ಸ್ಪೆಕ್ ಶೀಟ್ ಕಡೆಗೆ ಒಮ್ಮೆ ನೋಡಿದರೆ F23 5G ಗಾಗಿ OPPO ದ ಟ್ಯಾಗ್‌ಲೈನ್ - “ನಿಮ್ಮ ಸೂಪರ್‌ಪವರ್ ಪ್ರದರ್ಶಿಸಿ” – ಎಂಬುದನ್ನು ಉತ್ತಮ ಕಾರಣದೊಂದಿಗೆ ಆರಿಸಲಾಗಿದೆ. 30k ಒಳಗಿನ ಬೆಲೆಯಲ್ಲಿ ನೀವು ಖರೀದಿಸಬಹುದಾದ ಅತ್ಯಂತ ಶಕ್ತಿಶಾಲಿ ಫೋನ್‌ಗಳಲ್ಲಿ ಇದು ಒಂದಾಗಿದೆ ಮತ್ತು ಅದರ ಆಕರ್ಷಕ OPPO Glow ಫಿನಿಶ್‌ನಿಂದಾಗಿ OPPO F23 5G ನೀವು ಸಹ ಪ್ರದರ್ಶಿಸಬೇಕು ಎಂದು ಬಯಸುವ ಫೋನ್ ಆಗಿದೆ!
INR 24,999 ದರ ಇರುವ ಈ ಡಿವೈಸ್ Amazon, OPPO Store ಮತ್ತು ಪ್ರಮುಖ ರಿಟೇಲರ್‌ಗಳಾದ್ಯಂತ ಖರೀದಿಗೆ ಲಭ್ಯವಿದೆ. ಹಾಗಾಗಿ, ಒಂದು ವೇಳೆ ನೀವು 25K ಒಳಗಿನ ಪವರ್‌ಹೌಸ್ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ ಖಂಡಿತವಾಗಿಯೂ ನೀವು OPPO F23 5G ಅನ್ನು ಗಣನೆಗೆ ತೆಗೆದುಕೊಳ್ಳಲೇಬೇಕು.
2023 ರಲ್ಲಿ ಈ ಸೂಪರ್‌ಪವರ್ ಹೊಂದಿರುವ ಫೋನ್ ನಿಮ್ಮ ಬಳಿಯಲ್ಲಿರಲಿ ಎಂದು ನೀವೇಕೆ ಬಯಸಬಹುದು ಎಂಬುದಕ್ಕೆ ಟಾಪ್ 5 ಕಾರಣಗಳು ಇಲ್ಲಿವೆ!
ಸೂಪರ್‌ಚಾರ್ಜ್ಡ್ ಬ್ಯಾಟರಿ ಬಾಳಿಕೆ
ಈ ಫೋನ್‌ನ ಅತ್ಯಂತ ಆಸಕ್ತಿದಾಯಕ ಫೀಚರ್‌ಗಳಲ್ಲಿ ಒಂದು ಎಂದರೆ ಅದು ಅದರ ಬ್ಯಾಟರಿ ಮತ್ತು ಚಾರ್ಜಿಂಗ್ ಸೆಟಪ್. ನೀವು ಬೃಹತ್ 5,000 mAh ಬ್ಯಾಟರಿಯನ್ನಷ್ಟೇ ಪಡೆಯುವುದಿಲ್ಲ, 50% ಚಾರ್ಜ್ ಆಗಲು ಬರೀ 18 ನಿಮಿಷಗಳು ಮತ್ತು 5000mAh ಬ್ಯಾಟರಿಯು 100% ಚಾರ್ಜ್ ಆಗಲು ಅತ್ಯಲ್ಪ 44 ನಿಮಿಷಗಳನ್ನು ತೆಗೆದುಕೊಳ್ಳುವ ಸೂಪರ್-ಫಾಸ್ಟ್ 67W SuperVOOC™ ಚಾರ್ಜಿಂಗ್ ಅನ್ನು ಸಹ ಇದು ಬೆಂಬಲಿಸುತ್ತದೆ.
ಈ ಅಂಕಿಅಂಶಗಳೇ ನಿಮಗೆ ಅಚ್ಚರಿ ಹುಟ್ಟಿಸುತ್ತವೆ. ಮೊದಲಿಗೆ, ಒಂದು ಬಾರಿಯ ಚಾರ್ಜ್‌ನಿಂದ ನೀವು ವಾಸ್ತವದಲ್ಲಿ ಅಕ್ಷರಃ ಇಡೀ ದಿನದ ಬ್ಯಾಟರಿ ಬಾಳಿಕೆಯನ್ನು ಪಡೆಯುವಿರಿ. 39 ಗಂಟೆಗಳ ಫೋನ್ ಕರೆಗಳು ಅಥವಾ 16+ ಗಂಟೆಗಳ YouTube ಸ್ಟ್ರೀಮಿಂಗ್ ಮತ್ತು 8.4 ಗಂಟೆಗಳ ಗೇಮಿಂಗ್‌ನ ಭರವಸೆಯನ್ನು ನೀಡುತ್ತದೆ. ಇದು ಎಷ್ಟು ಅದ್ಭುತವಾಗಿದೆ ಎಂದರೆ, ಚಾರ್ಜಿಂಗ್ ವೇಗವೇ ಇನ್ನಷ್ಟು ಗಮನ ಸೆಳೆಯುವಂತಿದೆ. 5–ನಿಮಿಷದ ಚಾರ್ಜ್‌ನಿಂದ 6 ಗಂಟೆಗಳಷ್ಟು ಕರೆಗಳು ಮತ್ತು 30 ನಿಮಿಷದ ಚಾರ್ಜ್ ನಿಮಗೆ ಇಡೀ ದಿನ ಬಳಸುವಷ್ಟು ಆಗುತ್ತದೆ ಏಕೆಂದರೆ ಅದು ಅಷ್ಟು ಕಡಿಮೆ ಅವಧಿಯ ಚಾರ್ಜ್‌ಗೂ ನಿಮಗೆ 26 ಗಂಟೆಗಳ ಕರೆಗಳು ಅಥವಾ 10+ ಗಂಟೆಗಳ ವೀಡಿಯೊ ನೋಡಲು ಸಾಕಾಗುತ್ತದೆ.
ಮತ್ತು ಇದಿಷ್ಟೇ ಅಲ್ಲ! ಹೈ-ಸ್ಪೀಡ್ ಚಾರ್ಜಿಂಗ್ ಸಾಮಾನ್ಯವಾಗಿ ಸಮಯ ಕಳೆದಂತೆ ಬ್ಯಾಟರಿಯನ್ನು ಹಾನಿ ಮಾಡಿ, ಬ್ಯಾಟರಿ ಅವಧಿಯನ್ನು ಕಡಿಮೆ ಮಾಡುತ್ತದೆ. ಆದರೆ OPPO ದ ಒಡೆತನ ಹೊಂದಿರುವ ಬ್ಯಾಟರಿ ಹೆಲ್ತ್ ಎಂಜಿನ್ (Battery Health Engine), ಚಾರ್ಜಿಂಗ್ ಪ್ರಕ್ರಿಯೆಯ ಅವಧಿಯಲ್ಲಿ ಬ್ಯಾಟರಿಯನ್ನು ರಕ್ಷಿಸುವ ಮೂಲಕ ಬ್ಯಾಟರಿ ಬಾಳಿಕೆಯನ್ನು 1600 ಸೈಕಲ್‌ಗಳಷ್ಟು ವಿಸ್ತರಿಸುತ್ತದೆ. ನಿಮ್ಮ ಫೋನ್ ಅನ್ನು ನೀವು ದಿನಕ್ಕೆ ಒಂದು ಬಾರಿ ಚಾರ್ಜ್ ಮಾಡುತ್ತೀರಿ ಎಂದು ಊಹಿಸಿಕೊಳ್ಳಿ, ಅಂದರೆ ಬ್ಯಾಟರಿ ಬಳಕೆಯ ಮೇಲೆ ಯಾವುದಾದರೂ ಗಣನೀಯ ಪರಿಣಾಮ ಆಗುವುದಕ್ಕೂ ಮೊದಲು 4 ವರ್ಷಗಳಷ್ಟು ಬಾಳಿಕೆ ಬರುತ್ತದೆ. ಇದು OPPO F23 5G ಅನ್ನು ಅತ್ಯಂತ ಹೆಚ್ಚು ಬಾಳಿಕೆ ಬರುವ ಡಿವೈಸ್ ಆಗಿಸಿದೆ.
OPPO ದ ಬ್ಯಾಟರಿ ಹೆಲ್ತ್ ಎಂಜಿನ್ 2023 SEAL ಉದ್ಯಮ ಸುಸ್ಥಿರತೆ ಪ್ರಶಸ್ತಿಯನ್ನೂ (2023 SEAL Business Sustainability Award) ಗಳಿಸಿದೆ! ಅವರೇ ಅಭಿವೃದ್ಧಿಪಡಿಸಿದ BHE ತಂತ್ರಜ್ಞಾನಕ್ಕೆ ದೊರೆತ ಈ ಪ್ರಸ್ತಿಯು, ತಂತ್ರಜ್ಞಾನ ಆವಿಷ್ಕಾರದ ಮೂಲಕ ಸುಸ್ಥಿರತೆಯನ್ನು ಹೆಚ್ಚಿಸುವ OPPO ದ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಮನ್ನಣೆ ವೃದ್ಧಿಸುತ್ತಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಆಲ್ ಡೇ AI ಪವರ್ ಸೇವಿಂಗ್ ಮೋಡ್ (All Day AI Power Saving Mode) ನಂತಹ ಇತರ ಫೀಚರ್‌ಗಳು ಬ್ಯಾಟರಿ ಬಾಳಿಕೆಯನ್ನು ಸುಧಾರಿಸುವ ಸೂಪರ್ ಪವರ್ ಸೇವಿಂಗ್ ಮೋಡ್‌ನಲ್ಲಿ ಬಳಸಲು ನೀವು 6 ಆ್ಯಪ್ಗಳವರೆಗೂ ಆಯ್ಕೆ ಮಾಡಬಹುದು. ಸೂಪರ್ ನೈಟ್-ಟೈಂ ಸ್ಟ್ಯಾಂಡ್‌ಬೈ (Super Night-time Standby) ಮೂಲಕ ಈ ಡಿವೈಸ್ ನಿಮ್ಮ ಬಳಕೆ ಮತ್ತು ನಿದ್ರೆಯ ಅಭ್ಯಾಸಗಳನ್ನು ತಿಳಿದುಕೊಳ್ಳುತ್ತದೆ ಹಾಗೂ ಅದಕ್ಕೆ ತಕ್ಕಂತೆ ಶಕ್ತಿಯ ಬಳಕೆಯನ್ನು ಹೊಂದಿಸುತ್ತದೆ. ಈ ತಂತ್ರಜ್ಞಾನದಿಂದಾಗಿ ನೀವು ಇಡೀ ರಾತ್ರಿ 2% ಗಿಂತ ಕಡಿಮೆ ಚಾರ್ಜ್ ಅನ್ನು ಮಾತ್ರ ಕಳೆದುಕೊಳ್ಳುವಿರಿ, ಅದಕ್ಕಿಂತ ಹೆಚ್ಚಲ್ಲ.
ಆಕರ್ಷಕ ಬ್ಯಾಟರಿ ಬಾಳಿಕೆ ಮತ್ತು ನೋಮೊಫೋಬಿಯಾ ಅಥವಾ ಡಿವೈಸ್ ಉಂಟು ಮಾಡುವ ಲೋ ಬ್ಯಾಟರಿ ಆತಂಕದಿಂದ ಮುಕ್ತರಾಗುವುದನ್ನು ಪರಿಗಣಿಸಿದರೆ, ನಿಮ್ಮ ಜೀವನವನ್ನು ಇನ್ನಷ್ಟು ಅನುಕೂಲರ ಮತ್ತು ತಡೆ-ರಹಿತ ಆಗಿಸಲು ಬಯಸಿದ್ದರೆ ಇದು ಅತ್ಯುತ್ತಮ ಆಯ್ಕೆ ಆಗುತ್ತದೆ.
ಪ್ರದರ್ಶಿಸಲು ಅರ್ಹವಾದ ಡಿಸೈನ್
ಈಗ ನನ್ನ ಮೆಚ್ಚಿನ ಭಾಗವಾಗಿರುವ ಡಿಸೈನ್‌ಗೆ ಬರೋಣ. OPPO F23 5G ತನ್ನ ವರ್ಗದಲ್ಲಿ ಅತ್ಯಾಕರ್ಷಕ ಫೋನ್‌ಗಳಲ್ಲಿ ಒಂದಾಗಿದೆ. ಡಿಸೈನ್ ಸರಳವಾಗಿದೆ, ಆದರೂ ಲುಕ್ ಅನ್ನು ಹೆಚ್ಚಿಸಲು ಮತ್ತು ಫೋನ್ ಅನ್ನು ಫೀಲ್ ಮಾಡಿಕೊಳ್ಳಲು ಹಲವಾರು ವಿಶಿಷ್ಟ ಅಂಶಗಳನ್ನು ಒಳಗೊಂಡು ಅದ್ಭುತವಾಗಿದೆ.
ಹಿಂಭಾಗದ 3D ಬಾಗಿದ ಗಾಜು ಮತ್ತು ಉತ್ತಮವಾಗಿ ನಯಗೊಳಿಸಲಾದ ಅಂಚುಗಳು ಅದನ್ನು ಅದ್ಭುತವಾಗಿ ಭಾವಿಸುವಂತೆ ಮಾಡಿವೆ ಮತ್ತು ನಿಮ್ಮ ಅಂಗೈಗೆ ಕಿರಿಕಿರಿ ಮಾಡಲಾರವು. ಈ ಫೋನ್ ಬೋಲ್ಡ್ ಗೋಲ್ಡ್ ಮತ್ತು ಕೂಲ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ, ಅದರೊಂದಿಗೆ ಮನಸೆಳೆಯುವ ಮತ್ತೊಂದು ಫೀಚರ್ ಎಂದರೆ ಹಿಂಭಾಗದ OPPO Glow ಫಿನಿಶ್ ಆಗಿದೆ. ಕ್ಯಾಮೆರಾದ ಸುತ್ತ ಇರುವ ಡೆಕೋರೇಟಿವ್ ರಿಂಗ್, ವಿಶೇಷವಾಗಿ ಗ್ಲಾಸಿ ಬ್ಲಾಕ್ ಪಿನಿಶ್ ಮತ್ತು ಕ್ಯಾಮೆರಾ ವ್ಯವಸ್ಥೆಯ ಸುತ್ತಲಿನ ಟೆಕ್ಸ್ಚರ್ ಮೂಲಕ ಡಿವೈಸ್‌ಗೆ ಪ್ರೀಮಿಯಮ್ ಲುಕ್ ನೀಡಲು ಸಹಕಾರಿಯಾಗಿವೆ.
OPPO Glow ಎಂಬುದು ಹೊಳೆಯುವ, ಮೈಕ್ರೊಸ್ಕೋಪಿಕ್ ಹಂತದಲ್ಲಿ ಲಕ್ಷಾಂತರ ನ್ಯಾನೊ-ಹಂತದ ವಜ್ರಗಳನ್ನು ಬಳಸಿ ಮುದ್ರಿಸಲಾದ ಅತ್ಯುನ್ನತ ಫಿನಿಶ್ ಆಗಿದ್ದು, ಅದು ಬೆಳಕನ್ನು ಅತ್ಯದ್ಭುತ ವಿನ್ಯಾಸಗಳಲ್ಲಿ ಪ್ರತಿಫಲಿಸುತ್ತದೆ. ಇದಕ್ಕೆ ಹೆಚ್ಚುವರಿ ಫೀಚರ್ ಆಗಿ ಹಿಂಭಾಗವು ಫಿಂಗರ್‌ಪ್ರಿಂಟ್ ನಿರೋಧಕ ಕೂಡ ಆಗಿದೆ.
ಇದು ಬರೀ ಲುಕ್ ಬಗ್ಗೆ ಮಾತ್ರವಲ್ಲ. IP54 ಧೂಳು ಮತ್ತು ನೀರು ನಿರೋಧಕ ರೇಟಿಂಗ್‌ನಿಂದಾಗಿ ಈ ಫೋನ್ ದೀರ್ಘ ಬಾಳಿಕೆ ಬರುತ್ತದೆ ಮತ್ತು 1 ಎಂ ಡ್ರಾಪ್‌ಗಳು, ಸಾವಿರಾರು ಮೈಕ್ರೊ ಡ್ರಾಪ್‌ಗಳು ಮತ್ತು ಬಿಸಿ ಮತ್ತು ತೇವವಾದ ವಾತಾವರಣದಲ್ಲಿ 168 ಗಂಟೆಗಳ ಸ್ಟ್ರೆಸ್-ಟೆಸ್ಟಿಂಗ್ ನಡೆಸಿರುವುದರಿಂದ ಈ ಫೋನ್ ಸಮಗ್ರ ಬಾಳಿಕೆ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿದೆ.
ಈ ಎಲ್ಲಾ ಅತ್ಯುತ್ತಮ ಅಂಶಗಳು 8.2 ಮಿ.ಮೀ ತೆಳುವಾದ ಮತ್ತು 192 ಗ್ರಾಂ ತೂಕದ ಚಸಿಸ್‌ನಲ್ಲಿ ಒಳಗೊಂಡಿವೆ ಎಂಬುದು ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವಾಗಿದೆ.
ಸೂಪರ್‌ಚಾರ್ಜ್ಡ್ ಮಲ್ಟಿಮೀಡಿಯಾ ಅನುಭವ
ನೀವು ಗೇಮಿಂಗ್ ಆಡುವವರು, ಮ್ಯೂಸಿಕ್ ಸ್ಟ್ರೀಮ್ ಮಾಡುವವರು ಅಥವಾ ನಿಮ್ಮ ಮೆಚ್ಚಿನ ಶೋ ವೀಕ್ಷಿಸುವವರಾಗಿರಿ, ಈ ಎಲ್ಲದಕ್ಕೂ ಅತ್ಯುತ್ತಮವಾಗಿ ಬೆಂಬಲಿಸಲು F23 5G ಸಿದ್ಧವಾಗಿದೆ. ಆರಂಭದಲ್ಲಿ ಹೇಳುವುದಾದರೆ, ನೀವು ಬೃಹತ್, 6.72-ಇಂಚಿನ 120 Hz ಡಿಸ್‌ಪ್ಲೇ ಅನ್ನು ಪಡೆಯುವಿರಿ. ಇದರ ಬಣ್ಣ-ನಿಖರತೆ, ನಯವಾದ ಕಾರ್ಯನಿರ್ವಹಣೆ ಮತ್ತು 680 ನಿಟ್‌ಗಳ ಸುಸ್ಥಿರ ಹೊಳಪು ಇದನ್ನು ಇನ್ನಷ್ಟು ಸದೃಢವಾಗಿಸಿವೆ. 91.4% ಸ್ಕ್ರೀನ್-ಟು-ಬಾಡಿ ಅನುಪಾತದಿಂದಾಗಿ ಇದು ಬಹುತೇಕ ಬೇಜೆಲ್-ರಹಿತವಾಗಿದೆ. ಸ್ಕ್ರೀನ್‌ಗೆ ನೈಜವಾದ ಜೀವಂತಿಕೆ ತುಂಬಿರುವ ಈ ಅಂಶಗಳಿಂದಾಗಿ ಗೇಮಿಂಗ್ ಮತ್ತು ವೀಡಿಯೊ ವೀಕ್ಷಣೆಯಲ್ಲಿ ಇದು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಫೋನ್ ಅನ್ನು ನಾವು ಹೆಚ್ಚಾಗಿ ಬಳಸುವುದರಿಂದ ಈ ಡಿವೈಸ್ ಅಪಾರ ಬುದ್ಧಿವಂತಿಕೆಯ ಆಲ್-ಡೇ ಐ ಕಂಫರ್ಟ್ (All-Day AI Eye Comfort) ಅನ್ನು ಒಳಗೊಂಡಿದೆ. ಹಾಗಾಗಿ AI ಬೆಳಕಿನ ಅಭ್ಯಾಸಗಳನ್ನು ತಿಳಿದುಕೊಂಡು ನಿಮ್ಮ ಸ್ಕ್ರೀನ್ ಅನ್ನು ನೀವು ಹೆಚ್ಚು ಬಳಸಿದಷ್ಟು ಅದು ಹೆಚ್ಚು “ಐ-ಕಂಫರ್ಟ್” ಎಂದು ಭಾವಿಸುವಂತೆ ಮಾಡುತ್ತದೆ.
ಆಡಿಯೊಗಾಗಿ, ನೀವು ಆಲಿಸುವುದರಲ್ಲಿ ಸಂತಸಪಡುವಿರಿ (ಅಕ್ಷರಃ), ಏಕೆಂದರೆ F23 5G ಯ ಸ್ಪೀಕರ್‌ಗಳನ್ನು ನಾಯ್ಸ್ ರಿಡಕ್ಷನ್ ಮತ್ತು ಇಕೊ ಸಪ್ರೆಶನ್‌ಗಾಗಿ - ವಿಶ್ವದ ಮುಂಚೂಣಿ ಆಡಿಯೊ ಎಕ್ಸ್‌ಪರ್ಟ್‌ಗಳಲ್ಲಿ ಒಬ್ಬರಾದ Dirac ನಿಂದ ಪರೀಕ್ಷಿಸಲಾಗಿದೆ. ಮ್ಯೂಸಿಕ್, ಗೇಮ್‌ಗಳು ಮತ್ತು ಚಲನಚಿತ್ರಗಳು ಉತ್ತಮ ಧ್ವನಿಯನ್ನು ಹೊಮ್ಮಿಸುತ್ತವೆ.
ನೀವು ಸದ್ದುಗದ್ದಲ ಇರುವ ಸ್ಥಳದಲ್ಲಿದ್ದರೂ ಸರಿಹೊಂದುವ ವ್ಯವಸ್ಥೆಯನ್ನು OPPO F23 5G ಹೊಂದಿದೆ. ಈ ಫೋನ್ ಸ್ಪೀಕರ್‌ಗಳಿಗಾಗಿ ವಾಲ್ಯೂಮ್ ಅನ್ನು 200% ರಷ್ಟು ಹೆಚ್ಚಿಸಬಹುದಾಗಿದೆ ಮತ್ತು ನಿಮಗೆ ಕರೆ ಇದ್ದು ಆ ಕಡೆಯಿಂದ ಮಾತನಾಡುತ್ತಿರುವ ವ್ಯಕ್ತಿಯ ಧ್ವನಿಯನ್ನು ಕೇಳಿಸಿಕೊಳ್ಳಲು ಕಷ್ಟಪಡುತ್ತಿದ್ದರೆ ಇದು ಇಯರ್‌ಪೀಸ್‌ನ ವಾಲ್ಯೂಮ್ ಅನ್ನು 3 dB ಹೆಚ್ಚಿಸಬಹುದು.
ಸೂಪರ್‌ಪವರ್ ಹೊಂದಿರುವ ಕ್ಯಾಮೆರಾಗಳು
ಕ್ಯಾಮೆರಾಗಳೂ ಸಹ ಅತ್ಯದ್ಭುತವಾಗಿವೆ. OPPO F23 5G ಯ ಪ್ರೈಮರಿ ಸೆನ್ಸರ್ ಹೈ-ರೆಸಲ್ಯೂಶನ್ 64MP ಸೆನ್ಸರ್ ಆಗಿದ್ದು, ಅದು ಯಾವುದೇ ಪ್ರಕಾರದ ಬೆಳಕಿನಲ್ಲಿಯೂ ಅತ್ಯುನ್ನತ ವಿವರವನ್ನು ಕ್ಯಾಪ್ಚರ್ ಮಾಡುತ್ತದೆ.
ಇಷ್ಟೇ ಅಲ್ಲದೆ ಪೋರ್ಟ್ರೇಟ್ ಶಾಟ್‌ಗಳಿಗಾಗಿ ವಸ್ತುಗಳನ್ನು ಪ್ರತ್ಯೇಕಿಸಲು ಸಹಾಯ ಮಾಡುವುದಕ್ಕಾಗಿ 2MP ಡೆಪ್ತ್ ಸೆನ್ಸರ್ ಇದೆ ಹಾಗೂ ನಂಬಲಸಾಧ್ಯವಾದ 20x/40x ಝೂಮ್ ಮತ್ತು ಮ್ಯಾಕ್ರೊಗಾಗಿ 2MP ಮೈಕ್ರೊಲೆನ್ಸ್ ಅನ್ನು ಹೊಂದಿದೆ!
ಬೃಹತ್ 32 MP ಸೆಲ್ಫಿ ಕ್ಯಾಮೆರಾದಿಂದಾಗಿ ಸೆಲ್ಫಿಗಳು ಸಹ ಮನಮೋಹಕವಾಗಿ ಕಾಣಿಸುತ್ತವೆ. OPPO F23 5G ಯಲ್ಲಿ ಕ್ಯಾಮೆರಾ ಸಿಸ್ಟಂ ಅನ್ನು ಅನ್ವೇಷಿಸಲು ಪೋರ್ಟ್ರೇಟ್ ರೀಟಚಿಂಗ್, AI ಕಲರ್ ಪೋರ್ಟ್ರೇಟ್, ಸೆಲ್ಫಿ HDR ಹಾಗೂ ಇನ್ನೂ ಹಲವಾರು ಫೋರ್ಟ್ರೇಟ್ ಫೀಚರ್‌ಗಳನ್ನು ಇದು ಒಳಗೊಂಡಿದೆ.
ಸೂಪರ್‌ಚಾರ್ಜ್ಡ್ ಕಾರ್ಯನಿರ್ವಹಣೆ
ಈ ಫೋನ್ Qualcomm Snapdragon 695 5G ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ಚಾಲಿತವಾಗಿದೆ ಮತ್ತು ಇದು 8 GB ಯ RAM ಮತ್ತು 256 GB ಸ್ಟೋರೇಜ್‌ನಿಂದ ಬೆಂಬಲಿತವಾಗಿದೆ. ಇದೆಲ್ಲಕ್ಕಿಂತ ವಿಶೇಷವಾದ ಸಂಗತಿ ಎಂದರೆ ಈ ಫೋನ್ RAM ಗೆ ಸೇರಿಸಲು 8 GB ಯ ಆನ್‌ಬೋರ್ಡ್ ಸ್ಟೋರೇಜ್ ಅನ್ನು ಬಳಸಬಹುದು ಮತ್ತು microSD ಕಾರ್ಡ್ ಮೂಲಕ ನೀವು ಸ್ಟೋರೇಜ್ ಅನ್ನು 1 TB ವರೆಗೂ ವಿಸ್ತರಿಸಬಹುದು.
ಆಸಕ್ತಿದಾಯಕವಾಗಿ, ನಿರಂತರ ಆಪ್ಟಿಮೈಸೇಷನ್‌ಗಳು ಮತ್ತು ಬೆಂಬಲದಿಂದಾಗಿ ಈ ಫೋನ್ ಕನಿಷ್ಠ 4 ವರ್ಷಗಳವರೆಗೂ ಲ್ಯಾಗ್-ಫ್ರೀ ಆಗಿರುತ್ತದೆ ಎಂಬ ಭರವಸೆಯನ್ನು ಸಹ OPPO ನೀಡಿದೆ. ವಾಸ್ತವದಲ್ಲಿ, 4 ವರ್ಷಗಳ Android ಅಪ್‌ಡೇಟ್‌ಗಳು ಮತ್ತು 5 ವರ್ಷಗಳ ಭದ್ರತಾ ಅಪ್‌ಡೇಟ್‌ಗಳ ಭರವಸೆಯನ್ನು OPPO ನೀಡಿದ್ದು, F23 5G ಯಿಂದ ನೀವು ಹೆಚ್ಚಿನ ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
F23 5G ಗಾಗಿ ಆಯ್ಕೆ ಮಾಡಲಾದ ಆಪರೇಟಿಂಗ್ ಸಿಸ್ಟಂ ColorOS 13.1 ಆಗಿದೆ. ಇದು ಹಲವಾರು ಆಪ್ಟಿಮೈಸೇಷನ್‌ಗಳು ಮತ್ತು ಫೀಚರ್‌ಗಳನ್ನು ಒಳಗೊಂಡಿದ್ದು, ಅವು Snapdragon ಚಿಪ್ ಮತ್ತು ಅದರ AI ಹಿರಿಮೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತವೆ. ಆನ್-ಸ್ಕ್ರೀನ್ ಕಂಟೆಂಟ್‌ನ AI-ಚಾಲಿತ ಅನುವಾದ, ಚಾಟ್ ಸ್ಕ್ರೀನ್‌ಶಾಟ್‌ಗಳಲ್ಲಿರುವ ಹೆಸರುಗಳು ಮತ್ತು ಪ್ರೊಫೈಲ್ ಚಿತ್ರಗಳ ಆಟೊ-ಪಿಕ್ಸೆಲೇಶನ್ ಮತ್ತು ಅನುಮತಿಗಳು ಹಾಗೂ ಆಕ್ಸೆಸ್ ಅನ್ನು ನಿರ್ವಹಿಸಲು ಇರುವ ಸಮಗ್ರ ಗೌಪ್ಯತೆಯ ಡ್ಯಾಶ್‌ಬೋರ್ಡ್‌ನಂತಹ ಜೀವನದ ಗುಣಮಟ್ಟ ಸುಧಾರಿಸುವ ಆಕರ್ಷಕ ಸುಧಾರಣೆಗಳನ್ನು ಸಹ ನೋಡಬಹುದು.
OPPO F23 5G ನಿಶ್ಚಿತವಾಗಿಯೂ ಈ ವರ್ಷ ಬಿಡುಗಡೆಯಾಗಲಿರುವ ಅತ್ಯುತ್ತಮ ಮತ್ತು ಅತ್ಯಂತ ಆಸಕ್ತಿದಾಯಕ ಫೋನ್‌ಗಳಲ್ಲಿ ಒಂದು. ಚಾರ್ಜಿಂಗ್ ಬಗ್ಗೆ ತೀರಾ ಕಡಿಮೆ ಚಿಂತಿಸುವಂತೆ ಮಾಡುವ ದೊಡ್ಡ ಬ್ಯಾಟರಿಯನ್ನು ಹೊಂದಿರುವ ಮತ್ತು ಲೋ ಬ್ಯಾಟರಿ ಚಿಂತೆಯೊಂದಿಗೆ ಬರುವ ಫೋಬಿಯಾದಿಂದ ಮುಕ್ತರಾಗಲು ಪರಿಣಾಮಕಾರಿಯಾಗಿ ಸಹಕರಿಸುವ ಫೋನ್‌ಗಾಗಿ ನೀವು ಹುಡುಕುತ್ತಿದ್ದರೆ, ಇನ್ನು ಮುಂದೆ ಹುಡುಕಬೇಡಿ. ಬರೀ ಬ್ಯಾಟರಿ ವಿಭಾಗದಲ್ಲಿ ಅಷ್ಟೇ ಅಲ್ಲದೆ, ಇದರಲ್ಲಿರುವ ಡಿಸೈನ್ ಮತ್ತು ಕ್ಯಾಮೆರಾಗಳಂತಹ ಇತರ ಫೀಚರ್‌ಗಳೂ ಸಹ ಅತ್ಯಾಕರ್ಷಕವಾಗಿವೆ.
ಮುನ್ನಡೆಯಿರಿ ಮತ್ತು OPPO F23 5G ಯ ಮೂಲಕ ನಿಮ್ಮ ಸೂಪರ್‌ಪವರ್ ಅನ್ನು ಇಂದೇ ಪ್ರದರ್ಶಿಸಿ.
ಡಿವೈಸ್ ಅನ್ನು ಖರೀದಿಸುವಾಗ ನೀವು ಪಡೆಯಬಹುದಾದ ಇತ್ತೀಚಿನ ಎಲ್ಲಾ ಆಫರ್‌ಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ