Flipkart Big Billion Days: ಫ್ಲಿಪ್​ಕಾರ್ಟ್​​ನಿಂದ ಮತ್ತೆ ಬಿಗ್ ಬಿಲಿಯನ್ ಡೇ ಸೇಲ್​; ಗ್ರಾಹಕರಿಗೆ ಸಿಗಲಿದೆ ಭರ್ಜರಿ ಆಫರ್

ದಿ ಬಿಗ್ ಬಿಲಿಯನ್ ಡೇಸ್‍ಗಾಗಿ ಭಾರತದ ಪ್ರಮುಖ ತಾರೆಗಳಾದ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ವಿರಾಟ್‍ಕೊಯ್ಲಿ ಮತ್ತು ಎಂ.ಎಸ್. ಧೋನಿ ಮುಂತಾದವರೊಂದಿಗೆ ಫ್ಲಿಪ್‍ಕಾರ್ಟ್ ಪಾಲುದಾರಿಕೆ ಮಾಡಿಕೊಂಡಿದೆ.

Rajesh Duggumane | news18-kannada
Updated:September 11, 2019, 7:43 PM IST
Flipkart Big Billion Days: ಫ್ಲಿಪ್​ಕಾರ್ಟ್​​ನಿಂದ ಮತ್ತೆ ಬಿಗ್ ಬಿಲಿಯನ್ ಡೇ ಸೇಲ್​; ಗ್ರಾಹಕರಿಗೆ ಸಿಗಲಿದೆ ಭರ್ಜರಿ ಆಫರ್
ಫ್ಲಿಪ್​ಕಾರ್ಟ್
Rajesh Duggumane | news18-kannada
Updated: September 11, 2019, 7:43 PM IST
ಆನ್​ಲೈನ್​ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್‍ಕಾರ್ಟ್ ಗ್ರಾಹಕರಿಗೆ ಹಲವು ಆಫರ್​ಗಳನ್ನು ನೀಡುತ್ತಾ ಬಂದಿದೆ. ಈಗ ಸಂಸ್ಥೆ ‘ದಿ ಬಿಗ್ ಬಿಲಿಯನ್ ಡೇಸ್’ ಸೇಲ್ ಮತ್ತೆ ಆರಂಭಿಸಲು ನಿರ್ಧರಿಸಿದೆ. ಈ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್​ ನೀಡುತ್ತಿದೆ.

ಸೆಪ್ಟೆಂಬರ್ 29ರಿಂದ ಅಕ್ಟೋಬರ್ 4ರವರೆಗೆ ಬಿಗ್​ ಬಿಲಿಯನ್​ ಡೇ ಸೇಲ್​ ನಡೆಯುತ್ತಿದೆ. ಈ ವೇಳೆ ಸಾಕಷ್ಟು ಆಫರ್​ಗಳನ್ನು ಸಂಸ್ಥೆ ನೀಡುತ್ತಿದೆ. ಆ್ಯಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್​ ಕಾರ್ಡುದಾರರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಹಬ್ಬದ ಸಮಯವಾದ್ದರಿಂದ ಈ ಸೇಲ್​ಗೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗುವ ಸಾಧ್ಯತೆ ಇದೆ.

ಯಾವ್ಯಾವಾಗ ಯಾವ ಸೇಲ್​?:

ಸೆಪ್ಟೆಂಬರ್ 29 ರಂದು ಫ್ಯಾಷನ್, ಟಿವಿಗಳು ಮತ್ತು ಉಪಕರಣಗಳು, ಗೃಹ ಮತ್ತು ಪೀಠೋಪಕರಣಗಳು, ಸೌಂದರ್ಯ, ಕ್ರೀಡೆಗಳು, ಆಟಿಕೆಗಳು, ಪುಸ್ತಕಗಳು, ಸ್ಮಾರ್ಟ್ ಡಿವೈಸ್‍ಗಳು, ವೈಯಕ್ತಿಕ ಆರೈಕೆ ಉಪಕರಣಗಳು, ಪ್ರವಾಸ ಇತರೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸೆಪ್ಟೆಂಬರ್ 30ರಂದು ಮೊಬೈಲ್‍ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಆಕ್ಸೆಸರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅಕ್ಟೋಬರ್​ 4ವರೆಗೂ ವಿವಿಧ ಮಾರಾಟ ನಡೆಯಲಿದೆ.

ಇದನ್ನೂ ಓದಿ: ಅಮೆಜಾನ್ ‘ಗ್ರೇಟ್​​​​​​​​​ ಇಂಡಿಯನ್​​ ಫೆಸ್ಟಿವಲ್​​​ ಸೇಲ್​ 2019‘; ಸದ್ಯದಲ್ಲೇ ಭರ್ಜರಿ ಆಫರ್​ಗಳ ಸುರಿಮಳೆ ಪ್ರಾರಂಭ​

ಪ್ರಸಕ್ತ ವರ್ಷ ಫ್ಲಿಪ್‍ಕಾರ್ಟ್ ತನ್ನ ಪೂರೈಕೆ ಸರಣಿಯನ್ನು ಹೆಚ್ಚಿಸಿದ್ದು, ಗ್ರಾಹಕರು ಮತ್ತು ಮಾರಾಟಗಾರರ ಅಗತ್ಯಗಳನ್ನು ಪೂರೈಸಲು ಹಿಂದೆಂದೂ ಇಲ್ಲದಂತಹ ಸ್ಥಳಗಳಿಗೆ ಪ್ರವೇಶ ಮಾಡುತ್ತಿದೆ. ಕಂಪನಿ ತನ್ನ ಪಿನ್‍ಕೋಡ್‍ಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದ್ದು, ತನ್ನ ಜಾಲಕ್ಕೆ ಸುಮಾರು 30,000 ಕಿರಾಣಿ ಅಂಗಡಿಗಳನ್ನು ಸೇರಿಸಿಕೊಂಡಿದೆ. ಬಿಗ್ ಬಿಲಿಯನ್ ದಿನಗಳಲ್ಲಿ ಮೊದಲ ಬಾರಿಗೆ ಗ್ರಾಹಕರು ಉಪಕರಣಗಳಿಗೆ ವಿಮೆಯನ್ನು ಖರೀದಿಸಬಹುದಾಗಿದೆ.

ದಿ ಬಿಗ್ ಬಿಲಿಯನ್ ಡೇಸ್‍ಗಾಗಿ ಭಾರತದ ಪ್ರಮುಖ ತಾರೆಗಳಾದ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ವಿರಾಟ್‍ಕೊಯ್ಲಿ ಮತ್ತು ಎಂ.ಎಸ್. ಧೋನಿ ಮುಂತಾದವರೊಂದಿಗೆ ಫ್ಲಿಪ್‍ಕಾರ್ಟ್ ಪಾಲುದಾರಿಕೆ ಮಾಡಿಕೊಂಡಿದೆ.
Loading...

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...