• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Fire-Boltt Smartwatch: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ ಫೈರ್​ಬೋಲ್ಟ್​! ಏಕಕಾಲದಲ್ಲಿ 3 ಸ್ಮಾರ್ಟ್​​ವಾಚ್​ಗಳು ಲಾಂಚ್

Fire-Boltt Smartwatch: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ ಫೈರ್​ಬೋಲ್ಟ್​! ಏಕಕಾಲದಲ್ಲಿ 3 ಸ್ಮಾರ್ಟ್​​ವಾಚ್​ಗಳು ಲಾಂಚ್

ಫೈರ್​​ಬೋಲ್ಟ್​ ಸ್ಮಾರ್ಟ್​ವಾಚ್​

ಫೈರ್​​ಬೋಲ್ಟ್​ ಸ್ಮಾರ್ಟ್​ವಾಚ್​

ಫೈರ್​ಬೋಲ್ಟ್​ ಕಂಪೆನಿಯಿಂದ ಏಕಕಾಲದಲ್ಲಿ ಆಫ್​ಲೈನ್​ ಮಾರುಕಟ್ಟೆಗೆ 3 ಸ್ಮಾರ್ಟ್​​ವಾಚ್​ಗಳು ಬಿಡುಗಡೆಯಾಗುತ್ತಿದ್ದು, ಇದಕ್ಕೆ ಫೈರ್​ಬೋಲ್ಟ್​ ಸ್ಯಾಟರ್ನ್​, ಫೈರ್​ಬೋಲ್ಟ್​ ಟಾಕ್​ 3, ಫೈರ್​ಬೋಲ್ಟ್​ ನಿಂಜಾ ಫಿಟ್​ ಎಂದು ಹೆಸರಿಸಲಾಗಿದೆ. ಹಾಗಿದ್ರೆ ಈ ಸ್ಮಾರ್ಟ್​ವಾಚ್​ಗಳ ಫೀಚರ್ಸ್​ ಹೇಗಿದೆ ಎಂಬುದನ್ನು ತಿಳಿಬೇಕಾದರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
 • Share this:

  ಟೆಕ್​ ಮಾರುಕಟ್ಟೆಯಲ್ಲಿ (Tech Market) ಜಾಗತಿಕವಾಗಿ ಇತ್ತೀಚೆಗೆ ಭಾರೀ ಸದ್ದಿನಲ್ಲಿರುವುದು ಸ್ಮಾರ್ಟ್​ವಾಚ್​ಗಳು. ದಿನ ಕಳೆದಂತೆ ಸ್ಮಾರ್ಟ್​​ಫೋನ್​ಗಳಂತೆಯೇ ಸ್ಮಾರ್ಟ್​​ವಾಚ್​ಗಳು (Smartwathes) ಸಹ ಹೊಸ ಹೊಸ ಮಾದರಿಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಜನಪ್ರಿಯ ಸ್ಮಾರ್ಟ್​​ವಾಚ್ ಕಂಪನಿಗಳಲ್ಲಿ ಒಂದಾದ ಫೈರ್​​ಬೋಲ್ಟ್ (Fire-Boltt Company)​ ಇದುವರೆಗೆ ತನ್ನ ಬ್ರಾಂಡ್​ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್​​ವಾಚ್​ಗಳನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಇವುಲೂ ಅಷ್ಟೇ ಬೇಡಿಕೆಯನ್ನು ಸಹ ಹೊಂದಿದೆ. ಫೈರ್​ಬೋಲ್ಟ್​ ಕಂಪೆನಿ ಹೊಸ ಮಾದರಿಯಲ್ಲಿ, ಕಲರ್​ಫುಲ್​ ಸ್ಮಾರ್ಟ್​ವಾಚ್​ಗಳನ್ನು ಬಿಡುಗಡೆ ಮಾಡುವ ಮೂಲಕ ಜಾಗತಿಕವಾಗಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಮಧ್ಯೆ ಇದೀ ಕಂಪೆನಿಯಿಂದ ಆಫ್​​ಲೈನ್​ ಮಾರುಕಟ್ಟೆಗೆ 3 ಸ್ಮಾರ್ಟ್​​ಫೋನ್​ಗಳು ಲಗ್ಗೆಯಿಡುತ್ತಿದೆ.


  ಫೈರ್​ಬೋಲ್ಟ್​ ಕಂಪೆನಿಯಿಂದ ಏಕಕಾಲದಲ್ಲಿ ಆಫ್​ಲೈನ್​ ಮಾರುಕಟ್ಟೆಗೆ 3 ಸ್ಮಾರ್ಟ್​​ವಾಚ್​ಗಳು ಬಿಡುಗಡೆಯಾಗುತ್ತಿದ್ದು, ಇದಕ್ಕೆ ಫೈರ್​ಬೋಲ್ಟ್​ ಸ್ಯಾಟರ್ನ್​, ಫೈರ್​ಬೋಲ್ಟ್​ ಟಾಕ್​ 3, ಫೈರ್​ಬೋಲ್ಟ್​ ನಿಂಜಾ ಫಿಟ್​ ಎಂದು ಹೆಸರಿಸಲಾಗಿದೆ. ಹಾಗಿದ್ರೆ ಈ ಸ್ಮಾರ್ಟ್​ವಾಚ್​ಗಳ ಫೀಚರ್ಸ್​ ಹೇಗಿದೆ ಎಂಬುದನ್ನು ತಿಳಿಬೇಕಾದರೆ ಈ ಲೇಖನವನ್ನು ಓದಿ.


  ಫೈರ್​ಬೋಲ್ಟ್​ ಸ್ಯಾಟರ್ನ್ ಸ್ಮಾರ್ಟ್​​ವಾಚ್ ಫೀಚರ್ಸ್​


  ಫೈರ್‌ಬೋಲ್ಟ್‌ನ ಹೊಸ ಸ್ಮಾರ್ಟ್‌ವಾಚ್‌ಗಳಲ್ಲಿ ಸ್ಯಾಟರ್ನ್‌ ಸ್ಮಾರ್ಟ್‌ವಾಚ್‌ ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದು 1.78 ಇಂಚಿನ ಅಮೋ=ಲ್ಡ್​​ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 368x448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.
  ಫೈರ್​ಬೋಲ್ಟ್​ ಸ್ಯಾಟರ್ನ್​ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಮೈಕ್ ಅನ್ನು ಹೊಂದಿದ್ದು, ಬ್ಲೂಟೂತ್‌ ಕಾಲಿಂಗ್‌ಗೆ ಇದು ತುಂಬಾನೇ ಸಹಕಾರಿಯಾಗುತ್ತದೆ. ಇದಲ್ಲದೆ ಸ್ಮಾರ್ಟ್‌ವಾಚ್‌ 110 ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ. ಇದು IP 67 ರೇಟಿಂಗ್‌ ಹೊಂದಿದ್ದು, ನೀರು ಮತ್ತು ಬೆವರಿನಿಂದ ಸ್ಮಾರ್ಟ್‌ವಾಚ್‌ ಅನ್ನು ರಕ್ಷಿಸುತ್ತದೆ.


  ಫೈರ್​​ಬೋಲ್ಟ್​ ಟಾಕ್​ 3 ಸ್ಮಾರ್ಟ್​ವಾಚ್


  ಫೈರ್​ಬೋಲ್ಟ್​ ಸ್ಮಾರ್ಟ್‌ವಾಚ್‌ 1.28 ಇಂಚಿನ ಹೆಚ್‌ಡಿ ಫುಲ್‌ ಟಚ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಮಲ್ಟಿ ವಾಚ್ ಫೇಸ್‌ಗಳನ್ನು ನೀಡಲಾಗಿದೆ. ಈ ಮೂಲಕ ಬಳಕೆದಾರರಿಗೆ ಬೇಕಾಗುವ ಹಾಗೆ ವಾಚ್​ನ ಡಿಸ್​ಪ್ಲೇ ಫೇಸ್ ಅನ್ನು ಸೆಟ್​ ಮಾಡಿಟ್ಟಕೊಳ್ಳಬಹುದು.


  ಫೈರ್​ಬೋಲ್ಟ್​ನಿಂದ ಬಿಡುಗಡೆಯಾದಂತಹ ಈ ಸಾಧನ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಒಳಗೊಂಡಿದ್ದು, ಇದರೊಂದಿಗೆ 123 ಸ್ಪೋರ್ಟ್ಸ್ ಮೋಡ್‌ ಹೊಂದಿದೆ. ಇನ್ನು ಇದು IP67 ವಾಟರ್ ರೆಸಿಸ್ಟೆಂಟ್ ರೇಟಿಂಗ್‌ ಜೊತೆಗೆ ಬೆವರು ಮತ್ತು ನೀರಿನಿಂದ ರಕ್ಷಣೆಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಬ್ಲ್ಯಾಕ್‌, ಬ್ಲೂ, ಗ್ರೀನ್‌, ಸಿಲ್ವರ್‌ ಮತ್ತು ರೋಸ್‌ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ.


  ಫೈರ್​​ಬೋಲ್ಟ್​ ಸ್ಮಾರ್ಟ್​ವಾಚ್​


  ಫೈರ್​ಬೋಲ್ಟ್​ ನಿಂಜಾಫಿಟ್​ ಸ್ಮಾರ್ಟ್​​ವಾಚ್ 


  ಫೈರ್​ಬೋಲ್ಟ್​ ನಿಂಜಾಫಿಟ್​ ಸ್ಮಾರ್ಟ್‌ವಾಚ್‌ 1.69 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ವಾಚ್‌ 123 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಇದು IP68 ರೇಟಿಂಗ್‌ ಹೊಂದಿದ್ದು, ಬೆವರು ಮತ್ತು ನೀರಿನಿಂದ ಸ್ಮಾರ್ಟ್​ವಾಚ್​ ಅನ್ನು ರಕ್ಷಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಮಲ್ಟಿ ವಾಚ್‌ ಫೇಸ್‌ಗಳನ್ನು ಹೊಂದಿದ್ದು, ಬಳಕೆದಾರರಿಗೆ ಬೇಕಾಗುವ ಹಾಗೆ ಸೆಟ್​ ಮಾಡಿಕೊಂಡು ಬದಲಾಯಿಸಿಕೊಳ್ಳಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ, ಬೆಳ್ಳಿ, ಗುಲಾಬಿ, ನೀಲಿ, ಕೆಂಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.


  ಇದನ್ನೂ ಓದಿ: ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್​! ಏನೆಲ್ಲಾ ರಿಯಾಯಿತಿಗಳಿವೆ?


  ಬೆಲೆ ಮತ್ತು ಲಭ್ಯತೆ


  ಭಾರತದ ಆಫ್‌ಲೈನ್‌ನಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ವಾಚ್‌ಗಳು ಬಜೆಟ್‌ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿವೆ. ಇದರಲ್ಲಿ ಫೈರ್-ಬೋಲ್ಟ್ ಸ್ಯಾಟರ್ನ್ ಸ್ಮಾರ್ಟ್‌ವಾಚ್‌ 3999 ರೂ.ಬೆಲೆಯನ್ನು ಹೊಂದಿದೆ. ಇನ್ನು ಫೈರ್-ಬೋಲ್ಟ್ ಟಾಕ್ 3 ಸ್ಮಾರ್ಟ್‌ವಾಚ್‌ 2199ರೂ. ಬೆಲೆಯಲ್ಲಿ ಮತ್ತು ಫೈರ್-ಬೋಲ್ಟ್ ನಿಂಜಾಫಿಟ್ ಸ್ಮಾರ್ಟ್‌ವಾಚ್‌ ಬೆಲೆ 1,299 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ಗಳು ಭಾರತದಲ್ಲಿ 750+ ನಗರಗಳ ಆಫ್‌ಲೈನ್‌ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿವೆ.

  Published by:Prajwal B
  First published: