• Home
 • »
 • News
 • »
 • tech
 • »
 • Infinix Hot 20 5G: ಇನ್ಫಿನಿಕ್ಸ್​ ಹಾಟ್​ 20 ಸ್ಮಾರ್ಟ್​​ಫೋನ್​ನ ಫಸ್ಟ್​ಸೇಲ್​ ಆರಂಭ! ಫ್ಲಿಪ್​ಕಾರ್ಟ್​​ನಲ್ಲಿ ಲಭ್ಯ

Infinix Hot 20 5G: ಇನ್ಫಿನಿಕ್ಸ್​ ಹಾಟ್​ 20 ಸ್ಮಾರ್ಟ್​​ಫೋನ್​ನ ಫಸ್ಟ್​ಸೇಲ್​ ಆರಂಭ! ಫ್ಲಿಪ್​ಕಾರ್ಟ್​​ನಲ್ಲಿ ಲಭ್ಯ

ಇನ್ಫಿನಿಕ್ಸ್​ ಹಾಟ್​20 5ಜಿ ಸ್ಮಾರ್ಟ್​​ಫೋನ್​

ಇನ್ಫಿನಿಕ್ಸ್​ ಹಾಟ್​20 5ಜಿ ಸ್ಮಾರ್ಟ್​​ಫೋನ್​

ಇನ್ಫಿನಿಕ್ಸ್​ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಲಾಂಚ್ ಮಾಡಿದ್ಸ ಇನ್ಫಿನಿಕ್ಸ್​ ಹಾಟ್​ 20 5ಜಿ ಸ್ಮಾರ್ಟ್​​ಫೋನ್​ ಮಾರಾಟ ಪ್ಕ್ರಿಯೆಯನ್ನು ಇದೀಗ ಫ್ಲಿಪ್​ಕಾರ್ಟ್​​ನಲ್ಲಿ ಆರಂಭಿಸಿದೆ. ಈ ಸ್ಮಾರ್ಟ್​ಫೋನ್​ ಫಸ್ಟ್​ ಸೇಲ್​ನಲ್ಲಿ ಭಾರೀ ಆಫರ್ಸ್​ನಲ್ಲಿ ಸಿಗಲಿದ್ದು, ಗುಣಮಟ್ಟದ ಫೀಚರ್ಸ್​ ಅನ್ನು ಸಹ ಇದು ಹೊಂದಿದೆ.

ಮುಂದೆ ಓದಿ ...
 • Share this:

  ಇತ್ತೀಚೆಗೆ ಟೆಕ್ನಾಲಜಿ ಮಾರುಕಟ್ಟೆಯಲ್ಲಿ (Technology Market) ಸ್ಮಾರ್ಟ್​​ಫೋನ್​ಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಸ್ಮಾರ್ಟ್​​ಫೋನ್​ಗಳು ಇತ್ತೀಚಿನ ದಿನದಲ್ಲಿ ಅಗತ್ಯ ಅಂಶವಾಗಿಬಿಟ್ಟಿದೆ ಎಂದರೆ ತಪ್ಪಾಗಲಾರದು. ಅದೇ ರೀತಿ ಕಂಪೆನಿಗಳು ಕೂಡ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್​ಫೋನ್​ಗಳನ್ನು (New Smartphones) ಬಿಡುಗಡೆ ಮಾಡುತ್ತಲೇ ಇದೆ. ಇತ್ತೀಚೆಗೆ ಇನ್ಫಿನಿಕ್ಸ್​ ಕಂಪೆನಿ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್ ಒಂದನ್ನು ಲಾಂಚ್ ಮಾಡಿತ್ತು. ಇದೀಗ ಈ ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್ ಆರಂಭವಾಗಿದೆ. ಇನ್ಫಿನಿಕ್ಸ್​ ಹಾಟ್ 20 ಎಂಬ 5ಜಿ (Infinix Hot 20 5G) ಸ್ಮಾರ್ಟ್​ಫೋನ್​ನ ಮಾರಾಟ ಪ್ರಕ್ರಿಯೆ ಇದೇ ಜನವರಿ 15 ರಿಂದ ಫ್ಲಿಪ್​ಕಾರ್ಟ್​​ನಲ್ಲಿ ಪ್ರಾರಂಭವಾಗಿದೆ. ಈ ಮಾರಾಟದಲ್ಲಿ ಇನ್ಫಿನಿಕ್ಸ್​ ಕಂಪೆನಿಯ ಈ ಸ್ಮಾರ್ಟ್​​ಫೋನ್​ ಮೇಲೆ ಬಹಳಷ್ಟು ಆಫರ್ಸ್​ ಅನ್ನು ಸಹ ಪಡೆಯಬಹುದಾಗಿದೆ.


  ಹೌದು, ಇನ್ಫಿನಿಕ್ಸ್​ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಲಾಂಚ್ ಮಾಡಿದ್ಸ ಇನ್ಫಿನಿಕ್ಸ್​ ಹಾಟ್​ 20 5ಜಿ ಸ್ಮಾರ್ಟ್​​ಫೋನ್​ ಮಾರಾಟ ಪ್ಕ್ರಿಯೆಯನ್ನು ಇದೀಗ ಫ್ಲಿಪ್​ಕಾರ್ಟ್​​ನಲ್ಲಿ ಆರಂಭಿಸಿದೆ. ಈ ಸ್ಮಾರ್ಟ್​ಫೋನ್​ ಫಸ್ಟ್​ ಸೇಲ್​ನಲ್ಲಿ ಭಾರೀ ಆಫರ್ಸ್​ನಲ್ಲಿ ಸಿಗಲಿದ್ದು, ಗುಣಮಟ್ಟದ ಫೀಚರ್ಸ್​ ಅನ್ನು ಸಹ ಇದು ಹೊಂದಿದೆ.


  ಇನ್ಫಿನಿಕ್ಸ್​ ಹಾಟ್​ 20 5ಜಿ ಸ್ಮಾರ್ಟ್​​ಫೋನ್ ಫೀಚರ್ಸ್​


  ಇನ್ಫಿನಿಕ್ಸ್‌ ಹಾಟ್‌ 20 5ಜಿ ಸ್ಮಾರ್ಟ್‌ಫೋನ್ 6.6 ಇಂಚಿನ ಪುಲ್‌ ಹೆಚ್​ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೆ 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 20:9 ರಚನೆಯ ಅನುಪಾತ ಮತ್ತು 240hz ಟಚ್ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಡಿಸ್‌ಪ್ಲೇಯಲ್ಲಿ ಬಳಕೆದಾರರು 60Hz, 90Hz, ಅಥವಾ 120Hz ರಿಫ್ರೆಶ್ ರೇಟ್‌ ಅನ್ನು ಹಸ್ತಚಾಲಿತವಾಗಿ ಇಲ್ಲವೆ ಆಟೋ-ಸ್ವಿಚ್ ಮೋಡ್ ಮೂಲಕ ಸೆಟ್‌ ಮಾಡಿಕೊಂಡು ಬಳಸಬಹುದಾದ ಅವಕಾಶ ಕೂಡ ಇದೆ.


  ಇದನ್ನೂ ಓದಿ: ಹಾನರ್​ ಕಂಪೆನಿಯಿಂದ ಹೊಸ ಲ್ಯಾಪ್​ಟಾಪ್​ ಅನಾವರಣ! ಹೇಗಿದೆ ಫೀಚರ್ಸ್?


  ಕ್ಯಾಮೆರಾ ಫೀಚರ್ಸ್​


  ಇನ್ಫಿನಿಕ್ಸ್‌ ಹಾಟ್‌ 20 5ಜಿ ಸ್ಮಾರ್ಟ್‌ಫೋನ್‌ ಮುಖ್ಯವಾಗಿ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಈ ಸೆಲ್ಫಿ ಕ್ಯಾಮೆರಾವನ್ನು ವಾಟರ್‌ಡ್ರಾಪ್ ಶೈಲಿಯ ನಾಚ್‌ನಲ್ಲಿ ರಚಿಸಲಾಗಿದೆ.


  ಪ್ರೊಸೆಸರ್ ಫೀಚರ್ಸ್​ ಹೇಗಿದೆ?


  ಇನ್ಫಿನಿಕ್ಸ್‌ ಹಾಟ್‌ 20 5ಜಿ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಎಸ್​​ಓಸಿ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ವರದಿಯಲ್ಲಿ ತಿಳಿಸಿದೆ. ಇದು ಆಂಡ್ರಾಯ್ಡ್ 12 ಆಧಾರಿತ XOS 10.6 ನಿಂದ ರನ್‌ ಆಗಲಿದೆ.


  ಇನ್ಫಿನಿಕ್ಸ್​ ಹಾಟ್​20 5ಜಿ ಸ್ಮಾರ್ಟ್​​ಫೋನ್​


  ಹಾಗೆಯೇ 4ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ವಿಶೇಷವಾಗಿ ಮೆಮೊರಿ ಕಾರ್ಡ್‌ ಮೂಲಕ ಸ್ಟೋರೇಜ್​ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.


  ಬ್ಯಾಟರಿ ಫೀಚರ್ಸ್​


  ಇನ್ಫಿನಿಕ್ಸ್​ ಹಾಟ್​ 20 5ಜಿ ಸ್ಮಾರ್ಟ್‌ಫೋನ್​ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು 18W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್​ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಮೂರು ದಿನಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ ಎಂದು ಕಂಪೆನಿ ತಿಳೀಸಿದೆ.
  ಇತರೆ ಫೀಚರ್ಸ್


  ಈ ಸ್ಮಾರ್ಟ್​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಡ್ಯುಯಲ್-ಬ್ಯಾಂಡ್, ಹಾಟ್‌ಸ್ಪಾಟ್, ಬ್ಲೂಟೂತ್ ಅನ್ನು ಹೊಂದಿದೆ. ಜೊತೆಗೆ ಎಫ್​​ಎಮ್​ ರೇಡಿಯೋ, ಯುಎಸ್​ಬಿ ಟೈಪ್- ಸಿ 2.0 ಅನ್ನು ಸಹ ನೀಡಲಾಗಿದೆ.


  ಬೆಲೆ ಮತ್ತು ಲಭ್ಯತೆ


  ಇನ್ಫಿನಿಕ್ಸ್​ ಹಾಟ್​ 20 5ಜಿ ಸ್ಮಾರ್ಟ್​ಫೋನ್​ನ 6ಜಿಬಿ ರ್‍ಯಾಮ್ ವೇರಿಯಂಟ್‌ ಫೋನ್‌ ಇಂದು ಅಂದರೆ ಜನವರಿ 15ರಂದು ಇ- ಕಾಮರ್ಸ್‌ ವೆಬ್​ಸೈಟ್​ ಆಗಿರುವ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟ ಆರಂಭಿಸಿದೆ. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಇನ್ಫಿನಿಕ್ಸ್‌ ಹಾಟ್‌ 20 5ಜಿ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್‌ಫೋನ್ ಅನ್ನು 13,499 ರೂಪಾಯಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

  Published by:Prajwal B
  First published: