HOME » NEWS » Tech » FLIPKART ENABLES 3 NEW LANGUAGES ON ITS PLATFORM TAMIL TELUGU AND KANNADA HG

Flipkart: ಕನ್ನಡ ಭಾಷೆಯಲ್ಲಿ ಫ್ಲಿಪ್​ಕಾರ್ಟ್​; ಇನ್ಮುಂದೆ ವಸ್ತುಗಳ ಖರೀದಿ ಮತ್ತಷ್ಟು ಸುಲಭ

Flipkart: ಅನೇಕರು ಇ-ಕಾಮರ್ಸ್​ ವ್ಯವಸ್ಥೆಯಲ್ಲಿ ಭಾಷೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಫ್ಲಿಪ್​ಕಾರ್ಟ್​ ಅವರಿಗೆ ಅನುಕೂಲಕರವಾದ ಭಾಷೆಯಲ್ಲಿ ವಸ್ತುಗಳನ್ನು ಕೊಂಡುಕೊಳ್ಳಲು, ಅದರ ವಿಶೇಷತೆಯನ್ನು ತಿಳಿದುಕೊಳ್ಳುವ ಸಲುವಾಗಿ ಪ್ರಾದೇಶಿಕ ಭಾಷೆಯನ್ನು ಪರಿಚಯಿಸಿದೆ.

news18-kannada
Updated:June 26, 2020, 6:06 PM IST
Flipkart: ಕನ್ನಡ ಭಾಷೆಯಲ್ಲಿ ಫ್ಲಿಪ್​ಕಾರ್ಟ್​; ಇನ್ಮುಂದೆ ವಸ್ತುಗಳ ಖರೀದಿ ಮತ್ತಷ್ಟು ಸುಲಭ
ಫ್ಲಿಪ್​ಕಾರ್ಟ್
  • Share this:
ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ತನ್ನ ಬಳಕೆದಾರರಿಗೆ ಪ್ರಾದೇಶಿಕ ಭಾಷೆಯನ್ನು ಪರಿಚಯಿಸಿದೆ. ಕನ್ನಡ ಸೇರಿದಂತೆ, ತಮಿಲು, ತೆಲುಗು ಭಾಷೆಯಲ್ಲಿ ಫ್ಲಿಪ್​ಕಾರ್ಟ್​ ಬಳಸಬಹುದಾಗಿದೆ.

ಭಾರತದಲ್ಲಿ ಆನೇಕರು ಆನ್​ಲೈನ್​ ಮೂಲಕ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅದರಂತೆ ಫ್ಲಿಪ್​ಕಾರ್ಟ್​ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಿದೆ. ಅನೇಕರು ತಮಗಿಷ್ಟವಾದ ವಸ್ತುಗಳನ್ನು ಫ್ಲಿಪ್​ಕಾರ್ಟ್​ ಮೂಲಕ ಖರೀದಿಸುತ್ತಿದ್ದಾರೆ. ಹಾಗಾಗಿ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮತ್ತು ಪ್ರಾದೇಶಿಕ ಜನರಿಗೆ ಫ್ಲಿಪ್​ಕಾರ್ಟ್​ ಮೂಲಕ ವಸ್ತುಗಳನ್ನು ಸುಲಭವಾಗಿ ಖರೀದಿಸಲು ಕನ್ನಡ, ತಮಿಳು, ತೆಲುಗು ಭಾಷೆಯನ್ನು ಪರಿಚಯಿಸಿದೆ.

ಅನೇಕರು ಇ-ಕಾಮರ್ಸ್​ ವ್ಯವಸ್ಥೆಯಲ್ಲಿ ಭಾಷೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಫ್ಲಿಪ್​ಕಾರ್ಟ್​ ಅವರಿಗೆ ಅನುಕೂಲಕರವಾದ ಭಾಷೆಯಲ್ಲಿ ವಸ್ತುಗಳನ್ನು ಕೊಂಡುಕೊಳ್ಳಲು, ಅದರ ವಿಶೇಷತೆಯನ್ನು ತಿಳಿದುಕೊಳ್ಳುವ ಸಲುವಾಗಿ ಪ್ರಾದೇಶಿಕ ಭಾಷೆಯನ್ನು ಪರಿಚಯಿಸಿದೆ. ಆ ಮೂಲಕ ಪ್ರಾದೇಶಿಕ ಜನರಿಗೆ ಹತ್ತಿರವಾಗಿದೆ. ಕಳೆದ ವರ್ಷ ಫ್ಲಿಪ್​ಕಾರ್ಟ್​ ಹಿಂದಿ ಭಾಷೆಯನ್ನು ಪ್ಲಿಪ್​ಕಾರ್ಟ್​ನಲ್ಲಿ ಪರಿಚಯಿಸಿತ್ತು.

ಈ ಬಗ್ಗೆ ಮಾತನಾಡಿದ ಫ್ಲಿಪ್​ಕಾರ್ಟ್​ ಚೀಫ್​​ ಪ್ರಾಡಕ್ಟ್​​ ಅಂಡ್​​ ಟೆಕ್ನಾಲಜಿ ಆಫಿಸರ್​ ಜಯೇಂದ್ರನ್​ ವೇಣುಗೋಪಾಲ್​, ದೇಶಿಯ ಇ-ಕಾಮರ್ಸ್​ ಮಳಿಯೆಯಲ್ಲಿ ಸ್ಥಾನ ಪಡೆದಿರುವ ಫ್ಲಿಪ್​ಕಾರ್ಟ್​ ಭಾರತದ ಬಳಕೆದಾರರನ್ನು ಸಬಲರನ್ನಾಗಿ ಮಾಡುವಲ್ಲಿ ಸರಳ ಭಾಷೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರಿತಿದ್ದೇವೆ. ಅದೇ ರೀತಿ ಫ್ಲಿಪ್​ಕಾರ್ಟ್​ನಲ್ಲಿ ಹೊಸ ಬಳಕೆದಾರರು ಸೇರ್ಪಡೆಗೆ ನೆರವಾಗುತ್ತದೆ ಎಂಬುದನ್ನು ತಿಳಿದಿದ್ದೇವೆ. ಇಂದು ಶೇ.58 ರಷ್ಟು ಗ್ರಾಹಕರು 2ನೇ ಹಂತದ ನಗರಗಳಿಗೆ ಸೇರಿದವರಾಗಿದ್ದಾರೆ.  ಹಾಗಾಗಿ ಕನ್ನಡ, ತಮಿಳು, ತೆಲುಗು ಭಾಷೆಯನ್ನು ಹೊಸದಾಗಿ ಸೇರ್ಪಡೆ ಮಾಡಿರುವುದರಿಂದ ಬಳಕೆದಾರರಿಗೆ ವಸ್ತುಗಳ ಖರೀದಿಸಲು ಸುಲಭವಾಗಲಿದೆ ಎಂದು ಹೇಳಿದರು.

WhatsApp: ವಾಟ್ಸ್​​ಆ್ಯಪ್​​ನಲ್ಲಿ ಬರಲಿದೆ ಹೊಸ ಫೀಚರ್​; ಬಳಕೆದಾರರು ಫುಲ್​ ಖುಷ್​​!
First published: June 26, 2020, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories