Fire-Boltt Smartwatch: ಒಂದೇ ಕಂಪೆನಿಯಿಂದ ಎರಡು ಸ್ಮಾರ್ಟ್​​ವಾಚ್​ಗಳ ಬಿಡುಗಡೆ! ಫೀಚರ್ಸ್​ ಹೇಗಿದೆ ಗೊತ್ತಾ?

ಫೈರ್​ಬೋಲ್ಟ್​ ಸ್ಟಾರ್​ಡಸ್ಟ್​ ಮತ್ತು ಡ್ಯಾಗರ್ ಸ್ಮಾರ್ಟ್​ವಾಚ್​

ಫೈರ್​ಬೋಲ್ಟ್​ ಸ್ಟಾರ್​ಡಸ್ಟ್​ ಮತ್ತು ಡ್ಯಾಗರ್ ಸ್ಮಾರ್ಟ್​ವಾಚ್​

ಜನಪ್ರಿಯ ಸ್ಮಾರ್ಟ್​​ವಾಚ್ ಕಂಪೆನಿಯಿಂದ ಫೈರ್​ಬೋಲ್ಟ್ ಡ್ಯಾಗರ್​ ಮತ್ತು ಫೈರ್​ಬೋಲ್ಟ್​ ಸ್ಟಾರ್​ಡಸ್ಟ್​ ಎಂಬ ಎರಡು ಸ್ಮಾರ್ಟ್​ವಾಚ್​ಗಳು ಅನಾವರಣವಾಗಿದೆ. ಈ ಸ್ಮಾರ್ಟ್​​ವಾಚ್​ಗಳು ಉತ್ತಮ ಗುಣಮಟ್ಟದ ಫೀಚರ್ಸ್​ಗಳನ್ನು ಹೊಂದಿದ್ದು, ಭಾರೀ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿದೆ.

 • Share this:

  ಸ್ಮಾರ್ಟ್​​ವಾಚ್​ಗಳಿಗೆ (Smartwatches) ಟೆಕ್ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಇದಕ್ಕೆ ಕಾರಣ ಈ ಸಾಧನಗಳು ಹೊಮದಿರುವಂತಹ ಫೀಚರ್ಸ್​ಗಳೂ ಅಂತಾನೇ ಹೇಳ್ಬಹುದು. ಮಾರುಕಟ್ಟೆಯಲ್ಲಿ ನಾವೀಗ ಹೊಸ ಹೊಸ ಮಾದರಿಯ ಸ್ಮಾರ್ಟ್​​ವಾಚ್​ಗಳನ್ನು ನೋಡಬಹುದಾಗಿದೆ. ಸ್ಮಾರ್ಟ್​​​ವಾಚ್​ ಕಂಪೆನಿಗಳಲ್ಲಿ ನಂಬರ್ ಒನ್​ ಕಂಪೆನಿಯೆಂದುನ ಗುರುತಿಸಿಕೊಂಡಿರುವ ಫೈರ್​ಬೋಲ್ಟ್​​ ಕಂಪೆನಿ ಇದುವರೆಗೆ ಹಲವಾರು ಸ್ಮಾರ್ಟ್​​ವಾಚ್​ಗಳನ್ನು ಪರಿಚಯಿಸಿದೆ. ಸದ್ಯ ಟೆಕ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್​​ವಾಚ್​ ಕಂಪೆನಿಗೆ ಫೈರ್​ಬೋಲ್ಟ್​ನಿಂದ (Fire-Boltt Company) ಎರಡು ವಾಚ್​ಗಳು ಬಿಡುಗಡೆಯಾಗಿದೆ. ಈ ಎರಡೂ ಸ್ಮಾರ್ಟ್​ವಾಚ್​ಗಲು ಬ್ಲೂಟೂತ್ ಕಾಲಿಂಗ್​ ಫೀಚರ್ (Bluetooth Calling Feature)​ ಅನ್ನು ಸಹ ಒಳಗೊಂಡಿದೆ.


  ಜನಪ್ರಿಯ ಸ್ಮಾರ್ಟ್​​ವಾಚ್ ಕಂಪೆನಿಯಿಂದ ಫೈರ್​ಬೋಲ್ಟ್ ಡ್ಯಾಗರ್​ ಮತ್ತು ಫೈರ್​ಬೋಲ್ಟ್​ ಸ್ಟಾರ್​ಡಸ್ಟ್​ ಎಂಬ ಎರಡು ಸ್ಮಾರ್ಟ್​ವಾಚ್​ಗಳು ಅನಾವರಣವಾಗಿದೆ. ಈ ಸ್ಮಾರ್ಟ್​​ವಾಚ್​ಗಳು ಉತ್ತಮ ಗುಣಮಟ್ಟದ ಫೀಚರ್ಸ್​ಗಳನ್ನು ಹೊಂದಿದ್ದು, ಭಾರೀ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿದೆ.


  ಫೈರ್​​ಬೋಲ್ಟ್​ ಸ್ಟಾರ್​​ಡಸ್ಟ್ ಮತ್ತು ಡ್ಯಾಗರ್​ ಸ್ಮಾರ್ಟ್​​ವಾಚ್​ ಡಿಸ್​ಪ್ಲೇ ವಿನ್ಯಾಸ


  ಫೈರ್ ಬೋಲ್ಟ್ ತನ್ನ ಸ್ಮಾರ್ಟ್‌ವಾಚ್‌ ವಿಭಾಗದಲ್ಲಿನ ಪೋರ್ಟ್‌ಫೋಲಿಯೊವನ್ನು ಭಾರತದಲ್ಲಿ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವ ಮೂಲಕ ವಿಸ್ತರಿಸಿದೆ. ಅದರಲ್ಲಿ ಫೈರ್ ಬೋಲ್ಟ್ ಸ್ಟಾರ್‌ಡಸ್ಟ್ ಆಯತಾಕಾರದ ವಿನ್ಯಾಸದೊಂದಿಗೆ 1.95 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು 320x385 ಪಿಕ್ಸೆಲ್‌ಗಳ ರೆಸಲ್ಯೂಶನ್‌ ನೀಡಲಿದೆ.


  ಇದನ್ನೂ ಓದಿ: ರಿಯಲ್​ಮಿ ಕಂಪೆನಿಯಿಂದ ಹೊಸ ಸ್ಮಾರ್ಟ್​​ಫೋನ್​ ಲಾಂಚ್​! ಬೆಲೆ, ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ


  ಇನ್ನು ಫೈರ್​ಬೋಲ್ಟ್​ ಡ್ಯಾಗರ್​ ಸ್ಮಾರ್ಟ್​​ವಾಚ್ ​1.4 ಇಂಚಿನ ಅಮೋಲ್ಡ್​​ ಡಿಸ್‌ಪ್ಲೇಯೊಂದಿಗೆ ವೃತ್ತಾಕಾರದ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ.


  ಫೀಚರ್ಸ್​ ಹೇಗಿದೆ?


  ಫೈರ್​​ಬೋಲ್ಟ್​ ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್ ಬ್ಲೂಟೂತ್ ಕರೆಯನ್ನು ಬೆಂಬಲಿಸಲಿದ್ದು, 108 ಸ್ಪೋರ್ಟ್ಸ್‌ ಮೋಡ್‌ಗಳೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ ಆರೋಗ್ಯ ಫೀಚರ್ಸ್‌ಗಳಾದ SpO2 ಮಾನಿಟರಿಂಗ್, ಹೃದಯ ಬಡಿತ ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ ಮತ್ತು ಇನ್ನೂ ಹಲವಾರು ಅನೇಕ ಆರೋಗ್ಯ ಸಂಬಂಧಿತ ವಿಷಯಗಳನ್ನು ಟ್ರ್ಯಾಕ್‌ ಮಾಡಲಿದೆ. ಜೊತೆಗೆ ಅಲಾರಾಂ ಟೈಮರ್, ಸ್ಟಾಪ್‌ವಾಚ್ ಮತ್ತು ಹೆಚ್ಚಿನ ಆ್ಯಪ್​ಗಳ ಬಳಕೆಯನ್ನು ಸಹ ಈ ಮೂಲಕ ಮಾಡಬಹುದಾಗಿದೆ.


  ಫೈರ್​ಬೋಲ್ಟ್​ ಸ್ಟಾರ್​ಡಸ್ಟ್​ ಮತ್ತು ಡ್ಯಾಗರ್ ಸ್ಮಾರ್ಟ್​ವಾಚ್​


  ಫೈರ್-ಬೋಲ್ಟ್ ಡ್ಯಾಗರ್ ಸ್ಮಾರ್ಟ್‌ವಾಚ್‌ ಸಹ ಬ್ಲೂಟೂತ್ ಕಾಲ್‌ ಫೀಚರ್ಸ್‌ ಅನ್ನು ಒಳಗೊಂಡಿದ್ದು, ಕ್ವಿಕ್‌ ಡಯಲ್ ಪ್ಯಾಡ್, ಕಾಂಟಾಕ್ಟ್‌ ಸಿಂಕ್ ಮತ್ತು ಕರೆ ಇತಿಹಾಸವನ್ನು ವೀಕ್ಷಣೆ ಮಾಡುವ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗೆಯೇ SpO2 ಮಾನಿಟರ್, ಹೃದಯ ಬಡಿತ ಮಾನಿಟರ್, ನಿದ್ರೆ ಟ್ರ್ಯಾಕಿಂಗ್ ಸೇರಿದಂತೆ ಇನ್ನೂ ಹಲವಾರು ಆರೋಗ್ಯ ಸಂಬಂಧಿತ ವಿಷಯಗಳನ್ನು ಟ್ರ್ಯಾಕ್​ ಮಾಡುತ್ತದೆ.


  ಇನ್ನು ಈ ಎರಡೂ ಸ್ಮಾರ್ಟ್‌ವಾಚ್‌ಗಳು ಕ್ಯಾಮೆರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್, ಹವಾಮಾನ ಅಪ್ಡೇಟ್​ ಗಳ ಬಗ್ಗೆ ಮಾಹಿತಿ ನೀಡುವ ಫೀಚರ್​ಗಳನ್ನು ಹೊಂದಿದೆ.


  ಬ್ಯಾಟರಿ ಫೀಚರ್ಸ್


  ಫೈರ್‌ಬೋಲ್ಟ್ ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್‌ಅನ್ನು ಒಮ್ಮೆ ಫುಲ್ ಚಾರ್ಜ್‌ ಮಾಡಿದರೆ ಐದು ದಿನಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ.


  ಹಾಗೆಯೇ ಡ್ಯಾಗರ್​ ಸ್ಮಾರ್ಟ್‌ವಾಚ್‌ 400mAH ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಈ ಮೂಲಕ ಒಂದು ಪೂರ್ಣ ಚಾರ್ಜ್‌ನಲ್ಲಿ 15 ದಿನಗಳ ಕಾಲ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ 30 ದಿನಗಳ ಸ್ಟ್ಯಾಂಡ್‌ಬೈ ಟೈಮ್‌ ನೀಡಿದೆ.
  ಬೆಲೆ ಮತ್ತು ಲಭ್ಯತೆ


  ಫೈರ್‌ ಬೋಲ್ಟ್ ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್‌ಗೆ 2,499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಫೈರ್​ಬೋಲ್ಟ್​ ಡ್ಯಾಗರ್ ಸ್ಮಾರ್ಟ್‌ವಾಚ್‌ಗೆ 3,499 ರೂ. ಗಳ ಬೆಲೆಯನ್ನು ನಿಗದಿ ಮಾಡಲಾಗಿದೆ. ಇನ್ನು ಫೈರ್‌ ಬೋಲ್ಟ್ ಡ್ಯಾಗರ್ ಸ್ಮಾರ್ಟ್​​ವಾಚ್ ಬೂದು, ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಂಡರೆ, ಸ್ಟಾರ್‌ಡಸ್ಟ್ ಸ್ಮಾರ್ಟ್‌ವಾಚ್‌ ಬೂದು, ಕಪ್ಪು ಮತ್ತು ಗುಲಾಬಿ ಬಣ್ಣದ ಮೂರು ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

  Published by:Prajwal B
  First published: