HOME » NEWS » Tech » FLIPKART ELECTRONICS 2020 SALE BEGINS OFFERS ON MOTOROLA SMARTPHONE AND MORE HG

Flipkart Electronics 2020: ಕಡಿಮೆ ಬೆಲೆಗೆ ಬೆಸ್ಟ್​​ ಸ್ಮಾರ್ಟ್​ಫೋನ್​ಗಳು!

ಮೊಟೊ ರೇಜರ್​​ 5G ಸ್ಮಾರ್ಟ್​ಫೋನ್​ ಮೇಲೆ ಎಕ್ಸ್​ಚೇಂಜ್​ ಆಫರ್​ ನೀಡಿದೆ. ಜೊತೆಗೆ ಐಸಿಐಸಿಐ ಕ್ರೆಡಿಟ್​​ ಕಾರ್ಡ್​ ಮತ್ತು ಇಎಮ್​ಐ ಟ್ರಾನ್ಸಾಕ್ಷನ್​ ಮೂಲಕ ಖರೀದಿಸಿದೆ ಶೇ. 10ರಷ್ಟು ಡಿಸ್ಕೌಂಟ್ ಬೆಲೆಗೆ ಸಿಗಲಿದೆ. ಅಂದಹಾಗೆಯೇ ಈ ಫೋನ್ 98,999 ರೂ.ಗೆ ಮಾರಾಟ ಮಾಡುತ್ತಿದೆ.

news18-kannada
Updated:December 26, 2020, 7:21 PM IST
Flipkart Electronics 2020: ಕಡಿಮೆ ಬೆಲೆಗೆ ಬೆಸ್ಟ್​​ ಸ್ಮಾರ್ಟ್​ಫೋನ್​ಗಳು!
ಫ್ಲಿಪ್​ಕಾರ್ಟ್​
  • Share this:
ಫ್ಲಿಪ್​ಕಾರ್ಟ್​ ಇಲೆಕ್ಟ್ರಾನಿಕ್ಸ್​ ಸೇಲ್​ ಹಮ್ಮಿಕೊಂಡಿದೆ. ವಿವಿಧ ಸ್ಮಾರ್ಟ್​ಫೋನ್​ಗಳ ಮೇಲೆ ಆಫರ್​ ಹೊರಡಿಸಿದೆ. ಅದರಂತೆ ಮೊಟೊರೊಲಾ ಕಂಪನಿಗಳ ಸ್ಮಾರ್ಟ್​ಫೋನ್​ಗಳ ಮೇಲೆ ಆಫರ್​ ನೀಡಿದೆ. ಮೊಟೊ ಜಿ 5ಜಿ, ಮೊಟೊ ಜಿ9 ಸ್ಮಾರ್ಟ್​ಫೋನ್​ಗಳ ಮೇಲೆ ಶೇ.10ರಷ್ಟು ಡಿಸ್ಕೌಂಟ್​ ನೀಡಿದೆ.

ಫ್ಲಿಪ್​ಕಾರ್ಟ್​ ಡಿಸೆಂಬರ್​ 26ರಿಂದ 28ರವರೆಗೆ ಈ ಸೇಲ್​ ಹಮ್ಮಿಕೊಂಡಿದೆ. ಮೊಟೊ G 5G ಮತ್ತು ಮೊಟೊ G9 ಪವರ್​ ಸ್ಮಾರ್ಟ್​ಫೋನ್​ ಅನ್ನು ಹೆಚ್​ಡಿಎಫ್​ಸಿ  ಮತ್ತು ಐಸಿಐಸಿಐ ಕ್ರೆಡಿಟ್​​ ಕಾರ್ಡ್​ ಮತ್ತು ಇಎಮ್​ಐ ಟ್ರಾನ್ಸಾಕ್ಷನ್​ ಮೂಲಕ ಖರೀದಿಸಿದೆಶೇ.10 ರಷ್ಟು ನೀಡಿದೆ.

ಮೊಟೊ ರೇಜರ್​​ 5G ಸ್ಮಾರ್ಟ್​ಫೋನ್​ ಮೇಲೆ ಎಕ್ಸ್​ಚೇಂಜ್​ ಆಫರ್​ ನೀಡಿದೆ. ಜೊತೆಗೆ ಐಸಿಐಸಿಐ ಕ್ರೆಡಿಟ್​​ ಕಾರ್ಡ್​ ಮತ್ತು ಇಎಮ್​ಐ ಟ್ರಾನ್ಸಾಕ್ಷನ್​ ಮೂಲಕ ಖರೀದಿಸಿದೆ ಶೇ. 10ರಷ್ಟು ಡಿಸ್ಕೌಂಟ್ ಬೆಲೆಗೆ ಸಿಗಲಿದೆ. ಅಂದಹಾಗೆಯೇ ಈ ಫೋನ್ 98,999 ರೂ.ಗೆ ಮಾರಾಟ ಮಾಡುತ್ತಿದೆ.

ಇನ್ನು ಮೊಟೊರೊಲಾ ರೇಜರ್​ 5G ಸ್ಮಾರ್ಟ್​ಫೋನ್​ 1,24,999 ರೂ.ಗೆ ಮಾರಾಟ ಮಾಡುತ್ತಿದೆ.  6.2 ಇಂಚಿನ ಎಲ್​ಇಡಿ ಡಿಸ್​ಪ್ಲೇ ಹೊಂದಿದೆ. ಅಂತೆಯೇ ಸೆಕೆಂಡರಿ ಡಿಸ್​ಪ್ಲೇ ಒಜಿ ರೇಜರ್​ ಆಗಿದ್ದು, 2.7 OLED ಡಿಸ್​ಪ್ಲೇ ಹೊಂದಿದೆ. 765G ಚಿಪ್​ಸೆಟ್​​ ಅಳವಡಿಸಲಾಗಿದೆ. 8GB RAM​ ಮತ್ತು 256GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದೆ.

ಅಂತೆಯೇ ಮೊಟೊರೊಲಾ ರೇಜರ್​ 5ಜಿ ಸ್ಮಾರ್ಟ್​ಫೋನ್​ 48 ಮೆಗಾಫಿಕ್ಸೆಲ್​ ಕ್ಯಾಮೆರಾ ಹೊಂದಿದೆ. ಜೊತೆಗೆ ಮುಂಭಾಗದಲ್ಲಿ20 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ.

ದೀರ್ಘ ಕಾಲದ ಬ್ಯಾಟರಿಗಾಗಿ 2800mAh ​ಬ್ಯಾಟರಿ ಅಳವಡಿಸಲಾಗಿದೆ. 15 ವ್ಯಾಟ್​ ಟರ್ಬೊ ಚಾರ್ಜರ್​ ನೀಡಲಾಗಿದೆ. ಆ್ಯಂಡ್ರಾಯ್ಡ್​ 10 ನಲ್ಲಿ ಪರಿಚಯಿಸಿದೆ.


ಫ್ಲಿಪ್​ಕಾರ್ಟ್​ನಲ್ಲಿ ಮೊಟೊ E 7 ಪ್ಲಸ್​, ಮೊಟೊ G9, ಮೊಟೊರೊಲಾ ಒನ್​ ಫ್ಯುಷನ್​+, ಮೊಟೊರೊಲಾ ಎಡ್ಜ್​​+, ಸ್ಮಾರ್ಟ್​ಫೋನ್​ಗಳು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ.
Published by: Harshith AS
First published: December 26, 2020, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories