• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Fire-Boltt Smartwatch: ಫೈರ್​ಬೋಲ್ಟ್​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ ಲಾಂಚ್​! ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸೋದು ಗ್ಯಾರಂಟಿ

Fire-Boltt Smartwatch: ಫೈರ್​ಬೋಲ್ಟ್​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ ಲಾಂಚ್​! ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸೋದು ಗ್ಯಾರಂಟಿ

ಫೈರ್-ಬೋಲ್ಟ್ ಕ್ವಾಂಟಮ್ ಸ್ಮಾರ್ಟ್ ವಾಚ್

ಫೈರ್-ಬೋಲ್ಟ್ ಕ್ವಾಂಟಮ್ ಸ್ಮಾರ್ಟ್ ವಾಚ್

ಫೈರ್​​ಬೋಲ್ಟ್​ ಕಂಪೆನಿ ಭಾರತದಲ್ಲಿ ಹೊಸ ಕ್ವಾಂಟಮ್​ ಸ್ಮಾರ್ಟ್​​ವಾಚ್​ ಅನ್ನು ಬಿಡುಗಡೆ ಮಾಡಿದ್ದು, ಇದು ಬಹಳಷ್ಟು ಸ್ಪೋರ್ಟ್ಸ್​​ ಮೋಡ್​ಗಳನ್ನು ಹೊಂದಿದೆ. ಅದ್ದರಿಂದ ಇದು ಸ್ಪೋರ್ಟ್ಸ್​ ಪ್ರಿಯರಿಗೆ ಇಷ್ಟವಾಗೋದಂತೂ ಗ್ಯಾರಂಟಿ. ಈ ಡಿವೈಸ್​ ಇನ್ನೂ ಹಲವಾರು ಫೀಚರ್ಸ್ಗಳನ್ನು ಹೊಂದಿದ್ದು, ಇದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • New Delhi, India
  • Share this:

    ಸ್ಮಾರ್ಟ್​ವಾಚ್​ಗಳು (Smartwatch) ಇತ್ತೀಚೆಗೆ ಫ್ಯಾಶನ್​ ಯುಗದಲ್ಲಿ ಒಂದು ಟ್ರೆಂಡ್​ ಆಗಿಬಿಟ್ಟಿದೆ. ಹಿಂದೆಲ್ಲಾ ವಾಚ್​ಗಳನ್ನು ಕೇವಲ ಸಮಯ ನೋಡಲು ಬಳಸುತ್ತಿದ್ದರು. ಆದ್ರೆ ಇದೀಗ ಸ್ಮಾರ್ಟ್​​ವಾಚ್​ಗಳನ್ನು ಫ್ಯಾಶನ್​ ಆಗಿ ಬಳಕೆ ಮಾಡ್ತಾ ಇದ್ದಾರೆ. ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸ್ಮಾರ್ಟ್​​​ವಾಚ್​ಗಳಿಗೆ ಎಲ್ಲಿಲ್ಲದ ಬೇಡಿಕೆ. ಇದಕ್ಕಾಗಿಯೇ ಸ್ಮಾರ್ಟ್​​ವಾಚ್​ಗಾಗಿಯೇ ಹೊಸ ಹೊಸ ಕಂಪೆನಿಗಳು ಸೃಷ್ಟಿಯಾಗಿವೆ. ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಫೈರ್​​ಬೋಲ್ಟ್‌ (Fire-Boltt Company) ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಹೊಸ ಟೆಕ್ನಾಲಜಿಯ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಫೈರ್‌ಬೋಲ್ಟ್‌ ಕಂಪೆನಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಕ್ವಾಂಟಮ್‌ (Fire-Boltt Quantum) ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. 


    ಫೈರ್​​ಬೋಲ್ಟ್​ ಕಂಪೆನಿ ಭಾರತದಲ್ಲಿ ಹೊಸ ಕ್ವಾಂಟಮ್​ ಸ್ಮಾರ್ಟ್​​ವಾಚ್​ ಅನ್ನು ಬಿಡುಗಡೆ ಮಾಡಿದ್ದು, ಇದು ಬಹಳಷ್ಟು ಸ್ಪೋರ್ಟ್ಸ್​​ ಮೋಡ್​ಗಳನ್ನು ಹೊಂದಿದೆ. ಅದ್ದರಿಂದ ಇದು ಸ್ಪೋರ್ಟ್ಸ್​ ಪ್ರಿಯರಿಗೆ ಇಷ್ಟವಾಗೋದಂತೂ ಗ್ಯಾರಂಟಿ. ಈ ಡಿವೈಸ್​ ಇನ್ನೂ ಹಲವಾರು ಫೀಚರ್ಸ್ಗಳನ್ನು ಹೊಂದಿದ್ದು, ಇದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ.


    ಫೈರ್-ಬೋಲ್ಟ್‌ ಕ್ವಾಂಟಮ್ ಸ್ಮಾರ್ಟ್‌ವಾಚ್ ಫೀಚರ್ಸ್


    ಫೈರ್-ಬೋಲ್ಟ್‌ ಕ್ವಾಂಟಮ್ ಸ್ಮಾರ್ಟ್‌ವಾಚ್ 1.28 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 240x240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಫೈರ್​​ಬೋಲ್ಟ್​ ಕ್ವಾಂಟಮ್​ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದೆ. ಈ ಮೂಲಕ ಬಳಕೆದಾರರು ಈ ವಾಚ್ ಮೂಲಕವೇ ನೇರವಾಗಿ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು, ಡಯಲ್ ಮಾಡಿದ ಸಂಖ್ಯೆಗಳನ್ನು ನೋಡಲು ಅವಕಾಶ ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ AI ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಹ ಬೆಂಬಲಿಸಲಿದೆ.


    ಇದನ್ನೂ ಓದಿ: ಸ್ಮಾರ್ಟ್​​ವಾಚ್​, ಇಯರ್​ಬಡ್ಸ್​ಗಳನ್ನು ಏಕಕಾಲದಲ್ಲಿ ಲಾಂಚ್​ ಮಾಡಲು ರೆಡಿಯಾಗಿದೆ ಶಿಯೋಮಿ ಕಂಪೆನಿ!


    ಸ್ಪೋರ್ಟ್ಸ್​​ ಮೋಡ್ಸ್​


    ಇನ್ನು ಈ ಸ್ಮಾರ್ಟ್‌ವಾಚ್‌ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್‌ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕರ್ ಮತ್ತು ಸ್ಲಿಪಿಂಗ್‌ ಟ್ರ್ಯಾಕ್‌ ಅನ್ನು ಮಾಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಹಲವು ಸ್ಪೋರ್ಟ್ಸ್‌ ಮೋಡ್‌ಗಳು ಮತ್ತು 50ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಸಹ ನೀಡಲಿದೆ.


    ಫೈರ್-ಬೋಲ್ಟ್ ಕ್ವಾಂಟಮ್ ಸ್ಮಾರ್ಟ್ ವಾಚ್


    ಫೈರ್-ಬೋಲ್ಟ್ ಕ್ವಾಂಟಮ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಬ್ಲೂಟೂತ್ ವಿ 5.1 ಅನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್‌ 5.0 ಮತ್ತು ಐಒಎಸ್ 9.0 ನಲ್ಲಿ ರನ್‌ ಆಗುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್‌ ಆಗಲಿದೆ.


    ಬ್ಯಾಟರಿ ಫೀಚರ್ಸ್


    ಫೈರ್‌ಬೋಲ್ಟ್‌ ಕ್ವಾಂಟಮ್‌ ಸ್ಮಾರ್ಟ್‌ವಾಚ್‌ ಗೆಸ್ಚರ್ ಕಂಟ್ರೋಲ್ ಅನ್ನು ಬೆಂಬಲಿಸಲಿದೆ. ಇದರಿಂದ ಬಳಕೆದಾರರು ಸ್ಕ್ರೀನ್‌ ನೋಡಲು ತಮ್ಮ ಕೈಯನ್ನು ಮೇಲಕ್ಕೆ ಎತ್ತಿದ ತಕ್ಷಣವೇ ಡಿಸ್‌ಪ್ಲೇ ಆನ್‌ ಮಾಡಲಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ 350mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್​ ಮಾಡಿದ್ರೆ ಏಳು ದಿನಗಳ ಬ್ಯಾಕ್‌ಅಪ್‌ ನೀಡಲಿದೆ. ಬ್ಲೂಟೂತ್‌ ಕಾಲ್‌ ಆಕ್ಟಿವ್‌ ಮಾಡಿದ್ದರೆ ಎರಡು ದಿನಗಳ ಬ್ಯಾಕ್‌ಅಪ್‌ ಅನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್‌ ಸಂಪೂರ್ಣವಾಗಿ ಚಾರ್ಜ್ ಮಾಡಲು ಎರಡು ಗಂಟೆಗಳ ಅವಧಿ ಬೇಕಾಗಲಿದೆ. ಇನ್ನು ಸ್ಮಾರ್ಟ್‌ವಾಚ್‌ ಅಕ್ಸಿಲೆರೊಮೀಟರ್, ಮ್ಯೂಸಿಕ್‌ ಕಂಟ್ರೋಲ್‌, ರಿಮೋಟ್ ಕ್ಯಾಮೆರಾ ಕಂಟ್ರೋಲ್‌, ಅಲಾರಾಂ, ಟೈಮರ್, ಸ್ಟಾಪ್‌ವಾಚ್ ಮತ್ತು ಹವಾಮಾನ ಮುನ್ಸೂಚನೆಯನ್ನು ನೀಡಲಿದೆ.




    ಫೈರ್​​ಬೋಲ್ಟ್​ ಕ್ವಾಂಟಮ್​ ಬೆಲೆ ಮತ್ತು ಲಭ್ಯತೆ


    ಫೈರ್-ಬೋಲ್ಟ್ ಕ್ವಾಂಟಮ್ ಸ್ಮಾರ್ಟ್ ವಾಚ್ ಭಾರತದಲ್ಲಿ 2,999 ರೂಪಾಯಿ ಬೆಲೆಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ ಅಧಿಕೃತ ಫೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಮತ್ತು ಅಮೆಜಾನ್ ಇಂಡಿಯಾ ಮೂಲಕ ಖರೀದಿಗೆ ಲಭ್ಯವಾಗಲಿದೆ. ಸದ್ಯ ಈ ಸ್ಮಾರ್ಟ್‌ವಾಚ್‌ ಕಪ್ಪು, ಹಸಿರು, ನೀಲಿ, ಕಪ್ಪು ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಫೈರ್‌ಬೋಲ್ಟ್‌ ಕಂಪೆನಿ ಹೇಳಿಕೊಂಡಿದೆ.

    Published by:Prajwal B
    First published: