HOME » NEWS » Tech » FLIPKART BIG SHOPPING DAYS SALE 2019 ANNOUNCED DEALS OFFERS ON MOBILE PHONES TVS LAPTOPS AND MORE PREVIEWED HG

Flipkart: ಡಿ.1 ರಿಂದ ಫ್ಲಿಪ್​​​ಕಾರ್ಟ್​ ‘ಬಿಗ್​ ಶಾಪಿಂಗ್​ ಡೇ ಸೇಲ್‘​; ಈ ವಸ್ತುಗಳ ಮೇಲೆ ಶೇ.80 ರಷ್ಟು ರಿಯಾಯಿತಿ

Flipkart Big Shopping Days Sale 2019: ಅಮೆಜಾನ್​ ಕೂಡ ಗ್ರಾಹಕರಿಗೆ ‘ಫ್ಯಾಬ್​ ಫೋನ್​ ಫೆಸ್ಟ್​‘ ಆಯೋಜಿಸಿದೆ. ಶಿಯೋಮಿ ಕೂಡ ‘ಮಿ ಸೂಪರ್‘​ ಸೇಲ್​ ಹಮ್ಮಿಕೊಂಡಿದೆ. ಇದೀಗ ಫ್ಲಿಪ್​ಕಾರ್ಟ್​ ಡಿಸೆಂಬರ್ 1 ರಿಂದ ‘ಬಿಗ್​ ಶಾಪಿಂಗ್​ ಡೇ ಸೇಲ್‘ ನಡೆಸಲಿದೆ.

Harshith AS | news18-kannada
Updated:November 28, 2019, 8:15 AM IST
Flipkart: ಡಿ.1 ರಿಂದ ಫ್ಲಿಪ್​​​ಕಾರ್ಟ್​ ‘ಬಿಗ್​ ಶಾಪಿಂಗ್​ ಡೇ ಸೇಲ್‘​; ಈ ವಸ್ತುಗಳ ಮೇಲೆ ಶೇ.80 ರಷ್ಟು ರಿಯಾಯಿತಿ
Flipkart Big Shopping Days Sale 2019
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​​​ಕಾರ್ಟ್​ ‘ಬಿಗ್​ ಶಾಪಿಂಗ್​ ಡೇ ಸೇಲ್‘​ ಆಯೋಜಿಸಲು ದಿನಾಂಕ ನಿಗದಿ ಪಡಿಸಿದೆ.  ಡಿಸೆಂಬರ್ 1 ರಿಂದ ಪ್ರಾರಂಭವಾಗಿ 5ರವರೆಗೆ ಫ್ಲಿಪ್​ಕಾರ್ಟ್​ ಈ ಸೇಲ್​ ಹಮ್ಮಿಕೊಂಡಿದ್ದು,  ಗ್ರಾಹಕರಿಗೆ ಬಿಗ್​ ಆಫರ್​ ಜೊತೆಗೆ ಗ್ಯಾಜೆಟ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡುತ್ತಿದೆ.

ಫ್ಲಿಪ್​ಕಾರ್ಟ್​ ‘ಬಿಗ್​ ಶಾಪಿಂಗ್​ ಡೇ ಸೇಲ್‘​ನಲ್ಲಿ ಸ್ಮಾರ್ಟ್​ಫೋನ್​, ಟ್ಯಾಬ್​ಲೆಟ್​, ಟಿವಿ, ಲ್ಯಾಪ್​​​ಟಾಪ್​ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ. ಮಾತ್ರವಲ್ಲದೆ, ರಿಯಲ್​ಮಿ 5, ಸ್ಯಾಮ್​ಸಂಗ್​ ಎಸ್​9 ಮತ್ತು ಆ್ಯಪಲ್​ ಐಫೋನ್​ 7 ಮೇಲೆ ಡಿಸ್ಕೌಂಟ್​ ನೀಡುತ್ತಿದೆ. ಈ ಸೇಲ್​ 5 ದಿನಗಳ ಕಾಲ ನಡೆಯಲಿದೆ.

ಗ್ರಾಹಕರಿಗಾಗಿ ಫ್ಲಿಪ್​ಕಾರ್ಟ್​ ‘ಬಿಗ್​ ಶಾಪಿಂಗ್​ ಡೇ ಸೇಲ್‘​ನಲ್ಲಿ ಮಾರಾಟ ಮಾಡುವ ಟಿವಿಗಳ ಮೇಲೆ ಶೇ.75 ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಲ್ಯಾಪ್​ಟಾಪ್​, ಕ್ಯಾಮರಾ ಎಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ  ಶೇ.80 ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಎಸ್​ಡಿಎಫ್​ಸಿ ಬ್ಯಾಂಕ್​ ಖಾತೆದಾರರು ಕ್ರೆಡಿಟ್​ ಕಾಡ್​ ಮತ್ತು ಇಎಮ್​ಐ ಮೂಲಕ ವಸ್ತುಗಳನ್ನು ಕೊಂಡರೆ ಶೇ. 10 ರಷ್ಟು ಡಿಸ್ಕೌಂಟ್​ ನೀಡುತ್ತಿದೆ.

ಸ್ಮಾರ್ಟ್​ಫೋನ್​ಗಳ ಮೇಲೆ ಆಫರ್​:ರಿಯಲ್​ಮಿ 5, ರಿಯಲ್​ಮಿ ಎಕ್ಸ್​, ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​9, ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​9+, ಗೂಗಲ್​ ಪಿಕ್ಸಿಲ್​ 3ಎ,ಐಫೋನ್​ 7 ಮತ್ತು ಅಸೂಸ್​ 5ಝೆಡ್​ ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಿದೆ. ಅಲ್ಲದೆ, ಐಫೋನ್​ ಸೇರಿಂದತೆ ಇಎಮ್​ ಆಯ್ಕೆಯಲ್ಲಿ ಸ್ಮಾರ್ಟ್​ಫೋನ್​ ಖರೀದಿಸಬಹುದಾಗಿದೆ.

ಇನ್ನು ಅಮೆಜಾನ್​ ಕೂಡ ಗ್ರಾಹಕರಿಗೆ ‘ಫ್ಯಾಬ್​ ಫೋನ್​ ಫೆಸ್ಟ್​‘ ಆಯೋಜಿಸಿದೆ. ಶಿಯೋಮಿ ಕೂಡ ‘ಮಿ ಸೂಪರ್‘​ ಸೇಲ್​ ಹಮ್ಮಿಕೊಂಡಿದೆ. ಇದೀಗ ಫ್ಲಿಪ್​ಕಾರ್ಟ್​ ಡಿಸೆಂಬರ್ 1 ರಿಂದ ‘ಬಿಗ್​ ಶಾಪಿಂಗ್​ ಡೇ ಸೇಲ್‘ ನಡೆಸಲಿದೆ.
First published: November 28, 2019, 8:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories