ಜಾಗತಿಕ ಮಾರುಕಟ್ಟೆಯಲ್ಲಿ (Global Market) ಭಾರೀ ಬೇಡಿಕೆಯಲ್ಲಿರುವ ಸಾಧನವೆಂದರೆ ಅದು ಸ್ಮಾರ್ಟ್‌ವಾಚ್. ಈ ಸ್ಮಾರ್ಟ್ವಾಚ್ಗಳು ಹೊಸ ಹೊಸ ಮಾದರಿಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇದೆ. ಇದರ ಫೀಚರ್ಸ್ ಮೂಲಕವೇ ಗ್ರಾಹಕರನ್ನು ಸೆಳೆಯುತ್ತಿದೆ. ಮಾರುಕಟ್ಟೆಯಲ್ಲಿ ನಾವು ನೋಡುವುದಾದರೆ ಹಲವಾರು ಸ್ಮಾರ್ಟ್‌ವಾಚ್ ಕಂಪೆನಿಗಳಿವೆ (Smartwatch Companies). ಅದ್ರಲ್ಲೂ ಹೊಸ ಕಂಪೆನಿಗಳು ಸಹ ಸೇರಿಕೊಂಡಿವೆ. ಸ್ಮಾರ್ಟ್ಫೋನ್ಗಳನ್ನು ತಯಾರಿಯಲ್ಲಿ ಜನಪ್ರಿಯವಾಗಿದ್ದ ಟೆಕ್ ಕಂಪೆನಿಗಳು ಇದೀಗ ಸ್ಮಾರ್ಟ್ವಾಚ್ಗಳಲ್ಲಿಯೂ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಕಂಪೆನಿಯೆಂದರೆ ಅದು ಫೈರ್ಬೋಲ್ಟ್ (Fire-Boltt). ಈ ಕಂಪೆನಿ ಇದುವರೆಗೆ ಸಾಕಷ್ಟು ಬ್ರಾಂಡ್ಗಳನ್ನು ತನ್ನ ಕಂಪೆನಿಯ ಅಡಿಯಲ್ಲಿ ಬಿಡುಗಡೆ ಮಾಡಿದೆ. ಈ ಮಧ್ಯೆ ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್ ಒಂದನ್ನು ಪರಿಚಯಿಸಿದೆ.
ಜನಪ್ರಿಯ ಸ್ಮಾರ್ಟ್‌ವಾಚ್ ಕಂಪೆನಿಯಾಗಿರುವ ಫೈರ್ಬೋಲ್ಟ್ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ ಫೈರ್ಬೋಲ್ಟ್ ಕೋಬ್ರಾ ಸ್ಮಾರ್ಟ್‌ವಾಚ್ ಎಂದು ಹೆಸರಿಸಲಾಗಿದೆ. ವಿಭಿನ್ನ ವಿನ್ಯಾಸವನ್ನು ಹೊಂದಿರುವ ಈ ಸಾಧನ, ಹಲವಾರು ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.
ಫೈರ್ಬೋಲ್ಟ್ ಕೋಬ್ರಾ ಸ್ಮಾರ್ಟ್‌ವಾಚ್ ವಿನ್ಯಾಸ ಹೇಗಿದೆ?
ಫೈರ್-ಬೋಲ್ಟ್ ಕೋಬ್ರಾ ಮೂರು ಪದರದ ಬಾಡಿ ಸೆಟಪ್ ಅನ್ನು ಹೊಂದಿದೆ, ಇದು ಭಾರೀ ಹಗುರವಾದ ಡಿವೈಸ್ ಆಗಿದೆ. ಹಾಗೆಯೇಈ ಸ್ಮಾರ್ಟ್‌ವಾಚ್ 1.78-ಇಂಚಿನ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದ್ದು, 368 × 448 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಪಡೆದಿದೆ. ಈ ವಾಚ್ ಐಪಿ68 ರೇಟಿಂಗ್ ಅನ್ನು ಪಡೆದಿದೆ. ಇದರೊಂದಿಗೆ 500 ನಿಟ್ಸ್ ಬ್ರೈಟ್‌ನೆಸ್ ಪಡೆದಿದ್ದು, 60Hz ರಿಫ್ರೆಶ್ ರೇಟ್ ಒಳಗೊಂಡಿದೆ. ಜೊತೆಗೆ ಆಲ್ವೇಸ್ ಆನ್ ಸ್ಕ್ರೀನ್ ಸೌಲಭ್ಯವನ್ನು ಈ ಸಾಧನ ಒಳಗೊಂಡಿದೆ.
ಸ್ಪೋರ್ಟ್ಸ್ ಫೀಚರ್
ಫೈರ್-ಬೋಲ್ಟ್ ಕೋಬ್ರಾ ಸ್ಮಾರ್ಟ್ ವಾಚ್ ಸುಮಾರು 123 ಸ್ಪೋರ್ಟ್ಸ್ ಮೋಡ್ಗಳನ್ನು ಒಳಗೊಂಡಿದೆ. ದೈಹಿಕ ಚಟುವಟಿಕೆಯ ಸಮಯದಲ್ಲಿ ಇದು ನಿಮ್ಮ ದೇಹದ ಆರೋಗ್ಯವನ್ನು ಸಹ ಟ್ರ್ಯಾಕ್ ಮಾಡುತ್ತದೆ. ಇದರ ಜೊತೆಗೆ 24×7 ಡೈನಾಮಿಕ್ ಹೃದಯ ಬಡಿತ ಮಾನಿಟರಿಂಗ್, SpO2 ಮಾನಿಟರಿಂಗ್, ಸ್ತ್ರೀ ಆರೋಗ್ಯ ರಕ್ಷಣೆ ಮತ್ತು ನಿದ್ರೆಯ ಮೇಲ್ವಿಚಾರಣೆಯಂತಹ ಆರೋಗ್ಯ ಫೀಚರ್ಸ್‌ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡುವ ಆಯ್ಕೆಗಳನ್ನು ಸಹ ಒಳಗೊಂಡಿದೆ.
ಬ್ಲೂಟೂತ್ ಕಾಲಿಂಗ್ ಫೀಚರ್
ಹೊಸದಾಗಿ ಬಿಡುಗಡೆಯಾಗಿರುವ ಫೈರ್-ಬೋಲ್ಟ್ ಕೋಬ್ರಾ ಸ್ಮಾರ್ಟ್‌ವಾಚ್ ಉತ್ತಮ ಗುಣಮಟ್ಟದ ಬ್ಲೂಟೂತ್ ಕಾಲಿಂಗ್ ಫೀಚರ್ ಅನ್ನು ಹೊಂದಿದ್ದು, ಇದರಲ್ಲಿ ಇನ್ ಬಿಲ್ಟ್ ಸ್ಪೀಕರ್ ಮತ್ತು ಮೈಕ್ ಸೌಲಭ್ಯವನ್ನು ಅಳವಡಿಸಲಾಗಿದೆ.
ಬ್ಯಾಟರಿ ಫೀಚರ್ಸ್
ಇನ್ನು ಈ ಸ್ಮಾರ್ಟ್ ವಾಚ್ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದ್ರೆ ಸುಮಾರು 15 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡಲಿದೆ. ಇನ್ನು ಗ್ರಾಹಕರು ಬ್ಯಾಟರಿ-ಸೇವರ್ ಮೋಡ್ ಅನ್ನು ಆನ್ ಮಾಡಿದ್ದರೆ, ಸುಮಾರು 30 ದಿನಗಳವರೆಗೆ ಬ್ಯಾಕಪ್ ಅನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಸೋನಿ ಕಂಪೆನಿಯಿಂದ ಹೊಸ ವಾಕ್ಮನ್ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
ಬೆಲೆ ಮತ್ತು ಲಭ್ಯತೆ
ಫೈರ್-ಬೋಲ್ಟ್ ಕೋಬ್ರಾ ಸ್ಮಾರ್ಟ್‌ವಾಚ್ ಭಾರತದಲ್ಲಿ 3,499 ರೂಪಾಯಿ ಬೆಲೆಯನ್ನು ಹೊಂದಿಕೊಂಡು ಬಿಡುಗಡೆಯಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ ಇದೇ ಜನವರಿ 31 ರಿಂದ ಪ್ರಮುಖ ಇ ಕಾಮರ್ಸ್ ವೆಬ್‌ಸೈಟ್ ಆಗಿ ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಮತ್ತು ಕಂಪೆನಿಯ ಅಧಿಕೃತ Fireboltt.com ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಇದನ್ನು ಸಾಲಿಡ್ ಗ್ರೀನ್, ಸಾಲಿಡ್ ಬ್ಲ್ಯಾಕ್, ಗ್ರೀನ್ ಹಾಗೂ Camouflage ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಇದು ಫೈರ್ಬೋಲ್ಟ್ ಕಂಪೆನಿ ಈ ಪರಿಚಯಿಸಿರುವ ಹೊಸ ಸ್ಮಾರ್ಟ್‌ವಾಚ್ ಆಗಿದ್ದು, ಇದರ ವಿನ್ಯಾಸವೇ ಎಲ್ಲರನ್ನು ತನ್ನತ್ತ ಆಕರ್ಷಿಸುವಂತೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ