HOME » NEWS » Tech » FIVE PERSONAL SAFETY APPS FOR WOMEN INTERNATIONAL WOMENS DAY 2021 SPECIAL HG

International Women’s Day 2021: ಮಹಿಳೆಯರು ತಮ್ಮ ರಕ್ಷಣೆಗಾಗಿ ಬಳಸಬಹುದಾದ 5 ಅಪ್ಲಿಕೇಶನ್​ಗಳಿವು..

ಇಂದು ವಿಶ್ವ ಮಹಿಳಾ ದಿನಾಚರಣೆ. ಈ ವಿಶೇಷ ದಿನಾಚರಣೆಯ ಅಂಗವಾಗಿ ಮಹಿಳೆಯರ ರಕ್ಷಣೆಗಾಗಿ ಸಹಾಯ ಮಾಡುವ ಕೆಲವೊಂದು ಆ್ಯಪ್​ಗಳ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

news18-kannada
Updated:March 8, 2021, 1:44 PM IST
International Women’s Day 2021: ಮಹಿಳೆಯರು ತಮ್ಮ ರಕ್ಷಣೆಗಾಗಿ ಬಳಸಬಹುದಾದ 5 ಅಪ್ಲಿಕೇಶನ್​ಗಳಿವು..
Photo:Google
  • Share this:
ಮಹಿಳೆಯರ ರಕ್ಷಣೆಗಾಗಿ ಏನೇ ಕ್ರಮ  ಬಂದರು ಅತ್ಯಾಚಾರ, ಮಾನಹಾನಿಯಂತಹ ಘಟನೆಗಳು ಕಡಿಮೆಯಾಗುತ್ತಿಲ್ಲ . ಪ್ರತಿ ದಿನ ಮಹಿಳೆಯರ ಕುರಿತಾಗಿ ಒಂದಲ್ಲಾ ಒಂದು ನೊಂದ ಘಟನೆ ಬೆಳಕಿಗೆ ಬರುತ್ತಲೇ ಇರುತ್ತದೆ. ಅದರಂತೆ ಇಂದು ವಿಶ್ವ ಮಹಿಳಾ ದಿನಾಚರಣೆ. ಈ ವಿಶೇಷ ದಿನಾಚರಣೆಯ ಅಂಗವಾಗಿ ಮಹಿಳೆಯರ ರಕ್ಷಣೆಗಾಗಿ ಸಹಾಯ ಮಾಡುವ ಕೆಲವೊಂದು ಆ್ಯಪ್​ಗಳ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಾಮಾನ್ಯವಾಗಿ ಮಹಿಳೆಯರು ಓಡಾಟದ ವೇಳೆ ಅಥವಾ ಬೇರೆಯವರಿಂದ ತೊಂದರೆಯಾದಾಗ, ಮಾನಹಾನಿಯಾದಾಗ ಇಂತಹ ಆ್ಯಪ್​ಗಳ ಮೂಲಕ ತಮ್ಮ ರಕ್ಷಣೆಯನ್ನು ಕೇಳಬಹುದಾಗಿದೆ. ಅದಕ್ಕಾಗಿ ಕೆಲವೊಂದು ಆ್ಯಪ್​ಗಳ ಕುರಿತು ಮಾಹಿತಿ ಇಲ್ಲಿ ಹಂಚಲಾಗಿದೆ. ಈ ಆ್ಯಪ್​ಗಳು ಮಹಿಳೆಯರ ಸುರಕ್ಷತೆಗೆ ಸಹಾಯ ಮಾಡುತ್ತವೆ.

Safetipin​: ಮಹಿಳೆಯರ ಸುರಕ್ಷತೆಗಾಗಿ ಅಭಿವೃದ್ಧಿ ಪಡಿಸಿದ ಆ್ಯಪ್​ ಇದಾಗಿದೆ. ಇದರ ಮೂಲಕ ಮಹಿಳೆಯರು ತುರ್ತು ಸಂದರ್ಭದಲ್ಲಿ ರಕ್ಷಣೆ ಪಡೆಯಬಹುದಾಗಿದೆ. ಸೇಫ್ಟಿಪಿನ್​ ಆ್ಯಪ್​ ನಲ್ಲಿ ಜಿಪಿಎಸ್​ ಟ್ರಾಕಿಂಗ್​, ಎಮೆರ್ಜೆನ್ಸಿ ಫೋನ್​ ನಂಬರ್​, ಡೈರೆಕ್ಷನ್​ ಮತ್ತು ಸುರಕ್ಷಿತ ಸ್ಥಳದ ಕುರಿತಾಗಿ ಮಾಹಿತಿ ಒದಗಿಸಲಿದೆ.  ಅಂದಹಾಗೆಯೇ ಈ ಆ್ಯಪ್​ ಅನ್ನು ಇಂಗ್ಲೀಷ್​, ಹಿಂದಿ, ಬಹಸ ಮತ್ಯು ಸ್ಪಾನಿಷ್​ ಭಾಷೆಯಲ್ಲಿ ಬಳಸಬಹುದಾಗಿದೆ.

Himmath: ದೆಹಲಿ ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಹಿಮ್ಮತ್​ ಹೆಸರಿನ ಉಚಿತ ಆ್ಯಪ್​ ಅನ್ನು ಅಭಿವೃದ್ಧಿ ಪಡಿಸಿ ಪರಿಚಯಿಸಿದ್ದಾರೆ. ಈ ಆ್ಯಪ್​​ ಬಳಸುವ ಮಹಿಳೆಯರು ಯಾವುದಾದರು ಸಮಸ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಾಗ ಎಸ್​ಒಎಸ್​ ಮೂಲಕ ಎಚ್ಚರಿಕೆ ಮಾಹಿತಿ ರವಾನಿಸುತ್ತದೆ. ಜೊತೆಗೆ ಯಾವ ಸ್ಥಳದಲ್ಲಿ ಮಹಿಳೆಯರಿಗೆ ತೊಂದರೆಯಾಗಿದೆ ಎಂದು ಮಾಹಿತಿ ತಿಳಿಸುತ್ತದೆ. ಅಷ್ಟು ಮಾತ್ರವಲ್ಲದೆ,  ದೆಹಲಿ ಪೊಲೀಸ್​​ ಕಂಟ್ರೋಲ್​ ರೂಮ್​ಗೆ ಆಡಿಯೋ ವಿಡಿಯೋ ಮೂಲಕ ಮಾಹಿತಿ ರವಾನೆಯಾಗುತ್ತದೆ.

Raksha: ಈ ಆ್ಯಪ್​ನಲ್ಲಿರುವ ಬಟನ್​ ಆಯ್ಕೆಯನ್ನು ಕ್ಲಿಕ್​ ಮಾಡಿದರೆ ಎಚ್ಚರಿಕೆ ಮಾಹಿತಿ ರವಾನಿಸುತ್ತದೆ. ಜೊತೆಗೆ ಬಳಕೆದಾರ ತನ್ನ ಸ್ನೇಹಿತರ ನಂಬರ್​ ಅದರಲ್ಲಿ ಸೇವ್​ ಮಾಡಿದರೆ ತುರ್ತು ಸಂದರ್ಭದಲ್ಲಿ ಬಳಕೆದಾರರ ಸ್ಥಳದ ಕುರಿತ ಮಾಹಿತಿ ರವಾನೆಯಾಗುತ್ತದೆ.

ಅಚ್ಚರಿ ವಿಷಯವೆಂದರೆ ಈ ಆ್ಯಪ್​ ಸ್ವಿಚ್​ ಆ್ಯಪ್​ ಆಗಿದ್ದರು ಕಾರ್ಯನಿರ್ವಹಿಸುತ್ತದೆ. ವಾಲ್ಯುಮ್​ ಬಟನ್​ ಮೂರು ಬಾರಿ ಒತ್ತಿದರೆ ತುರ್ತು ಸಂದೇಶ ರವಾನೆಯಾಗುತ್ತದೆ.

Women Safty: ಈ ಆ್ಯಪ್​​ನಲ್ಲಿರುವ ಟ್ಯಾಪ್​ ಬಟನ್​ ಕ್ಲಿಕ್​ ಮಾಡಿದರೆ ಸಂಕಷ್ಟದಲ್ಲಿರುವ ಮಹಿಳೆಯರ ಮಾಹಿತಿ ರವಾನೆಯಾಗುತ್ತದೆ. ಅದರಲ್ಲೂ ಮಹಿಳೆಯರ ನಂಬರ್​ ಮತ್ತು ಗೂಗಲ್​ ಮ್ಯಾಪ್​​ ಕುರಿತ ಮಾಹಿತಿ ಶೇರ್​ ಆಗುತ್ತದೆ. ಜೊತೆಗೆ ಮೊಬೈಲ್​ ಫ್ರಂಟ್​ ಕ್ಯಾಮೆರಾದ ಮೂಲಕ ಫೋಟೋ ತೆಗೆದು ನೇರವಾಗಿ ಅಪ್ಲೋಡ್​ ಆಗುತ್ತದೆ.
Youtube Video

Smart 24x7: ಎಲ್ಲಾ ಮಹಿಳೆಯರು ಮಾತ್ರವಲ್ಲದೆ ನಾಗರೀಕರು ಈ ಆ್ಯಪ್​ ಅನ್ನು ಬಳಸಬಹುದಾಗಿದೆ. ಇದರ ಮೂಲಕ ಧ್ವನಿ, ವಾಯ್ಸ್​ ಮತ್ತು ಫೋಟೋ ಪೊಲೀಸ್​​ ಠಾಣೆಗೆ ರವಾನೆಯಾಗಲಿದೆ.
Published by: Harshith AS
First published: March 8, 2021, 1:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories