ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಸಾಧನಗಳೆಂದರೆ ಇಯರ್ಬಡ್ಸ್ಗಳು (Earbuds). ಇತ್ತೀಚಿನ ಯುವಪೀಳಿಗೆ ಹೊಸ ಹೊಸ ಮ್ಯೂಸಿಕ್ ಗ್ಯಾಜೆಟ್ಸ್ಗಳನ್ನು ಖರೀದಿಸುವಲ್ಲಿ ಹೆಚ್ಚು ಗಮನಹರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಅದರಲ್ಲಿರುವಂತಹ ಫೀಚರ್ಸ್ಗಳಾಗಿರಬಹುದು, ವಿನ್ಯಾಸವಾಗಿರಬಹುದು. ಟೆಕ್ನಾಲಜಿ ಮಾರುಕಟ್ಟೆಗೆ ದಿನದಿಂದ ದಿನಕ್ಕೆ ಹೊಸ ಹೊಸ ಕಂಪೆನಿಗಳು ಬಿಡುಗಡೆಯಾಗುತ್ತಲೇ ಇದೆ. ಅದರ ಜೊತೆಗೆ ಈ ಕಂಪೆನಿಗಳು ಕೂಡಾ ಹೊಸ ಸಾಧನಗಳನ್ನು ಜಗತ್ತಿಗೆ ಪರಿಚಯ ಮಾಡುತ್ತಿದೆ. ಗ್ಯಾಜೆಟ್ಗಳ ಕಂಪೆನಿಗಳ ಬಗ್ಗೆ ಹೇಳುವುದಾದರೆ ಫೈರ್ಬೋಲ್ಟ್ ಕಂಪೆನಿ (Fire-Boltt Company) ತನ್ನ ಬ್ರಾಂಡ್ನ ಅಡಿಯಲ್ಲಿ ವಿಶೇಷ ಶೈಲಿಯ ಇಯರ್ಬಡ್ಸ್ಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿತ್ತು. ಇದೀಗ ಈ ಕಂಪೆನಿ ಮಾರುಕಟ್ಟೆಗೆ ಮತ್ತೊಂದು ಇಯರ್ಬಡ್ಸ್ ಅನ್ನು ಪರಿಚಯಿಸಲು ಸಜ್ಜಾಗಿದೆ.
ಇದೀಗ ಫೈರ್ಬೋಲ್ಟ್ ಕಂಪೆನಿ ಮಾರುಕಟ್ಟೆಗೆ ಟ್ರೂ ವೈರ್ಲೆಸ್ ಸಿಸ್ಟಮ್ ಹೊಂದಿರುವ ಇಯರ್ಬಡ್ಸ್ ಅನ್ನು ಪರಿಚಯಿಸಿದ್ದು, ಇದಕ್ಕೆ ಫೈರ್ ಪಾಡ್ಸ್ ನಿಂಜಾ 601ಎಂದು ಹೆಸರಿಡಲಾಗಿದೆ. ಹಾಗಿದ್ರೆ ಈ ಹೊಸ ಇಯರ್ಬಡ್ಸ್ನ ಬೆಲೆ, ಫೀಚರ್ಸ್ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಫೈರ್ ಪಾಡ್ಸ್ ನಿಂಜಾ 601 ಇಯರ್ಬಡ್ಸ್ ಫೀಚರ್ಸ್
ಫೈರ್ ಪಾಡ್ಸ್ ನಿಂಜಾ 601 ಇಯರ್ಬಡ್ಸ್ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಸ್ವಲ್ಪ ಓರೆಯಾದ ಅಥವಾ ಕೊಕ್ಕೆ ಸ್ವರೂಪವನ್ನು ಹೊಂದಿದ್ದು, ಈ ಮೂಲಕ ಪ್ರೀಮಿಯಂ ರೀತಿಯ ನೋಟವನ್ನು ಹೊಂದಿದೆ. ಇದರೊಂದಿಗೆ ಈ ಡಿವೈಸ್ ವಾಟರ್ ರೆಸಿಸ್ಟೆಂಟ್ ಫೀಚರ್ಸ್ ಹೊಂದಿದ್ದು, ಇದಕ್ಕಾಗಿ ಐಪಿಎಕ್ಸ್6 ಫೀಚರ್ಸ್ ಅನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ 2023 ಸೇಲ್; ಈ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಆಫರ್ಸ್
ಎಲ್ಇಡಿ ಲೈಟ್ ಲಭ್ಯ
ಇಷ್ಟೆಲ್ಲಾ ಫೀಚರ್ಸ್ ನೊಂದಿಗೆ ಈ ಇಯರ್ಬಡ್ಸ್ನ ಹೊರಗಿನ ಭಾಗದಲ್ಲಿ ಸಹ ಇನ್ನಷ್ಟು ಹೊಸ ಲುಕ್ನೊಂದಿಗೆ ಇದು ಬರುತ್ತದೆ. ಯಾಕೆಂದರೆ ಇಯರ್ಬಡ್ಸ್ನ ಚಾರ್ಜಿಂಗ್ ಹಾಗೂ ಬಡ್ಸ್ಗಳಲ್ಲಿ ಎಲ್ಇಡಿ ಲೈಟ್ಸ್ ಅನ್ನು ಅಳವಡಿಸಿದ್ದು, ಈ ಡಿವೈಸ್ ಇನ್ನಷ್ಟು ಅಂದವಾಗಿ, ಗೂನಮಟ್ಟದಲ್ಲಿಮ ಕಾಣಲು ಇದು ಸಹಕಾರಿಯಾಗಿದೆ.
ಇತರೆ ಫೀಚರ್ಸ್
ಫೈರ್ ಬೋಲ್ಟ್ ಫೈರ್ ಪಾಡ್ಸ್ ನಿಂಜಾ 601 ನಲ್ಲಿ ಸ್ಟ್ರಾಂಗ್ ಬೇಸ್ ಇರಲಿದ್ದು, ಇದಕ್ಕಾಗಿ 10mm ಪೂರ್ಣ-ಶ್ರೇಣಿಯ ಡೈನಾಮಿಕ್ ಡ್ರೈವರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಕಾಲ್ಗಳಲ್ಲಿ ಮಾತನಾಡಬೇಕದಾರೆ ಯಾವುದೇ ತೊಂದರೆಗಳು ಆಗದಂತೆ, ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಹಾಗೂ ಎನ್ವಿರಾನ್ಮೆಂಟ್ ಫೀಚರ್ಸ್ ಅನ್ನು ಸಹ ಇದರಲ್ಲಿ ನೀಡಲಾಗಿದೆ.ಇದರಿಂದ ಈ ಡಿವೈಸ್ನಲ್ಲಿ ಆಡಿಯೋ ಗುಣಮಟ್ಟ ಇನ್ನಷ್ಟು ಉತ್ತಮವಾಗಿರಲು ಸಾಧ್ಯವಾಗುತ್ತದೆ.
ಇದರೊಂದಿಗೆ 38ms ಕಡಿಮೆ ಲೇಟೆನ್ಸಿ ಮೋಡ್ ಅನ್ನು ಇದು ನೀಡಲಿದ್ದು, ಸೂಪರ್ ಸಿಂಕ್ ಟೆಕ್ನಾಲಜಿ ಇರುವ ಗ್ರಾಹಕರು ಸ್ಟೋರೇಜ್ ಕೇಸ್ನಿಂದ ಬಡ್ಸ್ಗಳನ್ನು ಹೊರತೆಗೆದ ತಕ್ಷಣವೇ ಸಂಬಂಧಿತ ಡಿವೈಸ್ಗಳಿಗೆ ತಕ್ಷಣವೇ ಕನೆಕ್ಟ್ ಆಗುತ್ತದೆ. ಇದಕ್ಕಾಗಿ ಈ ಡಿವೈಸ್ ಬ್ಲೂಟೂತ್ ಆವೃತ್ತಿ 5.2 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ ಫೀಚರ್ಸ್
ಈ ಹೊಸ ಫೈರ್ಬೋಲ್ಟ್ ಫೈರ್ ಪಾಡ್ಸ್ ನಿಂಜಾ 601 ಡಿವೈಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 30 ಗಂಟೆಗಳ ಚಾರ್ಜಿಂಗ್ ಬ್ಯಾಕಪ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಅದೇ ರೀತಿ ಫುಲ್ ಚಾರ್ಜ್ ಇದ್ದಾಗ 6 ಗಂಟೆಗಳ ಕಾಲ ಪ್ಲೇ ಟೈಮ್ ಅವಧಿಯನ್ನು ನೀಡುತ್ತದೆ.
ಬೆಲೆ ಮತ್ತು ಲಭ್ಯತೆ
ಫೈರ್ ಬೋಲ್ಟ್ ಫೈರ್ ಪಾಡ್ಸ್ ನಿಂಜಾ 601 ಇಯರ್ಬಡ್ಸ್ ಮಾರುಕಟ್ಟೆಯಲ್ಲಿ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಖರೀದಿಸುವ ಅವಕಾಶ ನೀಡಲಿದೆ, ಭಾರತದಲ್ಲಿ ಈ ಇಯರ್ಬಡ್ಸ್ ಅನ್ನು ಕೇವಲ 1,299 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಇದು ಫ್ಲಿಪ್ಕಾರ್ಟ್ ಮತ್ತು ಟಿಡಬ್ಲ್ಯೂಎಸ್ ಬ್ರ್ಯಾಂಡ್ನ ಅಧಿಕೃತ ವೆಬ್ಸೈಟ್ ನಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ