ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸ್ಮಾರ್ಟ್ವಾಚ್ಗಳಿಗೆ (Smartwatch) ಬೇಡಿಕೆಯಿದ್ದಷ್ಟು ಬೇರೆ ಯಾವ ಸಾಧನಗಳಿಗೂ ಇಲ್ಲ ಅಂತಾನೇ ಹೇಳ್ಬಹುದು. ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವಂತಹ ಫೀಚರ್ಸ್ ಆಗಿರಬಹುದು. ಇದೀಗ ಹೊಸ ವರ್ಷದಲ್ಲಿ ಯಾವ ಕಂಪನಿ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡಬಹುದು ಎಂದು ಎಲ್ಲರೂ ಕುತೂಹಲದಲ್ಲಿದ್ದಾಗ, ಸ್ಮಾರ್ಟ್ವಾಚ್ ಯುಗದಲ್ಲಿ ಜನಪ್ರಿಯ ಕಂಪನಿಯಾಗಿರುವ ಫೈರ್ ಬೋಲ್ಟ್ (Fire-Boltt) ಇದೀಗ ಸೌಂಡ್ ಮಾಡಲು ರೆಡಿಯಾಗಿದೆ. ಫೈರ್ ಬೋಲ್ಟ್ ಇದೀಗ ಹೊಸವರ್ಷದ ಆರಂಭದಲ್ಲಿ ಫೈರ್ಬೋಲ್ಟ್ ರಾಕೆಟ್ ವಾಚ್ (Fire-Boltt Smartwatch) ಎಂಬ ಸಾಧನವನ್ನು ಅನಾವರಣ ಮಾಡಲು ಸಜ್ಜಾಗಿದೆ. ಈ ಕಂಪನಿಯಿಂದ ಈ ಹಿಂದೆ ಹಲವಾರು ಸ್ಮಾರ್ಟ್ವಾಚ್ಗಳು ಬಿಡುಗಡೆಯಾಗಿತ್ತು. ಆದರೆ ಈ ವರ್ಷದಲ್ಲಿ ಇದು ಮೊದಲ ಸ್ಮಾರ್ಟ್ವಾಚ್ ಅಂತಾನೇ ಹೇಳ್ಬಹುದು.
ಫೈರ್ ಬೋಲ್ಟ್ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ಹೊಂದಿತ್ತು. ಇದೀಗ ತನ್ನ ಗ್ರಾಹಕರಿಗೆ ಶುಭಸುದ್ದಿಯನ್ನು ನೀಡಿದೆ. ಈ ಕಂಪನಿ ಫೈರ್ಬೋಲ್ಟ್ ರಾಕೆಟ್ ವಾಚ್ ಎಂಬ ಸಾಧನವನ್ನು ಮಾರಕಟ್ಟೆಗೆ ಪರಿಚಯಿಸಿದೆ.
ಡಿಸ್ಪ್ಲೇ ವಿನ್ಯಾಸ
ಫೈರ್ ಬೋಲ್ಟ್ ರಾಕೆಟ್ ವಾಚ್ 1.3 ಇಂಚಿನ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು ರೌಂಡ್ ಡಯಲ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ವಾಚ್ನ ಬಲಭಾಗದಲ್ಲಿ ಫಿಸಿಕಲ್ ಬಟನ್ ಹೊಂದಿದ್ದು, IP67 ಪ್ರಮಾಣೀಕೃತ ವಾಟರ್ ರೆಸಿಸ್ಟೆನ್ಸಿಯನ್ನುಇದು ಹೊಂದಿದೆ. ಇದು ವಿವಿಧ ಮಾದರಿಯ ಸ್ಮಾರ್ಟ್ವಾಚ್ ಫೇಸ್ಗಳನ್ನು ಒಳಗೊಂಡಿದೆ. ಫೈರ್ ಬೋಲ್ಟ್ ರಾಕೆಟ್ ವಾಚ್ ಆರೋಗ್ಯದ ದೃಷ್ಟಿಯಿಂದ, ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್, ಸ್ಲಿಪಿಂಗ್ ಟ್ರ್ಯಾಕರ್ ಮತ್ತು ಸ್ತ್ರೀ ಸೈಕಲ್ ಮಾನಿಟರ್ ಅನ್ನು ಹೊಂದಿದೆ.
ಇದನ್ನೂ ಓದಿ: ಮೊಬೈಲ್ನಲ್ಲಿರುವ ಕಾಂಟ್ಯಾಕ್ಟ್ ಡಿಲೀಟ್ ಆಗಿದ್ಯಾ? ಈ ಟ್ರಿಕ್ಸ್ ಮೂಲಕ ಸುಲಭದಲ್ಲಿ ಬ್ಯಾಕಪ್ ಮಾಡಿ
ಫೀಚರ್ಸ್ ಹೇಗಿದೆ?
ಇದಲ್ಲದೆ ಸ್ಮಾರ್ಟ್ವಾಚ್ 100ಕ್ಕೂ ಹೆಚ್ಚು ವಿವಿಧ ಸ್ಪೋರ್ಟ್ಸ್ ಮೋಡ್ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ವಾಚ್ ಮೂಲಕ ಸ್ಟೆಪ್ಸ್, ಡಿಸ್ಟೆನ್ಸ್, ಕ್ಯಾಲೂರಿ ಬರ್ನಿಂಗ್ಸ್ ಅನ್ನು ಅಳೆಯುವುದಕ್ಕೆ ಬಹಳಷ್ಟು ಸಹಕಾರಿ ಆಗುತ್ತದೆ. ಇದರೊಂದಿಗೆ ಈ ಸ್ಮಾರ್ಟ್ವಾಚ್ ಇನ್ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಹೊಂದಿದೆ. ಫೈರ್ ಬೋಲ್ಟ್ ರಾಕೆಟ್ ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿದ್ದು, ಬಳಕೆದಾರರು ಬ್ಲೂಟೂತ್ ಕನೆಕ್ಟ್ ಮಾಡುವ ಮೂಲಕ ಕಾಲ್ ಮಾಡಬಹುದು ಮತ್ತು ಸ್ವೀಕರಿಸಿ ಮಾತಾಡುವ ಅವಕಾಶ ಕೂಡಾ ಇದೆ.
ಇತರ ಕಂಪನಿಗಳಿಗೆ ಸ್ಪರ್ಧೆ ಖಚಿತ
ಇನ್ನು ಫೈರ್ಬೋಲ್ಟ್ ಕಂಪನಿಯ ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿಯನ್ನು ಕೂಡ ಸಪೋರ್ಟ್ ಮಾಡುತ್ತದೆ. ಜೊತೆಗೆ ಇದು ನೋಟಿಫಿಕೇಶನ್ ಆಲರ್ಟ್ಗಳನ್ನು ಸಹ ನೀಡಲಿದೆ. ಈ ಸ್ಮಾರ್ಟ್ವಾಚ್ ಮಲ್ಟಿ ಫಂಕ್ಷನ್ ಫೀಚರ್ಸ್ಗಳನ್ನು ಹೊಂದಿದೆ. ವಿಶೇಷವಾಗಿ ಫೈರ್ಬೋಲ್ಟ್ ಇದುವರೆಗೆ ಬಿಡುಗಡೆ ಮಾಡಿದ ಸಾಧನಗಳಿಗಿಂತ ಇದು ಸ್ವಲ್ಪ ಹೆಚ್ಚು ಫೀಚರ್ಸ್ ಅನ್ನು ಹೊಂದಿದೆ. ಆದ್ದರಿಂದ ನಾಯ್ಸ್, ಬೋಟ್, ಅಮೇಜ್ಫಿಟ್, ರಿಯಲ್ಮಿ ಮತ್ತು ಬಜೆಟ್ ಬೆಲೆಯಲ್ಲಿ ಬರುವ ಸ್ಮಾರ್ಟ್ವಾಚ್ ಬ್ರ್ಯಾಂಡ್ಗಳಿಗೆ ಪೈಪೋಟಿ ನೀಡುವುದು ಖಚಿತವಾಗಿದೆ.
ಬೆಲೆ ಮತ್ತು ಲಭ್ಯತೆ
ಪ್ರಸ್ತುತ ಭಾರತದಲ್ಲಿ ಲಾಂಚ್ ಆಗಿರುವ ಫೈರ್ ಬೋಲ್ಟ್ ರಾಕೆಟ್ ಸ್ಮಾರ್ಟ್ವಾಚ್ ಅನ್ನು ಕೇವಲ 2,499 ರೂಪಾಯಿ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿ ಕಪ್ಪು, ಸಿಲ್ವರ್ ಗ್ರೇ, ಷಾಂಪೇನ್ ಗೋಲ್ಡ್ ಮತ್ತು ಗೋಲ್ಡ್ ಪಿಂಕ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ವಿಶೇಷವಾಗಿ ಈ ಸ್ಮಾರ್ಟ್ವಾಚ್ ಅನ್ನು ಫೈರ್ಬೋಲ್ಟ್ ಕಂಪನಿಯ ಅಧಿಕೃತ ಇಕಾಮರ್ಸ್ ವೆಬ್ಸೈಟ್ನಲ್ಲಿ ಖರೀದಿ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ