Flipkart; ಫ್ಲಿಪ್​​ಕಾರ್ಟ್​ ದೀಪಾವಳಿ ಸೇಲ್​; ಸ್ಮಾರ್ಟ್​ಫೋನ್​, ಟಿವಿ ಮೇಲೆ ಆಕರ್ಷಕ ಡಿಸ್ಕೌಂಟ್​​

Flipkart Big Diwali Sale 2020: ಅಮೆಜಾನ್​​ ದೀಪಾವಳಿ ಹಬ್ಬದ ಪ್ರಯುಕ್ತ ‘ಗ್ರೇಟ್​​ ಇಂಡಿಯನ್​ ಫೆಸ್ಟಿವಲ್​​ ‘ಫೈನಲ್​ ಡೇಸ್​‘ ಸೇಲ್’​ ಆಯೋಜಿಸಿದೆ. ಅದರಂತೆ ಫ್ಲಿಪ್​ಕಾರ್ಟ್​ ಕೂಡ ತನ್ನ ಗ್ರಾಹಕರಿಗೆ ಹೆಚ್ಚಿನ ಡಿಸ್ಕೌಂಟ್​ ಮತ್ತು ಆಫರ್​ ನೀಡುವ ಸಲುವಾಗಿ ಮತ್ತೊಮ್ಮೆ ಸೇಲ್​ ನಡೆಸಲು ಮುಂದಾಗಿದೆ.

Flipkart

Flipkart

  • Share this:
    ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ಮತ್ತೊಮ್ಮೆ ‘ಬಿಗ್​ ದಿವಾಳಿ 2020’ ಸೇಲ್​ ಆಯೋಜಿಸಿದೆ. ನವೆಂಬರ್​ 13ರವರೆಗೆ ಈ ಸೇಲ್​ ಅನ್ನು ನಡೆಸಲಿದ್ದು, ಗ್ರಾಹಕರಿಗಾಗಿ ಭರ್ಜರಿ ಆಫರ್​ಗಳನ್ನು ನೀಡಿದೆ.ಅಮೆಜಾನ್​​ ದೀಪಾವಳಿ ಹಬ್ಬದ ಪ್ರಯುಕ್ತ ‘ಗ್ರೇಟ್​​ ಇಂಡಿಯನ್​ ಫೆಸ್ಟಿವಲ್​​ ‘ಫೈನಲ್​ ಡೇಸ್​‘ ಸೇಲ್’​ ಆಯೋಜಿಸಿದೆ. ಅದರಂತೆ ಫ್ಲಿಪ್​ಕಾರ್ಟ್​ ಕೂಡ ತನ್ನ ಗ್ರಾಹಕರಿಗೆ ಹೆಚ್ಚಿನ ಡಿಸ್ಕೌಂಟ್​ ಮತ್ತು ಆಫರ್​ ನೀಡುವ ಸಲುವಾಗಿ ಮತ್ತೊಮ್ಮೆ ಸೇಲ್​ ನಡೆಸಲು ಮುಂದಾಗಿದೆ. ವಿವಿಧ ಬ್ರಾಂಡೆಡ್ ​​ಸ್ಮಾರ್ಟ್​ಫೋನ್​, ಐಫೋನ್​​, ಟಿವಿ, ಬಟ್ಟೆ ಮತ್ತು ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಿದೆ.

    ಗ್ರಾಹಕರು ಆಕ್ಸಿಕ್​ ಬ್ಯಾಂಕ್​, ಸಿಟಿ ಬ್ಯಾಂಕ್​, ಐಸಿಐಸಿಐ ಬ್ಯಾಂಕ್​​, ಕೊಟಕ್​ ಮಹೀಂದ್ರಾ ಬ್ಯಾಂಕ್ ​​ ಕ್ರೆಡಿಟ್​ ಅಥವಾ ಡೆಬಿಟ್​ ಕಾರ್ಡ್​ ಮೂಲಕ ಫ್ಲಿಪ್​ಕಾರ್ಟ್​ ವಸ್ತುಗಳನ್ನು ಖರೀದಿಸಿದರೆ ಶೇ.10ರಷ್ಟು ಡಿಸ್ಕೌಂಟ್​​ ನೀಡುತ್ತಿದೆ.

    ಐಫೋನ್​ ಮೇಲೆ ಆಕರ್ಷಕ ಡಿಸ್ಕೌಂಟ್​;

    ಐಫೋನ್​ ಎಕ್ಸ್​ಆರ್​ (64ಜಿಬಿ) ಬೆಲೆ ಕಡಿತಗೊಂಡಿದ್ದು, 47,900 ರೂ.ವಿನ ಫೋನನ್ನು 38,999 ಸಾವಿರಕ್ಕೆ ಫ್ಲಿಪ್​ಕಾರ್ಟ್​ ಮಾರುತ್ತಿದೆ.  ಜೊತೆಗೆ ಎಕ್ಸ್​ಚೇಂಜ್​ ಆಫರ್​ ನೀಡಿದೆ. 14,100 ರೂ ಇನ್​ಸ್ಟಂಟ್​ ಡಿಸ್ಕೌಂಟ್​ ಒದಗಿಸುತ್ತಿದೆ.

    ಐಫೋನ್​ ಎಸ್​ಇ ಮೇಲಿನ ಬೆಲೆಯನ್ನು ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. 39,900 ರೂ.ವಿನ ಐಫೋನ್​ಎಸ್​ಇ 32,999 ರೂ.ಗೆ ಸಿಗುತ್ತಿದೆ. ಜೊತೆಗೆ ಎಕ್ಸ್​ಚೇಂಜ್​ ಆಫರ್​ ಅನ್ನು ನೀಡುತ್ತಿದೆ.

    ಸ್ಯಾಮ್​ಸಂಗ್​​ ಗ್ಯಾಲಕ್ಸಿಇ ಎಸ್​20+

    ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​20+ ಸ್ಮಾರ್ಟ್​ಫೋನನ್ನು 54,999 ರೂ.ಗೆ ಮಾರಾಟ ಮಾಡುತ್ತಿದೆ. ಜೊತೆಗೆ ಎಕ್ಸ್​ಚೇಂಜ್​ ಆಫರ್​ ಮತ್ತು ಅಡಿಷನಲ್​ ಡಿಸ್ಕೌಂಟ್​ ನೀಡುತ್ತಿದೆ.

    ಸ್ಯಾಮ್​ಸಂಗ್​​ ಗ್ಯಾಲಕ್ಸಿ ನೋಟ್​ 10+

    ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್​​ ​10+ ಸ್ಮಾರ್ಟ್​ಫೋನನ್ನು 59,999 ರೂ.ಗೆ ಮಾರಾಟ ಮಾಡುತ್ತಿದೆ. ಜೊತೆಗೆ ಎಕ್ಸ್​ಚೇಂಜ್​ ಆಫರ್​ ಮತ್ತು ಅಡಿಷನಲ್​ ಡಿಸ್ಕೌಂಟ್​ ನೀಡುತ್ತಿದೆ.

    ಐಫೋನ್​ 11 ಪ್ರೊ 1,06,600 ರೂ ಬೆಲೆಯನ್ನು ಹೊಂದಿದೆ. ಆದರೆ ಫ್ಲಿಪ್​ಕಾರ್ಟ್​ ದೀಪಾವಳಿ ಹಬ್ಬದ ಪ್ರಯುಕ್ತ 79,999 ರೂ.ಗೆ ಮಾರಾಟ ಮಾಡುತ್ತಿದೆ. ಜೊತೆಗೆ ಎಕ್ಸ್​ಚೇಂಜ್​ ಆಫರ್​ ಮತ್ತು 14,100 ರೂ. ಇನ್​ಸ್ಟಂಟ್​​ ಡಿಸ್ಕೌಂಟ್​ ನೀಡುತ್ತಿದೆ.

    ಪೊಕೊ ಎಮ್2​ ಪ್ರೊ ಸ್ಮಾರ್ಟ್​ಫೋನನ್ನು12,999 ರೂ.ಗೆ ಮಾರಾಟ ಮಾಡುತ್ತಿದೆ. ಜೊತೆಗೆ ಎಕ್ಸ್​ಚೇಂಜ್​ ಆಫರ್​ ಮತ್ತು ಅಡಿಷನಲ್​ ಡಿಸ್ಕೌಂಟ್​ ನೀಡುತ್ತಿದೆ.

    ಮೊಟೊ ಜಿ9 ಸ್ಮಾರ್ಟ್​ಫೋನನ್ನು 9,999 ರೂ.ಗೆ ಮಾರಾಟ ಮಾಡುತ್ತಿದೆ.



    ಇನ್ನು ಇಲೆಕ್ಟ್ರಾನಿಕ್ಸ್​ ವಸ್ತುಗಳ ಮೇಲೆ ಆಫರ್​ ನೀಡಿದೆ.  ಪಿಲಿಪ್ಸ್​ ಕಂಪನಿಯ 50 ಇಂಚಿನ ಟಿವಿ ಬೆಲೆ 1,05,990 ರೂ ಆಗಿದ್ದು, 33,999 ರೂ.ಗೆ ಮಾರಾಟ ಮಾಡುತ್ತಿದೆ ಆಸೂಸ್​​ ವಿವೊಬುಕ್​ 14 ಲ್ಯಾಪ್​​ 55,990 ರೂಗೆ ಫ್ಲಿಪ್​ಕಾರ್ಟ್​ ದೀಪಾವಳಿ ಸೇಲ್​ನಲ್ಲಿ ಸಿಗಲಿದೆ.
    Published by:Harshith AS
    First published: