ಭಾರತದಲ್ಲಿ ಭಾರೀ ಸದ್ದಿನಲ್ಲಿರುವ ಸಾಧನವೆಂದರೆ ಅದು ಸ್ಮಾರ್ಟ್ವಾಚ್ಗಳು (Smartwatches). ಇದೀಗ ಈಗಾಗಲೇ ಭಾರೀ ಸದ್ದು ಮಾಡಿರುವ ಫೈರ್ಬೋಲ್ಟ್ ಕಂಪನಿ (Fire-Boltt Company) ಇದುವರೆಗೆ ಕಡಿಮೆ ಬೆಲೆಯಲ್ಲಿ, ಜನರನ್ನು ಆಕರ್ಷಿಸುವಂತಹ ಫೀಚರ್ಸ್ ಅನ್ನು ಒಳಗೊಂಡ ಸ್ಮಾರ್ಟ್ವಾಚ್ಗಳನ್ನು ಪರಿಚಯಿಸಿದೆ. ಈ ಮೂಲಕವೇ ವಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿರುವ ಕಂಪನಿಗಳಲ್ಲಿ ಫೈರ್ಬೋಲ್ಟ್ ಕಂಪನಿ ಕೂಡಾ ಒಂದಾಗಿದೆ. ಇದೀಗ ಫೈರ್ಬೋಲ್ಟ್ ಕಂಪನಿ ಹೊಸ ಫೈರ್ಬೋಲ್ಟ್ ನಿಂಜಾ ಪ್ರೋ ಪ್ಲಸ್ (Fire-Boltt Ninja Pro Plus) ಎಂಬ ಸ್ಮಾರ್ಟ್ವಾಚ್ ಅನ್ನು ಪರಿಚಯಿಸಿದೆ. ಇದು ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿದೆ. ಜೊತೆಗೆ 120 ಸ್ಪೋರ್ಟ್ಸ್ ಮೋಡ್ಗಳನ್ನು ಸಹ ಒಳಗೊಂಡಿದೆ. ಫೈರ್ಬೋಲ್ಟ್ ಸ್ಮಾರ್ಟ್ವಾಚ್ ಇನ್ನೂ ಅನೇಕ ಫೀಚರ್ಸ್ ಅನ್ನು ಒಳಗೊಂಡಿದೆ.
ಫೈರ್ಬೋಲ್ಟ್ ಕಂಪನಿ ಭಾರತದಲ್ಲಿ ಈ ಹಿಂದೆ ಬಹಳಷ್ಟು ಸದ್ದು ಮಾಡಿದೆ. ಇದೀಗ ಹೊಸ ವರ್ಷದ ಆರಂಭದಲ್ಲೇ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಭಾರೀ ಅಗ್ಗದ ಬೆಲೆಯಲ್ಲಿ ಫೈರ್ಬೋಲ್ಟ್ ನಿಂಜಾ ಪ್ರೋ ಪ್ಲಸ್ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡಿದ್ದು, ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.
ಫೈರ್ಬೋಲ್ಟ್ ನಿಂಜಾ ಪ್ರೋ ಪ್ಲಸ್ ಸ್ಮಾರ್ಟ್ವಾಚ್ ಫೀಚರ್ಸ್
ಫೈರ್ ಬೋಲ್ಟ್ ನಿಂಜಾ ಪ್ರೋ ಪ್ಲಸ್ ಸ್ಮಾರ್ಟ್ವಾಚ್ 1.83 ಇಂಚಿನ ಬಿಗ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 240 x 260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಡಿಸ್ಪ್ಲೇ IP67-ಪ್ರಮಾಣೀಕೃತ ವಾಟರ್ ಪ್ರೂಫ್ ವ್ಯವಸ್ಥೆಯನ್ನು ಕೂಡ ಒಳಗೊಂಡಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಿಸುತ್ತದೆ. ಇನ್ನು ಸ್ಮಾರ್ಟ್ವಾಚ್ ವಾಯ್ಸ್ ಆಕ್ಟಿವ್ ಅಸಿಸ್ಟೆಂಟ್ ಅನ್ನು ಸಹ ಹೊಂದಿದೆ. ಇದಲ್ಲದೆ ಬಳಕೆದಾರರಿಗೆ ಫೀಚರ್ಸ್ಗಳನ್ನು ಸರ್ಚ್ ಮಾಡಲು, ಲಿಸ್ಟ್ಗಳನ್ನು ಮಾಡಲು, ರಿಮೈಂಡರ್ಗಳನ್ನು ಸೆಟ್ ಮಾಡುವುದಕ್ಕೆ ಅವಕಾಶ ನೀಡಲಿದೆ.
ಇದನ್ನೂ ಓದಿ: ಕೇವಲ 399 ರೂಪಾಯಿಗೆ ರೆಡ್ಮಿ ಸ್ಮಾರ್ಟ್ಫೋನ್! ಅಮೆಜಾನ್ನ ಬ್ಲಾಕ್ ಬಸ್ಟರ್ ಆಫರ್
ಹೆಲ್ತ್ ಫೀಚರ್ಸ್ ಅನ್ನೂ ನೀಡುತ್ತದೆ
ಇನ್ನು ಫೈರ್ಬೋಲ್ಟ್ ನಿಂಜಾ ಪ್ರೋ ಪ್ಲಸ್ ಸ್ಮಾರ್ಟ್ವಾಚ್ ಹೆಲ್ತ್ ಫೀಚರ್ಸ್ಗಳನ್ನು ಒಳಗೊಂಡಿದೆ. ಇದರಲ್ಲಿ Spo2 ಮಾನಿಟರಿಂಗ್, ಹೃದಯ ಬಡಿತ ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್ ಫೀಚರ್ಸ್ಗಳನ್ನು ಹೊಂದಿದೆ. ಇದಲ್ಲದೆ ಟೈಮ್ಪೀಸ್ ಕ್ಯಾಮೆರಾ ಕಂಟ್ರೋಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ವೆದರ್ ಅಪ್ಡೇಟ್ಗಳನ್ನು ಸಹ ನೀಡಲಿದೆ. ಇದಿಷ್ಟೇ ಅಲ್ಲ ಈ ಸ್ಮಾರ್ಟ್ವಾಚ್ ತನ್ನ ಬಳಕೆದಾರರಿಗೆ ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದನ್ನು ಕೂಡ ನೆನಪು ಮಾಡಲಿದೆ.
ಬ್ಲೂಟೂತ್ ಕಾಲಿಂಗ್ ಫೀಚರ್ಸ್
ಇದಲ್ಲದೆ ಫೈರ್ಬೋಲ್ಟ್ ಕಂಪನಿಯ ಇದು ಸಾಮಾನ್ಯ ಫೀಚರ್ ಅಂತಾನೇ ಹೇಳ್ಬಹುದು. ಯಾಕೆಂದರೆ ಈ ಸ್ಮಾರ್ಟ್ವಾಚ್ನಲ್ಲಿಯೂ ಕೂಡ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ನೀಡಿದೆ. ಇದರಿಂದ ಬಳಕೆದಾರರು ಕಾಲ್ಗಳನ್ನು ರಿಸೀವ್ ಮಾಡುವುದಕ್ಕೆ ಮತ್ತು ಕಾಲ್ ಮಾಡುವುದಕ್ಕೆ ವಾಚ್ನಲ್ಲೇ ಅನುಮತಿಸುತ್ತದೆ. ಜೊತೆಗೆ ಡಯಲ್ ಪ್ಯಾಡ್, ಕಾಲ್ ಹಿಸ್ಟರಿ ಮತ್ತು ಕಾಂಟ್ಯಾಕ್ಟ್ಗಳನ್ನು ಸಿಂಕ್ ಮಾಡುವ ಫೀಚರ್ಸ್ಗಳನ್ನು ನೀಡಲಾಗಿದೆ.
ಬೆಲೆ ಮತ್ತು ಲಭ್ಯತೆ
ಫೈರ್ ಬೋಲ್ಟ್ ನಿಂಜಾ ಪ್ರೋ ಪ್ಲಸ್ ಸ್ಮಾರ್ಟ್ವಾಚ್ ಭಾರತದಲ್ಲಿ 1,799 ರೂಪಾಯಿ ಬೆಲೆಯನ್ನು ಹೊಂದಿಕೊಂಡಿದೆ. ಈ ಸ್ಮಾರ್ಟ್ವಾಚ್ ಕಪ್ಪು, ನೀಲಿ, ಹಸಿರು, ಗೋಲ್ಡ್ ಬ್ಲ್ಯಾಕ್, ಪಿಂಕ್, ಸಿಲ್ವರ್ ಮತ್ತು ಡಾರ್ಕ್ ಗ್ರೇ ಸೇರಿದಂತೆ ಹಲವು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.ಈ ಸ್ಮಾರ್ಟ್ವಾಚ್ ಅನ್ನು ನೀವು ಅಮೆಜಾನ್ನಲ್ಲಿ ಈ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಫೈರ್ ಬೋಲ್ಟ್ ಕಂಪನಿ ಈ ಹಿಂದೆ ಫೈರ್ ಬೋಲ್ಟ್ ರಾಕೆಟ್ ವಾಚ್ ಅನ್ನು ಬಿಡುಗಡೆ ಮಾಡಿತ್ತು. ಇದಕ್ಕೇ ಈಗಲೂ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದೆ. ಇದೀಗ ಫೈರ್ಬೋಲ್ಟ್ ನಿಂಜಾ ಪ್ರೋ ಪ್ಲಸ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ