Flipkart Big Billion Days: ಇಂದಿನಿಂದ ಫ್ರೀ ಬುಕ್ಕಿಂಗ್ ಆರಂಭ; ಕೇವಲ 1 ರೂ.ಗೆ ಆರ್ಡರ್ ಮಾಡಿ!

Flipkart Big Billion Days 2020: ಇಂದಿನಿಂದ ಅಕ್ಟೋಬರ್ 14 ರವರೆಗೆ ಒಳಗೆ ವಸ್ತು ಅಥವಾ ಉತ್ಪನ್ನಗಳನ್ನು ಫ್ರೀ ಬುಕ್ ಮಾಡಬಹುದಾಗಿದೆ.

Flipkart

Flipkart

 • Share this:
  ಆನ್​​ಲೈನ್ ಮಾರಾಟ ಮಳಿಗೆಯಾದ ಫ್ಲಿಪ್​​ಕಾರ್ಟ್​ ‘ಬಿಗ್ ಬಿಲಿಯನ್ ಡೇಸ್‘ ಸೇಲ್ ನಡೆಸಲು ಯೋಜನೆ ಹಾಕಿಕೊಂಡಿದೆ. ಇದೇ ಅಕ್ಟೋಬರ್ 16ರಿಂದ ಸೇಲ್ ನಡೆಸಲು ಮುಂದಾಗಿದೆ.

  ಆನ್​​ಲೈನ್ ಮಾರಾಟ ಮಳಿಗೆಯಾದ ಫ್ಲಿಪ್​​ಕಾರ್ಟ್​ ‘ಬಿಗ್ ಬಿಲಿಯನ್ ಡೇಸ್‘ ಸೇಲ್ ನಡೆಸಲು ಯೋಜನೆ ಹಾಕಿಕೊಂಡಿದೆ. ಇದೇ ಅಕ್ಟೋಬರ್ 16ರಿಂದ ಸೇಲ್ ನಡೆಸಲು ಮುಂದಾಗಿದೆ. ಆ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್​, ಡಿಸ್ಕೌಂಟ್​ ಅನ್ನು ನೀಡಲಿದೆ. ​

  ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಹಲವಾರು ಫ್ಲಿಪ್​ಕಾರ್ಟ್​ ಉತ್ಪನ್ನಗಳನ್ನು ಮಾರಾಟ ಮಾಡಲಿದೆ. ದೇಶದಾದ್ಯಂತ ಗ್ರಾಹಕರಿಗೆ ಈ ಸೇಲ್​ನಿಂದ ಪ್ರಯೋಜನ ಸಿಗುವಂತೆ  ಪ್ಲಾನ್​ ಹಾಕಿಕೊಂಡಿದೆ.

  ಫ್ಲಿಪ್​ಕಾರ್ಟ್ ಗ್ರಾಹಕರಿಗೆ ತಮಗಿಷ್ಟವಾದ ಉತ್ಪನ್ನಗಳನ್ನು ಮೊದಲೇ ಬುಕ್ ಮಾಡಲು ಮತ್ತು ಶಾಪಿಂಗ್ ಕಾರ್ಟ್ ಅನ್ನು ರಚಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. ಇಂದಿನಿಂದ ಅಕ್ಟೋಬರ್ 14 ರವರೆಗೆ ಒಳಗೆ ವಸ್ತು ಅಥವಾ ಉತ್ಪನ್ನಗಳನ್ನು ಫ್ರೀ ಬುಕ್ ಮಾಡಬಹುದಾಗಿದೆ.

  ಗ್ರಾಹಕರು ಕನಿಷ್ಠ 1 ರೂಪಾಯಿಯನ್ನು ಪಾವತಿ ಮಾಡಿ ವಸ್ತುಗಳನ್ನು ಬುಕ್ ಮಾಡಬಹುದಾಗಿದೆ. ಅಕ್ಟೋಬರ್ 16ರಂದು ಬುಕ್ ಮಾಡಿರುವ ವಸ್ತುವಿನ ಪೂರ್ತಿ ಹಣವನ್ನು ಪಾವತಿಸಿ ಖರೀದಿಸಬಹುದಾಗಿದೆ.

  ಅಮೆಜಾನ್​ ಅಕ್ಟೋಬರ್​ 17ರಿಂದ ಗ್ರೇಟ್​​ ಇಂಡಿಯನ್​​​ ಸೇಲ್​ ಪ್ರಾರಂಭಿಸುವುದಾಗಿ ಯೋಜನೆ ಹಾಕಿಕೊಂಡಿದೆ. ಅದರಂತೆ ಫ್ಲಿಪ್​ಕಾರ್ಟ್​ ಒಂದು ದಿನದ ಮುಂಚಿತವಾಗಿ ಆಯೋಜನೆ ಮಾಡಿಕೊಂಡಿದೆ. ಅದರ ಮೂಲಕ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.

  ಫ್ಲಿಪ್​ಕಾರ್ಟ್​ ಪ್ಲಸ್​ ಬಳಕೆದಾರರಿಗೆ ಅ.15ರಿಂದ ಈ ಸೇಲ್​ ಪ್ರಯೋಜನ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಎಸ್​​ಬಿಐ ಡೆಬಿಟ್​ ಮತ್ತು ಕ್ರೆಡಿಟ್​​ ಕಾರ್ಡ್​ ಮೂಲಕ ಉತ್ಪನ್ನಗಳನ್ನು ಖರೀದಿಸಿದರೆ ಶೇ.10 ರಷ್ಟು ಆಫರ್​ ಸಿಗಲಿದೆ. ಜೊತೆಗೆ ನೋ-ಕಾಸ್ಟ್ ಇಎಮ್​ಐ ಸೌಲಭ್ಯ ಸಿಗಲಿದೆ.

  ​ಅಷ್ಟು ಮಾತ್ರವಲ್ಲದೆ, ಗ್ರಾಹಕರು ಯುಪಿಐ ಪೇಮೆಂಟ್​ ಮೂಲಕ ಖರೀದಿಸಬಹುದಾಗಿದೆ. ಪೇಟಿಯಂ ವಾಲೆಟ್​ ಮತ್ತು ಪೆಟಿಯಂ ಯುಪಿಐ ಮೂಲಕ ಗ್ರಾಹಕರು ತಮ್ಮಿಷ್ಟದ ಉತ್ಪನ್ನಗಳನ್ನು ತೆಗೆದುಕೊಳ್ಳಬಹುದಾಗಿದೆ.  ಪ್ರತಿಬಾರಿಯಂತೆ ಈ ಬಾರಿಯೂ ಫ್ಲಿಪ್​ಕಾರ್ಟ್​ ಗ್ರೇಟ್​ ಇಂಡಿಯನ್​ ಸೇಲ್​ನಲ್ಲಿ ಸ್ಮಾರ್ಟ್​ಫೋನ್​​, ಟಿವಿ, ಫ್ಯಾಷನ್​, ಬ್ಯೂಟಿ, ಮನೆ ಮತ್ತು ಅಡುಗೆ ಉತ್ಪನ್ನಗಳು, ಪಿಠೋಪಕರಣಗಳನ್ನು ಆಫರ್​ ಬೆಲೆ ಮಾರಾಟ ಮಾಡುತ್ತಿದೆ. ಸುಮಾರು 850ಕ್ಕೂ ಹೆಚ್ಚಿನ ನಗರಗಳಲ್ಲಿ ಮತ್ತು 50 ಸಾವಿರಕ್ಕೂ ಆಧಿಕ ಕಿರಾಣಿ ಅಂಗಡಿಗಳು ಈ ಸೇಲ್​ ಮೂಲಕ ಪ್ರಯೋಜನ ಪಡೆಯಲಿದೆ.
  Published by:Harshith AS
  First published: