ಫ್ಲಿಪ್ಕಾರ್ಟ್ ಇತ್ತೀಚೆಗಷ್ಟೇ ಬಿಗ್ ಬಿಲಿಯನ್ಸ್ ಡೇ ಆಫರ್ಸ್ ನೀಡಿತ್ತು. ಎಲೆಕ್ಟ್ರಾನಿಕ್ ಸಾಧನಗಳು ಸೇರಿ ಬಹುತೇಕ ಎಲ್ಲ ವಸ್ತುಗಳ ಮೇಲೆ ಭಾರೀ ಆಫರ್ ನೀಡಲಾಗಿತ್ತು. ಈಗ ಬಿಗ್ ಬಿಲಿಯನ್ಸ್ ಡೇ ಪೂರ್ಣಗೊಂಡ ಬೆನ್ನಲ್ಲೇ ಬಿಗ್ ದೀಪಾವಳಿ ಸೇಲ್ ಆರಂಭಿಸಲು ಫ್ಲಿಪ್ಕಾರ್ಟ್ ಮುಂದಾಗಿದೆ. ಇದೇ ಅಕ್ಟೋಬರ್ 29ರಿಂದ ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ ಆರಂಭಿಸುತ್ತಿದೆ. ಈ ವೇಳೆ ಸಾಕಷ್ಟು ವಸ್ತುಗಳ ಮೇಲೆ ಭಾರೀ ಆಫರ್ ಸಿಗುವ ಸಾಧ್ಯತೆ ಇದೆ. ಅಲ್ಲದೆ, ಸಾಕಷ್ಟು ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಮೇಲೆ ಇನ್ಸ್ಟಂಟ್ ಡಿಸ್ಕೌಂಟ್ ಕೂಡ ಸಿಗಲಿದೆ.
ಅಕ್ಟೋಬರ್ 29ರಿಂದ ಆರಂಭವಾಗುವ ಈ ಸೇಲ್ ನವೆಂಬರ್ 4ಕ್ಕೆ ಪೂರ್ಣಗೊಳ್ಳಲಿದೆ. ಪ್ಲಿಪ್ಕಾರ್ಟ್ ಪ್ಲಸ್ ಮೆಂಬರ್ಸ್ಗಳಿಗೂ ಅದೇ ದಿನ ಸೇಲ್ ಆರಂಭಗೊಳ್ಳಲಿದೆ. ಈ ವೇಳೆ ಟಿವಿ, ಮೊಬೈಲ್ ಫ್ರಿಜ್, ವಾಷಿಂಗ್ ಮೆಶಿನ್ಗಳ ಮೇಲೆ ಭಾರೀ ಡಿಸ್ಕೌಂಟ್ ಸಿಗಲಿದೆ.
ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಗ್ರಾಹಕರಿಗೆ ಶೇ.10 ಇನ್ಸ್ಟಂಟ್ ರಿಯಾಯಿತಿ ಸಿಗಲಿದೆ. ಪ್ರಮುಖ ಬ್ಯಾಂಕ್ಗಳಾದ ಎಸ್ಬಿಐ, ಐಸಿಐಸಿಐ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ಗಳಿಂದ ಬಡ್ಡಿ ರಹಿತ ಇಎಂಐ ಸೇವೆ ಕೂಡ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ