HOME » NEWS » Tech » FLIPKART FLAGSHIP FEST BEGINS IPHONE 12 MI 10T MORE PHONES GET DEALS AND DISCOUNTS HG

Flipkart Flagship Fest Begins: ಡಿಸ್ಕೌಂಟ್​ ಬೆಲೆಗೆ ಐಫೋನ್​, ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​!

ಫ್ಲಿಪ್​ಕಾರ್ಟ್​ ಫ್ಲಾಗ್​ಶಿಪ್​ ಫೆಸ್ಟ್​ನಲ್ಲಿ ಐಫೊನ್​ 11, ಐಫೊನ್​ 12 ಮತ್ತು ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​62 ಅನ್ನು ಡಿಸ್ಕೌಂಟ್​ ಬೆಲೆಗೆ ಸೇಲ್​ ಮಾಡುತ್ತಿದೆ. ಅದರ ಜೊತೆಗೆ ಸಿಟಿಬ್ಯಾಂಕ್​ ಕಾರ್ಡ್​ ಹೊಂದಿರುವ ಗ್ರಾಹಕರಿಗೆ ಶೇ.10 ರಷ್ಟು ಇನ್​ಸ್ಟಂಟ್​ ಡಿಸ್ಕೌಂಟ್​ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ಇಎಮ್​ಐ ಆಯ್ಕೆಯಲ್ಲೂ ಖರೀದಿಸುವ ಅವಕಾಶ ನೀಡಿದೆ.

news18-kannada
Updated:May 11, 2021, 1:04 PM IST
Flipkart Flagship Fest Begins: ಡಿಸ್ಕೌಂಟ್​ ಬೆಲೆಗೆ ಐಫೋನ್​, ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​!
Flipkart Flagship Fest
  • Share this:
ಫ್ಲಿಪ್​ಕಾರ್ಟ್​ ಕಳೆದ ವಾರ ಬಿಗ್​ ಸೇವಿಂಗ್​ ಡೇಸ್​ ಸೇಲ್​ ಹಮ್ಮಿಕೊಂಡಿತ್ತು. ಮೇ7ರವರೆಗೆ ಈ ಸೇಲ್​ ಆಯೋಜಿಸಿತ್ತು. ಆದರೀಗ ಫ್ಲಾಗ್​ಶಿಪ್​​ ಫೆಸ್ಟ್​​ ಹಮ್ಮಿಕೊಂಡಿದೆ. ಮೇ 14ರವರೆಗೆ ಈ ಸೇಲ್​ ನಡೆಸಲಿದೆ. ಇದರಲ್ಲಿ ವಿವಿಧ ಕಂಪನಿಗಳ ಸ್ಮಾರ್ಟ್​ಫೋನ್​ಗಳನ್ನು ಭರ್ಜರಿ ಡಿಸ್ಕೌಂಟ್​ನೊಂದಿಗೆ ಮಾರಾಟ ಮಾಡುತ್ತಿದೆ.

ಫ್ಲಿಪ್​ಕಾರ್ಟ್​ ಫ್ಲಾಗ್​ಶಿಪ್​ ಫೆಸ್ಟ್​ನಲ್ಲಿ ಐಫೊನ್​ 11, ಐಫೊನ್​ 12 ಮತ್ತು ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​62 ಅನ್ನು ಡಿಸ್ಕೌಂಟ್​ ಬೆಲೆಗೆ ಸೇಲ್​ ಮಾಡುತ್ತಿದೆ. ಅದರ ಜೊತೆಗೆ ಸಿಟಿಬ್ಯಾಂಕ್​ ಕಾರ್ಡ್​ ಹೊಂದಿರುವ ಗ್ರಾಹಕರಿಗೆ ಶೇ.10 ರಷ್ಟು ಇನ್​ಸ್ಟಂಟ್​ ಡಿಸ್ಕೌಂಟ್​ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ಇಎಮ್​ಐ ಆಯ್ಕೆಯಲ್ಲೂ ಖರೀದಿಸುವ ಅವಕಾಶ ನೀಡಿದೆ.

ಇನ್ನು ಫ್ಲಾಗ್​ಶಿಪ್​ ಸೇಲ್​ನಲ್ಲಿ ನೋ-ಕಾಸ್ಟ್​ ಇಎಮ್​ಐ ಆಯ್ಕೆಯ ಜೊತೆಗೆ ತಿಂಗಳಿಗೆ 2,500 ರೂ ನೀಡುವ ಮೂಲಕ ಸ್ಮಾರ್ಟ್​ಫೋನ್​ಗಳ ಮೇಲಿನ ಇಎಮ್​ಐ ಪಾವತಿಸಬಹುದಾದ ಅವಕಾಶ ನೀಡಿದೆ.

64ಜಿಬಿ ಸ್ಟೊರೇಜ್​ ಆಯ್ಕೆಯ ಐಫೋನ್​ 11 ಅನ್ನು 48,999 ರೂ.ಗೆ ಅಂತೆಯೇ 128ಜಿಬಿ ಸ್ಟೊರೇಜ್​ ಆಯ್ಕೆಯ ಐಫೋನ್​ 11 ಅನ್ನು 55,999 ರೂ.ಗೆ ಸೇಲ್​ ಮಾಡುತ್ತಿದೆ. ತಿಂಗಳಿಗೆ 7,840 ರೂ ನೀಡುವ ಮೂಲಕ ಐಫೊನ್​ 11 ಇಎಮ್​ಐ ಪಾವತಿಸಬೇಕು.

ಐಫೋನ್​ 12 ಮೇಲೆ 6 ಸಾವಿರ ಡಿಸ್ಕೌಂಟ್​ ನೀಡಿದೆ. ಆದರೆ ಹೆಚ್​ಡಿಎಫ್​ಸಿ ಕಾರ್ಡ್​ ಬಳಸಿ ಖರೀದಿಸಿದರೆ ಈ ಸೌಲಭ್ಯ ಸಿಗಲಿದೆ. ಇನ್ನು ಐಫೋನ್​ 12 ಮಿನಿ ಮೇಲೆ  11,317 ರೂ ಇಎಮ್​ಐ ಪಾವತಿ ಆಯ್ಕೆಯನ್ನು ನೀಡುತ್ತಿದೆ. ಐಫೋನ್​ 12 ಮೇಲೆ ತಿಂಗಳಿಗೆ 12,984 ರೂ ಇಎಮ್​ಐ ಪಾವತಿಸಬೇಕು. ಐಫೋನ್​ 12 ಪ್ರೊ ಮೇಲೆ ತಿಂಗಳಿಗೆ 19,317 ರೂ, ಐಫೊನ್​ 12 ಪ್ರೊ ಮ್ಯಾಕ್ಸ್​ ಮೇಲೆ ತಿಂಗಳಿಗೆ 20,984 ರೂ ಇಎಮ್​ಐ ಪಾವತಿಸುವ ಅವಕಾಶ ನೀಡಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​62 ಮೇಲೆ ಯಾವುದೇ ದರ ಕಡಿತವಿಲ್ಲ. ಆದರೆ ಐಸಿಐಸಿಐ ಬ್ಯಾಂಕ್​​ ಕಾರ್ಡ್​ ಬಳಕೆದಾರರು 2,500 ರೂ ಇನ್​ಸ್ಟಂಟ್​ ಡಿಸ್ಕೌಂಟ್​ ನೀಡಿದೆ, ಇಎಮ್​ಐ ಆಯ್ಕೆಯಲ್ಲಾದರೆ ತಿಂಗಳಿಗೆ 4 ಸಾವಿರ ರೂ ಕಟ್ಟಬೇಕಿದೆ.

ರಿಯಲ್​ಮಿ ಎಕ್ಸ್​50 ಪ್ರೊ 5ಜಿ ಸ್ಮಾರ್ಟ್​ಫೋನ್​ ಬೆಲೆ 24,999 ರೂ ಆಗಿದ್ದು, ಫ್ಲಿಪ್​ಕಾರ್ಟ್​ ಫ್ಲಾಗ್​ಶಿಪ್​ ಸೇಲ್​ನಲ್ಲಿ ಆಫರ್​ ಬೆಲೆಗೆ ಸಿಗುತ್ತಿದೆ. ನೊ-ಕಾಸ್ಟ್​ ಇಎಮ್​ಐ ಆಯ್ಕೆಯಲ್ಲಿ ಖರೀದಿಸುವ ಅವಕಾಶ ನೀಡಿದೆ,ಮಿ10ಟಿ ಸಿರೀಸ್​ಗಳ ಮೇಲೆ ಹೆಚ್​ಡಿಎಫ್​ಸಿ ಬ್ಯಾಂಕ್​ ಇನ್​ಸ್ಟಂಟ್​ ಡಿಸ್ಕೌಂಟ್​ ನೀಡಿದೆ. ಹೆಚ್​ಡಿಎಫ್​ಸಿ ಕಾರ್ಡ್​ ಬಳಕೆದಾರರು 2,500 ರೂ ಇನ್​ಸ್ಟಂಟ್​ ಡಿಸ್ಕೌಂಟ್​ ಪಡೆಯಲಿದ್ದಾರೆ.  ಜೊತೆಗೆ 2,750 ರೂ ಇಎಲ್​ಐ ಆಯ್ಕೆಯಲ್ಲಿ ಖರೀದಿಸುವ ಅವಕಾಶ ನೀಡಿದೆ.

ವಿವೊ ಎಕ್ಸ್​​60 5ಜಿ ಸ್ಮಾರ್ಟ್​ಫೊನ್ ಅನ್ನು ಕಡಿಮೆ ಬೆಲೆಗೆ ಸೇಲ್​ ಮಾಡುತ್ತಿದೆ. ಅಂತೆಯೇ ಮೊಟೊರೊಲಾ ರೇಜರ್​ 5ಜಿ ಸ್ಮಾರ್ಟ್​ಫೋನ್​ ಮೇಲೆ ತಿಂಗಳಿಗೆ 15 ಸಾವಿರ ಇಎಲ್​ಐ ಕಟ್ಟುವ ಮೂಲಕ ಖರೀದಿಸುವ ಅವಕಾಶ ನೀಡಿದೆ.
Published by: Harshith AS
First published: May 11, 2021, 1:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories