Upcoming Cars: ಇನ್ನೆರಡು ವರ್ಷಗಳಲ್ಲಿ ಭಾರತದ ರಸ್ತೆಗಿಳಿಯಲಿರುವ ಪ್ರಮುಖ ಕಾರುಗಳ ಪಟ್ಟಿ ಇಲ್ಲಿದೆ

ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಏಳು ಆಸನಗಳ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

kia ky

kia ky

  • Share this:

ಇತ್ತೀಚಿನ ದಿನಗಳಲ್ಲಿ ಒಂದೇ ಕಾರಿನಲ್ಲಿ ತುಂಬಾ ಜನರು ಕುಳಿತುಕೊಳ್ಳುವ ವ್ಯವಸ್ಥೆ ಇರುವಂತಹ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಏಳು ಆಸನಗಳ ಕಾರಿನ ಖರೀದಿಯಲ್ಲಿ ಏರಿಕೆ ಕಂಡಿರುವುದನ್ನು ಗಮನಿಸಬಹುದಾಗಿದೆ.ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಕ್ಸ್ಎಲ್ 6 ಕಾರನ್ನು ಇತ್ತೀಚೆಗೆ ಜನರು ಹೆಚ್ಚಾಗಿ ಖರೀದಿ ಮಾಡಿದ್ದು, ಇನ್ನೋವಾ ಕ್ರಿಸ್ಟಾ ಭಾರತದಲ್ಲಿ ಟೊಯೋಟಾದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಹೆಚ್ಚುತ್ತಿರುವ ಮಾರಾಟ ಗಮನದಲ್ಲಿಟ್ಟುಕೊಂಡು ವಾಹನ ತಯಾರಕ ಕಂಪೆನಿಗಳು ಎಂ ಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಹ್ಯುಂಡೈ ಅಲ್ಕಾಜರ್‌ನಂತಹ ಕಾರುಗಳನ್ನು ಇತ್ತೀಚಿನ ದಿನಗಳಲ್ಲಿ ಹೊರ ತಂದಿರುವುದನ್ನು ನಾವು ನೋಡಿದ್ದೇವೆ.


ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಏಳು ಆಸನಗಳ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.


ಮಹೀಂದ್ರ ಎಕ್ಸ್‌ಯುವಿ 700


ಸುದೀರ್ಘ ಸಮಯದವರೆಗೆ ಮಹೀಂದ್ರ ಎಕ್ಸ್‌ಯುವಿ 700 ಅನ್ನು ನಾನಾ ರೀತಿಯ ತಾಂತ್ರಿಕ ಪರೀಕ್ಷೆಗಳಿಗೆ ಒಳಪಡಿಸಿ ಹೊರತರುತ್ತಿದ್ದಾರೆ. ಮಹೀಂದ್ರ ಎಕ್ಸ್‌ಯುವಿ 700 ಕೆಲವು ವಿಶಿಷ್ಟ ಲಕ್ಷಣಗಳೊಂದಿಗೆ ಬರುತ್ತಿದ್ದು, 6 ಮತ್ತು 7 ಆಸನಗಳ ವಿನ್ಯಾಸ ಮತ್ತು ಅದರೊಂದಿಗೆ ಮಹೀಂದ್ರ ಅತಿದೊಡ್ಡ ಸನ್‌ರೂಫ್ ಅನ್ನೂ ನೀಡುತ್ತಿದೆ.


ಎಂಜಿನ್‌ಗಳ ಕುರಿತು ಹೇಳುವುದಾದರೆ, ಎಕ್ಸ್‌ಯುವಿ 700 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿರುತ್ತದೆ. ಮಹೀಂದ್ರ ಎಕ್ಸ್‌ಯುವಿ 700 ಅನ್ನು ಆಗಸ್ಟ್ 15 ರಂದು ಅನಾವರಣಗೊಳಿಸುವ ನಿರೀಕ್ಷೆಯಿದೆ.


ಮಹೀಂದ್ರಾ ಸ್ಕಾರ್ಪಿಯೋ


ಮಹೀಂದ್ರಾ ಕಂಪೆನಿಯಿಂದ ಮತ್ತೊಂದು ಜನಪ್ರಿಯ ಕೊಡುಗೆಯೆಂದರೆ ಅದು ಸ್ಕಾರ್ಪಿಯೋ ಅಂತ ಹೇಳಬಹುದಾಗಿದೆ. ಅದರ ಎರಡನೇ ತಲೆಮಾರಿನಲ್ಲಿ, ಹೊಸ ಸ್ಕಾರ್ಪಿಯೋವನ್ನು ಥಾರ್ ಮತ್ತು ಎಕ್ಸ್‌ಯುವಿ 700 ನಂತೆಯೇ, 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದನ್ನು ಸಹ ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಮಹೀಂದ್ರಾ ಕಂಪೆನಿಯು 2022 ರ ಆರಂಭದಲ್ಲಿ ಹೊಸ ಸ್ಕಾರ್ಪಿಯೋವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.


ಜೀಪ್ ಮೆರಿಡಿಯನ್


ಈ ಜೀಪ್ ಏಳು ಆಸನಗಳನ್ನು ಹೊಂದಿರುವ ಬಗ್ಗೆ ಭಾರತೀಯ ಮಾರುಕಟ್ಟೆಯಲ್ಲಿ ಇದು ಹೇಗೆ ಯಶಸ್ಸು ಕಾಣಬಹುದು ಎಂಬುದರ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ವದಂತಿಗಳ ಪ್ರಕಾರ, ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೆರಿಡಿಯನ್ ಎಂದು ನಾಮಕರಣ ಮಾಡಲಾಗುವುದು ಮತ್ತು ಇದು 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರುತ್ತದೆ. ಮೆರಿಡಿಯನ್ ಅನ್ನು 6 ಮತ್ತು 7 ಆಸನಗಳ ವ್ಯವಸ್ಥೆಯೊಂದಿಗೆ ಹೊರ ತರಲಾಗುತ್ತದೆ.


ಮಾರುತಿ ಸುಜುಕಿ ಎರ್ಟಿಗಾ/ಎಕ್ಸ್ಎಲ್ 6 ಡೀಸೆಲ್


ಮಾರುತಿ ಸುಜುಕಿ ಎರ್ಟಿಗಾವನ್ನು ಬಿಎಸ್ 6 ಹೊಗೆಯನ್ನು ಹೊರಸೂಸುವಿಕೆಯ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಗೊಳಿಸಿದ್ದಾರೆ. 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಇದು ಹೊಂದಿದೆ. ಮಾರುತಿ ಸುಜುಕಿ ಡೀಸೆಲ್ ಚಾಲಿತ ಎರ್ಟಿಗಾ ಮತ್ತು ಎಕ್ಸ್ಎಲ್ 6 ಅನ್ನು 2022ರ ಆರಂಭದಲ್ಲಿ ಬಿಡುಗಡೆ ಮಾಡಬಹುದು.




ಕಿಯಾ ಕೆವೈ


ಕಿಯಾ ಸೆಲ್ಟೋಸ್ ಮತ್ತು ಸೊನೆಟ್‌ನ ಯಶಸ್ಸಿನ ನಂತರ, ಕೊರಿಯಾದ ಕಾರು ತಯಾರಕರು ಎಂಪಿವಿ ಮಾದರಿಯನ್ನು ಕೆವೈ ಎಂಬ ಹೆಸರಿರುವ ಕಾರುಗಳನ್ನು ಪ್ರಾರಂಭಿಸಲಿದ್ದಾರೆ. ಕಿಯಾ ಕೆವೈ ಕಾರು ಕಿಯಾ ಸೋನೆಟ್ ಹಾಗೆಯೇ ಇರಲಿದ್ದು, 1.5 ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳನ್ನು ಹೊಂದುವ ನಿರೀಕ್ಷೆಯಿದೆ. ಕಿಯಾ ಕೆವೈ 6 ಮತ್ತು 7 ಆಸನಗಳ ವ್ಯವಸ್ಥೆಯನ್ನು ನೀಡಬಹುದು. ಈ ಕಾರು 2022ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.


First published: