HOME » NEWS » Tech » FITNESS APP ENDOMONDO WILL STOP WORKING FROM DECEMBER 31HG

ಸದ್ಯದಲ್ಲೇ ಕಾರ್ಯ ಸ್ಥಗಿತಗೊಳಿಸಲಿದೆ ಜನಪ್ರಿಯ ಫಿಟ್​ನೆಸ್​ ಆ್ಯಪ್​!; ಯಾವ ಕಾರಣಕ್ಕೆ ಗೊತ್ತಾ?

Endomondo App: ಡಿಸೆಂಬರ್​ 31, 2020ರ ನಂತರ ಎಂಡೊಮೊಂಡೊ ಆ್ಯಪ್​ ಬಳಸಲು ಆಗುವುದಿಲ್ಲ. ಆರ್ಮೊರ್​ ಎಲ್ಲಾ ಆ್ಯಪ್​ ಸ್ಟೋರ್​ಗಳಿಂದ ಎಂಡೊಮೊರ್​​ ಆ್ಯಪ್​ ಅನ್ನು ತೆಗೆದುಹಾಕುತ್ತಿದೆ.

news18-kannada
Updated:November 9, 2020, 3:26 PM IST
ಸದ್ಯದಲ್ಲೇ ಕಾರ್ಯ ಸ್ಥಗಿತಗೊಳಿಸಲಿದೆ ಜನಪ್ರಿಯ ಫಿಟ್​ನೆಸ್​ ಆ್ಯಪ್​!; ಯಾವ ಕಾರಣಕ್ಕೆ ಗೊತ್ತಾ?
ಎಂಡೊಮೊಂಡೊ ಆ್ಯಪ್
  • Share this:
ಜನಪ್ರಿಯ ಫಿಟ್​ನೆಸ್​ ಎಂಡೊಮೊಂಡೊ ಆ್ಯಪ್​ ಅನ್ನು ಸ್ಥಗಿತಗೊಳಿಸಲು ಕಂಪನಿ ಮುಂದಾಗಿದೆ. ಡಿಸೆಂಬರ್​ 31ರಿಂದ ಈ ಆ್ಯಪ್ ಕಾರ್ಯ ಸ್ಥಗಿತಗೊಳಿಸುತ್ತಿದೆ​ ಎಂದು ಆರ್ಮೊರ್​ ಕಂಪನಿ ಹೇಳಿದೆ. ಈ ವರ್ಷದ ಅಂತ್ಯದಲ್ಲಿ ಆ್ಯಪ್​​ಸ್ಟೋರ್​ಗಳಲ್ಲಿ ಎಂಡೊಮೊರ್​ ಆ್ಯಪ್​ ಬಳಕೆಗೆ ಸಿಗುವುದಿಲ್ಲ ಎಂದಿದೆ.

ಡಿಸೆಂಬರ್​ 31, 2020ರ ನಂತರ ಎಂಡೊಮೊಂಡೊ ಆ್ಯಪ್​ ಬಳಸಲು ಆಗುವುದಿಲ್ಲ. ಆರ್ಮೊರ್​ ಎಲ್ಲಾ ಆ್ಯಪ್​ ಸ್ಟೋರ್​ಗಳಿಂದ ಎಂಡೊಮೊರ್​​ ಆ್ಯಪ್​ ಅನ್ನು ತೆಗೆದುಹಾಕುತ್ತಿದೆ. ಗ್ರಾಹಕರಿಗೆ ಯಾವುದೇ ವರ್ಷನ್​ಗಳು ಬಳಕೆಗೆ ಸಿಗುವುದಿಲ್ಲ ಎಂದು ಎಂಡೊನ್​ಮೊಡೊ ಪೇಜ್​ ತಿಳಿಸಿದೆ.

ನವೆಂಬರ್​ 30ರಿಂದ ಎಲ್ಲಾ ಪ್ರಿಮಿಯಂ ಸದಸ್ಯತ್ವ ಕೊನೆಗೊಳಿಸುತ್ತಿದೆ. ಡಿಸೆಂಬರ್​ 31ರಿಂದ ಕಾರ್ಯವನ್ನು ಪೂರ್ತಿಯಾಗಿ ಸ್ಥಗಿತ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಆರ್ಮೊರ್​ ​ಸಂಸ್ಥೆ ಅಭಿವೃದ್ಧಿ ಪಡಿಸಿದ್ದ ಮ್ಯಾಪ್​ಮೈರನ್​ ಆ್ಯಪ್​ ಅನ್ನು ಮಾರಾಟ ಮಾಡಿದ್ದು, ಇದು ಟ್ರಾಕಿಂಗ್​ ಮತ್ತು ಫಿಟ್​​ನೆಸ್​ ಅನುಭವ ನೀಡಲಿದೆ. ಹಾಗಾಗಿ ಬಳಕೆದಾರರು ಡೇಟಾವನ್ನು ಎಂಡೊಮೊಂಡೊದಿಂದ ಮ್ಯಾಪ್​ಮೈರನ್​ ಆ್ಯಪ್​ಗೆ ಪೋರ್ಟ್​ ಮಾಡಬಹುದೆಂದು ತಿಳಿಸಿದೆ.
Youtube Video

ಮ್ಯಾಪ್​ಮೈರನ್​ ಕೂಡ ಈ ಬಗ್ಗೆ ಪ್ರತಿಕ್ರಿಸಿದ್ದು, ಬಳಕೆದಾರರ ಡೇಟಾವನ್ನು ಎಂಡೊಮೊಂಡೊದಿಂದ ಮ್ಯಾಪ್​ಮೈರನ್​ಗೆ ವರ್ಗಾಯಿಸುವಂತೆ ಅವಕಾಶ ಮಾಡಿಕೊಟ್ಟಿದ್ದೇವೆ. ಇದರ ಮೂಲಕ ಫಿಟ್​ನೆಸ್​ ಮತ್ತು ಟ್ರಾಕಿಂಗ್​ ಫೀಚರ್​ ಬಳಸಿಕೊಳ್ಳಬಹುದಾಗಿದೆ ವೆಬ್​ಸೈಟ್​ ಪೇಜ್​ನಲ್ಲಿ ತಿಳಿಸಿದೆ.
Published by: Harshith AS
First published: November 9, 2020, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories