 2019, 3:29 PM IST
ಪ್ರತಿಷ್ಠಿತ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​​ಕಾರ್ಟ್​ ದೇಶದ ಕುಶಲಕರ್ಮಿಗಳಿಗೆ ಹಾಗೂ ನೇಕಾರರಿಗೆ ‘ಸಮರ್ಥ್​​ ಯೋಜನೆ‘ಯೊಂದನ್ನು ಪರಿಚಯಿಸಿದೆ. ಈ ಯೋಜನೆ ಮೂಲಕ ಕುಶಲಕರ್ಮಿಗಳು ಹಾಗೂ ನೇಕಾರರು ತಯಾರಿಸಿದ ಕರಕುಶಲ ವಸ್ತುಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಒದಗಿಸಲು ಮುಂದಾಗಿದೆ.

ಫ್ಲಿಪ್​ಕಾರ್ಟ್​ ‘ಸಮರ್ಥ್‘​ನಲ್ಲಿ ಕರಕುಶಲ ವಸ್ತುಗಳ ಮಾರಾಟದ ಜೊತೆಗೆ, ಜನಪ್ರಿಯಗೊಳಿಸಲು ಅನುವು ಮಾಡಿಕೊಡುತ್ತಿದೆ. ಜೊತೆಗೆ ಆನ್​ಬೋರ್ಡಿಂಗ್​, ಕೆಟಲಾಗಿಂಗ್​, ಅಕೌಂಟ್​ ಮ್ಯಾನೆಜ್​ಮೆಂಟ್​​, ಬ್ಯುಸಿನೆಸ್​ ಇನ್​ಸೈಟ್ಸ್​, ಡೆಡಿಕೇಟರ್​ ಸೆಲ್ಲರ್​ ಸಪೋರ್ಟ್​ ಸೌಲಭ್ಯವನ್ನು ಕಲ್ಪಿಸಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು; ಎನ್​ಡಿಎ ಮೈತ್ರಿಕೂಟದಲ್ಲೇ ಭಿನ್ನಮತ; ನಿರ್ಧಾರಕ್ಕೆ ಬೆಂಬಲವಿಲ್ಲ ಎಂದ ಜೆಡಿಯು!

ಫ್ಲಿಪ್​ಕಾರ್ಟ್​ ‘ಸಮರ್ಥ್‘​ನಲ್ಲಿ ಒನ್​ಜಿಒಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಜಿವನೋಪಾಯ ಸಂಸ್ಥೆಗಳ ಜತೆಯಲ್ಲಿ ಸಹಯೋಗ ಹೊಂದಲಿದೆ. ಈ ಮೂಲಕ ಕುಶಲಕರ್ಮಿಗಳಿಗೆ ಸಹಾಯಕವಾಗಲಿದೆ. ವಿಶೇಷವಾಗಿ ಮಹಿಳಾ ಕುಶಲಕರ್ಮಿಗಳು ಆದ್ಯತೆ ನೀಡಲಾಗಿದೆ. ಚೇತನ ಉದ್ಯಮಿಗಳು, ನೇಕಾರರು ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಕುಶಲಕರ್ಮಿಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ಮೂಲಕ ದೇಶದಾದ್ಯಂತ ಇರುವ 150 ದಶಲಕ್ಷ ಗ್ರಾಹಕರಿಗೆ ತಮ್ಮ ಉತ್ಪನ್ನವನ್ನು ತಲುಪಿಸಬಹುದಾಗಿದೆ
First published:August 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...