ಫೋನ್​ಗಾಗಿ ರಾಕ್ಷಸಿಯಾದ್ಳು ನಾರಿ; ಫ್ಲಿಪ್​ಕಾರ್ಟ್ ಡೆಲಿವರಿ ಬಾಯ್​ಗೆ 20 ಬಾರಿ ಇರಿದು ಮಹಿಳೆ ಹಲ್ಲೆ


Updated:March 29, 2018, 7:01 PM IST
ಫೋನ್​ಗಾಗಿ ರಾಕ್ಷಸಿಯಾದ್ಳು ನಾರಿ; ಫ್ಲಿಪ್​ಕಾರ್ಟ್ ಡೆಲಿವರಿ ಬಾಯ್​ಗೆ 20 ಬಾರಿ ಇರಿದು ಮಹಿಳೆ ಹಲ್ಲೆ
ಫ್ಲಿಪ್​ಕಾರ್ಟ್ ಕಚೇರಿ

Updated: March 29, 2018, 7:01 PM IST
- ನ್ಯೂಸ್18 ಕನ್ನಡ

ನವದೆಹಲಿ(ಮಾ. 29): ಆರ್ಡರ್ ಮಾಡಿದ ಸ್ಮಾರ್ಟ್​ಫೋನ್​ನ್ನು ತಡವಾಗಿ ತಂದುಕೊಟ್ಟಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯಬೊಬ್ಬಳು ಫ್ಲಿಪ್​ಕಾರ್ಟ್​ನ ಡೆಲಿವರಿ ಬಾಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಇಂಡಿಯನ್ ಎಕ್ಸ್​ಪ್ರೆಸ್​ನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ದಿಲ್ಲಿಯ ನಿಹಾಲ್ ವಿಹಾರ್ ಎಂಬಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆಯ ತನ್ನ ಸೋದರನ ಮೊತೆ ಸೇರಿಕೊಂಡು 28 ವರ್ಷದ ಕೇಶವ್ ಮೇಲೆ 20 ಬಾರಿ ಚಾಕುವಿನಿಂದ ಇರಿದು ಹಲ್ಲೆ ಎಸಗಿದ್ದಾಳೆ. ಕೇಶವ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 30 ವರ್ಷದ ಮಹಿಳೆ ಮತ್ತವಳ ಸಹೋದರನನ್ನು ಬಂಧಿಸಿದ್ದಾರೆ.
First published:March 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...