HOME » NEWS » Tech » FLIPKART APPLE DAYS SALE BEST DEALS ON IPHONE 6 IPHONE 11 IPHONE XR IPHONE SE AND MORE HG

Flipkart Apple Days sale: ಕೇವಲ 899 ರೂ. ಗೆ Iphone 6 ಖರೀದಿಸುವ ಅವಕಾಶ!

ಫ್ಲಿಪ್​ಕಾರ್ಟ್​ ಮಾರ್ಚ್​ 1 ರಿಂದ ಮಾರ್ಚ್​ 4ರವರೆಗೆ Apple Days sale​ ಹಮ್ಮಿಕೊಂಡಿದೆ. ಇದರಲ್ಲಿ ಐಫೋನ್​, ಮ್ಯಾಕ್​ಬುಕ್​, ಐಪಾಡ್​​ಗಳ ಮೇಲೆ ರಿಯಾಯಿತಿ ನೀಡಿದೆ. ಜೊತೆಗೆ ಇಎಮ್​ಐ ಆಯ್ಕೆಯಲ್ಲೂ ಖರೀದಿಸುವ ಅವಕಾಶವನ್ನು ನೀಡಿದೆ.

news18-kannada
Updated:March 2, 2021, 11:20 AM IST
Flipkart Apple Days sale: ಕೇವಲ 899 ರೂ. ಗೆ Iphone 6 ಖರೀದಿಸುವ ಅವಕಾಶ!
Flipkart Apple Days sale
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ಭರ್ಜರಿ ಆಫರ್​ಗಳನ್ನು ಗ್ರಾಹಕರಿ ಪರಿಚಯಿಸುತ್ತಿರುತ್ತದೆ. ಪ್ರತಿ ತಿಂಗಳು ಏನಾದರೊಂದು ಡಿಸ್ಕೌಂಟ್​ ನೀಡುತ್ತಿರುತ್ತದೆ. ಅದರಂತೆ ಇದೀಗ ‘ಆ್ಯಪಲ್​ ಡೇಸ್​ ಸೇಲ್’​​ ಅನ್ನು ಹಮ್ಮಿಕೊಂಡಿದೆ. ಅದರ ಮೂಲಕ ಐಫೋನ್​ ಖರೀದಿಸಬೇಕೆಂದುಕೊಂಡಿದ್ದ ಗ್ರಾಹಕರಿಗೆ ಅವಕಾಶವನ್ನು ಒದಗಿಸಿದೆ.

ಫ್ಲಿಪ್​ಕಾರ್ಟ್​ ಮಾರ್ಚ್​ 1 ರಿಂದ ಮಾರ್ಚ್​ 4ರವರೆಗೆ Apple Days sale​ ಹಮ್ಮಿಕೊಂಡಿದೆ. ಇದರಲ್ಲಿ ಐಫೋನ್​, ಮ್ಯಾಕ್​ಬುಕ್​, ಐಪಾಡ್​​ಗಳ ಮೇಲೆ ರಿಯಾಯಿತಿ ನೀಡಿದೆ. ಜೊತೆಗೆ ಇಎಮ್​ಐ ಆಯ್ಕೆಯಲ್ಲೂ ಖರೀದಿಸುವ ಅವಕಾಶವನ್ನು ನೀಡಿದೆ.

Iphone 6

ಫ್ಲಿಪ್​ಕಾರ್ಟ್​ ಆ್ಯಪಲ್​ ಡೇ ಸೇಲ್ ಮೂಲಕ ಐಫೊನ್​ 6 ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಬ್ಯಾಂಕ್​ ಆಫ್​ ಬರೋಡಾ ಮೂಲಕ ಐಫೋನ್​ 6 ಗ್ರಾಹಕರಿಗೆ ಶೇ.10 ರಷ್ಟು ಡಿಸ್ಕೌಂಟ್ ನೀಡಿದೆ. ಅಷ್ಟು ಮಾತ್ರವಲ್ಲದೆ, ಕೇವಲ 899 ರೂ ಪಾವತಿಸುವ ಮೂಲಕ ಐಫೋನ್​ ಖರೀದಿಸಬಹುದಾಗಿದೆ. ಆದರೆ ಪ್ರತಿ ತಿಂಗಳು 899 ರೂ ಖಂತುಗಳ ಮೂಲಕ ಇಎಮ್​ಐ ಪಾವತಿಸಬೇಕಿದೆ.

ಐಫೋನ್​  SE

ಬಹುಜನರಿಗೆ ಐಫೋನ್​ ಖರೀದಿಸಬೇಕೆಂಬ ಆಸೆ ಇರುತ್ತದೆ. ಆದರೆ ದುಬಾರಿ ಬೆಲೆಯ ಆ್ಯಪಲ್​ ಪ್ರಾಡೆಕ್ಟ್​ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ ಆನ್​ಲೈನ್​ ಮಾರಾಟ ಮಳಿಗೆಗಳು ಐಫೊನ್​ಗಳ ಮೇಲೆ ಡಿಸ್ಕೌಂಟ್​ ಹೊರಡಿಸುವ ಮೂಲಕ ಕಡಿಮೆ ಹಣಕ್ಕೆ ಐಫೋನ್​ ಖರೀದಿಸುವ ಆಯ್ಕೆಯನ್ನು ನೀಡುತ್ತದೆ.

ಅದರಂತೆ ಫ್ಲಿಪ್​ಕಾರ್ಟ್​ ಆ್ಯಪಲ್​ ಡೇ ಸೇಲ್​ನಲ್ಲಿ ಐಫೋನ್​ ಎಸ್​ಇ ಮೇಲೆ 7,901 ರೂ ರಿಯಾಯಿತಿ ನೀಡಿದೆ. ಬ್ಯಾಂಕ್​ ಆಫ್​ ಬರೋಡಾದ ಕಾರ್ಡ್​ ಬಳಕೆದಾರರಿಗೆ ಶೇ. 10 ರಷ್ಟಿ ಡಿಸ್ಕೌಂಟ್​ ನೀಡಿದೆ.ಐಫೋನ್​ 11 ಪ್ರೊ ಮೇಲೂ ಆಕರ್ಷಕ ರಿಯಾಯಿತಿ ನೀಡಲಾಗಿದೆ. ಈ ಫೋನ್​ ಮೇಲೆ 16.500 ರೂ ಎಕ್ಸ್​ಚೇಂಜ್​ ಆಫರ್​ ನೀಡಿದ್ದು, 26 ಸಾವಿರ ರೂ ರಿಯಾಯಿತಿ ನೀಡಲಾಗಿದೆ.

ಫ್ಲಿಪ್​ಕಾರ್ಟ್​ ಐಫೋನ್​ 12 ಮಿನಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹೆಚ್​ಡಿಎಫ್​ಸಿ  ಕಾರ್ಡ್​ ಬಳಕೆದಾರರು6 ಸಾವಿರ ರಿಯಾಯಿತರಿ ಮೂಲಕ ಖರೀದಿಸಬಹುದಾಗಿದೆ. ಜೊತೆಗೆ 16,500 ಎಕ್ಸ್​ಚೇಂಜ್​ ಆಫರ್​ ನೀಡಲಾಗಿದೆ.
Youtube Video

Apple MacBook Air:

ಆ್ಯಪಲ್​​​ ಮ್ಯಾಕ್​ಬುಕ್​​ ಏರ್​ ಮೇಲೆ ಶೇ 9ರಷ್ಟು ಡಿಸ್ಕೌಂಟ್​ ನೀಡಿದೆ. 83,990 ಬೆಲೆ ಖರೀದಿಸಬಹುದಾಗಿದೆ. ಆ್ಯಪಲ್​​​ ಮ್ಯಾಕ್​ಬುಕ್​​ ಏರ್​ ಇಂಟೆಲ್​ ಕೋರ್​ ಐ3 10 ಜನರೇಶನ್​ ಪ್ರೊಸೆಸರ್​ ಹೊಂದಿದ್ದು, 8GB RAM ಆಯ್ಕೆಯಲ್ಲಿ ಸಿಗಲಿದೆ.
Published by: Harshith AS
First published: March 2, 2021, 11:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories