Iphone CEO: 5 ವರ್ಷ ವಯಸ್ಸಿನ ಬಾಲಕನ ಬಾಯಲ್ಲಿ ಕೋಡಿಂಗ್ ಕೇಳಿ ಇಂಪ್ರೆಸ್ ಆದ ಆ್ಯಪಲ್ ಸಿಇಒ ಟಿಮ್‌ ಕುಕ್!

ಐಫೋನ್​ ಸಿಇಒ

ಐಫೋನ್​ ಸಿಇಒ

ಭಾರತ ಪ್ರವಾಸದಲ್ಲಿರುವ ಟಿಮ್ ಕುಕ್ ಅವರು ಬುಧವಾರ ನವದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು  ಸಹ ಭೇಟಿಯಾದರು. ಆಪಲ್ ಸ್ಟೋರ್‌ಗಳ ಉದ್ಘಾಟನೆ ಸಮಾರಂಭದಲ್ಲಿ ಏನ್ ನಡಿತು ನೋಡಿ.

  • Share this:

ಈಗಾಗಲೇ ಆ್ಯಪಲ್​ ಸಿಇಒ (CEO) ಟಿಮ್ ಕುಕ್ ಭಾರತಕ್ಕೆ ಬಂದಿದ್ದು, ಮೊದಲ ಎರಡು ಆಪಲ್ ರಿಟೈಲ್ ಸ್ಟೋರ್‌ಗಳನ್ನು ಮುಂಬೈ ಮತ್ತು ದೆಹಲಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಮೊದಲ ಆಪಲ್ ಸ್ಟೋರ್ ಅನ್ನು ಏಪ್ರಿಲ್ 18 ರಂದು ಮುಂಬೈ ಬಿಕೆಸಿಯಲ್ಲಿ ತೆರೆದರೆ, ಎರಡನೇ ಸ್ಟೋರ್ ಅನ್ನು ಏಪ್ರಿಲ್ 20 ರಂದು ದೆಹಲಿಯ ಸಾಕೇತ್‌ನ ಸೆಲೆಕ್ಟ್ ಸಿಟಿ ವಾಕ್ ಮಾಲ್‌ನಲ್ಲಿ ಅನಾವರಣಗೊಳಿಸಲಾಯಿತು. ಭಾರತ ಪ್ರವಾಸದಲ್ಲಿರುವ ಟಿಮ್ ಕುಕ್ ಅವರು ಬುಧವಾರ ನವದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು  (PM Narendra Modi) ಸಹ ಭೇಟಿಯಾದರು. ಆಪಲ್ ಸ್ಟೋರ್‌ಗಳ ಉದ್ಘಾಟನೆ ಸಮಾರಂಭದಲ್ಲಿ ಏನ್ ನಡಿತು ನೋಡಿ.


ಮಂಗಳವಾರ (ಏಪ್ರಿಲ್ 18) ದಂದು ಮುಂಬೈಯಲ್ಲಿ ಆ್ಯಪಲ್ ಸ್ಟೋರ್ ಅನ್ನು ಅನಾವರಣಗೊಳಿಸುವಾಗ 1984 ರ ಮ್ಯಾಕಿಂತೋಷ್ ಎಸ್ಇ ಮಾದರಿಯೊಂದಿಗೆ ಮುಂಬೈ ನಿವಾಸಿಗಳು ಟಿಮ್ ಕುಕ್ ಅವರನ್ನು ಅಚ್ಚರಿಗೊಳಿಸಿದರೆ, ಗುರುವಾರ (ಏಪ್ರಿಲ್ 20) ರಂದು ದೆಹಲಿಯಲ್ಲಿ ಆ್ಯಪಲ್ ಸ್ಟೋರ್ ಅನಾವರಣಗೊಳಿಸುವ ಸಮಯಕ್ಕೆ ಸಿಇಒ ಟಿಮ್ ಕುಕ್ ಅವರಿಗೆ ಐದು ವರ್ಷದ ಬಾಲಕ (ಕೋಡರ್) ಭೇಟಿ ಆಗುವುದರ ಮೂಲಕ ಇನ್ನೊಂದು ಅಚ್ಚರಿಯನ್ನು ನೀಡಿದರು.


ನವದೆಹಲಿಯ ಪ್ರಮುಖ ಶಾಲೆಯೊಂದರಲ್ಲಿ 1ನೇ ತರಗತಿಯಲ್ಲಿ ಓದುತ್ತಿರುವ ಐದು ವರ್ಷದ ರಣವೀರ್ ಸಚ್ದೇವ್ ಆ್ಯಪಲ್ ಸ್ವಿಫ್ಟ್ ಪ್ರೋಗ್ರಾಮರ್ ಆಗಿದ್ದು, ಆ್ಯಪಲ್ ಸ್ಟೋರ್ ಉದ್ಘಾಟನೆಯಲ್ಲಿ ತನ್ನ ಪೋಷಕರೊಂದಿಗೆ ಬಂದ ಹುಡುಗ ಕುಕ್ ಅವರಿಗೆ ತನ್ನ ಕೋಡಿಂಗ್ ಕೌಶಲ್ಯವನ್ನು ತೋರಿಸಿದ್ದಾನೆ. ಆನಂತರ ಕುಕ್ ಅವರ ಜೊತೆಗೆ ಈ ತಂದೆ ಮಗ ಫೋಟೋವನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾರೆ.


ಪುಟ್ಟ ಬಾಲಕನ ಕೋಡಿಂಗ್ ಕೌಶಲ್ಯಕ್ಕೆ ಇಂಪ್ರೆಸ್ ಆದ್ರಂತೆ ಕುಕ್


ಈ ಚಿಕ್ಕ ವಯಸ್ಸಿನಲ್ಲಿ ಆ ಬಾಲಕನ ಉತ್ಸಾಹ ಮತ್ತು ಕೋಡಿಂಗ್ ಕೌಶಲ್ಯವನ್ನು ನೋಡಿದ ಟಿಮ್ ಕುಕ್, ಜೂನ್ ತಿಂಗಳ ಆರಂಭದಲ್ಲಿ ನಡೆಯಲಿರುವ ವರ್ಲ್ಡ್ ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (ಡಬ್ಲ್ಯುಡಬ್ಲ್ಯುಡಿಸಿ) ಗೆ ಹಾಜರಾಗಲು ಪುಟ್ಟ ಬಾಲಕ ರಣವೀರ್‌ಗೆ ಆಹ್ವಾನ ಸಹ ನೀಡಿದ್ದಾರಂತೆ.


ಇದನ್ನೂ ಓದಿ: ತರಗತಿಗೆ ಹಾಜರಾಗದೆಯೇ ಚಾಟ್‌ಜಿಪಿಟಿ ಬಳಸಿಕೊಂಡು ಪರೀಕ್ಷೆಗೆ ತಯಾರಾದ ವಿದ್ಯಾರ್ಥಿ!


"ರಣವೀರ್ ಗಣಿತ ಮತ್ತು ತರ್ಕಶಾಸ್ತ್ರದಲ್ಲಿ ತುಂಬಾನೇ ಬುದ್ದಿವಂತನಂತೆ. ಅವನು ಬಾಹ್ಯಾಕಾಶದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾನೆ ಮತ್ತು ಸುಸ್ಥಿರತೆ ಮತ್ತು ಸ್ಮಾರ್ಟ್ ಸಿಟಿಗಳ ವಿಷಯಗಳ ಬಗ್ಗೆ ಸಹ ಈಗ ಸಂಶೋಧನೆ ನಡೆಸುತ್ತಿದ್ದಾನಂತೆ. ಅವನು ತನ್ನ ತರಗತಿಯಲ್ಲಿ ಅತ್ಯಂತ ಕಿರಿಯ ಮಗು, ತರಗತಿಯಲ್ಲಿರುವ ಇತರರು ಹೆಚ್ಚಾಗಿ 6-7 ವರ್ಷ ವಯಸ್ಸಿನವರು" ಎಂದು ಹೆಮ್ಮೆಯ ತಂದೆ ಗುರ್ಜೋತ್ ಸಚ್ದೇವ್ ಹೇಳಿದರು.


ಆಪಲ್ ಬಗ್ಗೆ ತುಂಬಾನೇ ನಿಕಟವಾಗಿ ಗಮನಿಸುತ್ತಿದ್ದಾರಂತೆ ಈ ಪೋರನ ತಂದೆ


ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಗುರ್ಜೋತ್ ಸಚ್ದೇವ್ ತಾನು ಆ್ಯಪಲ್ ಅನ್ನು ನಿಕಟವಾಗಿ ಗಮನಿಸುತ್ತಿದ್ದೇನೆ ಮತ್ತು ಸ್ಟೀವ್ ಜಾಬ್ಸ್ ಬಗ್ಗೆ ಎರಡು ದಶಕಗಳಿಂದ ಓದುತ್ತಿದ್ದೇನೆ ಎಂದು ಹೇಳಿದನು. "ನಾನು ಪ್ರೋಗ್ರಾಂ ಮಾಡಿದ್ದೇನೆ ಮತ್ತು ನಾನು ರಣವೀರ್‌ಗೂ ಸಹ ಆ್ಯಪಲ್ ಸ್ವಿಫ್ಟ್ ಪ್ಲಾಟ್ಫಾರ್ಮ್ ನಲ್ಲಿ ನಿಯಮಿತವಾಗಿ ಮನೆಯಲ್ಲಿ ಕೋಡಿಂಗ್ ಅನ್ನು ಹೇಳಿ ಕೊಡಲು ಪ್ರಾರಂಭಿಸಿದೆ" ಎಂದು ಅವರು ಹೇಳಿದರು.


ಇದನ್ನೂ ಓದಿ: ಎಲಾನ್ ಮಸ್ಕ್ ಮುಂದೆ ನಟ ಅಮಿತಾಭ್ ಬಚ್ಚನ್ ಇಟ್ಟ ಬೇಡಿಕೆ ಏನು ಗೊತ್ತೇ?


ಗುರ್ಜೋತ್ ಸಚ್ದೇವ್ ಯುಕೆ ವಿಶ್ವವಿದ್ಯಾಲಯ ಮತ್ತು ಐಐಎಂ-ಅಹಮದಾಬಾದ್ ನಲ್ಲಿ ಅಧ್ಯಯನ ಮಾಡಿದರು ಮತ್ತು ಎಚ್‌ಪಿಇ ಮತ್ತು ಅಡೋಬ್ ನಂತಹ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿದರು. ಪ್ರಸ್ತುತ ಅವರು ಲಂಡನ್ ನಲ್ಲಿರುವ ಯುಎಸ್ ಮೂಲದ ಅತಿದೊಡ್ಡ ಎಜುಟೆಕ್ ಕಂಪನಿ ಕೋರ್ಸೆರಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ, ಇವರ ಕುಟುಂಬವು ಉತ್ತರ ಪ್ರದೇಶದ ನೋಯ್ಡಾದಲ್ಲಿ ವಾಸಿಸುತ್ತಿದೆ.
ತಮ್ಮ ಮಗನ ಟ್ಯಾಲೆಂಟ್ ಬಗ್ಗೆ ಏನ್ ಹೇಳ್ತಾರೆ ನೋಡಿ ತಂದೆ ಗುರ್ಜೋತ್

top videos


    ತಮ್ಮ ಮಗನ ಪ್ರತಿಭೆಯ ಬಗ್ಗೆ ಇನ್ನಷ್ಟು ಮಾತನಾಡಿದ ಅವರು, "ರಣವೀರ್ ಬಾಹ್ಯಾಕಾಶ ಯೋಜನೆಯನ್ನು ಅವರು ಕೇವಲ ಮೂರು ವರ್ಷದವರಿದ್ದಾಗ ನಾಸಾ ವೆಬ್ಸೈಟ್ ನಲ್ಲಿ ಪ್ರದರ್ಶಿಸಲಾಯಿತು. ಸೈನ್ಸ್ ಮ್ಯೂಸಿಯಂ ಲಂಡನ್ ಮತ್ತು ರೀಡಿಂಗ್ ಏಜೆನ್ಸಿ ಯುಕೆ ನಡೆಸುವ ವೈಜ್ಞಾನಿಕ ಪುಸ್ತಕಗಳ ಜಾಗತಿಕ ಓದುವ ಸವಾಲಿನಲ್ಲಿ ಅವನು ನಾಲ್ಕನೇ ವಯಸ್ಸಿನಲ್ಲಿ ಚಿನ್ನದ ಪದಕವನ್ನು ಗೆದ್ದನು ಮತ್ತು ಎರಡು ತಿಂಗಳ ಹಿಂದೆ ಅವರು ಷ್ನೇಯ್ಡರ್ ಎಲೆಕ್ಟ್ರಿಕ್ ಗಾಗಿ ಜಾಗತಿಕ ಸಮ್ಮೇಳನದಲ್ಲಿ ಸ್ಮಾರ್ಟ್ ಸಿಟಿಗಳ ಬಗ್ಗೆ ಮಾತನಾಡಿದನು” ಅಂತ ಹೇಳಿದರು.

    First published: