HOME » NEWS » Tech » FLIPKART BIG SAVING DAYS SALE FROM MAY 2 DISCOUNTS AND OFFERS ON PHONES HG

Flipkart: ಇಂದಿನಿಂದ ಬಿಗ್​ ಸೇವಿಂಗ್​ ಡೇಸ್​ ಸೇಲ್​ ಪ್ರಾರಂಭ; ಆಕರ್ಷಕ ಬೆಲೆಗೆ ವಿವಿಧ ಕಂಪನಿಗಳ ಸ್ಮಾರ್ಟ್​ಫೋನ್​ಗಳು!

Flipkart Big Saving Days: ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಆ್ಯಪಲ್​, ವಿವೊ, ಅಸೂಸ್​ ಮತ್ತು ಶಿಯೋಮಿ ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

news18-kannada
Updated:May 2, 2021, 5:04 PM IST
Flipkart: ಇಂದಿನಿಂದ ಬಿಗ್​ ಸೇವಿಂಗ್​ ಡೇಸ್​ ಸೇಲ್​ ಪ್ರಾರಂಭ; ಆಕರ್ಷಕ ಬೆಲೆಗೆ ವಿವಿಧ ಕಂಪನಿಗಳ ಸ್ಮಾರ್ಟ್​ಫೋನ್​ಗಳು!
Flipkart
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ‘ಬಿಗ್​ ಸೇವಿಂಗ್​ ಡೇಸ್’​ ಸೇಲ್​ ಹಮ್ಮಿಕೊಂಡಿದೆ. ಇಂದಿನಿಂದ ಪ್ರಾರಂಭವಾಗಿ ಮೇ 7ರವರೆಗೆ ಈ ಸೇಲ್​ ನಡೆಯಲಿದ್ದು, ಅದರ ಜೊತೆಗೆ ಆಕರ್ಷಕ ಆಫರ್​ ಜೊತೆಗೆ ಎಕ್ಸ್​ಚೇಂಜ್​ ಆಫರ್​ ಹಾಗೂ ನೋ-ಕಾಸ್ಟ್​ ಇಎಮ್​ಐ ಆಯ್ಕೆಯಲ್ಲಿ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಸ್ಮಾರ್ಟ್​ಫೋನ್​, ಎಲೆಕ್ಟ್ರಾನಿಕ್ಸ್​ ಮತ್ತು ಎಸೆಸ್ಸರೀಸ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಆ್ಯಪಲ್​, ವಿವೊ, ಅಸೂಸ್​ ಮತ್ತು ಶಿಯೋಮಿ ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಮಾತ್ರವಲ್ಲದೆ, ಎಲೆಕ್ಟ್ರಾನಿಕ್ಸ್​ಗಳ ಮೇಲೆ ಶೇ.80 ರಷ್ಟು ಡಿಸ್ಕೌಂಟ್​ ನೀಡಿದೆ. ಟೆಲಿವಿಷನ್​ಗಳ ಮೇಲೆ 75ರಷ್ಟು ಡಿಸ್ಕೌಂಟ್​ ನೀಡಿದೆ.

ಇವಿಷ್ಟು ಅಲ್ಲದೆ, ಬಟ್ಟೆ, ಆಭರಣ, ಆಸನಗಳನ್ನು ಮಾರಾಟ ಮಾಡುತ್ತಿದೆ. 5 ದಿನಗಳ ನಡೆಯುವ ಈ ಸೇಲ್​ ಮೂಲಕ ಗ್ರಾಹಕರಿಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.

ಅಂದಹಾಗೆಯೇ, ಫ್ಲಿಪ್​ಕಾರ್ಟ್​ ಕ್ರೇಜಿ ಡೀಲ್​ ಸೆಷನ್​ ನಡೆಸಲಿದೆ.  ಅದರ ಮೂಲಕ ಮಧ್ಯಾಹ್ನ 12 ಗಂಟೆಗೆ, ಬೆಳಿಗ್ಗೆ 8, ಸಂಜೆ 4 ಗಂಟೆಗೆಗೆ ಸರಿಯಾಗಿ ಮೊಬೈಲ್​, ಟಿವಿ ಮತ್ತು ಲಾಪ್​ಟಾಪ್ ಸೇಲ್​ ನಡೆಸಲಿದೆ.

ಫ್ಲಾಗ್​ಶಿಪ್​ ಆಫರ್​:

ಆ್ಯಪಲ್​ 11 ಬೆಲೆ 54,900 ರೂ ಆಗಿದ್ದು, ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ ಮೂಲಕ 44,999 ರೂಗೆ ಮಾರಾಟ ಮಾಡುತ್ತಿದೆ. ಅಸೂಸ್​ ರೋಗ್​ ಫೋನ್ 3 46,999 ರೂ.ಗೆ ಮಾರಾಟ ಮಾಡುತ್ತಿದೆ.

ಐಕ್ಯೂಒಒ3 ಸ್ಮಾರ್ಟ್​ಫೋನನ್ನು 24,990 ಮತ್ತು ಶಿಯೋಮಿ ಮಿ10ಟಿ ಸ್ಮಾರ್ಟ್​ಫೋನನ್ನು 27,999 ರೂ.ಗೆ ಮಾರಾಟ ಮಾಡುತ್ತಿದೆ.ಬಜೆಟ್​ ಸ್ಮಾರ್ಟ್​ಫೋನ್​:

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​12 ಸ್ಮಾರ್ಟ್​ಫೋನ್​ 9,999 ರೂ. ಗ್ಯಾಲಕ್ಸಿ ಎಫ್​41 ಸ್ಮಾರ್ಟ್​ಫೋನ್ 12,499 ರೂ.ಗೆ ಸಿಗಲಿದೆ.

ಇತರೆ ಡಿಸ್ಕೌಂಟ್​:

ಬಿಗ್​ ಸೇವಿಂಗ್​ ಡೇಸ್​ನಲ್ಲಿ ಹೆಡ್​ಫೋನ್ ಮತ್ತು ಸ್ಪೀಕರ್​ಗಳ ಮೇಲೆ ಶೇ.70 ರಷ್ಟು ಡಿಸ್ಕೌಂಟ್​ ನೀಡುತ್ತಿದೆ. ಅಂತೆಯೇ ಕಂಪ್ಯೂಟರ್​ ಪ್ರೊಸೆಸರ್​ ಮತ್ತು ಗ್ರಾಫಿಕ್ಸ್​​ ಶೇ 60 ರಷ್ಟು ಡಿಸ್ಕೌಂಟ್​ ಒದಗಿಸಿದರೆ ಲ್ಯಾಪ್​ಟಾಪ್​ಗಳ ಮೇಲೆ ಶೇ40 ರಷ್ಟು ಡಿಸ್ಕೌಂಟ್​ ನೀಡಿದೆ.
Published by: Harshith AS
First published: May 2, 2021, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories