HOME » NEWS » Tech » FLIPKART APPLE DAYS SALE NEW IPHONE SE AT RS 34999 IPHONE 11 AT RS 49999 AND MORE HG

ಫ್ಲಿಪ್​​ಕಾರ್ಟ್​ Apple Days Sale; 35 ಸಾವಿರಕ್ಕೆ ಸಿಗುತ್ತಿದೆ ಐಫೋನ್ SE

Flipkart Apple Days Sale: ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ. ಹಾಗಾಗಿ ಫ್ಲಿಪ್​ಕಾರ್ಟ್​ ಕೂಡ ಕಡಿಮೆ ಬೆಲೆಗೆ ಐಫೋನ್​ಗಳನ್ನು ಮಾರಾಟ ಮಾಡುತ್ತಿದೆ. ಜೊತೆಗೆ ಆ್ಯಪಲ್​ ಡೇಸ್​ ಸೇಲ್​ ಅನ್ನು ಹಮ್ಮಿಕೊಂಡಿದೆ.

news18-kannada
Updated:February 13, 2021, 9:39 AM IST
ಫ್ಲಿಪ್​​ಕಾರ್ಟ್​ Apple Days Sale; 35 ಸಾವಿರಕ್ಕೆ ಸಿಗುತ್ತಿದೆ ಐಫೋನ್ SE
ಫ್ಲಿಪ್​ಕಾರ್ಟ್​
  • Share this:
ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ‘ಆ್ಯಪಲ್​ ಡೇಸ್​ ಸೇಲ್​’​ ಹಮ್ಮಿಕೊಂಡಿದೆ. ಫೆಬ್ರವರಿ 14ರವರೆಗೆ ಈ ಸೇಲ್​ ನಡೆಯಲಿದ್ದು, ಐಫೋನ್​ 11, ಐಫೋನ್​ 12, ಐಫೋನ್​ 12 ಮಿನಿ, ಐಫೋನ್​ ಎಸ್​ಇ ಮತ್ತು ಏರ್​ಪಾಡ್​​ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ. ಹಾಗಾಗಿ ಫ್ಲಿಪ್​ಕಾರ್ಟ್​ ಕೂಡ ಕಡಿಮೆ ಬೆಲೆಗೆ ಐಫೋನ್​ಗಳನ್ನು ಮಾರಾಟ ಮಾಡುತ್ತಿದೆ. ಜೊತೆಗೆ ಆ್ಯಪಲ್​ ಡೇಸ್​ ಸೇಲ್​ ಅನ್ನು ಹಮ್ಮಿಕೊಂಡಿದೆ. ಹಾಗಾಗಿ ಐಫೋನ್​ ಎಸ್​ಇ ಅನ್ನು 34,999 ರೂ.ಗೆ ಮಾರಾಟ ಮಾಡುತ್ತಿದೆ. ಹೆಚ್​ಡಿಎಫ್​ಸಿ ಬ್ಯಾಂಕ್​ ಕಾರ್ಡ್​ ಬಳಸಿ ಖರೀದಿಸುವವರಿಗೆ 4 ಸಾವಿರ ಅಡಿಷನಲ್​ ಡಿಸ್ಕೌಂಟ್​ ನೀಡುತ್ತಿದೆ.

ಅಷ್ಟು ಮಾತ್ರವಲ್ಲದೆ, ಬೇರೆ ಫೋನ್​ನೊಂದಿಗೆ ಎಕ್ಸ್​ಚೇಂಜ್​ ಮಾಡುವ ಮೂಲಕ ಐಫೋನ್​ ಖರೀದಿಸುವ ಆವಕಾಶವನ್ನು ಆ್ಯಪಲ್​ ಡೇಸ್​ನಲ್ಲಿ ಮಾಡಿಕೊಡಲಾಗಿದೆ.

ಇನ್ನು ಐಫೋನ್​ 12 ಮತ್ತು ಐಫೋನ್​ 12 ಮಿನಿ ಮೇಲೆ ಡಿಸ್ಕೌಂಟ್​ ನೀಡಲಾಗಿದೆ. 79,900 ರೂ ಬೆಲೆಯ ಫೋನನ್ನು 73,900 ರೂ.ಗೆ ಮಾರಾಟ ಮಾಡುತ್ತಿದೆ. ಹೆಚ್​ಡಿಎಫ್​ಸಿ ಕಾರ್ಡ್​ ಬಳಸಿ ಖರೀದಿಸುವವರಿಗೆ 6 ಸಾವಿರ ಇನ್​ಸ್ಟಂಟ್​​ ಡಿಸ್ಕೌಂಟ್​​ ನೀಡುತ್ತಿದೆ. ಇಎಮ್​ಐ ಆಯ್ಕೆಯಲ್ಲೂ ಖರೀದಿಸುವ ಅಯ್ಕೆಯನ್ನು ನೀಡಿದೆ.
Youtube Video

ಫ್ಲಿಪ್​ಕಾರ್ಟ್​ ಐಫೋನ್​ 12 ಮಿನಿ ಅನ್ನು 60,900 ರೂ.ಗೆ ಮಾರಾಟ ಮಾಡುತ್ತಿದೆ. ಹೆಚ್​ಡಿಎಫ್​ಸಿ ಕ್ರೆಡಿಟ್​​ ಕಾರ್ಡ್​ ಬಳಸಿ ಖರೀದಿಸಿದರೆ 6 ಸಾವಿರ ಡಿಸ್ಕೌಂಟ್​ ನೀಡುತ್ತಿದೆ. ಇನ್ನು ಹೆಚ್​ಡಿಎಫ್​ಸಿ ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡ್​ ಬಳಕೆದಾರರಿಗೆ 3 ಸಾವಿರ ಅಡಿಷನಲ್​ ಡಿಸ್ಕೌಂಟ್​ ನೀಡುತ್ತಿದೆ.

ಹೆಚ್​ಡಿಎಫ್​ಸಿ ಬ್ಯಾಂಕ್​ ಗ್ರಾಹಕರಿಗಾಗಿ ಎಕ್ಸ್​ಚೇಂಜ್​ ಆಫರ್​ ಅನ್ನು ನೀಡಿದೆ. ಹಳೆಯ ಫೋನ್​ ಅನ್ನು ಎಕ್ಸ್​ಚೇಂಜ್​ ಮಾಡಿ ಹೊಸ ಐಫೋನ್​ ಕೊಂಡುಕೊಳ್ಳಬಹುದಾಗಿದೆ.
Published by: Harshith AS
First published: February 13, 2021, 9:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories