HOME » NEWS » Tech » FLIPKART BIG SAVING DAYS SALE VIVO IPHONE GOOGLE PIXEL OTHERS TO GET PRICE DISCOUNTS HG

Flipkart Big Saving Days Sale: ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​​ ಡೇಸ್​​​ ಸೇಲ್​; ಸ್ಮಾರ್ಟ್​ಫೋನ್​ಗಳ ಮೇಲೆ ದರ ಕಡಿತ ಮಾರಾಟ!

Flipkart Big Saving Days Sale: ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್ ಡೇಸ್​​ನಲ್ಲಿ ವಿವೋ, ಆ್ಯಪಲ್​, ಗೂಗಲ್​, ಶಿಯೋಮಿ ಮುಂತಾದ ಸ್ಮಾಟ್​ಫೋನ್​ಗಳ ಬೆಲೆ ಕಡಿತಗೊಳಿಸಿ ಮಾರಾಟ ಮಾಡಲು ಮುಂದಾಗಿದೆ. ಈ ಸೇಲ್​​ ಜೂನ್​ 27ರವರೆಗೆ ನಡೆಯಲಿದೆ. ಎಚ್​ಡಿಎಫ್​ಸಿ ಬ್ಯಾಂಕ್​​​ ಗ್ರಾಹಕರು ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್​ ಡೇಸ್​ನಲ್ಲಿ ಸ್ಮಾರ್ಟ್​ಫೋನ್​ಗಳನ್ನು ಕೊಂಡರೆ ​ಶೇ.10ರಷ್ಡು ಡಿಸ್ಕೌಂಟ್​ ಸಿಗಲಿದೆ.

news18-kannada
Updated:June 19, 2020, 1:28 PM IST
Flipkart Big Saving Days Sale: ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​​ ಡೇಸ್​​​ ಸೇಲ್​; ಸ್ಮಾರ್ಟ್​ಫೋನ್​ಗಳ ಮೇಲೆ ದರ ಕಡಿತ ಮಾರಾಟ!
ಫ್ಲಿಪ್​ಕಾರ್ಟ್
  • Share this:
ಆನ್​ಲೈನ್​​ ಇ-ಕಾಮರ್ಸ್​​ ಮಳಿಗೆಯಾದ ಫ್ಲಿಪ್​ಕಾರ್ಟ್​ ಬಿಗ್​​ ಸೇವಿಂಗ್​​ ಡೇಸ್​​ ಸೇಲ್​​ ಆಯೋಜಿಸಲು ಮುಂದಾಗಿದೆ. ಜೂನ್​ 23 ರಿಂದ ಈ ಸೇಲ್​ ಅನ್ನು ಪ್ರಾರಂಭಿಸುತ್ತಿದ್ದು, ವಿವಿಧ ಕಂಪೆನಿಗಳ ಸ್ಮಾರ್ಟ್​ಫೋನ್​ಗಳು  ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗಲಿದೆ.

ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್ ಡೇಸ್​​ನಲ್ಲಿ ವಿವೋ, ಆ್ಯಪಲ್​, ಗೂಗಲ್​, ಶಿಯೋಮಿ ಮುಂತಾದ ಸ್ಮಾಟ್​ಫೋನ್​ಗಳ ಬೆಲೆ ಕಡಿತಗೊಳಿಸಿ ಮಾರಾಟ ಮಾಡಲು ಮುಂದಾಗಿದೆ. ಈ ಸೇಲ್​​ ಜೂನ್​ 27ರವರೆಗೆ ನಡೆಯಲಿದೆ. ಎಚ್​ಡಿಎಫ್​ಸಿ ಬ್ಯಾಂಕ್​​​ ಗ್ರಾಹಕರು ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್​ ಡೇಸ್​ನಲ್ಲಿ ಸ್ಮಾರ್ಟ್​ಫೋನ್​ಗಳನ್ನು ಕೊಂಡರೆ ​ಶೇ.10ರಷ್ಡು ಡಿಸ್ಕೌಂಟ್​ ಸಿಗಲಿದೆ. ಜೊತೆಗೆ ನೋ ಕಾಸ್ಟ್​ ಇಎಮ್​​ಐ ಮತ್ತು ಮೊಟ್ರೋಲಾ ರೇಜರ್​ ಸ್ಮಾಟ್​ಫೋನಿನ ಮೇಲೆ ಎಕ್ಸ್​​ಚೇಂಜ್​ ಆಫರ್​ ನೀಡಿದೆ.

ಬೆಲೆ ಕಡಿತ ಮಾರಾಟ!

ವಿವೋ ಝೆಡ್​1ಎಕ್ಸ್​ ಸ್ಮಾರ್ಟ್​ಫೋನ್​ನ ಬೆಲೆ 16,990 ರೂ. ಆಗಿದ್ದು, ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​​ನಲ್ಲಿ  14,990 ರೂ.ಗೆ ಮಾರಾಟ ಮಾಡಲಿದೆ. 32 ಜಿಬಿ ಐಫೋನ್​​​ 7 ಪ್ಲಸ್​​ ಅನ್ನು  3,999 ರೂ.ಗೆ ಗ್ರಾಹಕರಿಗೆ ಸಿಗಲಿದೆ.

ಒಪ್ಪೊ ಎ9 (2020) 4ಜಿಬಿ +128ಜಿಬಿ ವೇರಿಯಂಟ್​ನಲ್ಲಿ ಸಿಗುವ ಸ್ಮಾರ್ಟ್​ಫೋನ್​​ 12,990 ರೂ.ಗೆ ಮಾರಾಟ ಮಾಡಲಿದೆ. ಇದರ ನಿರ್ದಿಷ್ಟ ಬೆಲೆ 15,990. ಮಿ ಮಿಕ್ಸ್​​ 2 ಸ್ಮಾರ್ಟ್​ಫೋನ್​ 14,99 ರೂ.ಗೆ ಗ್ರಾಹಕರಿಗೆ ಸಿಗಲಿದೆ. ವಿವೋ ನೆಕ್ಸ್​​ ಸ್ಮಾರ್ಟ್​ಫೋನಿನ ಬೆಲೆ ಕಡಿತಗೊಳಿಸಿ 23,990ಗೆ ಮಾರಾಟ ಮಾಡಲಿದೆ.

ಇನ್ನು ಐಫೋನ್​ 8 ಬೆಲೆಯನ್ನು ಕಡಿತಗೊಳಿಸಿ ಫ್ಲಿಪ್​​​ಕಾರ್ಟ್​ ಮಾರಾಟ ಮಾಡುಲಿದೆ. 36,999 ರೂ.ಗೆ ಗ್ರಾಹಕರು ಖರೀದಿಸಬಹುದಾಗಿದೆ. ಜೊತೆಗೆ ಇಎಮ್​ಐ ಆಯ್ಕೆಯನ್ನು ನೀಡಿದೆ. ಐಫೊನ್​7, ಐಫೋನ್​ ಎಕ್ಸ್​ಎಸ್​ ಫೋನಿನ ಬೆಲೆ ಕಡಿತ ಮಾರಾಟ ಮಾಡುಲಿದೆ. ಮೊಟೊರೊಲಾ ರೇಜರ್​​ ಫೋನ್​ 25 ಸಾವಿರ ರೂಗೆ. ಗ್ರಾಹಕರಿಗೆ ಸಿಗಲಿದೆ.

BSNL: ಕೇವಲ 10 ರೂ.ಗೆ ಟಾಕ್​ಟೈಮ್ ಲೋನ್!
First published: June 19, 2020, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories