Electric Scooter: ಭಾರತದಲ್ಲಿ ಸಿಗುವ 5 ಬೆಸ್ಟ್​​ ಎಲೆಕ್ಟ್ರಿಕ್​ ಸ್ಕೂಟರ್​ಗಳಿವು!

ಬಜಾಜ್​ ಚೇತಕ್​ ಎಲೆಕ್ಟ್ರಿಕ್

ಬಜಾಜ್​ ಚೇತಕ್​ ಎಲೆಕ್ಟ್ರಿಕ್

ಆ್ಯಂಪೇರ್​ ಮ್ಯಾಗ್ನಸ್​ ಪ್ರೊ ಸ್ಕೂಟರ್​ ಅನ್ನು ಒಂದು ಬಾರಿ ಚಾರ್ಜ್​ ಮಾಡಿದರೆ 80 ಕಿ.ಮೀ ಮೈಲೇಜ್​ ನೀಡಲಿದೆ. 55 ಕಿ.ಮೀ ಟಾಪ್​ ಸ್ವೀಡ್​ನಲ್ಲಿ ಕ್ರಮಿಸಲಿದೆ. ಇದರಲ್ಲಿ ಫೋನ್​ ಚಾರ್ಜ್​ ಮಾಡಲು ಯುಎಸ್​ಬಿ ಪೋರ್ಟ್​ ನೀಡಲಾಗಿದೆ.

  • Share this:

    ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ  ಕೇಂದ್ರ ಸರ್ಕಾರ ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಕಾರು, ಬೈಕ್​, ಸ್ಕೂಟರ್​ಗಳನ್ನು ಉತ್ಪಾದಿಸಲು ಪ್ರೋತ್ಸಾಹ ನೀಡುತ್ತಿದೆ. ಆ ಮೂಲಕ ವಾಯು ಮಾಲಿನ್ಯ ತಡೆಗಟ್ಟಲು ಮುಂದಾಗಿದೆ. ಈಗಾಗಲೇ ಹಲವು ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಉತ್ಪಾದಿಸುತ್ತಿದೆ. ಅದರಂತೆ ಭಾರತದಲ್ಲಿರುವ ಬೆಸ್ಟ್​ ಎಲೆಕ್ಟ್ರಿಕ್ ಸ್ಕೂಟರ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.


    ಆ್ಯಂಪೇರ್​ ಮ್ಯಾಗ್ನಸ್​ ಪ್ರೊ: ಕಳೆದ ಜೂನ್​ ತಿಂಗಳಿನಲ್ಲಿ ಆ್ಯಂಪೇರ್​ ಮ್ಯಾಗ್ನಸ್​ ಪ್ರೊ ಎಲೆಕ್ಟ್ರಿಕ್​ ಸ್ಕೂಟರ್​ ಭಾರತದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಕೂಟರ್​ 1.2 ಎಲೆಕ್ಟ್ರಿಕ್​​ ಮೋಟರ್ ಅಳವಡಿಸಲಾಗಿದ್ದು,​ 60ವ್ಯಾಟ್, 30ಕೆಹೆಚ್​​ ಲಿಥಿಯಂ-ಅಯಾನ್​ ಬ್ಯಾಟರಿ ಪ್ಯಾಕ್​ ನೀಡಲಾಗಿದೆ.


    ಆ್ಯಂಪೇರ್​ ಮ್ಯಾಗ್ನಸ್​ ಪ್ರೊ ಸ್ಕೂಟರ್​ ಅನ್ನು ಒಂದು ಬಾರಿ ಚಾರ್ಜ್​ ಮಾಡಿದರೆ 80 ಕಿ.ಮೀ ಮೈಲೇಜ್​ ನೀಡಲಿದೆ. 55 ಕಿ.ಮೀ ಟಾಪ್​ ಸ್ವೀಡ್​ನಲ್ಲಿ ಕ್ರಮಿಸಲಿದೆ. ಇದರಲ್ಲಿ ಫೋನ್​ ಚಾರ್ಜ್​ ಮಾಡಲು ಯುಎಸ್​ಬಿ ಪೋರ್ಟ್​ ನೀಡಲಾಗಿದೆ. ಆ್ಯಂಟಿಥೀಪ್​ ಅಲಾರಂ ಫೀಚರ್​ ಇದರಲ್ಲಿದೆ. ಇನ್ನು ಆ್ಯಂಪೇರ್​ ಮ್ಯಾಗ್ನಸ್​ ಪ್ರೊ ಸ್ಕೂಟರ್​ ಬೆಲೆ 74 ಸಾವಿರ ರೂ ಇರಲಿದೆ.


    ರಿವೋಲ್ಟ್​​​ ಆರ್​ವಿ400: ರಿವೋಲ್ಟ್​ ಕಂಪನಿ ಆರ್​ವಿ400 ಹೆಸರಿನ ಎಲೆಕ್ಟ್ರಿಕ್​ ಸ್ಕೂಟರ್​​ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.  ನೂತನ ಸ್ಕೂಟರ್​​ 3.24 ಬ್ಯಾಟರಿ ಪ್ಯಾಕ್​ ಹೊಂದಿದ್ದು, 3ಕೆಎಮ್​ ರೇಟೆಡ್​ ಮೋಟಾರ್​ ಅಳವಡಿಲಾಗಿದೆ, 170ಎನ್​ಎಮ್​​ ಪೀಕ್​ ಟಾರ್ಕ್​​​​​ ಉತ್ಪಾದಿಸುತ್ತದೆ.


    ರಿವೋಲ್ಟ್​​​ ಆರ್​ವಿ400 ಸ್ಕೂಟರ್​​ ಒಂದು ಬಾರಿ ಚಾರ್ಜ್​ ಮಾಡಿದರೆ 150 ಕಿ.ಮೀ ಮೈಲೇಜ್​ ನೀಡುತ್ತದೆ. 85 ಕಿ.ಮೀ ಟಾಪ್​ ಸ್ಪೀಡ್​​ ಹೊಂದಿದೆ. ಇದರಲ್ಲಿ ಡಿಜಿಟಲ್​ ಇನ್ಟ್ರೂಮೆಂಟ್​​  ಕ್ಲಸ್ಟರ್​​ ಆಯ್ಕೆಯನ್ನು ನೀಡಿದೆ. ಇನ್ನು ಈ ಸ್ಕೂಟರ್​ ಬೆಲೆ 1,08,999 ರೂ ಇರಲಿದೆ.


    ಬಜಾಜ್​ ಚೇತಕ್​ ಎಲೆಕ್ಟ್ರಿಕ್​: ಬಜಾಜ್​ ಕಂಪನಿಯ ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​ 3 ಕೆಡಬ್ಲ್ಯುಹೆಚ್​ ಬ್ಯಾಟರಿ ಪ್ಯಾಕ್​ ಹೊಂದಿದೆ. 4.08 ಕೆಡಬ್ಲ್ಯು ಪೀಕ್​​ ಪವರ್​​ ಉತ್ಪಾದಿಸುತ್ತದೆ. 60 ಕೀ.ಮೀ ಟಾಪ್​ ಸ್ಪೀಡ್​ನಲ್ಲಿ ಕ್ರಮಿಸುತ್ತದೆ.


    ಒಂದು ಬಾರಿ ಚಾರ್ಜ್​ ಮಾಡಿದರೆ 85 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಸ್ಪೋರ್ಟ್ಸ್​​ ಮೋಡ್​ ಆಯ್ಕೆ ನೀಡಿದೆ. ಇನ್ನು ಈ ಸ್ಕೂಟರ್​ನಲ್ಲಿ ಡಿಜಿಟಲ್​ ಎಲ್​ಸಿಡಿ ನೀಡಲಾಗಿದ್ದು, ಬ್ಯಾಟರಿ ಲೆವೆಲ್​, ಸಮಯ, ರೈಡಿಂಗ್​ ಮೋಡ್​, ಸೈಡ್​ ಸ್ಟ್ಯಾಂಡ್​ ಮಾನಿಟರ್​ ಮಾಡಲಿದೆ. ಚೇತಕ್​ ಸ್ಕೂಟರ್​​ ಶೋ ರೂ ಬೆಲೆ 1.5 ಲಕ್ಷ ಎಂದು ಅಂದಾಜಿಸಲಾಗಿದೆ.


    ಟಿವಿಎಸ್​​ iQube ​; ಟಿವಿಎಸ್​ ಕಂಪನಿ ಎಲೆಕ್ಟ್ರಿಕ್​ ವಾಹನದತ್ತ ತನ್ನ ಚಿತ್ತ ಹರಿಸಿ iQube ​ ಹೆಸರಿನ ಸ್ಕೂಟರ್​ ಅನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸಿದೆ. 4.4 ಕೆಡಬ್ಯು ಎಲೆಕ್ಟ್ರಿಕ್​​ ಮೋಟರ್​ ಅಳವಡಿಸಲಾಗಿರುವ ಈ ಸ್ಕೂಟರ್​  78 ಕಿ.ಮೀ ಟಾಪ್​ ಸ್ಪೀಡ್​ ಹೊಂದಿದೆ. ಒಂದು ಬಾರಿ ಚಾಜ್​ ಮಾಡಿದರೆ 75 ಕಿ.ಮೀ ಕ್ರಮಿಸಲಿದೆ.


    ಟಿವಿಎಸ್​ ಐಕ್ಯೂಬ್​ ಸ್ಕೂಟರ್​ನಲ್ಲಿ ಬೇರೆ ರೈಡಿಂಗ್​ ಮೋಡ್​ ನೀಡಲಾಗಿದೆ. ಬ್ಲೂಟೂತ್​​ ಆಯ್ಕೆಯನ್ನು ನೀಡಿದೆ. ಈ ಸ್ಕೂಟರ್​ ಶೋ ರೂಂ ಬೆಲೆ 1.15 ಲಕ್ಷ ರೂ ಆಗಿದೆ.


    Ather 450X ಸ್ಕೂಟರ್​: ಲಿಥಿಯಂ ಐಯಾನ್​ ಬ್ಯಾರಿಯನ್ನು ಈ ಸ್ಕೂಟರ್​ನಲ್ಲಿ ಅಳವಡಿಸಲಾಗಿದೆ. 6ಕೆಡಬ್ಲ್ಯು ಪೀಕ್​ ಪವರ್​ ಉತ್ಪಾದಿಸಲಿದೆ. 80ಕಿ.ಮೀ ಟಾಪ್​ ಸ್ಪೀಡ್​ನಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ.




    Ather 450X ಸ್ಕೂಟರ್​ ಅನ್ನು ಒಂದು ಬಾರಿ ಚಾಜ್​ ಮಾಡಿದರೆ 85 ಕಿ.ಮೀ ಮೈಲೇಜ್​ ನೀಡಲಿದೆ. ಈ ಸ್ಕೂಟರ್​ನಲ್ಲಿ 7 ಇಂಚಿನ ಟಚ್​ಸ್ಕ್ರೀನ್​ ಇನ್ಟ್ರುಮೆಂಟ್​​ ಪ್ಯಾನೆಲ್​​ ನೀಡಲಾಗಿದೆ. ಜೊತೆಗೆ ಮ್ಯಾಪ್​ ನ್ಯಾವಿಗೇಷನ್​ ಇದರಲ್ಲಿದೆ. ಅಷ್ಟು ಮಾತ್ರವಲ್ಲದೆ, ಬ್ಲೂಟೂತ್​ ಮೂಲಕ ಮ್ಯೂಸಿಕ್​ ಮತ್ತು ಒಳಬರುವ ಕರೆಯನ್ನು ಸ್ವೀಕರಿಸಬಹುದಾಗಿದೆ. Ather 450X ಸ್ಕೂಟರ್​ ಎಕ್ಸ್​ ಶೋ. ರೂ ಬೆಲೆ 1.59 ಲಕ್ಷ ರೂ ಆಗಿದೆ.

    Published by:Harshith AS
    First published: