Smartphone ಖರೀದಿಸಲು ಪ್ಲಾನ್ ಮಾಡಿಕೊಂಡಿದ್ದೀರಾ? ಹಾಗಿದ್ರೆ 3,500 ರೂ.ಗೆ ಇಲ್ಲಿ ಸಿಗುತ್ತೆ ನೋಡಿ

Flipkart Offer: ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಸ್ಯಾಮ್​ಸಂಗ್​ ಕಂಪನಿ ಎಫ್​42 ಹೆಸರಿನ 5ಜಿ ಸ್ಮಾರ್ಟ್​ಫೋನ್​ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಆಗ್ಗದ ಬೆಲೆಗೆ ಗ್ರಾಹಕರ ಖರೀದಿಗೆ ಸಿಗುತ್ತಿದೆ.

Samsung F42 5G

Samsung F42 5G

 • Share this:
  Flipkart Big Saving days sale: ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್ ಸೇಲ್​ ನಡೆಸುತ್ತಿದೆ. ಡಿಸೆಂಬರ್​ 16ರಿಂದ ಪ್ರಾರಂಭವಾಗಿ ಡಿಸೆಂಬರ್ 21ರವರೆಗೆ ಸೇಲ್​ ನಡೆಯಲಿದೆ. ಗ್ರಾಹಕರಿಗಾಗಿ ಕೆಲವು ವಸ್ತುಗಳ ಮೇಲೆ ಆಕರ್ಷಕ ಉಡುಗೊರೆಯನ್ನು ನೀಡುತ್ತಿದೆ. ಅದರಂತೆ ಈ ಸೇಲ್​ನಲ್ಲಿ ವಿವಿಧ ಕಂಪನಿಗಳು ಸ್ಮಾರ್ಟ್​ಫೋನ್​ಗಳ ಮೇಲೆ ದರ ಕಡಿತ ಮಾರಾಟ ಮಾಡಿ ಮಾರುತ್ತಿದೆ. ಸ್ಯಾಮ್​ಸಂಗ್ (Samsung)​ ಕಂಪನಿಯ ಸ್ಮಾರ್ಟ್​ಫೋನ್ (Smartphone)​ ಒಂದನ್ನು ಕೇವಲ 3,500ಕ್ಕೆ ಖರೀದಿಸುವ ಅವಕಾಶವನ್ನು ತೆರೆದಿಟ್ಟಿದೆ.

  ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ(Flipkart Big Saving days sale) ಸ್ಯಾಮ್​ಸಂಗ್​ ಕಂಪನಿ ಎಫ್​42 ಹೆಸರಿನ 5ಜಿ ಸ್ಮಾರ್ಟ್​ಫೋನ್​ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಆಗ್ಗದ ಬೆಲೆಗೆ ಗ್ರಾಹಕರ ಖರೀದಿಗೆ ಸಿಗುತ್ತಿದೆ. ಈ ಸ್ಮಾರ್ಟ್​ಫೋನ್​ ಮೂಲ ಬೆಲೆ 25,999 ರೂ ಆಗಿದ್ದು, ಗ್ರಾಹಕರು ಕೇವಲ 3,549 ರೂ.ಗೆ ಖರೀದಿಸಬಹುದಾಗಿದೆ. ಅದು ಹೇಗೆ ಗೊತ್ತಾ?

  ಫ್ಲಿಪ್​ಕಾರ್ಟ್​ ಬಿಗ್​​ ಸೇವಿಂಗ್​ ಡೇಸ್​ ಸೇಲ್​ ಮೂಲಕ ಶೇ11 ರಷ್ಟು ರಿಯಾಯಿತಿ ನೀಡುತ್ತಿದೆ. ಅಂದಹಾಗೆಯೇ 25,99 ರೂ ಬೆಲೆಯ ಸ್ಯಾಮ್​ಸಂಗ್​ ಎಫ್​42 ಸ್ಮಾರ್ಟ್​ಫೋನನ್ನು ಫ್ಲಿಪ್​ಕಾರ್ಟ್​ 22,999 ರೂ.ಗೆ ಮಾರಾಟ ಮಾಡುತ್ತಿದೆ.  ಜೊತೆಗೆ 1 ಸಾವಿರದಷ್ಟು ಡಿಸ್ಕೌಂಟ್​ ನೀಡಿದೆ. ಹಾಗಾಗಿ ಸ್ಯಾಮ್​ಸಂಗ್​ ಎಫ್​42 ಸ್ಮಾರ್ಟ್​ಫೋನ್​ 18,999 ರೂ.ಗೆ ಖರೀದಿಸಬಹುದಾಗಿದೆ.

  ವಿನಿಮಯ ಕೊಡುಗೆ

  ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಎಕ್ಸ್​ಚೇಂಜ್ ಆಫರ್​ ಕೂಡ ನೀಡಿದೆ. ಹಳೆಯ ಸ್ಮಾರ್ಟ್​ಫೋನ್​ ಅನ್ನು ವಿನಿಯಮ ಮಾಡಿಕೊಳ್ಳುವ ಮೂಲಕ ಹೊಸ ಸ್ಮಾರ್ಟ್​ಫೋನ್​ ಖರೀದಿಸಬಹುದಾಗಿದೆ. ಅದರಂತೆ ಹಳೆಯ ಫೋನ್​ ಜೊತೆಗೆ ಸ್ಯಾಮ್​ಸಂಗ್​ ಎಫ್​42 ಸ್ಮಾರ್ಟ್​ಫೋನನ್ನು ವಿನಿಮಯ ಮಾಡಿಕೊಂಡರೆ 15,450 ರೂ.ವರೆಗಿನ ರಿಯಾಯಿತಿ ಸಿಗಲಿದೆ. ಈ ಕೊಡುಗೆಯ ಸಂಪೂರ್ಣ ಪ್ರಯೋಜನ ಪಡೆದರೆ ಗ್ರಾಹಕರು ಕೇವಲ 3,549 ರೂ.ಗೆ ಸ್ಮಾರ್ಟ್​ಫೋನ್​ ಖರೀದಿಸಬಹುದಾಗಿದೆ.  ಇದನ್ನು ಓದಿ: Car Demand: ಈಗ ಕಾರ್ ಬುಕ್ ಮಾಡಿದ್ರೆ ಅದಿನ್ನು ನಿಮ್ಮ ಕೈಸೋರೋದು ಯಾವಾಗ್ಲೋ? 7 ಲಕ್ಷ ಜನ ಇನ್ನೂ ವೇಯ್ಟಿಂಗ್!

  ಸ್ಯಾಮ್​ಸಂಗ್​ ಎಫ್​42

  ಸ್ಯಾಮ್​ಸಂಗ್​ ಎಫ್​42 ಸ್ಮಾರ್ಟ್​ಫೋನ್ (Samsung F42 5G smartphone)​ 8ಜಿಬಿ ರ್ಯಾಮ್​ ಮತ್ತು 128ಜಿನಿ ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಮೀಡಿಯಾಟೆಕ್​ ಡೈಮನ್ಶನ್​ 700 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತದೆ. ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್​ಫೋನ್​ 64 ಮೆಗಾಫಿಕ್ಸೆಲ್​, 5 ಮೆಗಾಫಿಕ್ಸೆಲ್​ ಮತ್ತು 2 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಿಕೊಂಡಿದೆ. ಮುಂಭಾಗದಲ್ಲಿ 8 ಮೆಗಾಫಿಕ್ಸೆಲ್ ಕ್ಯಾಮೆರಾವಿದೆ.

  ಇದನ್ನು ಓದಿ: Flipkart Big Saving Days 2021: ಕೇವಲ 10 ಸಾವಿರಕ್ಕೆ ಖರೀದಿಸಿ Mi 40 ಇಂಚಿನ ಸ್ಮಾರ್ಟ್​ಟಿವಿ!

  ಸ್ಯಾಮ್​ಸಂಗ್​ ಎಫ್​42 ಸ್ಮಾರ್ಟ್​ಫೋನ್​ 6.6 ಇಂಚಿನ ಫುಲ್​ ಹೆಚ್​ಡಿ+ ಡಿಸ್​ಪ್ಲೇ ಜೊತೆಗೆ 5 ಸಾವಿರ ಎಮ್​ಎಹೆಚ್​ ಬ್ಯಾಟರಿ ಅಳವಡಿಸಿಕೊಂಡಿದೆ.

  ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್ ಮೂಲಕ ಅನೇಕ ಪ್ರಯೋಜನವನ್ನು ನೀಡುತ್ತಿದೆ. ಸಾಕಷ್ಟು ಸ್ಮಾರ್ಟ್​ಫೋನ್​ಗಳನ್ನು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.
  Published by:Harshith AS
  First published: