HOME » NEWS » Tech » FLIPKART BIG DIWALI SALE STARTING TODAY DISCOUNT OFFERS ON POCO X3 MOTO G9 AND MORE SMARTPHONES HG

Flipkart Big Diwali Sale: ಮೊಟೊರೊಲಾ, ಪೊಕೊ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​!

Moto G9: ಫ್ಲಿಪ್​ಕಾರ್ಟ್ ಈಗಾಗಲೇ ತನ್ನ ವೆಬ್​ಸೈಟ್​ನಲ್ಲಿ ಡೀಲ್ಸ್​ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮೊಟೊರೊಲಾ, ಪೊಕೊ ಸ್ಮಾರ್ಟ್​ಫೋನ್​ಗಳನ್ನ ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದೆ.

news18-kannada
Updated:November 7, 2020, 7:27 AM IST
Flipkart Big Diwali Sale: ಮೊಟೊರೊಲಾ, ಪೊಕೊ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​!
Moto X4
  • Share this:
ಫ್ಲಿಪ್​ಕಾರ್ಟ್​ ನವೆಂಬರ್​ 8 ರಿಂದ 'ಬಿಗ್​ ದಿವಾಲಿ ಸೇಲ್'​ ನಡೆಸಲು ಮುಂದಾಗಿದ್ದು, ವಿವಿಧ ಕಂಪನಿಗಳ ಸ್ಮಾರ್ಟ್​ಫೋನ್, ಹೆಡ್​ಫೋನ್​​, ಟಿವಿ, ಇಯರ್​ಫೋನ್​ ​ಮೇಲೆ ಆಕರ್ಷಕ ಡಿಸ್ಕೌಂಟ್​ ನೀಡಿದೆ. ಇನ್ನು ಫ್ಲಿಪ್​​ಕಾರ್ಟ್​ ಪ್ಲಸ್​ ಬಳಕೆದಾರರಿಗೆ ಇಂದಿನಿಂದ ಈ ಸೇಲ್​ ಪ್ರಯೋಜನವನ್ನು ಪಡೆಯುವಂತೆ ಅವಕಾಶ ಮಾಡಿಕೊಟ್ಟಿದೆ.

ಫ್ಲಿಪ್​ಕಾರ್ಟ್ ಈಗಾಗಲೇ ತನ್ನ ವೆಬ್​ಸೈಟ್​ನಲ್ಲಿ ಡೀಲ್ಸ್​ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮೊಟೊರೊಲಾ, ಪೊಕೊ ಸ್ಮಾರ್ಟ್​ಫೋನ್​ಗಳನ್ನ ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದೆ.

ಮೊಟೊರೊಲಾ ಮಡಚುವ  ರೇಜರ್​ ಸ್ಮಾರ್ಟ್​ಫೊನ್​ 74,999 ರೂ.ಗೆ ಮಾರಾಟ ಮಾಡುತ್ತಿದೆ.ಅದರ ಜೊತೆಗೆ  10 ಸಾವಿರದಷ್ಟು ಇನ್​ಸ್ಟಂಟ್​ ಡಿಸ್ಕೌಂಟ್​ ನೀಡಿದೆ.

ಮೊಟೊ ಜಿ9 ಸ್ಮಾರ್ಟ್​ಫೋನಿನ  ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ.  ಸ್ನಾಪ್​ಡ್ರಾಗನ್​ 662 ಚಿಪ್​ಸೆಟ್​ ಹೊಂದಿರುವ ಈ ಫೋನಿನಲ್ಲಿ 48 ಮೆಗಾಫಿಕ್ಸೆಲ್​ ತ್ರಿವಳಿ ಕ್ಯಾಮೆರಾ ನೀಡಲಾಗಿದೆ. ಫ್ಲಿಪ್​ಕಾರ್ಟ್​ ದೀಪಾವಳಿ ಸೇಲ್​ನಲ್ಲಿ ಈ ಸ್ಮಾರ್ಟ್​ಫೋನನ್ನು 9,999 ರೂ.ಗೆ ಮಾರಾಟ ಮಾಡುತ್ತಿದೆ.

ಮೊಟೊರೊಲಾ ಒನ್​​ ಫ್ಯೂಶನ್​+ ಸ್ಮಾರ್ಟ್​ಫೋನ್​ ಸ್ನಾಪ್​ಡ್ರಾಗನ್​​ 730ಜಿ ಪ್ರೊಸೆಸರ್​ ಹೊಂದಿದ್ದು, 64 ಮೆಗಾಫಿಕ್ಸೆಲ್​ ತ್ರಿವಳಿ ಕ್ಯಾಮೆರಾವನ್ನು ಅಳವಡಿಸಿಕೊಂಡಿದೆ. 5 ಸಾವಿರ ಎಮ್​ಎಹೆಚ್​ ಬ್ಯಾಟರಿ ಹೊಂದಿರುವ ಈ ಸ್ಮಾಟ್​ಫೋನನ್ನು 16,499 ರೂ.ಗೆ ಮಾರಾಟ ಮಾಡುತ್ತಿದೆ.

ಪೊಕೊ ತನ್ನ ಎಕ್ಸ್​3, ಸಿ3, ಎಮ್​2, ಎಮ್​2 ಪ್ರೊ ಸ್ಮಾರ್ಟ್​ಫೋನ್​ ಮೇಲೆ ಡಿಸ್ಕೌಂಟ್​ ನೀಡಿದೆ. ಸಿ3 ಸ್ಮಾರ್ಟ್​ಫೋನ್​ ಮೇಲೆ 15 ಸಾವಿರ ಇನ್ಟಂಟ್​ ಡಿಸ್ಕೌಂಟ್​ ನೀಡಿದೆ.
ಇನ್ನು ಇಎಮ್​ಐ ಆಯ್ಕೆಯ ಮೂಲಕ ಸ್ಮಾರ್ಟ್​ಫೋನ್​ ಖರೀದಿಸುವ ಅವಕಾಶವನ್ನು ನೀಡುತ್ತಿದೆ. ಐಸಿಐಸಿಐ, ಸಿಟಿ ಬ್ಯಾಂಕ್​, ಆಕ್ಸಿಸ್​ ಬ್ಯಾಂಕ್​, ಕೋಟಕ್​ ಬ್ಯಾಂಕ್​ ಖಾತೆದಾರರು ಕ್ರೆಡಿಟ್​ಕಾರ್ಡ್​ ಮತ್ತು ಡೆಬಿಟ್​ ಕಾರ್ಡ್​ ಬಳಸುವವರಾದರೆ ಅಂತಹವರಿಗೂ ಆಫರ್​ ನೀಡುತ್ತಿದೆ.
Published by: Harshith AS
First published: November 7, 2020, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories