Flipkart Big Billion Days:​ ಇಷ್ಟೊಂದು ಕಡಿಮೆ ಬೆಲೆಗೆ ಸಿಗಲಿದೆಯಾ ಈ ಸ್ಮಾರ್ಟ್​ಫೋನ್​ಗಳು!

Flipkart: ಪ್ರತಿ ಬಾರಿಯಂತೆಯೇ ಫ್ಲಿಪ್​ಕಾರ್ಟ್​​ ಬಿಗ್ ಬಿಲಿಯನ್ ಡೇಸ್ ಮೂಲಕ ಆಕರ್ಷಕ ಆಫರ್​ ಹೊತ್ತು ತರಲಿದೆ. ಅದರ ಜೊತೆಗೆ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಿದೆ. ಪಾಲುದಾರ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವುದರ ಜೊತೆಗೆ ರಿಯಾಯಿತಿ ಸಿಗಲಿದೆ. ಕಾರ್ಡ್ ಬಳಸಿದರೆ ಕನಿಷ್ಠ 1,000 ರೂ.ಗಳ ರಿಯಾಯಿತಿ ನೀಡುವ ನಿರೀಕ್ಷೆಯಿದೆ. ಫ್ಲಿಪ್​ಕಾರ್ಟ್​​ ಮಾರಾಟದ ದಿನಾಂಕ ಇನ್ನೂ ಲಭ್ಯವಿಲ್ಲದಿದ್ದರೂ, ಸ್ಮಾರ್ಟ್​ಫೋನ್​ಗಳ ಮೇಲೆ ಕೆಲವು ಆಫರ್​ಗಳ ಕುರಿತ ಮಾಹಿತಿ ಹೊರಬಿದ್ದಿದೆ.

Flipkart

Flipkart

 • Share this:
  Flipkart Big Billion Days ಸೇಲ್ ಸದ್ಯದಲ್ಲೇ ಆರಂಭವಾಗಲಿದೆ. ಆದರೆ ಇ -ಕಾಮರ್ಸ್​ ಮಳಿಗೆ ಮಾರಾಟದ ದಿನಾಂಕವನ್ನು ಇನ್ನು ಬಹಿರಂಗಪಡಿಸದಿದ್ದರೂ, ಸ್ಮಾರ್ಟ್‌ಫೋನ್‌ಗಳ ಮೇಲಿನ ಕೆಲವು ಆಫರ್​​ಗಳ ಕುರಿತಾದ ಮಾಹಿತಿಯನ್ನು ಬಹಿರಂಗ ಪಡಿಸುವ ಮೂಲಕ  ವಾರ್ಷಿಕ ಕಾರ್ಯಕ್ರಮವನ್ನು ಹೈಪ್ ಮಾಡುತ್ತಿದೆ. ಫ್ಲಿಪ್‌ಕಾರ್ಟ್‌ ಬಿಗ್​ ಬಿಲಿಯನ್​​ ಡೇಸ್​ ಸೇಲ್​ ಕೆಲವು ಸ್ಮಾರ್ಟ್​ಫೋನ್​ಗಳನ್ನು ಕಡಿಮೆ ಬೆಲೆಗೆ ಮತ್ತು ಆಕರ್ಷಕ ರಿಯಾಯಿತಿಗೆ ಮಾರಾಟ ಮಾಡಲು ಮುಂದಾಗಿದೆ.  ವಾರ್ಷಿಕ ಮಾರಾಟದಲ್ಲಿ ಫ್ಲಿಪ್‌ಕಾರ್ಟ್ Pixel 4a, Poco X3 Pro, Moto Edge 20 Fusion, Asus ROG Phone 3 ಮತ್ತು Infinix Hot 10s ಮೇಲೆ ಆಫರ್‌ಗಳನ್ನು ಬಹಿರಂಗಪಡಿಸಿದೆ.

  ಪ್ರತಿ ಬಾರಿಯಂತೆಯೇ ಫ್ಲಿಪ್​ಕಾರ್ಟ್​​ ಬಿಗ್ ಬಿಲಿಯನ್ ಡೇಸ್ ಮೂಲಕ ಆಕರ್ಷಕ ಆಫರ್​ ಹೊತ್ತು ತರಲಿದೆ. ಅದರ ಜೊತೆಗೆ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಿದೆ. ಪಾಲುದಾರ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವುದರ ಜೊತೆಗೆ ರಿಯಾಯಿತಿ ಸಿಗಲಿದೆ. ಕಾರ್ಡ್ ಬಳಸಿದರೆ ಕನಿಷ್ಠ 1,000 ರೂ.ಗಳ ರಿಯಾಯಿತಿ ನೀಡುವ ನಿರೀಕ್ಷೆಯಿದೆ. ಫ್ಲಿಪ್​ಕಾರ್ಟ್​​ ಮಾರಾಟದ ದಿನಾಂಕ ಇನ್ನೂ ಲಭ್ಯವಿಲ್ಲದಿದ್ದರೂ, ಸ್ಮಾರ್ಟ್​ಫೋನ್​ಗಳ ಮೇಲೆ ಕೆಲವು ಆಫರ್​ಗಳ ಕುರಿತ ಮಾಹಿತಿ ಹೊರಬಿದ್ದಿದೆ.

  Poco X3 Pro

  ಪೊಕೊ ಈ ವರ್ಷದ ಆರಂಭದಲ್ಲಿ X3 ಪ್ರೊ ಅನ್ನು 18,999 ರೂ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು, ಆದರೆ ಫ್ಲಿಪ್‌ಕಾರ್ಟ್ ಈ ಫೋನನ್ನು 16,999 ರೂಗೆ ಮಾರಾಟ ಮಾಡುವುದಾಗಿ ಬಹಿರಂಗಪಡಿಸಿದೆ. ಮೂಲ ಬೆಲೆಗಿಂತ 2,000 ರೂ ಕಡಿಮೆ ಮಾಡಿ ಮಾರಾಟ ಮಾಡಲಿದೆ ಎನ್ನಲಾಗುತ್ತಿದೆ.

  Moto Edge Fusion 20

  ಫ್ಲಿಪ್‌ಕಾರ್ಟ್‌ನ ಟೀಸರ್ ಪುಟದಲ್ಲಿ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಮೋಟೋ ಎಡ್ಜ್ ಫ್ಯೂಷನ್ 20ರ ಮಾರಾಟ ಬೆಲೆಯನ್ನು ಉಲ್ಲೇಖಿಸಿದೆ. ಅದರಲ್ಲಿ  19,999 ರೂವಿಗೆ ಲಭ್ಯವಿರುವುದನ್ನು ಬಹಿರಂಗಪಡಿಸಿದೆ. ಕಂಪನಿಯು ಮೊಟೊ ಎಡ್ಜ್ ಫ್ಯೂಷನ್ 20 ಅನ್ನು 21,499 ರೂಗೆ ಪರಿಚಯಿಸಿತ್ತು. ಆದರೆ ಫ್ಲಿಪ್​ಕಾರ್ಟ್​ ಇದೀಗ 1,500 ರೂ. ಬ್ಯಾಂಕ್​  ರಿಯಾಯಿತಿ ನೀಡುವ ಮೂಲಕ ಬಿಗ್ ಬಿಲಿಯನ್ ಡೇಸ್​ನಲ್ಲಿ ಮಾರಾಟ ಮಾಡಲಿದೆ.

  Read Also ⇒ Iphone 13 ಖರೀದಿದಾರರಿಗೆ Vodafone Idea ಕಡೆಯಿಂದ ಭರ್ಜರಿ ಕ್ಯಾಶ್​​ಬ್ಯಾಕ್ ಆಫರ್!

  Asus ROG Phone 3

  49,999 ರೂ.ವಿನ ಆಸೂಸ್​ ರೋಗ್​ ಫೋನ್​ 3 ಅನ್ನು ಫ್ಲಿಪ್​ಕಾರ್ಟ್​ 34,999 ರೂ.ಗೆ ಮಾರಾಟ ಮಾಡಲು ಮುಂದಾಗಿದೆ. ಜೊತೆಗೆ ಕೆಲವು ಬ್ಯಾಂಕ್​ಗಳ ಆಫರ್​ನೊಂದಿಗೆ ಮತ್ತಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ ಎನ್ನಲಾಗುತ್ತಿದೆ.

  Infinix Hot 10s

  ಫ್ಲಿಪ್ ಕಾರ್ಟ್ ಇನ್ಫಿನಿಕ್ಸ್ ಹಾಟ್ 10 ಅನ್ನು 9,499 ರೂ,ಗೆ ಮಾರಾಟ ಮಾಡಲಿದೆ ಎನ್ನಲಾಗುತ್ತಿದೆ. ಆದರೆ ಈ ಸ್ಮಾರ್ಟ್​ಫೋನ್​ ಮೂಲ ಬೆಲೆ 12,999 ರೂ. ಆಗಿದೆ.

  Pixel 4a

  ಪಿಕ್ಸೆಲ್ 4 ಎ ಪ್ರಸ್ತುತ ಬೆಲೆ 31,999 ರೂ ಆಗಿದೆ. ಈ ಹಿಂದೆ 29,999 ರೂ ಲಭ್ಯವಿತ್ತು, ಆದರೆ ಈ ಬಾರಿ ಅದಕ್ಕಿಂತ ಸ್ವಲ್ಪ ಕಡಿಮೆ ಬೆಲೆಗೆ ಸಗುವ ಲಕ್ಷಣ ಕಾಣುತ್ತಿದೆ. ಅಂದಾಜಿನ ಪ್ರಕಾರ 20,ಸಾವಿರ ರೂ.ನಿಂದ 29,999 ರೂ, ನಷ್ಟಿರಲಿದೆ ಎಂದು ಹೇಳಲಾಗುತ್ತಿದೆ.
  Published by:Harshith AS
  First published: