ಗೂಗಲ್ ಪಿಕ್ಸೆಲ್ 4a ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೋಲ್ ಪಂಚ್ ಡಿಸ್ಪ್ಲೇ ಹೊಂದಿರುವ ಈ ನೂತನ ಸ್ಮಾರ್ಟ್ಫೋನ್ ಫೀಚರ್ಗೆ ತಕ್ಕಂತೆ ಬೆಲೆಯನ್ನು ಹೊಂದಿದೆ. ಆಕರ್ಷಕ ಲುಕ್ ಹೊಂದಿರುವ ಗೂಗಲ್ ಪಿಕ್ಸೆಲ್ 4a ಸ್ಮಾರ್ಟ್ಫೋನಿನ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ವಿಶೇಷತೆ:
ಗೂಗಲ್ಪಿಕ್ಸೆಲ್ 4a ಸ್ಮಾರ್ಟ್ಫೋನ್ 5.81 ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇ ಹೊಂದಿದ್ದು, ಒಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730ಜಿ ಎಸ್ಒಸಿ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್ 10ನಿಂದ ಆ್ಯಂಡ್ರಾಯ್ಡ್ 11ಗೆ ಅಪ್ಗ್ರೇಡ್ ಮಾಡುವ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ. ಗ್ರಾಹಕರಿಗಾಗಿ 6GB RAM ಮತ್ತು 128GB ಸ್ಟೊರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ.
ನೂತನ ಸ್ಮಾರ್ಟ್ಫೋನಿನಲ್ಲಿ 12 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಅದರ ಜೊತೆಗೆ HDR+ ಡುಯೆಲ್ ಎಕ್ಸ್ಪೋಸ್ ಕಂಟ್ರೋಲ್, ಪೊಟ್ರೇಟ್ ಮೋಡ್, ವಿಡಿಯೋ ಸ್ಟೆಬಿಲೈಜೇಶನ್ ಫೀಚರ್ ನೀಡಲಾಗಿದೆ. ಸೆಲ್ಫಗಾಗಿ 8 ಮೆಗಾಫಿಕ್ಸೆಲ್ ಕ್ಯಾಮೆರಾ ಆಳವಡಿಸಲಾಗಿದೆ.
ಅದರ ಜೊತೆಗೆ ಸ್ಮಾರ್ಟ್ಫೋನಿನಲ್ಲಿ 4G ವೋಲ್ಡ್, ವೈ-ಫೈ, ಬ್ಲೂಟೂತ್ ವಿ5.0, ಯುಎಸ್ಬಿ ಟೈಪ್-ಸಿ ಪೋರ್ಟ್, 3.3mm ಹೆಡ್ಫೋನ್ ಜಾಕ್ ನೀಡಿದೆ.
ಬೆಲೆ: ಗೂಗಲ್ ಪರಿಚಯಿಸಿರುವ 4a ಸ್ಮಾರ್ಟ್ಫೋನ್ ಬೆಲೆ 31,999 ರೂ ಆಗಿದೆ. ಆನ್ಲೈನ್ ಮಾರಾಟ ಮಳಿಗೆಯಾದ ಫ್ಲಿಪ್ಕಾರ್ಟ್ ಅ.16 ರಿಂದ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಸುತ್ತಿದ್ದು, ಅದರಲ್ಲಿ 29,999 ರೂ.ಗೆ ಮಾರಾಟ ಮಾಡುವುದಾಗಿ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ