• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • New Laptops: ಇನ್ಫಿನಿಕ್ಸ್​ ಝೀರೋ ಬುಕ್​ ಅಲ್ಟ್ರಾ ಲ್ಯಾಪ್​ಟಾಪ್​ನ ಫಸ್ಟ್​ ಸೇಲ್ ಆರಂಭ! ಆಫರ್ಸ್​ ಏನೆಲ್ಲಾ ಇದೆ?

New Laptops: ಇನ್ಫಿನಿಕ್ಸ್​ ಝೀರೋ ಬುಕ್​ ಅಲ್ಟ್ರಾ ಲ್ಯಾಪ್​ಟಾಪ್​ನ ಫಸ್ಟ್​ ಸೇಲ್ ಆರಂಭ! ಆಫರ್ಸ್​ ಏನೆಲ್ಲಾ ಇದೆ?

ಇನ್ಫಿನಿಕ್ಸ್​ ಝೀರೋ ಬುಕ್​ ಅಲ್ಟ್ರಾ ಲ್ಯಾಪ್‌ಟಾಪ್‌

ಇನ್ಫಿನಿಕ್ಸ್​ ಝೀರೋ ಬುಕ್​ ಅಲ್ಟ್ರಾ ಲ್ಯಾಪ್‌ಟಾಪ್‌

ಇನ್ಫಿನಿಕ್ಸ್ ಕಂಪೆನಿ ಬಿಡುಗಡೆ ಮಾಡಿರುವ ಇನ್ಫಿನಿಕ್ಸ್​ ಝೀರೋ ಬುಕ್​​ ಅಲ್ಟ್ರಾ ಲ್ಯಾಪ್​​ಟಾಪ್​ 12ನೇ ಜೆನ್​ ಇಂಟೆಲ್ ಕೋರ್​ ಹೆಚ್​ ಸೀರಿಸ್​ನ ಪ್ರೊಸೆಸರ್​​ನಿಂದ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ ಈ ಲ್ಯಾಪ್​ಟಾಪ್​ ಬೇರೇನೆಲ್ಲಾ ಫೀಚರ್ಸ್​ಗಳನ್ನು ಹೊಂದಿದೆ ಎಂದು ಇಲ್ಲಿದೆ ಮಾಹಿತಿ.

ಮುಂದೆ ಓದಿ ...
  • Share this:

    ಟೆಕ್ನಾಲಜಿ ಕಂಪೆನಿಯಲ್ಲಿ ಲ್ಯಾಪ್​ಟಾಪ್​ಗಳಿಗೆ (Laptops) ಭಾರೀ ಬೇಡಿಕೆಯಲ್ಲಿವೆ. ಅದರಲ್ಲೂ ಗೇಮಿಂಗ್​ ಲ್ಯಾಪ್​ಟಾಪ್​ಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಯಾರೇ ಆಗಲಿ ಒಂದು ಲ್ಯಾಪ್​ಟಾಪ್ ಖರೀದಿ ಮಾಡಬೇಕಾದರೆ ಅದರ ಪ್ರೊಸೆಸರ್​ಗೆ ಹೆಚ್ಚು ಗಮನಹರಿಸುತ್ತಾರೆ. ಈ ಸಾಲಿನಲ್ಲಿ ಇನ್ಫಿನಿಕ್ಸ್ ಕಂಪೆನಿ ಮುನ್ನಡೆಯಲ್ಲಿದೆ. ಈ ಕಂಪೆನಿ ತನ್ನ ಬ್ರಾಂಡ್​ನಿಂದ ಭಾರೀ ಹಿಂದಿನಿಂದಲೂ ಲ್ಯಾಪ್​ಟಾಪ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ತನ್ನ ಝೀರೋ ಬುಕ್ ಸರಣಿಯಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಇನ್ಫಿನಿಕ್ಸ್‌ ಝೀರೋ ಬುಕ್ ಅಲ್ಟ್ರಾ (Infinix Zero Book Ultra) ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಈ ನೂತನ ಲ್ಯಾಪ್‌ಟಾಪ್‌ ಫೆಬ್ರುವರಿ 3, 2023 ರಿಂದ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ (Flipkart) ಮೂಲಕ ಭಾರತದಲ್ಲಿ ಫಸ್ಟ್​ ಸೇಲ್ (First Sale) ಅನ್ನು ಆರಂಭಿಸಿದೆ.


    ಇನ್ಫಿನಿಕ್ಸ್ ಕಂಪೆನಿ ಬಿಡುಗಡೆ ಮಾಡಿರುವ ಇನ್ಫಿನಿಕ್ಸ್​ ಝೀರೋ ಬುಕ್​​ ಅಲ್ಟ್ರಾ ಲ್ಯಾಪ್​​ಟಾಪ್​ 12ನೇ ಜೆನ್​ ಇಂಟೆಲ್ ಕೋರ್​ ಹೆಚ್​ ಸೀರಿಸ್​ನ ಪ್ರೊಸೆಸರ್​​ನಿಂದ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ ಈ ಲ್ಯಾಪ್​ಟಾಪ್​ ಬೇರೇನೆಲ್ಲಾ ಫೀಚರ್ಸ್​ಗಳನ್ನು ಹೊಂದಿದೆ ಎಂದು ಇಲ್ಲಿದೆ ಮಾಹಿತಿ.


    ಇನ್ಫಿನಿಕ್ಸ್​ನ ಈ ಹೊಸ ಲ್ಯಾಪ್​ಟಾಪ್​ನ ಫೀಚರ್ಸ್​ ಹೇಗಿದೆ?


    ಇನ್ಫಿನಿಕ್ಸ್​ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 16:9 ರ ಆಕಾರದ ಅನುಪಾತದೊಂದಿಗೆ 1080 x 1920 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಪಡೆದುಕೊಂಡಿದೆ. ಈ ಡಿಸ್​ಪ್ಲೇಯು 400 ನಿಟ್ಸ್​ ಬ್ರೈಟ್‌ನೆಸ್‌ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ, 178 ಡಿಗ್ರಿಗಳವರೆಗೆ ವೀಕ್ಷಣಾ ಫೀಚರ್ಸ್‌ ಅನ್ನು ಪಡೆದುಕೊಂಡಿರುವುದು ಮತ್ತಷ್ಟು ಅನುಕೂಲಕರವಾದ ವಿಷಯವಾಗಿದೆ.




    ಪ್ರೊಸೆಸರ್​ ಸಾಮರ್ಥ್ಯ


    ಇನ್ಫಿನಿಕ್ಸ್​ನ ಈ ಹೊಸ ಲ್ಯಾಪ್‌ಟಾಪ್‌ 12 ನೇ ಜನ್ ಇಂಟೆಲ್ ಕೋರ್ ಹೆಚ್​ ಸೀರಿಸ್​ನ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಕೋರ್‌ i7 ಮತ್ತು ಕೋರ್‌ i5 ವೇರಿಯಂಟ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಎಲ್ಲಾ ನಾಲ್ಕು ವೇರಿಯಂಟ್‌ಗಳೂ ಸಹ 96EU ಐರಿಸ್ ಗ್ರಾಫಿಕ್ಸ್‌ನೊಂದಿಗೆ ಪ್ಯಾಕ್‌ ಆಗಿವೆ. ಇದರೊಂದಿಗೆ ಸ್ಟೋರೇಜ್‌ ಸಾಮರ್ಥ್ಯದಲ್ಲೂ ವಿವಿಧ ವೇರಿಯಂಟ್‌ ಲಭ್ಯವಾಗಲಿದ್ದು, ಅದರಲ್ಲಿ 32 ಜಿಬಿ ರ್‍ಯಾಮ್ ಹಾಗೂ 1ಟಿಬಿ ವರೆಗೆ ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿದೆ.


    ಬ್ಯಾಟರಿ ಫೀಚರ್ಸ್​


    ಇನ್ಫಿನಿಕ್ಸ್​ ಝೀರೋ ಬುಕ್​ ಅಲ್ಟ್ರಾ ಲ್ಯಾಪ್‌ಟಾಪ್‌ನ ಬ್ಯಾಟರಿ ಬಗ್ಗೆ ನೋಡುವುದಾದರೆ ಇದು 70Whr ಬ್ಯಾಟರಿ ಪವರ್ ಅನ್ನು ಹೊಂದಿದೆ. ಈ ಲ್ಯಾಪ್​ಟಾಪ್ ಅನ್ನು ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ 10 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ವಿಶೇಷವಾಗಿ ಕೇವಲ 2 ಗಂಟೆಗಳಲ್ಲಿ ಈ ಲ್ಯಾಪ್​ಟಾಪ್ ಅನ್ನು ಫುಲ್ ಚಾರ್ಜ್ ಮಾಡಬಹುದು.


    ಇದನ್ನೂ ಓದಿ: ಇವ್ರು ನಿಜವಾದ ಬಾಸ್​ ಅಂದ್ರೆ, ತನ್ನ ಉದ್ಯೋಗಿಗಳಿಗೆ ಕಾರ್​ ಗಿಫ್ಟ್​ ನೀಡಿದ ದಾನ ಶೂರ ಕರ್ಣ!


    ಬೆಲೆ ಮತ್ತು ಲಭ್ಯತೆ


    • ಇನ್ಫಿನಿಕ್ಸ್​ ಝೀರೋ ಬುಕ್​ ಅಲ್ಟ್ರಾ ಲ್ಯಾಪ್​ಟಾಪ್​ನ ಬೆಲೆಗಳು ಅವುಗಳ ವೇರಿಯಂಟ್​ಗೆ ತಕ್ಕಂತೆ ನಿಗದಿ ಮಾಡಲಾಗಿದೆ. ಇದರಲ್ಲಿ ಕೋರ್ i5 ಪ್ರೊಸೆಸರ್​ ಹೊಂದಿರುವ 16ಜಿಬಿ ರ್‍ಯಾಮ್ ಮತ್ತು 512ಜಿಬಿ ಸ್ಟೋರೇಜ್ ವೇರಿಯಂಟ್‌ ಬೆಲೆ 49,990ರೂ. ಆಗಿದೆ.

    • ಅದೇ ರೀತಿ ಕೋರ್ i7, 16ಜಿಬಿ ರ್‍ಯಾಮ್ ಮತ್ತು 512ಜಿಬಿ ಸ್ಟೋರೇಜ್​ ವೇರಿಯಂಟ್ ಬೆಲೆ 64,990 ರೂಪಾಯಿ ಆಗಿದೆ.

    • ಹಾಗೆಯೇ ಕೋರ್ i9, 16ಜಿಬಿ ರ್‍ಯಾಮ್ ಮತ್ತು 512ಜಿಬಿ ಸ್ಟೋರೇಜ್ ವೇರಿಯಂಟ್ ಬೆಲೆ 79,990ರೂ. ಆಗಿದೆ.

    • ಇನ್ಫಿನಿಕ್ಸ್​ ಲ್ಯಾಪ್​ಟಾಪ್​ನಲ್ಲಿ ಕೋರ್ i9, 32ಜಿಬಿ ರ್‍ಯಾಮ್ ಮತ್ತು 1TB ಸ್ಟೋರೇಜ್ ವೇರಿಯಂಟ್ ಹೊಂದಿರುವ ಬೆಲೆ 84,990 ರೂಪಾಯಿ ನಿಗದಿ ಮಾಡಲಾಗಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು