Flipkart Big Diwali Sale: ಇಂದಿನಿಂದ ಫ್ಲಿಪ್​ಕಾರ್ಟ್​ ‘ಬಿಗ್​ ದಿವಾಲಿ ಸೇಲ್​‘; ಈ ವಸ್ತುಗಳ ಮೇಲೆ ಶೇ.90 ರಷ್ಟು ರಿಯಾಯಿತಿ

Flipkart Big Diwali Sale: ದಸರಾ ಹಬ್ಬದ ಪ್ರಯುಕ್ತ ಫಿಪ್​​ಕಾರ್ಟ್ ‘ಬಿಗ್​ ಬಿಲಿಯನ್​ ಡೇ ಸೇಲ್‘ ಸೆ.29 ರಿಂದ ಅ.04 ರ ವರೆಗೆ​ ಆಯೋಜಿಸಿತ್ತು. ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಭರ್ಜರಿ ಆಫರ್​ ದೊರಕಿಸುವ ಸಲುವಾಗಿ ದಿವಾಲಿ ಸೇಲ್​ ಅನ್ನು ಇಂದಿನಿಂದ ಆರಂಭಿಸಿದೆ.

news18-kannada
Updated:October 12, 2019, 7:37 AM IST
Flipkart Big Diwali Sale: ಇಂದಿನಿಂದ ಫ್ಲಿಪ್​ಕಾರ್ಟ್​ ‘ಬಿಗ್​ ದಿವಾಲಿ ಸೇಲ್​‘; ಈ ವಸ್ತುಗಳ ಮೇಲೆ ಶೇ.90 ರಷ್ಟು ರಿಯಾಯಿತಿ
ಪ್​ಕಾರ್ಟ್​ ‘ಬಿಗ್​ ದಿವಾಲಿ ಸೇಲ್​‘;
  • Share this:
ದೀಪಾವಳಿ ಹಬ್ಬದ ಸಲುವಾಗಿ ಫ್ಲಿಪ್​ಕಾಟ್​ ಮತ್ತೊಮ್ಮೆ ಮಾರಾಟ ನಡೆಸಲು ಮುಂದಾಗಿದೆ. ಅದಕ್ಕೆಂದೇ ಅ.12 ರಿಂದ 16 ರವರೆಗೆ ಐದು ದಿನಗಳ ಕಾಲ ‘ಬಿಗ್​ ದಿವಾಲಿ ಸೇಲ್‘​ ಅನ್ನು ಆಯೋಜಿಸಿದೆ.

ದಸರಾ ಹಬ್ಬದ ಪ್ರಯುಕ್ತ ಫಿಪ್​​ಕಾರ್ಟ್ ‘ಬಿಗ್​ ಬಿಲಿಯನ್​ ಡೇ ಸೇಲ್‘ ಸೆ.29 ರಿಂದ ಅ.04 ರ ವರೆಗೆ​ ಆಯೋಜಿಸಿತ್ತು. ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಭರ್ಜರಿ ಆಫರ್​ ದೊರಕಿಸುವ ಸಲುವಾಗಿ ದಿವಾಲಿ ಸೇಲ್​ ಅನ್ನು ಇಂದಿನಿಂದ ಆರಂಭಿಸಿದೆ.

ಫ್ಲಿಪ್​ಕಾರ್ಟ್​ ಹಮ್ಮಿಕೊಂಡಿರುವ ದಿವಾಲಿ ಸೇಲ್​ನಲ್ಲಿ ಮೊಬೈಲ್​ಗಳ ಮೇಲೆ ಹೆಚ್ಚಿನ ಆಫರ್​ ನೀಡುತ್ತಿದೆ. ರಿಯಲ್​ಮಿ 5, ರೆಡ್​ಮಿ ನೋಟ್​ 7ಎಸ್​, ರೆಡ್​ಮಿ ನೋಟ್​​ 7 ಪ್ರೊ, ವಿವೋ ಝೆಡ್​1 ಪ್ರೊ ಫೋನ್​ಗಳ ಮೇಲೆ ವಿಶೇಷ ಆಫರ್​ ನೀಡುತ್ತಿದೆ.

ಇದನ್ನೂ ಓದಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಕಾರು ಅಪಘಾತ ಪ್ರಕರಣದಲ್ಲಿ ಶಾಸಕ ಸೆಂಗರ್ ಪಾತ್ರವಿಲ್ಲ ಎಂದು ಚಾರ್ಜ್​ಶೀಟ್ ಸಲ್ಲಿಸಿದ ಸಿಬಿಐ

ಟಿವಿ, ಗೃಹ ಉಪಯೋಗಿ ವಸ್ತುಗಳ ಮೇಲೂ ಆಕರ್ಷಕ ಡಿಸ್ಕೌಂಟ್​ ನೀಡುತ್ತಿದೆ. 50 ಸಾವಿರಕ್ಕೂ ಹೆಚ್ಚಿನ ಎಲೆಕ್ಟ್ರಾನಿಕ್​ ಉತ್ಪನ್ನಗಳನ್ನು ಈ ಸೇಲ್​ನಲ್ಲಿ ಮಾರಾಟ ನಡೆಸುತ್ತಿದೆ. ಮಾತ್ರವಲ್ಲದೆ, ದಿನಬಳಕೆಯ ಉತ್ಪನ್ನಗಳ ಮೇಲೆ ಶೇ. 75 ರಷ್ಟು ರಿಯಾಯಿತಿ ನೀಡುತ್ತಿದೆ.

ಲ್ಯಾಪ್​ಟಾಪ್​, ಹೆಡ್​ಫೋನ್​, ಸ್ಮಾರ್ಟ್​ವಾಚ್​, ಡಿಎಸ್​ಎಲ್​ಆರ್​ ಮತ್ತು ಸ್ಮಾರ್ಟ್​ಫೋನ್​ ಅಕ್ಸೆಸ್ಸರಿ ಮೇಲೆ ಶೇ.90 ರಷ್ಟು ಆಫರ್​ ನೀಡುತ್ತಿದೆ. ಅಂತೆಯೇ, ಫ್ಯಾಶನ್​, ಬಟ್ಟೆಗಳ ಮೇಲೆ ಶೇ. 50 ರಿಂದ ಶೇ. 80 ಡಿಸ್ಕೌಂಟ್​ ನೀಡುತ್ತಿದೆ. ಪೀಠೋಪಕರಣದ ಮೇಲೂ ಶೇ.80 ರಷ್ಟು ಡಿಸ್ಕೌಂಟ್​ ನೀಡುತ್ತಿದೆ.

First published: October 12, 2019, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading