ಪ್ರಸಿದ್ಧ ಇಕಾಮರ್ಸ್ ವೆಬ್ಸೈಟ್ಗಳಲ್ಲಿ (E-Commerse) ಒಂದಾದ ಫ್ಲಿಪ್ಕಾರ್ಟ್ (Flipkart) ಪ್ರತೀ ಬಾರಿ ತನ್ನ ಗ್ರಾಹಕರಿಗಾಗಿ ವಿಶೇಷ ರೀತಿಯಲ್ಲಿ ಆಫರ್ಸ್ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಈ ವರ್ಷ ಫ್ಲಿಪ್ಕಾರ್ಟ್ ಮತ್ತೊಂದು ಸೂಪರ್ ಸೇಲ್ನೊಂದಿಗೆ ಮುಂದೆ ಬಂದಿದೆ. ಈ ತಿಂಗಳ 16 ರಿಂದ ಬಿಗ್ ಸೇವಿಂಗ್ ಡೇಸ್ ಸೇಲ್ (Big Saving Days Sale) ಎಂಬ ಮೇಳವನ್ನು ಘೋಷಿಸಲಾಗಿದೆ. ಈ ಆಫರ್ ಮೇಳ ಡಿಸೆಂಬರ್ 21ರವರೆಗೆ ಮುಂದುವರಿಯಲಿದೆ ಎಂದು ಪ್ರಕಟಿಸಲಾಗಿದೆ. ಈ ಸೇಲ್ನಲ್ಲಿ ಎಲ್ಲಾ ರೀತಿಯ ಉತ್ಪನ್ನಗಳ ಮೇಲೆ ಸೂಪರ್ ಡೀಲ್ಗಳು ಲಭ್ಯವಿರುತ್ತವೆ ಎಂದು ಫ್ಲಿಪ್ಕಾರ್ಟ್ ಹೇಳಿದೆ. ಅಲ್ಲದೆ, ಈ ಸೇಲ್ನಲ್ಲಿ ಬ್ಯಾಂಕ್ ಆಫರ್ಸ್ಗಳು ಕೂಡ ಲಭ್ಯವಿದ್ದು ಭಾರೀ ರಿಯಾಯಿತಿಯಲ್ಲಿ ಖರೀದಿ ಮಾಡಬಹುದು.
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಕೆಲವೇ ದಿನಗಳವರೆಗೆ ಮಾತ್ರ ಮಾನ್ಯತೆಯನ್ನು ಹೊಂದಿದೆ. ಈ ಆಫರ್ನಲ್ಲಿ ಫ್ಲಿಪ್ಕಾರ್ಟ್ ಹಲವಾರು ಸಾಧನಗಳನ್ನು ಶೇಕಡಾ 80% ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ. ಇಲ್ಲಿ ಫ್ಲಿಪ್ಕಾರ್ಟ್ ಗ್ರಾಹಕರು ಬ್ಯಾಂಕ್, ಇಎಮ್ಐ ಈ ರೀತಿಯಲ್ಲಿ ಖರೀದಿಸುವುದಾದರೆ ಸಾಧನಗಳ ಮೇಲೆ ಮತ್ತಷ್ಟು ಆಫರ್ಸ್ಗಳು ಲಭ್ಯವಿದೆ.
ಯಾವೆಲ್ಲಾ ಸಾಧನಗಳ ಮೇಲೆ ರಿಯಾಯಿತಿ ಇದೆ
ಸ್ಮಾರ್ಟ್ಫೋನ್ಗಳ ಮೇಲೆ ಆಫರ್:
ಫ್ಲಿಪ್ಕಾರ್ಟ್ ಪ್ರಕಾರ, ಈ ಸೇಲ್ನಲ್ಲಿ ಪೋಕೋ, ರಿಯಲ್ಮಿ, ಆ್ಯಪಲ್, ವಿವೋ ಮತ್ತು ಇತರ ಸ್ಮಾರ್ಟ್ ಫೋನ್ಗಳಲ್ಲಿ ಬಹಲಷ್ಟು ದೊಡ್ಡ ಪ್ರಮಾಣದಲ್ಲಿ ರಿಯಾಯಿತಿಗಳು ಲಭ್ಯವಿದೆ. ಇನ್ನು ಈ ಸ್ಮಾರ್ಟ್ಫೋನ್ಗಳನ್ನು ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡುವುದಾದರೆ ಬಹಳಷ್ಟು ಅಗ್ಗದಲ್ಲಿ ಮೊಬೈಲ್ಗಳನ್ನು ಖರೀದಿಸಬಹುದಾಗಿದೆ. ಇನ್ನೂ ಹಲವಾರು ರಿಯಾಯಿತಿಗಳು ಈ ಸೇಲ್ನಲ್ಲಿ ಲಭ್ಯವಿದ್ದು. ಸ್ಮಾರ್ಟ್ಫೋನ್ ಖರೀದಿ ಮಾಡಬೇಕೆಂದು ಅಮದುಕೊಂಡವರಿಗೆ ಇದು ಉತ್ತಮ ಸಮಯವಾಗಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಅಭಿಮಾನಿಗಳಿಗೆ ಗುಡ್ನ್ಯೂಸ್! ಈ ಸ್ಮಾರ್ಟ್ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್
ಎಲೆಕ್ಟ್ರಾನಿಕ್ಸ್ ಸಾಧನದ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ
ಈ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಇರಲಿದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ. ಈ ಕೊಡುಗೆಯು ವಿಶೇಷವಾಗಿ ಟ್ಯಾಬ್ಗಳು, ಡೇಟಾ ಸಂಗ್ರಹಣೆ ಸಾಧನಗಳು, ಸ್ಟೈಲಿಂಗ್ ಸಾಧನಗಳು, ಪ್ರಿಂಟರ್ಗಳು ಮತ್ತು ಮಾನಿಟರ್ಗಳ ಮೇಲೆ ಇರುತ್ತದೆ ಎಂದು ಬಹಿರಂಗಪಡಿಸಲಾಗಿದೆ. ಈ ಸೇಲ್ ಡಿಸೆಂಬರ್ 16 ಕ್ಕೆ ಪ್ರಾರಂಭವಾಗಿ 21ರವರೆಗೆ ಲಭ್ಯವಿದೆ. ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದೆ.
ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ
ಬಿಗ್ ಸೇವಿಂಗ್ ಡೇಸ್ ಮಾರಾಟದಲ್ಲಿ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿ ಮಾಡುವವರಿಗೆ ಶೇಕಡಾ 75 ರಷ್ಟು ರಿಯಾಯಿತಿ ಇರುತ್ತದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಮತ್ತು ಮಾರಾಟವಾಗುವ ಟಿವಿಗಳ ಮೇಲೆ ಶೇಕಡಾ 65%, ರೆಫ್ರಿಜರೇಟರ್ಗಳ ಮೇಲೆ ಶೇಕಡಾ 55% , ಎಸಿ ಐಟಂಗಳ ಮೇಲೆ ಶೇಕಡಾ 55% ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ 70 ಶೇಕಡಾದಷ್ಟು ರಿಯಾಯಿತಿ ಇರುತ್ತದೆ ಎಂದು ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ತಿಳಿಸಿದೆ
ಫ್ಯಾಷನ್ ಐಟಂಗಲ ಮೇಲೆ ರಿಯಾಯಿತಿ ಲಭ್ಯ
ಫ್ಲಿಪ್ಕಾರ್ಟ್ನಲ್ಲಿ ಫ್ಯಾಶನ್ ವಸ್ತುಗಳ ಮೇಲೆ ಶೇಕಡಾ 50-80 ರಷ್ಟು ರಿಯಾಯಿತಿ ಇರುತ್ತದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ. ಮಹಿಳೆಯರ ಶೂ ಮತ್ತು ಸ್ಯಾಂಡಲ್ ಮೇಲೆ ಶೇ.80ರಷ್ಟು ರಿಯಾಯಿತಿ ಇರಲಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಇನ್ನು ಟಿ-ಶರ್ಟ್ಗಳು ಮತ್ತು ಜೀನ್ಸ್ಗಳ ಮೇಲೆ ಶೇಕಡಾ 80 ರಷ್ಟು ಮಾತ್ರ ರಿಯಾಯಿತಿ ಇರುತ್ತದೆ ಎಂದು ಫ್ಲಿಪ್ಕಾರ್ಟ್ ತಿಳಿಸಿದೆ. ಇದಿಷ್ಟು ಫ್ಲಿಪ್ಕಾರ್ಟ್ನ ಈ ವರ್ಷಾಂತ್ಯದ ಮೇಳದಲ್ಲಿ ಲಭ್ಯವಿರುವಂತಹ ಆಫರ್ಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ