ಇದೀಗ ದೇಶದಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ವಿಷಯ ಎಂದರೆ 5ಜಿ ನೆಟ್ವರ್ಕ್ ಸೇವೆ (5G Network Service). ಜಿಯೋ ಹಾಗೂ ಏರ್ಟೆಲ್ ಟೆಲಿಕಾಂ ಕಂಪೆನಿಗಳು ತನ್ನ 5ಜಿ ನೆಟ್ವರ್ಕ್ ಅನ್ನು ಗ್ರಾಹಕರಿಗೆ ನೀಡಲು ರಾತ್ರಿಹಗಲೆನ್ನದೆ ದುಡಿಯುತ್ತಿದೆ. ದೇಶದಲ್ಲೇ ನಂಬರ್ 1 ಟೆಲಿಕಾಂ ಕಂಪೆನಿಯಾಗಿರುವ ಜಿಯೋ (Jio) ದೇಶದ ಹಲವು ನಗರಗಳಲ್ಲಿ ತನ್ 5ಜಿ ಸೇವೆಯನ್ನು ವಿಸ್ತರಿಸಿದೆ. ಅದೇ ರೀತಿ ಏರ್ಟೆಲ್ ಕೂಡಾ ವಿಸ್ತರಿಸಿದೆ. ಇದುವರೆಗೆ ಈ 5ಜಿ ಸೇವೆಯನ್ನು 4ಜಿ ರೀಚಾರ್ಜ್ ಪ್ಲ್ಯಾನ್ (Recharge Plans) ನೊಂದಿಗೆ ಪಡೆಯಬಹುದಿತ್ತು. ಇದೀಗ ಜಿಯೋ ತನ್ನ ಗ್ರಾಹಕರಿಗೆ ಗುಡ್ನ್ಯೂಸ್ ನೀಡಿದೆ. ಜಿಯೋ ತನ್ನ ಗ್ರಾಹಕರಿಗಾಗಿ 5ಜಿ ರೀಚಾರ್ಜ್ ಪ್ಲ್ಯಾನ್ಗಳನ್ನು (5G Recharge Plans) ಬಿಡುಗಡೆ ಮಾಡಿದೆ. 5ಜಿ ನೆಟ್ವರ್ಕ್ ಬಯಸುವವರಿಗೆ ಈ ಪ್ಲ್ಯಾನ್ಗಳು ಉತ್ತಮವಾಗಿದೆ.
ಇದೀಗ ಜಿಯೋ ಟೆಲಿಕಾಂ ಕಂಪೆನಿ ತನ್ನ 5ಜಿ ನೆಟ್ವರ್ಕ್ ಅನ್ನು ದೇಶದ ಹಲವು ನಗರಗಳಲ್ಲಿ ವಿಸ್ತರಿಸಿದ್ದು, ಇದರ ಬೆನ್ನಲ್ಲೇ 5ಜಿ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಈ ರೀಚಾರ್ಜ್ ಪ್ಲ್ಯಾನ್ ಜಿಯೋದಿಂದ ಬಿಡುಗಡೆಯಾದ ಮೊದಲ 5ಜಿ ಪ್ಲ್ಯಾನ್ ಆಗಿದೆ. ಹಾಗಿದ್ರೆ ಈ ಪ್ಲ್ಯಾನ್ನಲ್ಲಿ ಯಾವೆಲ್ಲಾ ಪ್ರಯೋಜನಗಳು ಲಭ್ಯ ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಜಿಯೋನ 61 ರೂಪಾಯಿ 5ಜಿ ರೀಚಾರ್ಜ್ ಪ್ಲ್ಯಾನ್
ಜಿಯೋ 61 ರೂಪಾಯಿ ಪ್ರಿಪೇಯ್ಡ್ ಯೋಜನೆಯು 6ಜಿಬಿ ಹೈ ಸ್ಪೀಡ್ 5ಜಿ ಡೇಟಾವನ್ನು ನೀಡಲಿದೆ. ಇದು ಟೆಲ್ಕೋ ವೆಬ್ಸೈಟ್ನಲ್ಲಿನ ಪಟ್ಟಿಯ ಪ್ರಕಾರ ಜಿಯೋದ ಸಕ್ರಿಯ ಯೋಜನೆಯ ಮಾನ್ಯತೆಯನ್ನು ಹೊಂದಿರುತ್ತದೆ. ಈ ಸೇವೆ 119 ರೂ, 149 ರೂ, 179 ರೂ, 199 ರೂ ಹಾಗೂ 209 ರೂ, ಬೆಲೆಯ ಜಿಯೋ ಪ್ಲಾನ್ಗಳಿಗೂ ಅನ್ವಯವಾಗುತ್ತದೆ.
ಇದನ್ನೂ ಓದಿ:Oppo Smartphones: ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ ಒಪ್ಪೋ ಎ78 5ಜಿ ಮೊಬೈಲ್!
ಎಲ್ಲೆಲ್ಲಿ ಲಭ್ಯ
ಇದೀಗ ಜಿಯೋ ಬಿಡುಗಡೆ ಮಾಡಿರುವ ಅನ್ಲಿಮಿಟೆಡ್ 5ಜಿ ರೀಚಾರ್ಜ್ ಪ್ಲ್ಯಾನ್ ಜಿಯೋ ಟ್ರೂ 5ಜಿ ನೆಟ್ವರ್ಕ್ ಅನ್ನು ವಿಸ್ತರಿಸುವ ನಗರಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಹಾಗೆಯೇ ಜಿಯೋ ಬಳಕೆದಾರರನ್ನು 5ಜಿ ವೆಲ್ಕಮ್ ಆಫರ್ಗೆ ಆಹ್ವಾನಿಸಲಾಗಿದೆ.
72 ನಗರಗಳಲ್ಲಿ 5ಜಿ ವಿಸ್ತರಣೆ
ಇನ್ನು ಜಿಯೋ ಇತ್ತೀಚೆಗೆ ತನ್ನ 5ಜಿ ಸೇವೆಯನ್ನು ಭಾರತದಾದ್ಯಂತ 72 ನಗರಗಳಿಗೆ ವಿಸ್ತರಣೆ ಮಾಡಿದ್ದು, ಡಿಸೆಂಬರ್ 2023 ರ ವೇಳೆಗೆ ತನ್ನ 5ಜಿ ಸ್ವತಂತ್ರ (SA) ನೆಟ್ವರ್ಕ್ನೊಂದಿಗೆ ಇಡೀ ದೇಶವನ್ನು ಆವರಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿರುವ ಏರ್ಟೆಲ್ 5ಜಿ ನಾನ್ ಸ್ಟಾಂಡಲೋನ್ (NSA) ನೆಟ್ವರ್ಕ್ ಅನ್ನು ನಿಯೋಜಿಸುತ್ತಿದೆ.
ಏರ್ಟೆಲ್ನ 5ಜಿ ಸೇವೆ
ಏರ್ಟೆಲ್ ಮತ್ತು ಜಿಯೋ ಮಾರ್ಚ್ 2024 ರ ವೇಳೆಗೆ 100 ರಿಂದ 150 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರನ್ನು 5ಜಿ ಗೆ ಪರಿವರ್ತಿಸುವ ಗುರಿಯನ್ನು ಹೊಂದಿವೆ ಎಂದು ತಿಳಿದುಬಂದಿದೆ. ಈ ಮೂಲಕ ದೇಶದ ಹಲವು ನಗರಗಳಲ್ಲಿ ಇನ್ನಷ್ಟು5ಜಿ ಸೇವೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಇದಲ್ಲದೆ ಮುಂದಿನ ದಿನಗಳಲ್ಲಿ ಡೇಟಾ ಪ್ಲ್ಯಾನ್ಗಳು ಇನ್ನಷ್ಟು ಬದಲಾವಣೆಯಾಗುವ ಸಂದರ್ಭಗಳು ಬರಬಹುದು ಎಂದು ತಂತ್ರಜ್ಞರು ಹೇಳಿದ್ದಾರೆ.
2023 ರಲ್ಲಿ 5ಜಿ ಸೇವೆ ದೇಶದೆಲ್ಲೆಡೆ ಲಭ್ಯ
ಹೌದು, ಈ ಹಿಂದೆ ಜಿಯೋ ತನ್ನ ವರದಿಯಲ್ಲಿ ತಿಳಿಸಿದಂತೆ 2023ರ ಡಿಸೆಂಬರ್ ಒಳಗಡೆ ದೇಶದ ಮೂಲೆ ಮೂಲೆಯಲ್ಲೂ 5ಜಿ ನೆಟ್ವರ್ಕ್ ಸೇವೆಯನ್ನು ವಿಸ್ತರಿಸುವುದಾಗಿ ಭರವಸೆ ನೀಡಿದೆ. ಹಾಗೇ ಏರ್ಟೆಲ್ ಕೂಡಾ ಇದೇ 2023ರ ಮಾರ್ಚ್ ಒಳಗಡೆ ದೇಶದಾದ್ಯಂತ 5ಜಿ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ
ಇನ್ನು ಇದೀಗ ಸದ್ಯದಲ್ಲೇ ವೊಡಫೋನ್ ಐಡಿಯಾ ತನ್ನ ಮೊದಲ 5ಜಿ ಸೇವೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಜೊತೆಗೆ ಬಿಎಸ್ಎನ್ಎಲ್ ಕೂಡಾ ಸಜ್ಜಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ